ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ”ತುಳುನಾಡ ಕೋಗಿಲೆ” ಎಂದೇ ಪ್ರಸಿದ್ಧರಾಗಿರುವ ಯುವ ಗಾಯಕಿ ಕುಮಾರಿ ಶೀಲಾ ಪಡೀಲ್ ರವರ ಸಾಧನೆಯ ಹಾದಿ.

ಆಕಾಶದಲ್ಲಿರುವ ನಕ್ಷತ್ರಗಳಿಗೆ ಮಿನುಗಳು ಬೆಳಕು ಬೇಕಾಗಿಲ್ಲ, ಅದಕ್ಕೆ ಬೇಕಾಗಿರುವುದು ಕತ್ತಲು. ಭುವಿಯಲ್ಲಿರುವ ಪನ್ನೀರ ಹನಿಗಳು ಕತ್ತಲಲ್ಲಿ ಮಿನುಗಳು ಸಾಧ್ಯವಿಲ್ಲ. ಅದಕ್ಕೆ ಬೇಕಾಗಿರುವುದು ಹಗಲು. ಪ್ರತಿಭೆಯೂ ಹಾಗೆ ಕಷ್ಟವೆಂಬ ಕತ್ತಲೆಯಿದ್ದರೂ ನಕ್ಷತ್ರದಂತೆ ಮಿನುಗಬಲ್ಲದು, ಸೂಕ್ತವಾದ ವೇದಿಕೆಯಿದ್ದರೆ ನೀರಿನ ಮುತ್ತಿನ ಹನಿಗಳ ಹಾಗೆ ಎಲ್ಲರ ಗಮನ ಸೆಳೆಯಬಲ್ಲದು. ಅದರಂತೆ ಇಂದು ತನಗೆ ಸಾಸಿರ ಕಷ್ಟಗಳು ಏನೇ ಎದುರಾದರು ತನ್ನಲ್ಲಿರುವ ಪ್ರತಿಭೆಯನ್ನು ಜೀವಂತ ಉಳಿಸಿ ಬೆಳೆಸಿ ನಮ್ಮ ತುಳುನಾಡಿನ ಅನೇಕ ಸಂಗೀತ ಪ್ರೇಮಿಗಳಿಗೆ ತನ್ನ ಸುಸ್ವರ ಕಂಠದಿಂದ ಚಿರ ಪರಿಚಿತರಾದ ಹಾಗೂ … Read more

ಬಲೇ ತೆಲಿಪಾಲೆ ಕಾಮಿಡಿ ಶೋನಲ್ಲಿ ಮಿಂಚಿದ ಸುಳ್ಯದ ಪ್ರತಿಭೆ ರಂಜು ರೈ ಸುಳ್ಯ ಇವರ ಸಾಧನೆಯ ಹಾದಿ : Ranju Rai Sulya

ಬಲೇ ತೆಲಿಪಾಲೆ ಕಾಮಿಡಿ ಶೋನಲ್ಲಿ ಮಿಂಚಿದ ಸುಳ್ಯದ ಪ್ರತಿಭೆ ರಂಜು ರೈ ಸುಳ್ಯ ಇವರ ಸಾಧನೆಯ ಹಾದಿ. ಮನುಷ್ಯ ಹುಟ್ಟಿದ ತಕ್ಷಣ ಆತನಿಗೂ ಒಂದು ಪ್ರಾಣಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ನಂತರ ಕ್ರಮೇಣ ಮಾನವ ತಾನು ಮಾಡುವ ಕಾರ್ಯ ಮತ್ತು ಸಾಧನೆಗಳಿಂದ ಆತನಿಗೊಂದು ನಿಜವಾದ ಗುರುತು ಬರುತ್ತದೆ. ಮನುಷ್ಯನಾಗಿ ಹುಟ್ಟುವುದು ಪ್ರಕೃತಿ ಧರ್ಮ. ಆದರೆ ಹುಟ್ಟಿದ ನಂತರ ಆ ಹುಟ್ಟಿಗೆ ಅರ್ಥ ಕಲ್ಪಿಸುವುದು ಮನುಷ್ಯನ ಧರ್ಮ. ನಮ್ಮ ಬದುಕಿಗೆ ಅರ್ಥ ಕಲ್ಪಿಸಬೇಕಾದರೆ ಬದುಕಿರುವಾಗ ನಮ್ಮ ಕೈಲಾದಷ್ಟು ಕಲಾ ಸೇವೆ, … Read more

