ಕಾಯಕದಲ್ಲಿ ಇಂಜಿನಿಯರ್, ಆಸಕ್ತಿಯಲ್ಲಿ ಯೂಟ್ಯೂಬರ್ ಪುತ್ತೂರಿನ ಯುವ ಉತ್ಸಾಹೀ ಯುವಕ ಜಯಂತ್ ಕುಲಾಲ್


ನಮಸ್ತೆ ಗೆಳೆಯರೆ.  ಕೂಲಿಂಗ್ಲಾಸ್  ಈ ಬ್ಲಾಗ್ ನ ಲ್ಲಿ ಮೊದಲನೆಯ ಬ್ಲಾಗ್ ಗೆ ನಿಮಗೆ ಪ್ರೀತಿಯ ಸ್ವಾಗತ. ಇಲ್ಲಿ ನಮ್ಮ ಬ್ಲಾಗ್ ನ ಮೊದಲನೇ ಲೇಖನ ಪ್ರಸ್ತುತ ಪಡಿಸುತ್ತಿದ್ದೇವೆ. ಕೂಲಿಂಗ್ಲಾಸ್ ಬ್ಲಾಗ್ ಸಂಪೂರ್ಣವಾಗಿ ವಿಚಾರ, ಸಮಾಚಾರ, ತರ್ಕ ಹಾಗೂ ಸಾಧನೆಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ.

ತಾಂತ್ರಿಕ ವಿದ್ಯಾಭ್ಯಾಸವನ್ನು ಮಾಡಿ ತನ್ನ ಕಾಯಕವನ್ನು ವಾಡಿಕೆಯಂತೆ ವಾಹನದಟ್ಟಣೆ ಅಡವಿ, ಹೊಗೆಗಳಿಂದ ಮತ್ತು ಹಾರ್ನ್ ಗಳಿಂದ ಬೆಂದ ಬೆಂಗಳೂರಿನಲ್ಲಿ ಶುರು ಮಾಡುತ್ತಾರೆ ಜಯಂತ್ ಕುಲಾಲ್. ೨ ವರುಷಗಳ ಕರ್ತವ್ಯದ ನಂತರ ಮಂಗಳೂರಿಗೆ ವರ್ಗಾವಣೆಗೊಳ್ಳುತ್ತಾರೆ. ತಾನು ಮಾಡುವ ಕಾಯಕದಲ್ಲಿ ಜಯಂತ್ ಯಾವತ್ತಿದ್ದರೂ ಶಹಬ್ಬಾಸ್ ಗಳಿಸುವ ಯುವಕ. ತಾನು ಮಾಡುವ ಕರ್ತವ್ಯದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುವ ಜಾಯಮಾನ ಇವರದ್ದಲ್ಲ.

ಇವರ ಹವ್ಯಾಸದ ವಿಷಯಕ್ಕೆ ಬರುವುದಾರೆ ಬಾಲ್ಯದಲ್ಲಿರುವಾಗ ಹಲವು ನಾಟಕಗಳಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಸಿರುವ ಜಯಂತ್ ಕುಲಾಲ್ ಇತ್ತೀಚೆಗೆ ಬಹಳ ಫೇಮಸ್ ಆಗಿದ್ದ ಟಿಕ್ ಟಾಕ್ ನಲ್ಲಿ ಡಬ್ಬ್ ಸ್ಮಾಷ್ ವಿಡಿಯೋ ಮಾಡಿ ಹಲವರ ಮೆಚ್ಚುಗೆ ಗಳಿಸಿ ತಾನು ಒಬ್ಬ ಉತ್ತಮ ಕಲಾವಿದ ಅನ್ನೋದನ್ನು ಸಾಬೀತು ಮಾಡಿದ್ದಾರೆ.

