”ಒಂದು ಹಾದಿಯ ಸ್ವಗತ” – ನಾರಾಯಣ ರೈ ಕುಕ್ಕುವಳ್ಳಿ

ಒಂದು ಹಾದಿಯ ಸ್ವಗತ

ಅನಾದಿ ಕಾಲದಿಂದಲೂ

ನೂರಾರು ಸಾವಿರಾರು

ಮಂದಿ

ಹಾದು ಹೋದ

ಹಾದಿ ನಾನು !!

ಆದರೆ ಈಗ ???

ಯಾರೂ ಕಾಣೋದಿಲ್ಲ

ಊರ ನಾಯಿ   

ಕಾಡ ಹಂದಿ

ಆಗಾಗ ಗುಡುಗು ಮಿಂಚು

ಗಾಳಿ ಮಳೆ

ಎದೆ ಹಗುರ

ಹಸಿರು  ಹಸಿರು

ಆದರೂ ಜನರ ಬಾಂಧವ್ಯ

ಹೇಗೆ ಮರೆಯಲಿ !!?                

ಶಾಲಾ ಮಕ್ಕಳ

ಗೋಲಿ ಆಟ-ಓಟ

ಹಿರಿಯರ 

ಮಾತು ಕತೆ

ಹಾದಿ ಜಗಳ !

ಹೌದು ನೆನಪು

ಏನೇನೋ 

ಹುಡು ಕಾಡುತ್ತಿದೆ !

ಮತ್ತೆ ಬಂದೀತೇ

ಆ ಕಾಲ ?

ಕವಿ – ನಾರಾಯಣ ರೈ ಕುಕ್ಕುವಳ್ಳಿ

Leave a Comment