ತುಳುನಾಡಿನ ಯುವ ಹಾಸ್ಯ ಕಲಾವಿದ ಕರ್ನಾಟಕದ ನೆಚ್ಚಿನ comedy kilady “ಧೀರಜ್ ನೀರುಮಾರ್ಗ” ಇವರ ಸಾಧನೆಯ ಹಾದಿ.

           ಕಲೆ ಎನ್ನುವುದು ಭಾವನೆಗಳ ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ಧಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕಲೆಯು ಸಂಗೀತ, ಸಾಹಿತ್ಯ, ಸಿನೇಮಾ, ಛಾಯಾಗ್ರಹಣ, ಶಿಲ್ಪಕಲೆ, ಮತ್ತು ಚಿತ್ರಕಲೆ ಗಳನ್ನೊಳಗೊಂಡಂತೆ ಮನುಷ್ಯನ ಅನೇಕ ಚಟುವಟಿಕೆಗಳನ್ನು ಕಲ್ಪನಾ ಸೃಷ್ಟಿಗಳನ್ನು ಮತ್ತು ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ ಪ್ರಕಾರಗಳನ್ನು ಆವರಿಸಿಕೊಂಡಿದೆ. ಇಂತಹ ವಿಭಿನ್ನ ಕಲೆಯನ್ನು ಹೊಂದಿರುವ ಇವತ್ತಿನ ನಮ್ಮ ಕೂಲ್ – ಸಾಧಕರ ಕಾಲo ನಲ್ಲಿ ಹಾಸ್ಯ ಕಲಾವಿದ comedy kilady “ಧೀರಜ್ ನೀರುಮಾರ್ಗ”.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ನೀರುಮಾರ್ಗ ದಿ| ಜನಾರ್ಧನ ಬಿ ಬೆಳ್ಚಾಡ ಮತ್ತು ಯಶೋದ ಬಿ ದಂಪತಿಗಳ ಮಗನಾಗಿ 15/02/1994ರಲ್ಲಿ ಜನಿಸಿದರು. ಇವರಿಗೆ ದೀಕ್ಷಿತ್ ಎಂಬ ಒಬ್ಬ ಅಣ್ಣನಿದ್ದಾರೆ.
ಇವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮೇರ್ಲಪದವು ಅನುದಾನಿತ ಶಾಲೆ, ಪದವಿಪೂರ್ವ ಶಿಕ್ಷಣವನ್ನು ರೈಮಂಡ್ಸ್ ಕಾಲೇಜು ವಾಮಂಜೂರು ಮತ್ತು ಐಟಿಐ ಹೆಚ್ಚಿನ ಶಿಕ್ಷಣವನ್ನು ಸೈಂಟ್ ಅಲೋಶಿಯಸ್ ಕಾಲೇಜು ಇಲ್ಲಿ ಮುಗಿಸಿರುತ್ತಾರೆ. ಪ್ರ‌ಸ್ತುತ ನಟನಾಗಿ ಮತ್ತು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಇವರ ತಂದೆ “ಭಾರತೀಯ ಸೇವಾ ದಳ” ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆಯವರು “ಯುವಜನ ಸಮಾಜ ಸೇವಾ ಕ್ರೀಡಾ ಇಲಾಖೆ”ಯ ಕಡೆಯಿಂದ “ರಾಜ್ಯ ಯುವ ಪ್ರಶಸ್ತಿ”ಯನ್ನು ಮುಖ್ಯಮಂತ್ರಿಗಳ ಕೈಯಿಂದ ಪಡೆದಿರುತ್ತಾರೆ. ಮತ್ತು ತಾಯಿ ಗಾಂಧಿನಗರ ಪ್ರೈಮರಿ ಸ್ಕೂಲ್ ನಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಲೆಯ ಮೇಲೆ ಅಪಾರ ಒಲವು ಇತ್ತು. ಶಾಲಾ ಕಾಲೇಜು ಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿ ಯಲ್ಲಿ ಇವರು ಎತ್ತಿದ ಕೈ. ಏಕ ಪಾತ್ರಾಭಿನಯ, ನಾಟಕ, ಮೂಕ ಪಾತ್ರಾಭಿನಯ, ಮಿಮಿಕ್ರಿ ಹೀಗೆ ಅನೇಕ ಕಲಾ ಪ್ರಕಾರಗಳಲಲ್ಲಿ ಮುಂದಿದ್ದರು ಮತ್ತು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ತನ್ನ 10ನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದರು. ನಾಟಕ ಕ್ಷೇತ್ರಕ್ಕೆ ಕಾಲಿಡಲು ತಂದೆ ತಾಯಿ ಜೊತೆ ಇಡೀ ಕುಟುಂಬದವರ ಸಹಕಾರ ಇದ್ದಿದ್ದು ಖುಷಿಯ ವಿಚಾರ.
ಇವರು ಊರಿನಲ್ಲಿ ನಡೆಯುವ ನಾಟಕಗಳಲ್ಲಿ ನಟನೆ ಮಾಡುತ್ತಿದ್ದರು. ಒಂದು ದಿನ “ಮಧು ಬಂಗೇರ ಕಲ್ಲಡ್ಕ” ಇವರ ನಾಟಕ ಸಂಸ್ಥೆಯ ಆಡಿಷನ್ ಕರೆದಿರುತ್ತಾರೆ. ಆ ಆಡಿಷನ್ ಗೆ ಹೋದ ಇವರು ಸೆಲೆಕ್ಟ್ ಆಗದೆ ಬೇಸರದಿಂದ ಹಿಂತಿರುಗುತ್ತಾರೆ. ಆದರೆ, ಇವರ ಅದೃಷ್ಟ ಕೈ ಕೊಡಲಿಲ್ಲ. ಸ್ವಲ್ಪ ದಿನಗಳ ಬಳಿಕ ಇವರಿಗೆ ಮಧು ಬಂಗೇರ ಅವರಿಂದ ಕರೆ ಬರುತ್ತದೆ. ಅವರ ತಂಡದ ಒಬ್ಬ ಸದಸ್ಯ ನಾಟಕದಿಂದ ಬಿಟ್ಟು ಹೋದ ಕಾರಣ ಇವರನ್ನು ಬರುವಂತೆ ಕರೆಯುತ್ತಾರೆ. ಹಾಗೆ ಅವತ್ತು ಸಂಸ್ಥೆಯನ್ನು ಸೇರಿಕೊಂಡು ಪ್ರಬುದ್ಧ ಕಲಾವಿದನಾಗಿ ಹೊರಹೊಮ್ಮಿದವರು ಇಂದಿಗೂ ಸತತ ಎಂಟು ವರುಷಗಳಿಂದ ಅದೇ “ತುಳುವೆರೆ ತುಡರ್” ನಾಟಕ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಇವರ ಎಲ್ಲಾ ಕೆಲಸ ಕಾರ್ಯಗಳ ಜೊತೆಗೆ ಬೆಂಬಲವಾಗಿ ನಿಂತವರು ಕೂಡ ಈ ತಂಡದ ಸಾರಥಿ “ಮಧು ಬಂಗೇರ ಕಲ್ಲಡ್ಕ” ಎಂದು ಇಲ್ಲಿ ಹೇಳಲು ಇಚ್ಚಿಸುತ್ತಾರೆ. ಇವರ ಜೊತೆಗೆ ರಕ್ಷಿತ್ ಗಾಣಿಗ ಮತ್ತು ಪ್ರಜ್ಞೇಶ್ ಶೆಟ್ಟಿ ಸದಾ ಇವರ ಜೊತೆಗಿದ್ದು ಸಹಕರಿಸುತ್ತಿದ್ದಾರೆ. ಹತ್ತನೇ ವಯಸ್ಸಿನಲ್ಲಿಯೇ ನಾಟಕ ತಂಡವನ್ನು ಪ್ರವೇಶಿಸಿದ ಇವರಿಗೆ “ಅರುಣ್‌ ಚಂದ್ರ ಬಿ.ಸಿ ರೋಡ್‌” ಮತ್ತು “ರಾಜೇಶ್‌ ಮುಗುಳಿ” ಕೂಡ ಗುರುಗಳಾಗಿ ಆಶಿರ್ವಾದಿಸಿದ್ದಾರೆ.