ಪ್ರಸ್ತುತ ಜಗತ್ತಿಗೆ ಕೊರೊನ ಎಂಬ ಮಹಮಾರಿಯ ಆಕ್ರಮಣದಿಂದ ಇಡೀ ಮಾನವ ಸಂಕುಲದ ಜೀವನವೇ ಅಲ್ಲೋಲ ಕಲ್ಲೋಲವಾಗಿದ್ದು ನಮಗೆಲ್ಲರಿಗೂ ಗೊತ್ತೇ ಇದೇ. ಜಗತ್ತಿನ ಸಾಧಾರಣ ಎಲ್ಲಾ ದೇಶಗಳೂ ಬಾಗಿಲು ಮುಚ್ಚಿ ಮನೆಯೊಳಗೆ ಕೂರುವಂತೆ ಮಾಡಿದ ಈ ಕೊರನದ ಕೇಕೇ ಇನ್ನೂ ಕಡಿಮೆಯಾಗದಿರುವುದು ಬಹಳ ಶೊಚನೀಯ ಸಂಗತಿ. ಬಿಡಿ ಸ್ನೇಹಿತರೇ ಕೊರೊನದ ಬಗ್ದೆ ಹೇಳುತ್ತಾ ಹೋದರೇ ಈ ಬರವಣಿಗೆಯ ದಾರಿ ತಪ್ಪುತ್ತದೆ. ಹೌದು ಸ್ನೇಹಿತರೇ ಇಲ್ಲಿ ಕೊರೊನದ ವಿಷಯ ಯಾತಕ್ಕಾಗಿ ಬಂತೆಂದರೇ ಕೊರೊನದಿಂದ ತಪ್ಪಿಸಿಕೊಳ್ಳಲು ದೇಶ ಸಂಪೂರ್ಣ ಲಾಕ್ಡೌನ್ ನ ಮೊರೆ ಹೋಗಬೇಕಾಯಿತು. ಆದರೇ ಈ ಉತ್ಸಾಹೀ ಯುವಕ ತಾನೂ ಯಾವತ್ತಿಗೂ ಸೋಲಬಾರದು ಅನ್ನುವ ಉದ್ದೇಶದಿಂದ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಅದುವೇ ಯೂಟ್ಯೂಬ್ ಚಾನಲ್.

ಈ ಲಾಕ್ಡೌನ್ ಸಮಯದಲ್ಲಿ ಎಲ್ಲರ ಹಾಗೆ ಜಯಂತ್ ಕುಲಾಲ್ ಸಹ ಸರಕಾರದ ಅಣತಿ ಮೇರೆಗೆ ಮನೆಯಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಎದುರಾಯಿತು. ಈ ಹೊತ್ತಲ್ಲಿ ಸಹಜವಾಗಿ ಎಲ್ಲರಿಗೂ ತನ್ನ ಕೆಲಸ ಕಳೆದುಕೊಳ್ಳುವ ಆತಂಕ ಮನೆಮಾಡುತ್ತದೆ. ಇದೇ ಆತಂಕ ಜಯಂತ್ ಕುಲಾಲ್ ಗೂ ಆಗುತ್ತದೆ. ನಮೆಗೆಲ್ಲರಿಗೂ ಗೊತ್ತಿರುವ ಹಾಗೆ ಯೂಟ್ಯೂಬ್ ಚಾನಲ್ ಲ್ಲಿ ಯಶಸ್ಸು ಸಿಗಬೇಕಾದರೆ ಚಾನಲ್ ನ ಉದ್ದೇಶ ನಿಖರವಾಗಿರಬೇಕು. ಜನಗಳಿಗೆ ಮುಟ್ಟುವಂತಿರ ಬೇಕು. ಸರಿಯಾದ ಮತ್ತು ಸೂಕ್ತವಾದ ಮಾಹಿತಿ ನಮ್ಮ ಚಾನಲ್ ನಿಂದ ಸಿಗುವಂತಿರಬೇಕು. ಹಾಗಾಗಿ ಚಾನಲ್ ಶುರು ಮಾಡಬೇಕಾದರೆ ಆಯ್ಕೆ ಮಾಡುವ ವಿಷಯದಲ್ಲಿ ಪರಿಣತಿ ಇರಬೇಕಾಗುತ್ತದೆ. ಇದನ್ನೆಲ್ಲಾ ಮನದಲ್ಲಿಟ್ಟುಕೊಂಡು ಜಯಂತ್ ಆಯ್ಕೆ ಮಾಡಿಕೊಂಡ ಚಾನಲ್ ನ ವಿಷಯ ಷೇರು ಮಾರುಕಟ್ಟೆ ಮತ್ತು ಆನ್-ಲೈನ್ ಲ್ಲಿ ಯಾವ ರೀತಿ ಹಣ ಗಳಿಸಬಹುದು ಎಂಬುವುದು. ಇದಕ್ಕಾಗಿ ಜಯಂತ್ ಆನ್ಲೈನ್ ಮುಖಾಂತರ ಸತತ 2 ತಿಂಗಳುಗಳ ಕಾಲ ತರಬೇತಿ ಪಡೆದರು ಮತ್ತು ಷೇರು ಮಾರುಕಟ್ಟೆಯ ವಿಷಯದಲ್ಲಿ ಪರಿಪಕ್ವತೆ ಗಳಿಸುತ್ತಾರೆ. ಹಾಗೂ ಯೂಟ್ಯೂಬ್ ಚಾನಲ್ ಆರಂಭಿಸಿಯೇ ಬಿಡುತ್ತಾರೆ. ಅದರ ಹೆಸರು “ಬೈಸೆಲ್ ರಾಜಾ” (www.youtube.com/BuySellRaja ).

