ಬದುಕು – ನಾರಾಯಣ ರೈ ಕುಕ್ಕುವಳ್ಳಿ

ಬದುಕು ಬದುಕು ಸುಖಮಯ ದು:ಖಮಯ… ವಾಸ್ತವ ವಿಷಯ ! ಕೆಲವರು… ಗೋಳಾಡುವರು.. ಹಲವರು… ತೇಲಾಡುವರು ! ಬದುಕು ನಮಗೆ ವಿಧಿಯ ಕೊಡುಗೆ- ಎಂಬ ಭಾವವೇ ಇಲ್ಲ.. ಇತರರ ಬದುಕಿಗೆ ಮುಳ್ಳಾಗಿ ಕಾಡುವುದ ಬಿಡಲೇ ಇಲ್ಲ….! ಎಲ್ಲವೂ ನನ್ನದೆ.‌ ನನಗೇ ಎಲ್ಲ…. ದುರಾಸೆ ಬಿಟ್ಟಿಲ್ಲ…! ಹೌದು ವಿಧಿ- ಬೀಸುತ್ತಿದೆ… ಚಾಟಿಯೇಟು… ದಪ್ಪ ಚರ್ಮದ ನಮಗೆ ತಾಗೀತೇ ಪೆಟ್ಟು ? ಬದುಕ ಅನುಭವಿಸ ಬೇಕು ಬದುಕಲು ಬಿಡ ಬೇಕು !!!   – ✍️ ನಾರಾಯಣ ರೈ ಕುಕ್ಕುವಳ್ಳಿ.  

ಕವಿ ಕಯ್ಯಾರ – ಡಾ ಸುರೇಶ ನೆಗಳಗುಳಿ

  ಕವಿ ಕಯ್ಯಾರ ಕನ್ನಡ ನೆಲವದು ನಮ್ಮದು ಎನ್ನುತ ಹೊನ್ನಿನ‌ ನುಡಿಯಲಿ ದುಡಿದವರು ಚೆನ್ನದು ಕಾಸರಗೋಡಿನ ನೆಲವದು ಕನ್ನಡ ಜನರುಸಿರೆಂದವರು || ಶತಮಾನದ ಸವಿ ಬದುಕನು ಸವೆಸುತ ಮತ ಮನುಜನದದು ಒಂದೆನುತ ಹಿತ ಮಿತ ಪ್ರೀತಿಯ ಜೊತೆ ಸೌಹಾರ್ದದ ಜೊತೆ ಸಕಲರನೂ ಕಂಡವರು || ದೇಶದ ಭಕ್ತಿಯ ಕೋಶವ ಕಟ್ಟುತ ಪಾಶವ ಬಿಗಿಯುತ ಭಾಷೆಯಲಿ ದ್ವೇಷದ ಭಾವನೆ ಇಲ್ಲದೆ ಬದುಕಲು ರೋಷವದೇತಕೆ ಎಂದವರು. || ನಮ್ಮಯ ನಾಡಿದು ಪರರಲಿ ಯಾತಕೆ ಹೆಮ್ಮೆಯ ಕುಟುಂಬದಂತಿರಲು ಸುಮ್ಮನೆ ಗಡಿಯಲಿ ವಿವಾದವೇಳಲು  ಹಮ್ಮನು ತೋರಿಸಿ … Read more

ಈ ಸೃಷ್ಟಿ ಇರುವುದು ನಮ್ಮೆಲ್ಲರ ಬದುಕಿಗಾಗಿ. ಆದರೆ ನಾವು ಮಾತ್ರ ಇದರ ಯಜಮಾನರಲ್ಲ – ಹಸಿರು ಮಾತು – ನಾರಾಯಣ ರೈ ಕುಕ್ಕುವಳ್ಳಿ

