ಹಾಸಿಗೆ ಹಿಡಿದಿರುವ ಕೆಯ್ಯೂರು ಕಣಿಯಾರಿನ ಯುವಕನ ಕುಟುಂಬಕ್ಕೆ ಬೇಕಿದೆ ದಾನಿಗಳ ನೆರವಿನಹಸ್ತ

Deekshith Kaniyaru

ಜೀವನಕ್ಕೆ ಆಧಾರವಾಗಿದ್ದ ಮಗ ಹಾಸಿಗೆ ಹಿಡಿದಿದ್ದಾನೆ. ದುಡಿಯುತ್ತಿದ್ದ ಕೈಗಳು ಮುಪ್ಪಾಗಿ ಅಸಹಾಯಕವಾಗಿ ನಿಂತಿವೆ. ಆಪತ್ತಲ್ಲಿ ನೆರವಾಗಬೇಕಿದ್ದ ಸಂಬಂಧಿಕರು ಸೋತು ಕೈಚೆಲ್ಲಿದ್ದಾರೆ. ಎರಡು ಹೊತ್ತು ಬೇಡ, ಕನಿಷ್ಠ ಒಂದು ಹೊತ್ತು ಊಟ ಸಿಕ್ಕರೂ ತೃಪ್ತಿ ಎನ್ನುವ ಈ ಹಿರಿ ಜೀವಗಳಿಗೆ ಮತ್ತು ಹಾಸಿಗೆ ಹಿಡಿದಿರುವ ಮಗನ ಹೊಟ್ಟೆ ತಣಿಸುವ ಪುಣ್ಯ …

Read more

ಜೀವನ್ಮರಣ ಹೋರಾಟದಲ್ಲಿರುವ ದೈವ ಸೇವಾಕಾರ್ಯದ ಮಧ್ಯಸ್ಥರಾದ ಪುತ್ತೂರಿನ ಭರತ್ ಭಂಡಾರಿ ಯವರಿಗೆ ಬೇಕಿದೆ ಸಹೃದಯಿ ದಾನಿಗಳ ನೆರವು. 

ತುಳುನಾಡಿನ ಪರಂಪರೆಯ ಶ್ರೇಷ್ಠ ಆಚರಣೆಗಳಲ್ಲೊಂದಾದ ಭೂತಾರಾಧನೆಯು ಇಂದಿಗೂ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ”ನಂಬಲು ಜಯ ಕೊಡುವ ನಂಬಿದಿರೆ ಅಪಜಯವ ಈಯುವನೆಂಬ ಭಯದ ಭಕ್ತಿಯು ಇರುವುದು ಜನಕೆ” ಎಂಬ ಮಾತಿನಂತೆ ದೇವರ ಭಯ ಇಲ್ಲದವನಿಗೆ ದೈವ ಸರಿಯಾದ ದಾರಿ ತೋರಿಸುತ್ತದೆ ಎಂದು ನಂಬಿಕೆ ಇಂದಿಗೂ ಇದೆ. ದೈವವು ಯಾವುದೇ ಮೇಲು ಕೀಳು ಬಡವ …

Read more

ನೆರವಿನ ಹಸ್ತ ಬೇಕಿದೆ: ಪಾರ್ಶ್ವ ವಾಯುವಿನಿಂದ ಹಾಸಿಗೆಯಲ್ಲಿ ಜೀವನ ಸವೆಸುತ್ತಿರುವ ಪುತ್ತೂರಿನ ಅಂಕತ್ತಡ್ಕದ ಮಂಜುನಾಥ್ ರವರ ಬಡ ಕುಟುಂಬಕ್ಕೆ ಬೇಕಿದೆ ಸಹೃದಯಿ ದಾನಿಗಳ ನೆರವಿನ ಹಸ್ತ.

ಜೀವನ ಅನ್ನೋ ಪಯಣದಲ್ಲಿ ಪ್ರತಿಯೋಬ್ಬರಿಗೂ ಒಂದಲ್ಲ ಒಂದು ಕಷ್ಟಗಳು ಬಂದೆ ಬರುತ್ತದೆ. ದೇವರು ಕಷ್ಟ ಕೊಡುವುದು ಮನುಷ್ಯನನ್ನು ಪರೀಕ್ಷೆ ಮಾಡುವುದಕ್ಕೋಸ್ಕರ ಎಂದು ಹಿರಿಯವರು ಹೇಳುತ್ತಿರುತ್ತಾರೆ. ಆದರೆ ಸಾಗುವ ದಾರಿಯಲ್ಲಿ ಮುಳ್ಳು ಸಿಕ್ಕರೆ ಹೇಗೋ ಸರಿಸಿಕೊಂಡು ಅಥವಾ ಒಮ್ಮೆ ಸಹಿಸಿಕೊಂಡು ಮುಂದೆ ಸಾಗಬಹುದು. ಆದರೆ ಸಾಗುವ ದಾರಿಯೇ ಮುಳ್ಳಿನದ್ದಾಗಿದ್ದರೆ… ಎಷ್ಟು ದೂರ ಸಾಗಬಹುದು …

