ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಕೆಯ್ಯೂರಿನ ಹುಡುಗನಿಗೆ ಬೇಕಾಗಿದೆ ಸಹೃದಯಿ ದಾನಿಗಳ ಸಹಾಯಹಸ್ತ

ಕೆಯ್ಯೂರಿನ ಹುಡುಗನಿಗೆ ಬೇಕಾಗಿದೆ ಸಹೃದಯಿ ದಾನಿಗಳ ಸಹಾಯಹಸ್ತ

ಇತ್ತೀಚೆಗೆ ಮನೆಯ ಯಜಮಾನನಿಗೆ ಮಹಾಮಾರಿ ಕ್ಯಾನ್ಸರ್ ಬಾಧಿಸಿ, ಶಾಲೆಗೆ ಹೋಗಿ ಕನಸು ಕಟ್ಟುತ್ತಿರುವ ಹದಿಹರೆಯದ ಮಗ ಮತ್ತು ಮನೆಯ ಯಜಮಾನಿ, ಅದೆಷ್ಟೋ ಕಷ್ಟ ಪಟ್ಟು ಗೊತ್ತಿರುವ ಎಲ್ಲಾ ದೈವ ದೇವರುಗಳ ಮೊರೆ ಹೋಗಿ, ಹಾಗೋ ಹೀಗೋ ಸುಮಾರು 25 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಗಂಡನನ್ನು ಸಾವಿನ ದವಡೆಯಿಂದ ರಕ್ಷಿಸಿ ನಿಟ್ಟುಸಿರು ಬಿಡುವ ಹೊತ್ತಲ್ಲಿ ಆ ದೇವರು ಈ ಮನೆಗೆ ಮತ್ತೊಂದು ಸಹಿಸಲಾರದ ಪರೀಕ್ಷೆಯನ್ನು ತಂದೊಡ್ಡಿದ್ದಾನೆ.  

ಹೌದು ತಂದೆಯ ಕಷ್ಟ ಕಾಲದಲ್ಲಿ ಅಮ್ಮನಿಗೆ ಶಕ್ತಿಯಂತೆ ಜೊತೆಯಾಗಿ ನಿಂತ ಮಗ, ಮನೆಯ ಕಷ್ಟ ಕಾಲದಲ್ಲಿ ಅಪ್ಪ ಅಮ್ಮನಿಗೆ ಹೆಗಲಾಗಿ ನಿಲ್ಲಬೇಕಿದ್ದ ಮಗ ಇಂದು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿ ನಾಳೆಯ ಬದುಕಿನ ಭರವಸೆಯ ಬೆಳಕನ್ನು ಕಾಣಲು ಕಣ್ಣಂಚಲ್ಲಿ ಕಣ್ಣೀರು ಹಾಕುತ್ತಾ, ಸಹೃದಯಿ ದೇವರುಗಳ ಸಹಾಯ ಹಸ್ತ ಕೋರುತ್ತಾ ಮಲಗಿದ್ದಾನೆ. ಇದನ್ನೆಲ್ಲಾ ನೋಡಿದರೆ ದೇವರು ಯಾಕೆ ಇಷ್ಟು ನಿಷ್ಕರುಣಿ ಎಂದು ಅನ್ನಿಸುವುದು ಸಹಜ. ಆದರೆ ಅದೇ ದೇವರು ಕತ್ತಲ ಸರಿಸಿ ಬೆಳಕು ಕೊಡುವುದರಲ್ಲಿ ತಡ ಮಾಡುವುದಿಲ್ಲ ಎನ್ನುವುದು ಅಷ್ಟೇ ಸತ್ಯ. ಯಾಕೆಂದರೆ ”ತೇನ ವಿನಾ ತೃಣಮಪಿ ನ ಚಲತಿ” ಎಂಬ ಮಾತಿನಂತೆ ಆ ದೇವರ ಇಚ್ಛೆ ಇಲ್ಲದೆ ಯಾವುದು ನಡೆಯೋದಿಲ್ಲ. 

Please Help Bhavith

ಈ ಹುಡುಗನ ಹೆಸರು ಭವಿತ್. ವಯಸ್ಸು ಹದಿನೆಂಟು. ತಂದೆ ಲೋಕನಾಥ ಪಕ್ಕಳ ಕೆಯ್ಯೂರಿನ  ಮೇರ್ಲ ಸಮೀಪ ಇವರ ಮನೆ. ಕೆಲವು ತಿಂಗಳುಗಳ ಹಿಂದೆ ಲೋಕನಾಥ ಅವರಿಗೆ ಕ್ಯಾನ್ಸರ್ ಬಾಧಿಸಿ ಇಡೀ ಕುಟುಂಬವೇ ಕಂಗಾಲಾಗಿ ನಿಂತಿತ್ತು. ಸುಮಾರು 25 ಲಕ್ಷ ಖರ್ಚು ಮಾಡಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಈಗ ಲೋಕನಾಥ ಅವರ ಮಗ ಭವಿತ್ ಅವರಿಗೂ ಮೆದುಳಿಗೆ ಸಂಬಂಧಿಸಿದ ಮಾರಣಾಂತಿಕ ಕಾಯಿಲೆ (callosumGBM. Patient underwent Supratentorial craniotomy withexcesion of glioma cavernoma surface lesion.) ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಸುಮಾರು 15 ಲಕ್ಷ ಖರ್ಚು ಮಾಡಿದರೆ ಜೀವ ಉಳಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಗಂಡನನ್ನು ಉಳಿಸಲು ಹರಸಾಹಸ ಪಟ್ಟ ಹೆಂಡತಿ ಇಂದು ಮಗನಿಗೆ ಬಂದೊದಗಿದ ಕಾಯಿಲೆ ಕೇಳಿ ಸಿಡಿಲು ಬಡಿದಂತಾಗಿದೆ. ಮಗನ ಜೀವ ಉಳಿಸಲು ತಾಯಿ ಇಂದು ದಾನಿಗಳಲ್ಲಿ ಸೆರಗೊಡ್ಡಿ ಅಂಗಲಾಚುತ್ತಿದ್ದಾರೆ. ಈಗಾಗಲೇ ಸಾಕಷ್ಟು ಖರ್ಚು ಮಾಡಿ ಅಸಹಾಯಕಳಾಗಿ ನಿಂತ ತಾಯಿಗೆ ಇಂದು ನಮ್ಮ ಸಹಾಯ ಬೇಕಿದೆ. 