 

ರಂಗಭೂಮಿಯಲ್ಲಿ ಇಪ್ಪತ್ತದೈಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಇವರು “ತುಳುವೆರೆ ತುಡರ್” ನಾಟಕ ತಂಡದಲ್ಲಿ “ಇನಿ ಅತ್ತಂಡ ಎಲ್ಲೆ”, “ಕೊಪ್ಪರಿಗೆ”, “ಏರ ಉಲ್ಲೆರ್‌ ಈ ಇಲ್ಲಡ್”, “ಶಾಂತಿನಗರ ಸೆಕೆಂಡ್‌ ಕ್ರಾಸ್”, “ನಮ್ಮ ಮರ್ಯಾದಿದ ಪ್ರಶ್ನೆ”, “ಆಲ್‌ ಎನ್ನಾಲ್”, “ಶ್ರೀಮತಿ”, “ಕನ ಕಟ್ಟೊರ್ಚಿ”, “ಒಂಜೇ ಸಾದಿ ತಪ್ಯರ ಇಜ್ಜಿ”, “ನಮ ಬದ್ಕೊಡು”, “ನೆರೆಕರೆ”, “ಪುನರ್ಜನ್ಮ” ಎಂಬ ನಾಟಕಗಳಲ್ಲಿ ಇಂದಿಗೂ ಅಭಿನಯಿಸುತ್ತಿದ್ದಾರೆ. ಅಲ್ಲದೆ ಗೌರವ ಪಾತ್ರಗಳಲ್ಲಿ “ಶರತ್ ಆಳ್ವ” ಮತ್ತು “ಸುಬ್ಬು ಸಂಟ್ಯಾರ್” ಇವರ “ಬೊಳ್ಳಿ ಬೊಳ್ಪು ಕಲಾವಿದರು” ಇದರಲ್ಲಿ “ನನ ಮರ್ಲ್‌ ಕಟ್ಟೊರ್ಚಿ”, “ಕಾಸ್‌ದ ಕಸರತ್”, ಎಂಬ ನಾಟಕಗಳಲ್ಲಿ ಮತ್ತು “ಸಾಯಿ ದೀಕ್ಷಿತ್ ಪುತ್ತೂರು” ಇವರ “ಸಾಯಿ ಶೃಂಗಾರ” ಅರ್ಪಿಸುವ “ಮಕ್ಕರ್” ಕಾಮಿಡಿ ಶೋಗಳಲ್ಲಿ ಕೂಡ ಅಭಿನಯಿಸಿದ್ದಾರೆ.
ಇವರು “ನಮ್ಮ ಕುಡ್ಲ” ಚಾನೆಲ್ ನ ಅಸಿಸ್ಟೆಂಟ್ ಡೈರೆಕ್ಟರ್ ಅವರ ಚಲನಚಿತ್ರ “ದಂಡ್” ಮತ್ತು ”ವಿಶ್ವನಾಥ್ ಕೋಡಿಕಲ್ ” ರವರ “ಎನ್ನ”, “ಕಟಪಾಡಿ ಕಟ್ಟಪ್ಪ” ತುಳು ಚಲನಚಿತ್ರಗಳಲ್ಲಿ ಅಭಿನಯಿಸಿ, ಕನ್ನಡ ಚಿತ್ರಗಳಾದ “ಕನಸು ಮಾರಾಟಕ್ಕಿದೆ”, “ನಾನ್ ವೆಜ್”, “ಕಸರತ್” ಮುಂತಾದ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇವರು ಇವರ ಬಿಡುವಿನ ವೇಳೆಯಲ್ಲಿ ಹಲವಾರು ಕಿರುಚಿತ್ರಗಳಿಗೆ ನಿರ್ದೇಶನ ಮತ್ತು ಒಬ್ಬ ಅದ್ಭುತ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರ ಸಾಧನೆ ಇಷ್ಟಕ್ಕೆ ನಿಲ್ಲದೆ ಮುಂದೆ ತಾನು ಕಷ್ಟ ಪಟ್ಟು “ಜೀ ಕನ್ನಡ ವಾಹಿನಿ”ಯ “comedy kilady” ಆಡಿಷನ್ ಗೆ ಹೋಗಿ, ಅಲ್ಲಿ ಆಯ್ಕೆಯಾಗಿ ಮುಂದೆ ಇಡೀ ಕರ್ನಾಟಕವನ್ನು ನಗೆಗಡಲಲ್ಲಿ ತೇಲಿಸಿ ದ್ವಿತೀಯ ಸ್ಥಾನ ಪಡೆದು ಕರ್ನಾಟಕದ ಜನರ ಮನ ಗೆದ್ದು ತುಳು ನಾಡಿನ ಹೆಮ್ಮೆಯ ಪುತ್ರನಾಗಿದ್ದಾರೆ.
ಎಷ್ಟೇ ಹೆಸರು ಗಳಿಸಿದರೂ ತನ್ನ ಸರಳ ಸಜ್ಜನಿಕೆಯನ್ನು ಮರೆಯದೆ ಅದೆಷ್ಟೇ ಎತ್ತರಕ್ಕೆ ಬೆಳೆದರೂ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಬೆರೆತು ಎಲ್ಲರಿಗೂ ಪ್ರೀತಿ ಪಾತ್ರರಾಗಿರುವ ಧೀರಜ್ ಕಲಾ ಮಾತೆ ಶಾರದೆಯ ಅನುಗ್ರಹ ಸದಾ ನಿಮ್ಮ ಮೇಲಿರಲಿ ರಂಗಭೂಮಿಯಲ್ಲಿ ನಿಮಗೆ ಇನ್ನೂ ಹೆಚ್ಚಿನ ಅವಕಾಶಗಳು ಒಲಿದು ಬರಲಿ ಸಾಧನೆಯ ಶಿಖರ ಇನ್ನಷ್ಟು ಏರುವಂತಾಗಲಿ ಎಂಬುದೇ ನಮ್ಮ ಆಶಯ.
ಬರಹ : ರಂಜಿನಿ ಬಂಗೇರ ಕಳಂಗಜೆ
 

6 thoughts on “ತುಳುನಾಡಿನ ಯುವ ಹಾಸ್ಯ ಕಲಾವಿದ ಕರ್ನಾಟಕದ ನೆಚ್ಚಿನ comedy kilady “ಧೀರಜ್ ನೀರುಮಾರ್ಗ” ಇವರ ಸಾಧನೆಯ ಹಾದಿ.”

  1. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಈ ಕಲಾವಿದನೆಗೆ ಶಾರದಾಂಬೆಯ ಅನುಗ್ರಹ ಎಂದಿಗೂ ಇರಲಿ 🙏
    Best Of Luck DHIRAJ ❤

    Reply

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio