ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ”ತುಳುನಾಡ ಕೋಗಿಲೆ” ಎಂದೇ ಪ್ರಸಿದ್ಧರಾಗಿರುವ ಯುವ ಗಾಯಕಿ ಕುಮಾರಿ ಶೀಲಾ ಪಡೀಲ್ ರವರ ಸಾಧನೆಯ ಹಾದಿ.

ಆಕಾಶದಲ್ಲಿರುವ ನಕ್ಷತ್ರಗಳಿಗೆ ಮಿನುಗಳು ಬೆಳಕು ಬೇಕಾಗಿಲ್ಲ, ಅದಕ್ಕೆ ಬೇಕಾಗಿರುವುದು ಕತ್ತಲು. ಭುವಿಯಲ್ಲಿರುವ ಪನ್ನೀರ ಹನಿಗಳು ಕತ್ತಲಲ್ಲಿ ಮಿನುಗಳು ಸಾಧ್ಯವಿಲ್ಲ. ಅದಕ್ಕೆ ಬೇಕಾಗಿರುವುದು ಹಗಲು. ಪ್ರತಿಭೆಯೂ ಹಾಗೆ ಕಷ್ಟವೆಂಬ ಕತ್ತಲೆಯಿದ್ದರೂ ನಕ್ಷತ್ರದಂತೆ ಮಿನುಗಬಲ್ಲದು, ಸೂಕ್ತವಾದ ವೇದಿಕೆಯಿದ್ದರೆ ನೀರಿನ ಮುತ್ತಿನ ಹನಿಗಳ ಹಾಗೆ ಎಲ್ಲರ ಗಮನ ಸೆಳೆಯಬಲ್ಲದು. ಅದರಂತೆ ಇಂದು ತನಗೆ ಸಾಸಿರ ಕಷ್ಟಗಳು ಏನೇ ಎದುರಾದರು ತನ್ನಲ್ಲಿರುವ ಪ್ರತಿಭೆಯನ್ನು ಜೀವಂತ ಉಳಿಸಿ ಬೆಳೆಸಿ ನಮ್ಮ ತುಳುನಾಡಿನ ಅನೇಕ ಸಂಗೀತ ಪ್ರೇಮಿಗಳಿಗೆ ತನ್ನ ಸುಸ್ವರ ಕಂಠದಿಂದ ಚಿರ ಪರಿಚಿತರಾದ ಹಾಗೂ ತನ್ನ ಅಭಿಮಾನಿಗಳಿಂದ ”ತುಳುನಾಡ ಕೋಗಿಲೆ” ಎಂದು ಕರೆಯಲ್ಪಡುವ ಕುಮಾರಿ ಶೀಲಾ ಪಡೀಲ್ ಇವರ ಸಾಧನೆಯ ಹಾದಿ ನಮ್ಮ ”ಸಾಧಕರಿಗೊಂದು ಸಲಾಂ” ನ ಕಾಲಂನಲ್ಲಿ. ಓದಿ ಹಾರೈಸಿ.

 

 

ಇವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪಡೀಲ್ ಕೊಡಕ್ಕಲ್ ನಲ್ಲಿ 1993 ಮೇ 22ರಂದು ದಿ. ಕೊರಗಪ್ಪ ಮತ್ತು ದಿ. ಸೇಸಮ್ಮ ದಂಪತಿಗಳ ಮಗಳಾಗಿ ಜನಿಸುತ್ತಾರೆ. ಇವರು ಮೂರು ಮಂದಿ ಅಣ್ಣಂದಿರ ಮತ್ತು ನಾಲ್ಕು ಮಂದಿ ಅಕ್ಕಂದಿರ ಮುದ್ದಿನ ತಂಗಿ. ಇವರಿಗೆ ಒಬ್ಬಳು ತಂಗಿಯೂ ಇದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡರೂ ಇವರ ಕುಟುಂಬ ಇವರ ಸಂಗೀತ ಸಾಧನೆಗಳಿಗೆ ಬೆನ್ನೆಲುಬಾಗಿ ನಿಂತು ಸದಾ ಪ್ರೊತ್ಸಾಹಿಸುತ್ತಾ ಬಂದಿದೆ.

 

ಪಡೀಲ್ ನಲ್ಲಿಯೇ ತನ್ನ ಬಾಲ್ಯ ಶಿಕ್ಷಣ ಪಡೆದು ಅನಿವಾರ್ಯ ಕಾರಣಗಳಿಂದ ಪಿಯುಸಿಯಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಿ, ತನಗೆ ಕಷ್ಟಗಳು ಎಷ್ಟೇ ಬಂದರು ತನ್ನವರಿಗಾಗಿ ತನ್ನ ಜೀವನವೆಂಬ ಧ್ಯೇಯದೊಂದಿಗೆ ಬದುಕುವ ಒಬ್ಬ ಶ್ರಮ ಜೀವಿ ಶೀಲಾ ಪಡೀಲ್ ತನ್ನಲ್ಲಿರುವ ಪ್ರತಿಭೆಗೆ ಕಿಚ್ಚು ಹಚ್ಚುತ್ತಾರೆ. ಪ್ರತಿಭೆಯ ದೀವಿಗೆ ಬೆಳಗಲು ಉನ್ನತ ಶಿಕ್ಷಣ ಇರಬೇಕು ಅಥವಾ ದುಡ್ಡು ಇರಬೇಕು ಅನ್ನುವ ಮಾತಿಗೆ ತನ್ನ ಸಾಧನೆಯ ಮೂಲಕ ತಿಲಾಂಜಲಿ ಇಟ್ಟವರು ಶೀಲಾ ಪಡೀಲ್.

ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದಲ್ಲಿ ಒಲವು ಹೊಂದಿದ ಇವರು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಯನ್ನು ಪಡೆಯುತ್ತಿದ್ದರು. ಅಲ್ಲದೆ ಭಕ್ತಿ ಗೀತೆಗಳನ್ನೂ ಹಾಡುತ್ತಾ ಪ್ರಥಮ ಸ್ಥಾನವನ್ನು ಪಡೆಯುತ್ತಿದ್ದ ಇವರು ಹಲವು ಪ್ರಮಾಣ ಪತ್ರಗಳಿಗೆ ಪಾತ್ರರಾಗಿದ್ದಾರೆ. ಇವರಿಗೆ ಭಕ್ತಿಗೀತೆಗಳನ್ನು ಹಾಡುವುದೆಂದರೆ ಚಿಕ್ಕಂದಿನಿಂದಲೂ ಅಚ್ಚು ಮೆಚ್ಚು.

 

ಪುತ್ತೂರಿನ ಯುವ ಉತ್ಸಾಹಿ ಬರಹಗಾರ, ಕಥೆಗಾರ, ಸಿನಿಮಾ ನಟ “ಸಾಯಿ ದೀಕ್ಷಿತ್ ಪುತ್ತೂರು” ಇವರ ಸಾಧನೆಯ ಹಾದಿ.

 

ಅಂದುಕೊಂಡಂತೆ ಬದುಕಲು ಸಾಧ್ಯವಿಲ್ಲ ಆದರೆ ಬದುಕಿನಲ್ಲಿ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಿದೆ. ಅದಕ್ಕೆ ಇರಬೇಕಾದದ್ದು ಶ್ರಮ ಮತ್ತು ಶ್ರದ್ಧೆ. ನಾವು ಮಾಡುವ ಕಾರ್ಯವನ್ನು ಶ್ರದ್ಧೆಯಿಂದ ಶ್ರಮವಹಿಸಿ ಮಾಡಿದರೆ ನಮ್ಮ ಸಾಧನೆಯು ನೂರಕ್ಕೆ ನೂರು ಗುರಿ ಮುಟ್ಟುತ್ತದೆ.

 

 

ಬೆಂಜನಪದವಿನ ಕಲಾಯಿಯ ತಾಳಿಪಾಡಿಯ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ತನ್ನ ವೃತ್ತಿ ಜೀವನ ಆರಂಭಿಸಿದ ಇವರು ಎಂಟು ವರ್ಷಗಳ ಕಾಲ ಅಲ್ಲಿಯೇ ಕಾರ್ಯನಿರ್ವಹಿಸುತ್ತಾರೆ. ನಂತರ ಅನಿವಾರ್ಯ ಕಾರಣಗಳಿಂದ ಮಂಗಳೂರು ಪಡೀಲ್ ನ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಪಡೆದುಕೊಂಡು ವೃತ್ತಿ ಜೀವನವನ್ನು ಮುಂದುವರಿಸುತ್ತಿದ್ದಾರೆ. ತನ್ನ ವೃತ್ತಿಯ ಜೊತೆಗೆ ಸಂಗೀತದ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದ ಶೀಲಾ ಅವರಿಗೆ ಸಂದ ಬಿರುದು ಸನ್ಮಾನಗಳೆಷ್ಟೋ. ಹರಸಿಕೊಂಡು ಬಂದ ಅವಕಾಶಗಳೆಷ್ಟೋ. ಕೆಲಸದ ಬಿಡುವಿನ ವೇಳೆಯಲ್ಲಿ ಹಲವು ಸಾಂಸ್ಕ್ರುತಿಕ ಕಾರ್ಯಮದಲ್ಲಿ ಭಾಗವಹಿಸುವುದು ಇವರಿಗೆ ರೂಡಿಯಾಗಿಬಿಟ್ಟಿದೆ. ಯಾಕೆಂದರೆ ಇವರಿಗೆ ಸಿಕ್ಕ ಅವಕಾಶವನ್ನು ಒಲ್ಲೆ ಅನ್ನುವುದು ಇವರ ಜಾಯಮಾನದಲ್ಲಿ ಇಲ್ಲ. ಸಿಕ್ಕ ಎಲ್ಲಾ ಅವಕಾಶಗಳಲ್ಲಿಯೂ ತನ್ನ ಪ್ರತಿಭೆಯನ್ನು ಪ್ರದರ್ಶಸಿ ಇತರರಿಗೂ ಪ್ರರಣೆಯಾಗಿ ನಿಲ್ಲುವ ಶೀಲಾ ಅವರಿಗೆ ತನ್ನಂತೆ ಇರುವ ಇನ್ನು ಹಲವು ಸ್ತುಪ್ತ ಪ್ರತಿಭೆಗಳನ್ನು ಪರಿಚಯಿಸಬೇಕು ಅವರಿಗೂ ವೇದಿಕೆ ಒದಗಿಸಬೇಕು ಅನ್ನುವ ಮಹದಾಸೆ.

 

ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ “ಮುದ್ದು ಲಕ್ಷ್ಮೀ ಯ ಡಾ.ಧ್ರುವಂತ್ ” ರ ಸಾಧನೆಯ ಹಾದಿ

ತುಳುನಾಡಿನ ಯುವ ಹಾಸ್ಯ ಕಲಾವಿದ ಕರ್ನಾಟಕದ ನೆಚ್ಚಿನ ಕಾಮಿಡಿ ಕಿಲಾಡಿ “ಧೀರಜ್ ನೀರುಮಾರ್ಗ” ಇವರ ಸಾಧನೆಯ ಹಾದಿ.

 

ಹಲವಾರು ಕಡೆ ಭಕ್ತಿ ರಸಮಂಜರಿ, ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ಕೊಟ್ಟಿರುವ ಇವರು, ಇತ್ತೀಚೆಗೆ ಬಹಳ ಪ್ರಚಲಿತದಲ್ಲಿರುವ ಫೇಸ್ಬುಕ್ ಲೈವ್ ನಲ್ಲೂ ಕಾರ್ಯಕ್ರಮ ಕೊಟ್ಟಿರುವ ಹೆಗ್ಗಳಿಕೆ ಇವರದ್ದು. ಇವರ ಪ್ರತಿಭೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಒಳಗೊಂಡಂತೆ ಆಮಂತ್ರಣ ಪರಿವಾರದ ಅಧ್ಯಕ್ಷರು ಶ್ರೀ ವಿಜಯ್ ಕುಮಾರ್ ಜೈನ್ ಸರ್ ಅವರ ನೇತ್ರತ್ವದಲ್ಲಿ ಅಳದಂಗಡಿ ನಗರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ”ಗಾಯಕಿ ಅವಾರ್ಡ್” ಸನ್ಮಾನ ಪುರಸ್ಕಾರ ಮತ್ತು ಅಭಿನಂದನಾ ಪತ್ರ ಕೊಟ್ಟು ಸನ್ಮಾನಿಸಿದ್ದಾರೆ. ಪುತ್ತೂರು ಸಾಹಿತ್ಯ ವೇದಿಕೆ ಯಲ್ಲಿ ಖ್ಯಾತ ತುಳು ಚಿಂತಕರಾದ ಮತ್ತು ಕವಿಗಳೂ ಆದ ಶ್ರೀ ಮಹೇಂದ್ರನಾಥ್ ಸಾಲೆತ್ತೂರು ಮತ್ತು ಖ್ಯಾತ ತುಳು ಕನ್ನಡ ಸಾಹಿತ್ಯ ಬರಹಗಾರರಾದ ಶ್ರೀ ಗೋಪಾಲಕೃಷ್ಣ ಭಟ್ ಇವರ ಪ್ರೋತ್ಸಾಹದಿಂದ ಪುರಸ್ಕಾರ ಸನ್ಮಾನ ಪತ್ರ ಪಡೆದಿರುತ್ತಾರೆ. ಹಾಗೂ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸಂಗೀತ ಸಾಹಿತ್ಯ ವೇದಿಕೆ ಸುಳ್ಯ ಮತ್ತು ಸಜ್ಜನ ಪ್ರತಿಷ್ಠಾನ ಬೀಜದ ಕೊಟ್ಟೆ ಇವರ ಸಮ್ಮುಖದಲ್ಲಿ ಖ್ಯಾತ ಗಾಯಕ ಚಲನಚಿತ್ರ ನಿರ್ದೇಶಕರಾದ ಜ್ಯೋತಿಷ್ಯರೂ ನಟರೂ ಆದ ಶ್ರೀ ಭೀಮರಾವ್ ವಾಷ್ಠರ್ ಸುಳ್ಯ ಇವರು ಪ್ರೋತ್ಸಾಹದಿಂದ ಖ್ಯಾತ ಗಣ್ಯರ ಸಮ್ಮುಖದಲ್ಲಿ 2020 ನೇ ಸಾಲಿನ ”ಸಜ್ಜನ ಚೆಂದನ ಸದ್ಭಾವನಾ” ರಾಜ್ಯ ಪ್ರಶಸ್ತಿ ಪಡೆದ ಹೆಮ್ಮೆ ಇವರದು. ಪುತ್ತೂರಿನ ರೋಟರಿ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಭಾವೈಕತಾ ಕವಿಗೋಷ್ಠಿ ಸಮರಾಂಭದ ವೇದಿಕೆಯಲ್ಲಿ ಗಣ್ಯರ ಸಮಕ್ಷಮದಲ್ಲಿ ಈ ಗೌರವ ಪ್ರಶಸ್ತಿಯನ್ನು ಇವರಿಗೆ ನೀಡಿ ಅಭಿನಂದಿಸಲಾಗಿದೆ.

 

ಮೂರನೆ ಆದಿ ಗ್ರಾಮೋದ್ಯೋಗ ಗ್ರಾಮ ಸಾಹಿತ್ಯ ಸಮ್ಮೇಳನದಲ್ಲಿ ನಾಡು ನುಡಿಯ ಅನನ್ಯ ಸಾಧನೆಗೆ ”ಯುವ ಸಾಧಕಿ’ ಶೀಲಾ ಪಡೀಲ್ ಮಂಗಳೂರು” ಮತ್ತು ಯುವ ಸಿರಿ ಗೌರವ ಸನ್ಮಾನ ಪುರಸ್ಕಾರ ಜೊತೆಗೆ ಅಭಿನಂದನಾ ‌ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸನ್ಮಾನವನ್ನು ಶ್ರೀ ಡಾ. ಶೇಖರ ಅಜೆಕಾರು ರಾಜ್ಯಾಧ್ಯಕ್ಷರು(ದ.ಕ)ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಸಂಸ್ಥಾಪಕರು, ಆದಿ ಗ್ರಾಮೋತ್ಸವ ಮತ್ತು ಸಮಿತಿಯ ಸರ್ವಸದಸ್ಯರು ಇವರಿಂದ ಪಡೆದಿರುತ್ತಾರೆ.

 

Bhat’n’Bhat ಚಾನಲ್ ನ ಭಟ್ ಸಹೋದರರ ಸಾಧನೆಯ ಹಾದಿ.

 

ಹಾಡುಗಾರಿಕೆಯ ಜೊತೆಗೆ ಅನೇಕ ಆಲ್ಬಮ್ ಹಾಡುಗಳನ್ನು ನಿರ್ಮಾಣ ಮಾಡಿ ನಿರ್ದೇಶನ ಮಾಡಿ ಇವರೇ ಹಾಡಿದ್ದು ಈಗಾಗಲೇ ಯೂಟ್ಯೂಬಲ್ಲಿ ಹರಿಯಬಿಟ್ಟು ಸಾಕಷ್ಟು ಮೆಚ್ಚುಗೆ ಗಳಿಸಿ ಅದರಲ್ಲಿ ಕೆಲವೊಂದು ವೈರಲ್ ಸಹ ಆಗಿವೆ. ಇವರ ಬತ್ತಳಿಕೆಯಲ್ಲಿ ಶೋಭಿಸುತ್ತಿರುವ ಆಲ್ಬಮ್ ಗಳು ಮತ್ತು ಹಾಡುಗಳೆಂದರೆ, ಪುಣ್ಣಮೆ ಚಂದ್ರ , ಮನಸ್ ದಿನಾ ಬಯಕುನ , ಎನ್ನ ಜೀವ ಈಯೆ , ಹಾಡುವೆ ಪಾಡುವೆ ನಿನ್ನಯ ತಾಯಿ , ಪನೊಲಿ ಬೈಲ್ ದ ಅಪ್ಪೆ ಕಲ್ಲುರ್ಟಿ, ಅರೆಬಿಂಗಿರಿ ಜವನೆರ್, ಜೀವದ ಮೋಕೆ ಎನ್ನ, ನಮ್ಮ ಭೂಮಿ, ಸತ್ಯೋದ ಬೊಲ್ಪು ಮೂಡುಂಡುಯೆ, ತ್ರಿಶೂಲವ ಹಿಡಿದವಳೆ ತ್ರಿಶೂಲ ಕಾಳಿಯೆ, ಮೋಕೆ ನಿಕ್ಕಾದೆ. ಇವರು ಚಲನಚಿತ್ರವೊಂದರಲ್ಲೂ ಹಾಡಿದ್ದು ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ. ”ಪಿರ್ಕಿಲು ಬತ್ತೇರಾ” ಎಂಬ ತುಳು ಸಿನಿಮಾದಲ್ಲಿ ಒಂದು ಪಾತ್ರ ಕ್ಕೆ ಡಬ್ಬಿಂಗ್ ವಾಯ್ಸ್ ಸಹ ಕೊಟ್ಟಿದ್ದು ಕಂಠದಾನ ಕಲಾವಿದೆಯಾಗಿಯೂ ಇಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನಷ್ಟು ಸಾಧನೆಯನ್ನು ಸಂಗೀತ ಕ್ಷೇತ್ರದಲ್ಲಿ ಮಾಡಬೇಕೆಂದು ಹಂಬಲ ಎಂದು ಹೇಳುವ ಶೀಲಾ ಅವರನ್ನು ಅವರ ಆತ್ಮೀಯರು ಮತ್ತು ಅಭಿಮಾನಿಗಳು ಪ್ರೀತಿಯಿಂದ ಮತ್ತು ಅಭಿಮಾನದಿಂದ ”ತುಳುನಾಡ ಕೋಗಿಲೆ” ಎಂದೂ ಕರೆಯುತ್ತಾರೆ.

 

ತುಳು ಚಿತ್ರರಂಗದ ‘ಅಭಿನವ ವಜ್ರಮುನಿ’ ರಮೇಶ್ ರೈ ಕುಕ್ಕುವಳ್ಳಿ ಸಾಧನೆಯ ಹಾದಿ

 

ಒಂದೆರಡು ಆಲ್ಬಮ್- ಕಿರುಚಿತ್ರಗಳನ್ನು ಮಾಡಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ದೊಡ್ಡ ಸ್ಟಾರ್ಗಳಂತೆ ಪೋಸ್ ಕೊಡುವ ಈ ಕಾಲದಲ್ಲಿ ತಾನು ಬೆಳೆಯುವ ಜೊತೆಗೆ ಅದೇ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಹಲವು ಸ್ಪರ್ಧೆಗಳನ್ನು ಏರ್ಪಡಿಸುವುದರೊಂದಿಗೆ ಹೊಸ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ನಿಸ್ವಾರ್ಥ ಪ್ರಯತ್ನ ಮಾಡುವ ಶೀಲಾ ಪಡೀಲ್ ರವರು ಆದರ್ಶಪ್ರಾಯಳಂತೆ ಕಾಣುತ್ತಾರೆ. ಒಂದು ಪ್ರಯೋಗ ಮಾಡಿ ಸಾವಿರ ಕಡೆ ಪ್ರಚಾರ ಗಿಟ್ಟಿಸಿಕೊಳ್ಳುವ ಮೊಂಡು ಪ್ರಯತ್ನ ಮಾಡುವ ಬದಲು ಸಾವಿರ ಪ್ರಯೋಗಗಳನ್ನ ಮಾಡಿ ಪ್ರಚಾರವೇ ನಮ್ಮನ್ನು ಹುಡುಕಿಕೊಂಡು ಬರುವ ಹಾಗೆ ಮಾಡುವುದು ಜಾಣತನ ಅಲ್ಲವೇ. ಶೀಲಾ ಅವರ ಪ್ರಯೋಗಲೇ ಅನೇಕ ಹಾಗಾಗಿ ಅವರು ಪ್ರಚಾರ ಬಯಸಿಲ್ಲ ಬದಲಾಗಿ ಅವರನ್ನು ಪ್ರಚಾರ ಹುಡುಕಿಕೊಂಡು ಹೋಗಿವೆ. ಅದಕ್ಕೆ ಸಾಕ್ಷಿಗಳು ಅವರಿಗೆ ಸಂದ ಪ್ರಶಸ್ತಿಗಳು.

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ನನಗೆ ಯಾರೂ ಪ್ರೇರಣೆಯಿಲ್ಲ. ತನ್ನ ಸ್ವಂತ ಪರಿಶ್ರಮದಿಂದ ಸ್ವ ಪ್ರಯತ್ನಗಳಿಂದ ಸಾಧನೆಯ ಮೆಟ್ಟಿಲು ಹತ್ತುತ್ತ ಬಂದಿದ್ದು, ತುಳುನಾಡಿನ ದೈವದೇವರುಗಳ ದಯೆಯಿಂದ ನನ್ನ ಎಲ್ಲಾ ಪ್ರಯತ್ನಗಳಿಗೆ ಫಲ ಸಿಕ್ಕಿದೆ ಎಂದು ಹೇಳುವ ಶೀಲಾ ಅವರು ತನ್ನ ಹಾಡುಗಾರಿಕೆಯನ್ನು ಗುರುತಿಸಿ ತನಗೆ ಸದಾ ಪ್ರಯೋತ್ಸಾಹಿಸುತ್ತಾ ಬಂದಿರುವ ಮನೆಯವರನ್ನು ಮತ್ತು ಸ್ನೇಹಿತರನ್ನು ಮತ್ತು ಅಭಿಮಾನಿಗಳಿಗೆ ಸದಾ ಕೃತಜ್ಞತೆ ಸಲ್ಲಿಸಲು ಮರೆಯುವುದಿಲ್ಲ.

 

ಕರಾವಳಿ ಕಡಲ ಕಿನಾರೆಯ ಮುದ್ದು ಮೊಗದ ಪುಟ್ಟ ಹುಡುಗಿ ”ತುಳುವ ಸಿರಿ” ‘ಎಂ. ಅಧ್ವಿಕಾ ಶೆಟ್ಟಿ” ಯವರ ಸಾಧನೆಯ ಹಾದಿ.

 

ಸಿನಿಮಾ ರಂಗದಲ್ಲಿ ಗಾಯಕಿಯಾಗಿ ದುಡಿದು ಸಿನಮಾ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮಾಡಬೇಕು ಮತ್ತು ತೆರೆಮರೆಯಲ್ಲಿರುವ ಮತ್ತು ಅವಕಾಶ ವಂಚಿತ ಯುವ ಗಾಯಕ ಗಾಯಕಿಯರಿಗೂ ಒಳ್ಳೆಯ ಅವಕಾಶಗಳನ್ನು ನೀಡಿ ಅವರನ್ನು ಸಹ ಗುರುತಿಸುವಂತೆ ಮಾಡಬೇಕು ಎನ್ನುವುದೇ ನನ್ನ ಗುರಿ ಎಂದು ಹೇಳುವ ಶೀಲಾ ಪಡೀಲ್ ಇವರು ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ, ಕಿರಿ ತೆರೆಯಂತೆ ಹಿರಿ ತೆರೆಯಲ್ಲೂ ಇವರ ಪ್ರತಿಭೆ ಮಿಂಚಲಿ ಎಂದು ಹಾರೈಸುತ್ತಾ ಅವರು ಮಾಡುವ ಪ್ರಯತ್ನಕ್ಕೆ ಮತ್ತು ”ತುಳುನಾಡ ಕೋಗಿಲೆ” ಎಂದು ಗುರುತಿಸಿಕೊಂಡ ತುಳುನಾಡಿನ ಹೆಮ್ಮೆಯ ಗಾಯಕಿಯ ಸಾಧನೆಗೊಂದು ಸಲಾಂ.

 

ಲೇಖನ : ಪ್ರಮೀತ್ ರಾಜ್ ಕಟ್ಟತ್ತಾರು.

 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