ಬದುಕು – ನಾರಾಯಣ ರೈ ಕುಕ್ಕುವಳ್ಳಿ

ಬದುಕು

ಬದುಕು
ಸುಖಮಯ
ದು:ಖಮಯ…
ವಾಸ್ತವ ವಿಷಯ !
ಕೆಲವರು…
ಗೋಳಾಡುವರು..
ಹಲವರು…
ತೇಲಾಡುವರು !
ಬದುಕು ನಮಗೆ
ವಿಧಿಯ ಕೊಡುಗೆ-
ಎಂಬ ಭಾವವೇ ಇಲ್ಲ..
ಇತರರ ಬದುಕಿಗೆ
ಮುಳ್ಳಾಗಿ ಕಾಡುವುದ
ಬಿಡಲೇ ಇಲ್ಲ….!
ಎಲ್ಲವೂ ನನ್ನದೆ.‌
ನನಗೇ ಎಲ್ಲ….
ದುರಾಸೆ ಬಿಟ್ಟಿಲ್ಲ…!
ಹೌದು ವಿಧಿ-
ಬೀಸುತ್ತಿದೆ…
ಚಾಟಿಯೇಟು…
ದಪ್ಪ ಚರ್ಮದ ನಮಗೆ
ತಾಗೀತೇ ಪೆಟ್ಟು ?
ಬದುಕ ಅನುಭವಿಸ ಬೇಕು
ಬದುಕಲು ಬಿಡ ಬೇಕು !!!

 

– ✍️ ನಾರಾಯಣ ರೈ ಕುಕ್ಕುವಳ್ಳಿ.

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