“ನಾವು ಹೆಜ್ಜೆಯಿಡುವ ಹಾದಿಯಲಿ ಕಲ್ಲುಂಟು, ಮುಳ್ಳುಂಟು, ನಿಜದ ನೇರಕೆ ನಡೆದಾಗ ಅಲ್ಲಿ ಹಸಿರುಂಟು ನಿತ್ಯ ಗೆಲುವುಂಟು” ಎಂದು ಸಾರಿದ ಆಧುನಿಕ ದ್ರೋಣ ನ ಸಾಧನೆಯ ಹಾದಿ : ನಾರಾಯಣ ರಾಯ್ ಕುಕ್ಕುವಳ್ಳಿ ಯವರ ಸಾದನೆಗೊಂಡು ಸಲಾಂ

ಶಿಕ್ಷಕ ಅಥವಾ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಬಹುದು. ಪ್ರತಿಯೊಬ್ಬರ ಜೀವನದಲ್ಲಿಯೂ ಗುರಿ ಎಷ್ಟು ಮುಖ್ಯವೋ ಗುರುಗಳು ಅಷ್ಟೇ ಮುಖ್ಯ. ಹಲವರ ಜೀವನಗಳಲ್ಲಿ ತಮ್ಮ ಗುರುಗಳು ಬೀರಿದ ಪ್ರಭಾವದಿಂದ ತಾವು ತಮ್ಮ ಜೀವನದ ದಿಕ್ಕನ್ನೇ ಬದಲಿಸಿ ಯಶಸ್ವಿಯಾದ ಉದಾಹರಣೆಗಳಿವೆ.     ಶಿಕ್ಷಕ ಒಬ್ಬ ಶಿಲ್ಪಿ ಇದ್ದ ಹಾಗೆ. ಅವರಿಗೆ ಕೊಟ್ಟಿರುವ ವಿದ್ಯಾರ್ಥಿ ಎಂಬ ಕಲ್ಲನ್ನು ಅಚ್ಚುಕಟ್ಟಾಗಿ ಕೆತ್ತಿ ಅದರಿಂದ ಒಂದು ಹೊಸ ರೂಪವನ್ನು ಹೊರತಂದಾಗ ಮಾತ್ರ ಅವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಆದ್ದರಿಂದ … Read more

YouTube ನಲ್ಲಿ ಹವಾ ಮಾಡುತ್ತಿರುವ ಕಾಸರಗೋಡಿನ ಪಾಕ ಪ್ರವೀಣರೆನಿಸಿಕೊಂಡಿರುವ Bhat’n’Bhat Channel ನ ಭಟ್ ಸಹೋದರರ ಸಾಧನೆಯ ಹಾದಿ.

ತನ್ನ ಸಿಂಪ್ಲಿಸಿಟಿ ಹಾಗೂ ವಿವಿಧ ರೀತಿಯ ಅಡುಗೆಗಳಿಂದ ಎಲ್ಲರ ಮನೆಮಾತಾಗಿರುವ ಭಟ್ ಎನ್ ಭಟ್ (Bhat’n’Bhat Channel) ಯೂಟ್ಯೂಬ್ ಚಾನಲ್ ನ ರುವಾರಿಗಳ ಮನೆಯ ಮಾತು. ಬದುಕು ಯಾವತ್ತೂ ತನ್ನಷ್ಟಕ್ಕೆ ತಾನೇ ಸುಂದರವಾಗಿ ಇರುವುದಿಲ್ಲ. ಬದಲಾಗಿ ನಾವು ಅದನ್ನು ಸುಂದರನ್ನಾಗಿಸಲು ಇನ್ನಿಲ್ಲದ ಪ್ರಯತ್ನ ಮಾಡಬೇಕಾಗುತ್ತದೆ. ಒಂದು ಒರಟಾದ ಕಲ್ಲಿಗೆ ಉಳಿಪೆಟ್ಟು ಕೊಟ್ಟು ಕೆತ್ತಿ ಅದನ್ನು ಸುಂದರ ಶಿಲ್ಪವನ್ನಾಗಿ ಮಾಡುವ ಹಾಗೆ ಬದುಕನ್ನು ಸುಂದರವಾಗಿಸಲು ಅಂಥಹ ಸಾವಿರಾರು ಉಳಿಪೆಟ್ಟುಗಳನ್ನು ಸಹಿಸಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರ ಬದುಕು ಒಂದು ಸುಂದರ ಶಿಲ್ಪದಂತೆ … Read more