ಜಗತ್ತು ಈಗ ಡಿಜಿಟಲ್ ಮೀಡಿಯಾದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವುದರಿಂದ ಸಾಮಾಜಿಕ ಜಾಲತಾಣ ಮಾಧ್ಯಮಗಳು ಅದರ ಮೂಲ ಬೇರು ಅನ್ನೊದನ್ನ ಜಯಂತ್ ಸರಿಯಾಗಿ ಅರಿತುಕೊಂಡಿದ್ದರೂ. ಹಾಗಾಗಿ ನೇರವಾಗಿ ಈ ಒಂದು ಕಾರ್ಯಕ್ಕೆ ಧುಮುಕುತ್ತಾರೆ. ಅದುವೇ ಯೂಟ್ಯೂಬ್ ಚಾನಲ್. ಇವರ ಈ ಕಾರ್ಯದಿಂದ ಹಲವಾರು ಹೊಸ ಹೂಡಿಕೆದಾರರಿಗೆ ಸೂಕ್ತ ಮಾರ್ಗದರ್ಶನ ಸಿಕ್ಕಂತಾಗಿದೆ. ಹಲವಾರು ಮಂದಿ ಲಾಭವನ್ನ ಗಳಿಸಿದ್ದಾರೆ. ಇವರ BuySellRaja ಯೂಟ್ಯೂಬ್ ಚಾನಲ್ ನ ಪ್ರಯತ್ನಕ್ಕೆ ಕೈ ಜೋಡಿಸಿದವರು ಪ್ರಮೀತ್, ಬಾಲಕೃಷ್ಣ ಮತ್ತು ಸತೀಶ್. ಈ ಯೂಟ್ಯೂಬ್ ಚಾನಲ್ ಮುಖಾಂತರ ಷೇರು ಮಾರುಕಟ್ಟೆಯಲ್ಲಿ ಹೇಗೆ ಹೂಡಿಕೆ ಮಾಡಬೇಕು, ಯಾವ ಸಮಯದಲ್ಲಿ ಯಾವ ಷೇರು ಖರೀದಿಸಬೇಕು ಹೇಗೆ ಖರೀದಿಸಬೇಕು, ಇಂಟ್ರಾ ಡೇ ಮತ್ತು ಲಾಂಗ್ ಟರ್ಮ್ ವಹಿವಾಟಿಗೆ ಯಾವುದು ಸೂಕ್ತ ಮತ್ತು ಅದರ ಜೊತೆಗೆ ಹಲವಾರು ಲಾಭದಾಯಕ ಷೇರುಗಳ ಬಗ್ಗೆ ಇಂಚಿಂಚು ಮಾಹಿತಿಗಳನ್ನ ಜಯಂತ್ ಕುಲಾಲ್ ಕೊಡುತ್ತಿದ್ದಾರೆ.
ಸ್ನೇಹಿತರೇ ನೀವೂ ಸಹ ಈ ಚಾನಲ್ ನಿಂದ ಉಪಯೋಗವನ್ನ ಪಡೆದುಕೊಳ್ಳ ಬಹುದು. ಜಯಂತ್ ರವರ ಈ ಪ್ರಯತ್ನಕ್ಕೆ ಭೇಷ್ ಎನ್ನುತ್ತಾ ಮುಂದೆ ಮಾಡುವಂತಹ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಸಿಗಲಿ ಮತ್ತು BuySellRaja ಚಾನಲ್ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸುವ Coolinglass Team.
ಓದುಗ ದನಿಗಳೇ ನೀವು ಸಹ BuySellRaja ಚಾನಲ್ ನ್ನು Subscribe ಮಾಡಿ, ಸಪೋರ್ಟ್ ಮಾಡಿ.

Follow
YouTube Channel – BuySellRaja
Facebook Profile – Jayanth kulal
ಧನ್ಯವಾದಗಳು
Coolinglass Team

4 thoughts on “ಕಾಯಕದಲ್ಲಿ ಇಂಜಿನಿಯರ್, ಆಸಕ್ತಿಯಲ್ಲಿ ಯೂಟ್ಯೂಬರ್ ಪುತ್ತೂರಿನ ಯುವ ಉತ್ಸಾಹೀ ಯುವಕ ಜಯಂತ್ ಕುಲಾಲ್”

  1. ಶುಭವಾಗಲಿ.. ಜಯಂತ್ ಅವರಿಗೆ. ಇನ್ನು ನಿಮ್ಮಿಂದ ಉತ್ತಮ ವಿಚಾರ ತಿಳಿ ಹೇಳುವ ಕೆಲಸ ಸಾಗಲಿ

    Reply

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