ಕವಿ ಕಯ್ಯಾರ – ಡಾ ಸುರೇಶ ನೆಗಳಗುಳಿ


 

ಕವಿ ಕಯ್ಯಾರ


ಕನ್ನಡ ನೆಲವದು ನಮ್ಮದು ಎನ್ನುತ

ಹೊನ್ನಿನ‌ ನುಡಿಯಲಿ ದುಡಿದವರು

ಚೆನ್ನದು ಕಾಸರಗೋಡಿನ ನೆಲವದು

ಕನ್ನಡ ಜನರುಸಿರೆಂದವರು ||


ಶತಮಾನದ ಸವಿ ಬದುಕನು ಸವೆಸುತ

ಮತ ಮನುಜನದದು ಒಂದೆನುತ

ಹಿತ ಮಿತ ಪ್ರೀತಿಯ ಜೊತೆ ಸೌಹಾರ್ದದ

ಜೊತೆ ಸಕಲರನೂ ಕಂಡವರು ||


ದೇಶದ ಭಕ್ತಿಯ ಕೋಶವ ಕಟ್ಟುತ

ಪಾಶವ ಬಿಗಿಯುತ ಭಾಷೆಯಲಿ

ದ್ವೇಷದ ಭಾವನೆ ಇಲ್ಲದೆ ಬದುಕಲು

ರೋಷವದೇತಕೆ ಎಂದವರು. ||


ನಮ್ಮಯ ನಾಡಿದು ಪರರಲಿ ಯಾತಕೆ

ಹೆಮ್ಮೆಯ ಕುಟುಂಬದಂತಿರಲು

ಸುಮ್ಮನೆ ಗಡಿಯಲಿ ವಿವಾದವೇಳಲು 

ಹಮ್ಮನು ತೋರಿಸಿ ನಿಂತವರು ||

                ಕವಿ :  ಡಾ ಸುರೇಶ ನೆಗಳಗುಳಿ


Leave a Comment

x
error

Enjoy this blog? Please spread the word :)

Union Budget 2023 Highlights American Actor Mahershala Ali Bio Quick Biogrpahy of Kim Taehyung ‘V’ Taehyung Biography, Who is Taehyung? Lisa Marie Presley Biography, Birth, Death, Husbands, Music