ಸೃಜನ ಶೀಲ ಯುವ ಬರಹಗಾರ್ತಿ ಪತ್ರಕರ್ತೆ ಹರ್ಷಿತಾ ಹರೀಶ್ ಕುಲಾಲ್

ಸಾಹಿತ್ಯ ಎಂಬುದು ಎಲ್ಲರಿಗೂ ಒಲಿಯುವಂಥದ್ದಲ್ಲ. ಸಾಹಿತ್ಯ ಒಲಿದವರಿಗೆ ಯಶಸ್ಸು ದೂರ ಉಳಿಯುವಂತದಲ್ಲ. ಯಾವುದೇ ಪ್ರತಿಭೆ ಇರಲಿ ಆ ಪ್ರತಿಭೆಯನ್ನು ನಮ್ಮಲ್ಲಿ ನಾವೇ ಗುರುತಿಸಿಕೊಂಡು ಮುನ್ನಡೆದರೆ ಅಂಥವರು ಖಂಡಿತಾ ಯಶಸ್ಸು ಕಾಣುತ್ತಾರೆ. ಸಾಧನೆ ಪ್ರತಿ ಹೆಜ್ಜೆಗೂ ಇರಬೇಕು. ಇಂತಹ ಸಾಧನೆಯ ಸಾಧಿಸಿ ಯಶಸ್ಸು ಸಿದ್ದಿಸುವ ಪಟ್ಟಿಯಲ್ಲಿ ಸೇರುವ ಪ್ರಯತ್ನದಲ್ಲಿ  ಮತ್ತು ಸಾಧನೆಯ ಶಿಖರ ಏರುವ ನಮ್ಮೂರಿನ ಸಾಹಿತ್ಯ ಸಾಧಕಿ ಯುವ ಬರಹಗಾರ್ತಿ ಪತ್ರಕರ್ತೆ ಹರ್ಷಿತಾ ಹರೀಶ್ ಕುಲಾಲ್ ಕಿರು ಪರಿಚಯ ಕೂಲ್ ಸಾಧಕರ ಪಟ್ಟಿಯಲ್ಲಿ.     ತಂದೆ,ತಾಯಿ,ಗುರುವಿಗೆ … Read more

ಆಟೋ ಚಾಲಕನಾಗಿ ದುಡಿಯುತ್ತ ಬಣ್ಣದ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ, ಪುತ್ತೂರಿನ ಯುವ ಪ್ರತಿಭೆ ಅನಿಲ್ ರೈ ಪೆರಿಗೇರಿ.

            ಚಿಟ್ಟೆ ತಾನು ಒಂದೇ ದಿನ ಬದುಕುವುದಾದರೂ ಸಾವಿರ ಕನಸುಗಳನ್ನು  ಕಟ್ಟಿ ಅದೆಷ್ಟೋ ಸಸ್ಯ ಸಂಕುಲಕ್ಕೆ ಜೀವನದ ಅರ್ಥವನ್ನು ತಂದುಕೊಟ್ಟು ಜೀವನವನ್ನು ಶೃಂಗರಿಸುತ್ತದೆ. ಹಾಗೆಯೇ ನಾವು ಕೂಡಾ ಜೀವನದಲ್ಲಿ ಸಿಕ್ಕ ಸಮಯಾವಕಾಶವನ್ನು ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಜೀವನಕ್ಕೆ ಅರ್ಥ ಕಲ್ಪಿಸಿಕೊಂಡು ಸಾಧನೆಯ ಪಥದಲ್ಲಿ ನಡೆಯಬೇಕು. ಅಂತಹ ಒಬ್ಬ ನಯ ವಿನಯದ, ಸಮಯಕ್ಕೆ ಪ್ರಾಮುಖ್ಯತೆ ಕೊಡುವ ಪ್ರಾಮಾಣಿಕ ವ್ಯಕ್ತಿ ಈ “ಅನಿಲ್ ರೈ ಪೆರಿಗೇರಿ” ಕೂಲ್ ಸಾಧಕರ ಕಾಲಂನಲ್ಲಿ. … Read more

ತುಳುನಾಡಿನ ಯುವ ಹಾಸ್ಯ ಕಲಾವಿದ ಕರ್ನಾಟಕದ ನೆಚ್ಚಿನ comedy kilady “ಧೀರಜ್ ನೀರುಮಾರ್ಗ” ಇವರ ಸಾಧನೆಯ ಹಾದಿ.