Read more

ಜೀವನ ಬಡತನವೆಂಬ ಬೆಂಕಿಯಲ್ಲಿ ಕರಗುತ್ತಿದ್ದರೂ ಕಲೆ ಎಂಬ ಹೂವು ಅರಳಿಸಿದ ಚಿತ್ರಕಲಾ ಪ್ರವೀಣ ”ಜಿತೇಶ್”

      ”ನೋವಿನಲ್ಲೂ ಅರಳುವ ಕಲೆ”   ಬದುಕು ಒಂದು ಕಲೆ ಎನ್ನುತ್ತೇವೆ.ಬದುಕುವ ಕಲೆ ಗೊತ್ತಿದ್ದರೆ, ಆತ್ಮ ವಿಶ್ವಾಸವಿದ್ದರೆ ಮೂಡುವ ಕಲೆಯೇ ಬದುಕಿಗೆ ಆಸರೆಯಾಗುತ್ತದೆ.     ನೊಂದವರ ಪಾಲಿಗೆ ಆಸರೆ ತಂಡದ ಮೂಲಕ ಯುವ ಕಲಾವಿದರೊಬ್ಬರ ವಿಷಯ ತಿಳಿದು ಮನಸ್ಸಿಗೆ ತುಸು ಸಂಕಟವಾದರೂ ಬದುಕಿಗೆ ಸ್ಫೂರ್ತಿಯ ಸೆಲೆಯಾಯಿತು …

Read more

ಉಪ್ಪಿನಂಗಡಿ : ಬಾಳ ಪಯಣದಲ್ಲಿ ಎದುರಾದ ಕ್ಯಾನ್ಸರ್ ನ್ನು ಗೆಲ್ಲಲು ಶ್ರಾವ್ಯಳಿಗೆ ಬೇಕಿದೆ ಸಹೃದಯಿ ದಾನಿಗಳ ನೆರವು.

              ಕಷ್ಟಗಳು ಯಾರನ್ನು ಗುರುತಿಸಿಕೊಂಡು ಬರುವುದಿಲ್ಲ. ಆದರೆ ಬರುವ ಕಷ್ಟಗಳೆಲ್ಲ ಎಂದೂ ಶಾಶ್ವತವಲ್ಲ. ಕಷ್ಟಗಳ ಕತ್ತಲೆ ಕಳೆದು ಬೆಳಕು ಮೂಡಲೇಬೇಕು ಎಂಬ ಆಶಾಕಿರಣದೊಂದಿಗೆ ಇಂದು ನಾವು ಜೀವಿಸಬೇಕು. ಹೌದು ಸ್ನೇಹಿತರೇ ನೀವು ನೋಡಿರಬಹುದು ತನಗಿಂತ ಭಾರವಾದ ವಸ್ತುವನ್ನು ಇರುವೆ ಸಾಗಿಸಬೇಕಾದರೆ ತನ್ನ ಎಲ್ಲಾ …

Read more

ಸುಳ್ಯ : ಎರಡೂ ಕಿಡ್ನಿಗಳ ವೈಫಲ್ಯದಿಂದ ಆಸ್ಪತ್ರೆಯಲ್ಲಿ ನಿಸ್ಸಹಾಯಕನಾಗಿ ಮಲಗಿರುವ ಹುಡುಗ ರಕ್ಷಿತ್ ಗೆ ಬೇಕಿದೆ ಸಹೃದಯಿ ದಾನಿಗಳ ನೆರವಿನ ಹಸ್ತ.

      ಈತ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರುಪದವಿನ ರಕ್ಷಿತ್ ಪಾಟಾಳಿ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಈತನದ್ದು ಬಡ ಕುಟುಂಬ. ರಕ್ಷಿತ್ ತನ್ನ ಎರಡೂ ಕಿಡ್ನಿಗಳೂ ವೈಫಲ್ಯಗೊಂಡು ಇಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ಮಲಗಿದ್ದಾನೆ. ರಕ್ಷಿತ್ ನ ಆಸ್ಪತ್ರೆಯ ಖರ್ಚು ಭರಿಸಲು ಇಡೀ ಕುಟುಂಬ ಇನ್ನಿಲ್ಲದ …

Read more

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