ಹಸಿರು ಮಾತು. ಹಸಿರು ಬೇಕು  ಉಸಿರಾಡಲು ಜೀವ- ಕೋಟಿಗಳೆಲ್ಲ….!!!         ನವಗ್ರಹಗಳಲ್ಲಿ ಜೀವಜಲ ಪ್ರಾಣವಾಯು. ಹೀಗೆ ಬದುಕಿಗೆ ಪೂರಕವಾದ ಪಂಚಭೂತಗಳಿರುವ ಗ್ರಹ ಇರುವ ಏಕೈಕ ಗ್ರಹ ಈ ನಮ್ಮ ಭೂಮಿ. ಧರೆ ಎನ್ನೋಣ. ಧರಿತ್ರಿ ಎನ್ನೋಣ. ಪೃಥ್ವಿ-ಅವನಿ ಎನ್ನೋಣ. ಅದು ನಾವು ಭೂಮಿ ತಾಯಿಯನ್ನು ಕರೆಯುವ ಪ್ರಜ್ಞಾವಂತ ಜನರ ಮಾತು. ಆದರೆ ಹೇಗಿದೆ ಈ ಧರೆ…?   ಕಾಡು ನಾಶವಾಗಿದೆ, ಸಮುದ್ರ ಅಬ್ಬರಿಸುತ್ತಿದೆ, ಸುನಾಮಿ, ತೌಕ್ತೆ, ಯಾಸ್ ಇನ್ನು ಏನೇನೋ ಹೆಸರಿನ ಚಂಡಮಾರುತಗಳು ಅಕಾಲಿಕ ಮಳೆ, ಪ್ರವಾಹ, ಕರಗುತ್ತಿದೆ ಮಂಜು, … Read more

ನಮನ – ಎನ್ ಸುಬ್ರಾಯ ಭಟ್ ಮಂಗಳೂರು

 ನಮನ  ಹತ್ತನೇ ಮಹಡಿಯಿಂ ಪರದೆಯನು ಸರಿಸಿ  ಉತ್ತು ಬಿತ್ತುವ ಶ್ರಮವ ಮನದಲ್ಲೆ ಸ್ಮರಿಸಿ ಭೂತಾಯಿ ಎಂದೆಂದು ಕಾಪಾಡು ಎಂದು ಬೇಡಿದೆನು ಬಕುತಿಯಲಿ ನಮಿಸಿ ನಾನಿಂದು !                                                  – ಎನ್ ಸುಬ್ರಾಯ ಭಟ್ ಮಂಗಳೂರು 

”ಒಂದು ಹಾದಿಯ ಸ್ವಗತ” – ನಾರಾಯಣ ರೈ ಕುಕ್ಕುವಳ್ಳಿ

ಒಂದು ಹಾದಿಯ ಸ್ವಗತ ಅನಾದಿ ಕಾಲದಿಂದಲೂ ನೂರಾರು ಸಾವಿರಾರು ಮಂದಿ ಹಾದು ಹೋದ ಹಾದಿ ನಾನು !! ಆದರೆ ಈಗ ??? ಯಾರೂ ಕಾಣೋದಿಲ್ಲ ಊರ ನಾಯಿ    ಕಾಡ ಹಂದಿ ಆಗಾಗ ಗುಡುಗು ಮಿಂಚು ಗಾಳಿ ಮಳೆ ಎದೆ ಹಗುರ ಹಸಿರು  ಹಸಿರು ಆದರೂ ಜನರ ಬಾಂಧವ್ಯ ಹೇಗೆ ಮರೆಯಲಿ !!?                 ಶಾಲಾ ಮಕ್ಕಳ ಗೋಲಿ ಆಟ-ಓಟ ಹಿರಿಯರ  ಮಾತು ಕತೆ ಹಾದಿ ಜಗಳ ! ಹೌದು ನೆನಪು ಏನೇನೋ  … Read more

ಯಶಸ್ಸಿನ ಎರಡು ಸೂತ್ರಗಳು : ನಾರಾಯಣ ರೈ ಕುಕ್ಕುವಳ್ಳಿ

ಆತ್ಮವಿಶ್ವಾಸ ಆತ್ಮವಿಶ್ವಾಸ ಬದುಕಿಗೆ-ಆಧಾರ ! ಭಯ…ಏತಕೆ ? ನಿಜದ ನೇರ ಬೇಕು ಸತ್ಯದ ನಡೆ ಸಾಕು !! ದೃಢ ನಿರ್ಧಾರ ದೃಢ ನಿರ್ಧಾರ ನಮ್ಮಲ್ಲಿರಲಿ ನಿತ್ಯ ! ಸಂಶಯ ಬೇಡ ! ಹಿಡಿದ ಕಾರ್ಯವನು ಪೂರ್ಣಗೊಳಿಸು ನೀನು !! ಕವಿ : ನಾರಾಯಣ ರೈ ಕುಕ್ಕುವಳ್ಳಿ 