           ಕಲೆ ಎನ್ನುವುದು ಭಾವನೆಗಳ ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ಧಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕಲೆಯು ಸಂಗೀತ, ಸಾಹಿತ್ಯ, ಸಿನೇಮಾ, ಛಾಯಾಗ್ರಹಣ, ಶಿಲ್ಪಕಲೆ, ಮತ್ತು ಚಿತ್ರಕಲೆ ಗಳನ್ನೊಳಗೊಂಡಂತೆ ಮನುಷ್ಯನ ಅನೇಕ ಚಟುವಟಿಕೆಗಳನ್ನು ಕಲ್ಪನಾ ಸೃಷ್ಟಿಗಳನ್ನು ಮತ್ತು ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ ಪ್ರಕಾರಗಳನ್ನು ಆವರಿಸಿಕೊಂಡಿದೆ. ಇಂತಹ ವಿಭಿನ್ನ ಕಲೆಯನ್ನು ಹೊಂದಿರುವ ಇವತ್ತಿನ ನಮ್ಮ ಕೂಲ್ – ಸಾಧಕರ ಕಾಲo ನಲ್ಲಿ ಹಾಸ್ಯ ಕಲಾವಿದ comedy kilady “ಧೀರಜ್ ನೀರುಮಾರ್ಗ”. ಇವರು ದಕ್ಷಿಣ … Read more

ಚಿತ್ರಕಲೆಯಲ್ಲಿ ಜಾದುವನ್ನೇ ಮಾಡಿದಂತಹ ಅಪ್ರತಿಮ ಯುವ ಚಿತ್ರಕಲಾವಿದ ಪುತ್ತೂರಿನ ಯೋಗೀಶ್ ಕಡಂದೇಲು ಅವರ ಸಾಧನೆಯ ಹಾದಿ

        ಸಾಗರವು ಮೇಲ್ನೋಟಕ್ಕೆ ನೀಲಿಯಾಗಿ ಕೇವಲ ಒಂದೇ ಬಣ್ಣದಲ್ಲಿ ಕಂಗೊಳಿಸಿದರೂ ಅದರ ಆಳದಲ್ಲಿ ಪ್ರಕೃತಿಯು ಹೆಣೆದ ಅದೆಷ್ಟೋ ಸೌoದರ್ಯಗಳ ಲೋಕವೇ ಅಡಗಿದೆ. ಆದರೆ ಸಾಗರವು ಕೇವಲ ತನ್ನ ಅಲೆಯ ಮುಖಾಂತರ ಮಾತ್ರ ನಾಟ್ಯ ಮಾಡಿ ಸೌoದರ್ಯ ಪ್ರಿಯರನ್ನು ಆಕರ್ಷಿಸುತ್ತದೆ ಮತ್ತು ಸಂಜೆಯ ತಂಪು ತಂಗಾಳಿಯನ್ನು  ಬೀಸಿ ಎಂತಹವರನ್ನು ಕವಿಯನ್ನಾಗಿಸುತ್ತದೆ. ಹಾಗೇನೇ ನಮ್ಮ ನಡುವೆ ಇರುವ ಕೆಲವು ಕಲಾವಿದರು ತೆರೆಮರೆಯಲ್ಲೇ ಇದ್ದುಕೊಂಡು ಸಾಧಿಸುವ ಪ್ರಯತ್ನ ಮಾಡುತ್ತಿರುತ್ತಾರೆ.  ಅವರ ಆಳ ತಿಳಿದಷ್ಟು ಅವರ ಪ್ರತಿಭೆಯ ಸಾಗರವೇ ಕಾಣುತ್ತದೆ. ಅಂತಹ ಕಲಾವಿದರಲ್ಲಿ ಒಬ್ಬರಾದ ಪುತ್ತೂರು ತಾಲೂಕಿನ ಕಡಂದೇಲು ನಿವಾಸಿ ಅಪ್ರತಿಮ ಚಿತ್ರಕಲಾವಿದ ಯೋಗೀಶ್ ಕಡಂದೇಲು … Read more

