”ನನ್ನ ಕವನ” – ಎನ್. ಸುಬ್ರಾಯ ಭಟ್ , ಮಂಗಳೂರು ವಿರಚಿತ ಕವನ

ನನ್ನ ಕವನ 

ಬಾ ಎಂದು ಕರೆದಾಗ
ಬರುವುದಿಲ್ಲ ನನ್ನ ಕವನ
ಅರಿಯಲಾರೆ ಏನೋ
ಅವಳ ಕುಂಟು ನೆವನ
ನಾನೆಂದರೆ ಬೆಟ್ಟದಷ್ಟು
ಪ್ರೀತಿ ಅವಳಿಗೆ
ಅದಕ್ಕೇ ಅಲ್ಲವೆ ಹೀಗೆ ?
ಕರೆದಾಗ
ಕಾದು ಕುಳಿತಾಗ
ಪತ್ತೆಯೇ ಇರದೆ ಸತಾಯಿಸಿ
ಮತ್ತೆ ಹೊತ್ತು ಗೊತ್ತು ಇಲ್ಲದೆ
ಧುತ್ತೆಂದು ಹಾಜರ್ !!
ಒಮ್ಮೊಮ್ಮೆ ಹಿಂದಿಂದ ಬಂದು
ಕಣ್ಣುಗಳನ್ನು ಗಟ್ಟಿ ಮುಚ್ಚುತ್ತಾಳೆ
ನೋವಾಗುವಂತೆ ಒತ್ತುತ್ತಾ…
ಇವಳೇ ಎಂದು ಗೊತ್ತಿದ್ದರೂ
ಯಾರು… ಯಾರಪ್ಪಾ…? !
ನಾಟಕ ಮಾಡಿದರೆ 
ಖುಷಿಯೋ ಖುಷಿ…
ನನಗೋ… ಅವಳಿಗಿಂತ !!
ಜೋರಾಗಿ ನಕ್ಕು ಕೈಗಳ
ಕತ್ತಿಗೆ ಇಳಿಸಿ
ಬೆನ್ನಲ್ಲಿ ಜೋತಾಡಿ
ಲಲ್ಲೆಗರೆಯುತ್ತಾಳೆ
ಬೇಕಾದಷ್ಟು ಮುತ್ತು
ನನ್ನ ತುತ್ತು
ಯಾರೇ ಕರೆದರೂ ಬೇಡ
ಆಕೆಯೊಂದಿಗೇ ಇರಬೇಕು
ಮೊಬೈಲನ್ನೂ ದೂರವಿಟ್ಟು
ಹೇಳಿದೆನಲ್ಲವೇ ?
ನನಗೂ ಆಕೆಯೆಂದರೆ ಜೀವ
ಪದಗಳಲ್ಲಿ ಹಿಡಿದಿಡಲಾಗದ ಭಾವ !!

                        ಕವಿ :  ಎನ್. ಸುಬ್ರಾಯ ಭಟ್ , ಮಂಗಳೂರು.




ಅಹ್ವಾನ  :-  ಆಸಕ್ತ  ಬರಹಗಾರರು ತಮ್ಮ ಕಥೆ , ಕವನ, ಲೇಖನ ಗಳನ್ನು ಇಮೇಲ್  ವಿಳಾಸ  –                                           coolinglassofficial@gmail.com ಅಥವಾ ವಾಟ್ಸಪ್ಪ್ ನಂಬರ್  +919663035342 ಗೆ  ಕಳುಹಿಸಬಹುದು. 








Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