”ನನ್ನ ಕವನ” – ಎನ್. ಸುಬ್ರಾಯ ಭಟ್ , ಮಂಗಳೂರು ವಿರಚಿತ ಕವನ

ನನ್ನ ಕವನ  ಬಾ ಎಂದು ಕರೆದಾಗಬರುವುದಿಲ್ಲ ನನ್ನ ಕವನಅರಿಯಲಾರೆ ಏನೋಅವಳ ಕುಂಟು ನೆವನನಾನೆಂದರೆ ಬೆಟ್ಟದಷ್ಟುಪ್ರೀತಿ ಅವಳಿಗೆಅದಕ್ಕೇ ಅಲ್ಲವೆ ಹೀಗೆ ?ಕರೆದಾಗಕಾದು ಕುಳಿತಾಗಪತ್ತೆಯೇ ಇರದೆ ಸತಾಯಿಸಿಮತ್ತೆ ಹೊತ್ತು ಗೊತ್ತು ಇಲ್ಲದೆಧುತ್ತೆಂದು ಹಾಜರ್ !!ಒಮ್ಮೊಮ್ಮೆ ಹಿಂದಿಂದ ಬಂದುಕಣ್ಣುಗಳನ್ನು ಗಟ್ಟಿ ಮುಚ್ಚುತ್ತಾಳೆನೋವಾಗುವಂತೆ ಒತ್ತುತ್ತಾ…ಇವಳೇ ಎಂದು ಗೊತ್ತಿದ್ದರೂಯಾರು… ಯಾರಪ್ಪಾ…? !ನಾಟಕ ಮಾಡಿದರೆ ಖುಷಿಯೋ ಖುಷಿ…ನನಗೋ… ಅವಳಿಗಿಂತ !!ಜೋರಾಗಿ ನಕ್ಕು ಕೈಗಳಕತ್ತಿಗೆ ಇಳಿಸಿಬೆನ್ನಲ್ಲಿ ಜೋತಾಡಿಲಲ್ಲೆಗರೆಯುತ್ತಾಳೆಬೇಕಾದಷ್ಟು ಮುತ್ತುನನ್ನ ತುತ್ತುಯಾರೇ ಕರೆದರೂ ಬೇಡಆಕೆಯೊಂದಿಗೇ ಇರಬೇಕುಮೊಬೈಲನ್ನೂ ದೂರವಿಟ್ಟುಹೇಳಿದೆನಲ್ಲವೇ ?ನನಗೂ ಆಕೆಯೆಂದರೆ ಜೀವಪದಗಳಲ್ಲಿ ಹಿಡಿದಿಡಲಾಗದ ಭಾವ !!        … Read more

ಋಣಿಯಾಗಿರು

ಬದುಕಿದ್ದೀಯಾ ಸದಾ  ದೇವರಿಗೆ ಋಣಿಯಾಗಿರು  .. || ಮನುಷ್ಯನಾಗಿದ್ದೀಯಾ    ಹೆತ್ತವರಿಗೆ ಋಣಿಯಾಗಿರು .. || ಜೀವನ ಸುಂದರವಾಗಿದೇಯಾ  ಪ್ರೀತಿಗೆ ಋಣಿಯಾಗಿರು .. || ಗೌರವ ನಿನ್ನ ಪಾಲಿಗಿದೆಯಾ  ಕಾಯಕಕ್ಕೆ ಋಣಿಯಾಗಿರು .. || ತುತ್ತಿನ ಹೊತ್ತು ತಪ್ಪದಿರಲು ಭೂಮಿಗೆ ಋಣಿಯಾಗಿರು .. ||  – ಪ್ರಮೀತ್ ರಾಜ್ ಕಟ್ಟತ್ತಾರು 

error

Enjoy this blog? Please spread the word :)

Why Manish Sisodia Was Arrested, CBI Explained