ಜೀವನ ಬಡತನವೆಂಬ ಬೆಂಕಿಯಲ್ಲಿ ಕರಗುತ್ತಿದ್ದರೂ ಕಲೆ ಎಂಬ ಹೂವು ಅರಳಿಸಿದ ಚಿತ್ರಕಲಾ ಪ್ರವೀಣ ”ಜಿತೇಶ್”

      ”ನೋವಿನಲ್ಲೂ ಅರಳುವ ಕಲೆ”   ಬದುಕು ಒಂದು ಕಲೆ ಎನ್ನುತ್ತೇವೆ.ಬದುಕುವ ಕಲೆ ಗೊತ್ತಿದ್ದರೆ, ಆತ್ಮ ವಿಶ್ವಾಸವಿದ್ದರೆ ಮೂಡುವ ಕಲೆಯೇ ಬದುಕಿಗೆ ಆಸರೆಯಾಗುತ್ತದೆ.     ನೊಂದವರ ಪಾಲಿಗೆ ಆಸರೆ ತಂಡದ ಮೂಲಕ ಯುವ ಕಲಾವಿದರೊಬ್ಬರ ವಿಷಯ ತಿಳಿದು ಮನಸ್ಸಿಗೆ ತುಸು ಸಂಕಟವಾದರೂ ಬದುಕಿಗೆ ಸ್ಫೂರ್ತಿಯ ಸೆಲೆಯಾಯಿತು       ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಈಶ ನಗರದ ಹಿರಿಜೀವಗಳು ಕಳೆದ ಎಂಟು ವರ್ಷಗಳಿಂದ ಕಡು ಬಡತನದೊಂದಿಗೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ನಾಳೆಯ ಬೆಳಕಿಗಾಗಿ ಹಾತೊರೆಯುತ್ತಿದ್ದಾರೆ. … Read more

ಕರಾವಳಿ ಕಡಲ ಕಿನಾರೆಯ ಮುದ್ದು ಮೊಗದ ಪುಟ್ಟ ಹುಡುಗಿ ”ತುಳುವ ಸಿರಿ” ‘ಎಂ. ಅಧ್ವಿಕಾ ಶೆಟ್ಟಿ” ಯವರ ಸಾಧನೆಯ ಹಾದಿ.

ನೀರಿನಲ್ಲಿ ಮುಳುಗುತ್ತಿರುವ ಜೀವಕ್ಕೆ ಒಂದು ಸಣ್ಣ ಹುಲ್ಲು ಕಡ್ಡಿ ಸಿಕ್ಕರೂ ಸಾಕಂತೆ ಹೇಗಾದರೂ ಕೊಡವಿಕೊಂಡು ಮೇಲಕ್ಕೆ ಬಂದು ಬಿಡುತ್ತಾರಂತೆ. ಒಂದು ಸಣ್ಣ ಅವಕಾಶ ಸಿಕ್ಕರೂ ತನ್ನನ್ನು ತಾನು ಸಾಧಿಸಿಕೊಳ್ಳುವೆ ಅನ್ನುವ ಹಠ, ತುಡಿತ, ಹುಮ್ಮಸ್ಸು ನಮ್ಮ ಜೀವನದಲ್ಲೂ ಇದ್ದರೆ ಎಷ್ಟು ಚೆನ್ನ ಆಲ್ವಾ. ಸಾಧಿಸುವ ಛಲಗಾರನಿಗೆ ವೇದಿಕೆಯೇ ಬೇಕಂತೇನಿಲ್ಲ. ತಾನು ನಿಂತ ನೆಲವನ್ನೇ ವೇದಿಕೆಯನ್ನಾಗಿಸುತ್ತಾನೆ. ಹಾಗೆಯೇ ಸಾಧನೆ ಎಂಬುದು ರಕ್ತದಲ್ಲಿದ್ದರೆ ಅದಕ್ಕೆ ವಯಸ್ಸು ಅಡ್ಡಿ ಬರಲ್ಲ. 85 ರ ಇಳಿವಯಸ್ಸಿನಲ್ಲೂ ಸಾಧಿಸಿದ ಸಾಕ್ಷಿಗಳು ನಮ್ಮಲ್ಲಿವೆ ಅಂತೆಯೇ ಎರಡೂವರೆ … Read more

ಪುತ್ತೂರಿನ ಯುವ ಉತ್ಸಾಹಿ ಬರಹಗಾರ, ಕಥೆಗಾರ, ಸಿನಿಮಾ ನಟ “ಸಾಯಿ ದೀಕ್ಷಿತ್ ಪುತ್ತೂರು” ಇವರ ಸಾಧನೆಯ ಹಾದಿ.

            ಸಾಧನೆ ಯಾರ ಪಾಲಿನ ಸ್ವತ್ತು ಅಲ್ಲ, ಯಶಸ್ಸು ಯಾರಿಗೂ ಅಷ್ಟು ಸುಲಭವಾಗಿ ಸಿಗುವ ಸಾಧನ ಅಲ್ಲ. ಕಠಿಣ ಪರಿಶ್ರಮ , ಸಂಯಮ , ಏಕಾಗ್ರತೆ, ಸತ್ಚಿತ್ತತೆ, ಇದ್ದರೆ ಮಾತ್ರ ಸಾಧನೆ  ಮತ್ತು ಯಶಸ್ಸು ಒಬ್ಬರ ಪಾಲಾಗುತ್ತದೆ. ಅಂತಹ ಸಾಧಕರ ಪಟ್ಟಿಯಲ್ಲಿ  ಯುವ ಬರಹಗಾರ, ಕಥೆಗಾರ, ಕವಿ,  ನಟ, ನಿರ್ದೇಶಕ, ಹೀಗೆ ಕಲಾ ಜಗತ್ತಿನ ಎಲ್ಲಾ ಆಯಾಮಗಳಲ್ಲೂ ತನ್ನದೇ ಆದ ವಿಶೇಷ ಛಾಪು ಮೂಡಿಸಿರುವ ಪುತ್ತೂರು ತಾಲೂಕಿನ  “ಸಾಯಿ ದೀಕ್ಷಿತ್ ಪುತ್ತೂರು” ಇಂದು … Read more

Charith Balappa Poojary | ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ “ಮುದ್ದು ಲಕ್ಷ್ಮೀ ಯ ಡಾ.ಧ್ರುವಂತ್ ” ರ ಸಾಧನೆಯ ಹಾದಿ

     ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ, ಸ್ಯಾಂಡಲ್ವುಡ್ ನ ಯಾವ ಹೀರೊಗಳಿಗೂ ಕಡಿಮೆಯಿಲ್ಲದ ಸ್ಪುರದ್ರೂಪಿ ಚರಿತ್ ಬಾಳಪ್ಪ ಪೂಜಾರಿ Charith Balappa Poojary ಯ ಸಾಧನೆಯ ಹಾದಿ ಇಂದು ಕೂಲ್-ಸಾಧಕರ ವೇದಿಕೆಯಲ್ಲಿ.      ಕಣ್ಣು ಬಿಟ್ಟಿರುವಷ್ಟು ದಿನ ನಾವು ಪ್ರಪಂಚವನ್ನು ನೋಡಬಹುದು. ಆದರೆ, ಕಣ್ಣು ಮುಚ್ಚಿದ ನಂತರ ನಮ್ಮನ್ನು ಪ್ರಪಂಚ ನೋಡುವಂತೆ ಮಾಡುವುದೇ ಸಾಧನೆ. ತಾನು ಅದೆಷ್ಟೋ ಕಷ್ಟ ಪಟ್ಟು ಅವಕಾ,ಶಗಳಿಗೆ ವಂಚಿತನಾಗಿ, ಸಾಧನೆಯ ಪಣತೊಟ್ಟು , ಹಂತ ಹಂತವಾಗಿ ಸಾಧಿಸುತ್ತಾ, ಇಂದು … Read more

ತುಳು ಚಿತ್ರರಂಗದ ‘ಅಭಿನವ ವಜ್ರಮುನಿ’ ರಮೇಶ್ ರೈ ಕುಕ್ಕುವಳ್ಳಿ ಸಾಧನೆಯ ಹಾದಿ

        ಕೂಲ್-ಸಾಧಕರ ವೇದಿಕೆಯಲ್ಲಿ ತುಳು, ಕನ್ನಡ ಚಿತ್ರರಂಗದಲ್ಲಿ,  ನಾಟಕರಂಗದಲ್ಲಿ, ಧಾರಾವಾಹಿಗಳಲ್ಲಿ, ಬಣ್ಣ ಹಚ್ಚಿ ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಂಡು ತುಳು ಹಾಗೇನೇ ಕನ್ನಡ ಚಿತ್ರ ರಸಿಕರ ಮನಸ್ಸನ್ನು ಗೆದ್ದoತಹ ಹಿರಿಯ ಕಲಾವಿದರಾದ ರಮೇಶ್ ರೈ ಕುಕ್ಕುವಳ್ಳಿಯವರ ಸಾಧನೆಯ ಹಾದಿ.      ನೀಲ ಕಾಯ ಗಟ್ಟಿಮುಟ್ಟಾದ ದೇಹವನ್ನು ಹೊಂದಿರುವ ಇವರನ್ನು ಖಳನಟನಾಗಿ ನೋಡಿದರೆ ಹೆದರದವರೂ ಕೂಡ ಒಮ್ಮೆಗೆ ಹೆದರಿ ಬಿಡುತ್ತಾರೆ. ಯಾಕೆಂದ್ರೆ, ಅವರ ಗಾಂಭೀರ್ಯ ತುಂಬಿದ ಕಣ್ಣಿನ ನೋಟ, ಎತ್ತರದ ನಿಲುವು, ಅವರ ಮಾತಿನ ಗಡಸುತನ … Read more

ಕಾಯಕದಲ್ಲಿ ಇಂಜಿನಿಯರ್, ಆಸಕ್ತಿಯಲ್ಲಿ ಯೂಟ್ಯೂಬರ್ ಪುತ್ತೂರಿನ ಯುವ ಉತ್ಸಾಹೀ ಯುವಕ ಜಯಂತ್ ಕುಲಾಲ್

ನಮಸ್ತೆ ಗೆಳೆಯರೆ.  ಕೂಲಿಂಗ್ಲಾಸ್  ಈ ಬ್ಲಾಗ್ ನ ಲ್ಲಿ ಮೊದಲನೆಯ ಬ್ಲಾಗ್ ಗೆ ನಿಮಗೆ ಪ್ರೀತಿಯ ಸ್ವಾಗತ. ಇಲ್ಲಿ ನಮ್ಮ ಬ್ಲಾಗ್ ನ ಮೊದಲನೇ ಲೇಖನ ಪ್ರಸ್ತುತ ಪಡಿಸುತ್ತಿದ್ದೇವೆ. ಕೂಲಿಂಗ್ಲಾಸ್ ಬ್ಲಾಗ್ ಸಂಪೂರ್ಣವಾಗಿ ವಿಚಾರ, ಸಮಾಚಾರ, ತರ್ಕ ಹಾಗೂ ಸಾಧನೆಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ತಾಂತ್ರಿಕ ವಿದ್ಯಾಭ್ಯಾಸವನ್ನು ಮಾಡಿ ತನ್ನ ಕಾಯಕವನ್ನು ವಾಡಿಕೆಯಂತೆ ವಾಹನದಟ್ಟಣೆ ಅಡವಿ, ಹೊಗೆಗಳಿಂದ ಮತ್ತು ಹಾರ್ನ್ ಗಳಿಂದ ಬೆಂದ ಬೆಂಗಳೂರಿನಲ್ಲಿ ಶುರು ಮಾಡುತ್ತಾರೆ ಜಯಂತ್ ಕುಲಾಲ್. ೨ ವರುಷಗಳ ಕರ್ತವ್ಯದ ನಂತರ ಮಂಗಳೂರಿಗೆ ವರ್ಗಾವಣೆಗೊಳ್ಳುತ್ತಾರೆ. … Read more

x
error

Enjoy this blog? Please spread the word :)

Why Manish Sisodia Was Arrested, CBI Explained