ಜೂನ್ 22 ರಂದು ಕಣ್ಣಿನ ಸಮಸ್ಯೆ ಎಂದು ಆಸ್ಪತ್ರಗೆ ಹೋಗಿದ್ದ ಭವಿತ್ ಅವರನ್ನು ಪರೀಕ್ಷೆ ಮಾಡಿದಾಗ ಏನೋ ಸಮಸ್ಯೆ ಇರುವುದು ಕಂಡು ವೈದ್ಯರು ಸ್ಕ್ಯಾನ್ ಮಾಡಲು ತಿಳಿಸಿರುತ್ತಾರೆ.  ಸ್ಕ್ಯಾನ್ ಮಾಡಿದಾಗ ಭವಿತ್ ಅವರಿಗೆ ಮೆದುಳಿನಲ್ಲಿ ಮಾರಣಾಂತಿಕ ಕಾಯಿಲೆ ಇರುವುದನ್ನು ವೈದ್ಯರು ದೃಢ ಪಡಿಸುತ್ತಾರೆ. ಹೆಚ್ಚಿನ ಚಿಕಿತ್ಸೆಗೆ ಭವಿತ್ ಅವರನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. 

ಆತ್ಮೀಯ ಸಹೃದಯಿ ದಾನಿಗಳಲ್ಲಿ ವಿನಮ್ರವಾಗಿ ಬೇಡಿಕೊಳ್ಳುವುದೇನೆಂದರೆ, ಕೆಳಗೆ ಒದಗಿಸಿರುವ QR Code ಬಳಸಿ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಬಳಸಿ ಅಥವಾ ಮೊಬೈಲ್ ಸಂಖ್ಯೆ ಮುಖಾಂತರ ಗೂಗಲ್ ಫೆ ಅಥವಾ ಫೋನ್ ಪೇ ಮಾಡುವ ಮೂಲಕ ಒಂದಷ್ಟು ರೂಪಾಯಿಗಳ ಧನ ಸಹಾಯ ಮಾಡಿ, ಅಸಾಯಕಳಾಗಿ ಕುಳಿತ ತಾಯಿಗೆ, ನಾಳೆಯ ಭರವಸೆಯ ಬೆಳಕನ್ನು ಕಾಯುವ ಮಗನಿಗೆ ಮತ್ತು ಕಷ್ಟ ದಾಟಿದರೂ ನೋವಿನಲ್ಲೇ ಕರಗುವ ತಂದೆಗೆ ನಾವು ಭರವಸೆಯಾಗೋಣ. 

ನೀವು ಹಣ ಸಹಾಯ ಮಾಡಿದ ನಂತರ ದಯವಿಟ್ಟು ನಿಮ್ಮ ಪರಿಚಯದ ಒಂದು ಹತ್ತು ಮಂದಿಗೆ  ಈ ಮೆಸೇಜ್ ಕಳುಹಿಸುವ ಮೂಲಕ ಈ ಕುಟುಂಬಕ್ಕೆ ನೆರವಾಗೋಣ. ಭವಿತ್ ಆದಷ್ಟು ಬೇಗ ಗುಣಮುಖವಾಗಿ ಬಂದು ಅಪ್ಪ ಅಮ್ಮನ ಸೇವೆ ಮಾಡುವಂತಾಗಲಿ. ಪುನಃ ಕಾಲೇಜು ಹೋಗಿ ಭವಿಷ್ಯ ಕಟ್ಟುವಂತಾಗಲಿ. 

Account Details 

ತಂದೆಯ ಬ್ಯಾಂಕ್ ಖಾತೆ ವಿವರ

Name: Lokanatha Pakkala
Account Number: 3572500100056501
IFSC Code: KARB0000357
Bank Name: Karnataka Bank
PhonePe / G-Pay: 9741316397 (Lokanath Loku123) - Father

 

ತಾಯಿಯ ಬ್ಯಾಂಕ್ ಖಾತೆ ವಿವರ

Name: Sushma Pakkala
Account Number: 6252101000574
IFSC Code: CNRB0006252
Bank Name: Canara Bank
Branch: Thingalady Puttur.
Google Pay: 7411072397 (Sushma) - Mother

 

 

Click to Join Whatsapp Group

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio