ಕರಾವಳಿ ಕಡಲ ಕಿನಾರೆಯ ಮುದ್ದು ಮೊಗದ ಪುಟ್ಟ ಹುಡುಗಿ ”ತುಳುವ ಸಿರಿ” ‘ಎಂ. ಅಧ್ವಿಕಾ ಶೆಟ್ಟಿ” ಯವರ ಸಾಧನೆಯ ಹಾದಿ.

ನೀರಿನಲ್ಲಿ ಮುಳುಗುತ್ತಿರುವ ಜೀವಕ್ಕೆ ಒಂದು ಸಣ್ಣ ಹುಲ್ಲು ಕಡ್ಡಿ ಸಿಕ್ಕರೂ ಸಾಕಂತೆ ಹೇಗಾದರೂ ಕೊಡವಿಕೊಂಡು ಮೇಲಕ್ಕೆ ಬಂದು ಬಿಡುತ್ತಾರಂತೆ. ಒಂದು ಸಣ್ಣ ಅವಕಾಶ ಸಿಕ್ಕರೂ ತನ್ನನ್ನು ತಾನು ಸಾಧಿಸಿಕೊಳ್ಳುವೆ ಅನ್ನುವ ಹಠ, ತುಡಿತ, ಹುಮ್ಮಸ್ಸು ನಮ್ಮ ಜೀವನದಲ್ಲೂ ಇದ್ದರೆ ಎಷ್ಟು ಚೆನ್ನ ಆಲ್ವಾ. ಸಾಧಿಸುವ ಛಲಗಾರನಿಗೆ ವೇದಿಕೆಯೇ ಬೇಕಂತೇನಿಲ್ಲ. ತಾನು ನಿಂತ ನೆಲವನ್ನೇ ವೇದಿಕೆಯನ್ನಾಗಿಸುತ್ತಾನೆ. ಹಾಗೆಯೇ ಸಾಧನೆ ಎಂಬುದು ರಕ್ತದಲ್ಲಿದ್ದರೆ ಅದಕ್ಕೆ ವಯಸ್ಸು ಅಡ್ಡಿ ಬರಲ್ಲ. 85 ರ ಇಳಿವಯಸ್ಸಿನಲ್ಲೂ ಸಾಧಿಸಿದ ಸಾಕ್ಷಿಗಳು ನಮ್ಮಲ್ಲಿವೆ ಅಂತೆಯೇ ಎರಡೂವರೆ ವರ್ಷದ ಪುಟಾಣಿಯು ವೇದಿಕೆಯ ಧೂಳೆಬ್ಬಿಸಿದ ನಿದರ್ಶನವೂ ನಮ್ಮ ಕಣ್ಣ ಮುಂದಿದೆ. ಇವತ್ತಿನ ನಮ್ಮ ಕೂಲ್-ಸಾಧಕರ ಕಾಲಂ ನಲ್ಲಿ ಕೇವಲ 4ನೇ ವಯಸ್ಸಿಗೆ ಕಲಾ ಮಾತೆಯ ಆಶೀರ್ವಾದದಿಂದ ಜನಮನ ಗೆದ್ದು ”ತುಳುವ ಸಿರಿ” ಅನ್ನುವ ಬಿರುದು ಪಡೆದಿರುವ ಕರಾವಳಿ ಕಡಲ ಕಿನಾರೆಯ ಮುದ್ದು ಮೊಗದ ಪುಟ್ಟ ಹುಡುಗಿ ‘ಎಂ. ಅಧ್ವಿಕಾ ಶೆಟ್ಟಿ” ಯ ಸಾಧನೆಯ ಹಾದಿ.
ಇವರು ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲೂಕಿನ, ಸುರತ್ಕಲ್ ಗ್ರಾಮದ, ಶುಭಾಶಿತ್ ನಗರದಲ್ಲಿ ಶ್ರೀ ಹೇರೂರು ವೇಣುಗೋಪಾಲ್ ಶೆಟ್ಟಿ ಮತ್ತು ಪೆರಾರ ಮುಂಡಬೆಟ್ಟುಗುತ್ತು ಶ್ರೀಮತಿ ಅರ್ಪಿತಾ ವಿ.ಶೆಟ್ಟಿ ಇವರ ಏಕೈಕ ಪುತ್ರಿಯಾಗಿ 02/12/2004ರಲ್ಲಿ ಜನಿಸಿದರು. ಈಕೆ ಸುರತ್ಕಲ್ ನ ಜನಪ್ರೀಯ ವೈದ್ಯ ಡಾ| ದಿ|ಕೆ .ಆರ್ ಶೆಟ್ಟಿ ಅವರ ಮೊಮ್ಮಗಳು.

ಇವರು ಡೆಲ್ಲಿ ಪಬ್ಲಿಕ್ ಶಾಲೆ ಎಂ.ಆರ್.ಪಿ.ಎಲ್ ಮಂಗಳೂರಿನಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತನ್ನ ಅತೀ ಚಿಕ್ಕ ವಯಸ್ಸಿನಲ್ಲಿಯೇ ಬಹುಮುಖ ಪ್ರತಿಭೆಯನ್ನು ಮೈಗೂಡಿಸಿಕೊಂಡು ಡ್ಯಾನ್ಸ್, ಮಾಡೆಲಿಂಗ್, ಯೋಗ, ಯಕ್ಷಗಾನ, ಭರತನಾಟ್ಯ, ಟಾಕ್ ಶೋ,ಜಾನಪದ ನೃತ್ಯ, ಹಾಡುಗಾರಿಕೆ, ಆ್ಯಂಕರಿಂಗ್, ನಟನೆ, ಅಲಂಕಾರಿಕ ಉಡುಗೆ,ಭಾಷಣ ಇವೆಲ್ಲವುಗಳಲ್ಲಿ ತನ್ನ ಸಾಧನೆಯನ್ನು ಕರುನಾಡಿಗೆ ಪಸರಿಸಿ “ರಾಜ್ಯ ಪ್ರಶಸ್ತಿ” ಪುರಸ್ಕೃತರಾಗಿದ್ದಾರೆ.

–>Register and Earn 2500 Rs CashBack

ನಿರಂತರ ಸಾಧನೆಯ ಹಾದಿಯಲ್ಲಿ ಮುಂದುವರಿಯುತ್ತಾ ತನ್ನ 4ನೇ ವಯಸ್ಸಿನಲ್ಲಿಯೇ ಯಕ್ಷಗಾನವನ್ನು ಟಿವಿಯಲ್ಲಿ ನೋಡಿ ನೃತ್ಯದ ಕಡೆಗೆ ಒಲವು ತೋರಿ, ನಾಟ್ಯ ಗುರುಗಳಾದ ಪ್ರಮೋದ್ ಆಳ್ವ ,ಸುನೀಲ್ ಶೆಟ್ಟಿ,ಪ್ರವೀಣ್ ಕುಮಾರ್ ಹಾಗೂ ಭರತನಾಟ್ಯ ಗುರುಗಳಾದ ವಿಧುಷಿ ಪ್ರತಿಮಾ ಶ್ರೀಧರ್ ಹೊಳ್ಳ ಹಾಗೂ ಯಕ್ಷ ಗುರುಗಳಾದ ರಕ್ಷಿತ್ ಶೆಟ್ಟಿಯವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದೊಂದಿಗೆ ರಾಷ್ಟ್ರಮಟ್ಟದಲ್ಲಿ ಮಿಂಚಿ ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ದೇಶದ ನಾನಾ ಕಡೆಗಳಲ್ಲಿ1000 ಕ್ಕೂ ಅಧಿಕ ಡ್ಯಾನ್ಸ್ ಕಾರ್ಯಕ್ರಮ 200ಕ್ಕೂ ಅಧಿಕ ಯಕ್ಷಗಾನ ಹಾಗೂ ಯಕ್ಷ ನಾಟ್ಯ ಕಾರ್ಯಕ್ರಮ ಹಾಗೂ 75ಕ್ಕೂ ಅಧಿಕ ಕಾರ್ಯಕ್ರಮಗಳ “ಉದ್ಘಾಟಕಳಾಗಿ”, “ಅತಿಥಿ”ಯಾಗಿ ಭಾಗವಹಿಸಿದ ಹೆಮ್ಮೆ ಇವರದ್ದು.

 

Amazon Women wear

 

ಯಕ್ಷಗುರು ರಕ್ಷಿತ್ ಪಡ್ರೆಯವರ ಸಹಕಾರದೊಂದಿಗೆ ತನ್ನ 9ನೇ ವಯಸ್ಸಿನಲ್ಲಿ “ಕಾಳಿಂಗ ಮರ್ದನ” ಪ್ರಸಂಗದಲ್ಲಿ ಕೃಷ್ಣನಾಗಿ ರಂಗ ಪ್ರವೇಶ ಮಾಡಿ ನಂತರ “ಸುದರ್ಶನ ವಿಜಯ”ದ “ಸುದರ್ಶನನಾಗಿ”, “ಅಭಿಮನ್ಯು ಕಾಳಗ”ದಲ್ಲಿ “ಅಭಿಮನ್ಯು”, “ಹನುಮೋದ್ಬವ”ದಲ್ಲಿ “ಹನುಮಂತನಾಗಿ”, “ಶಾಂಭವಿ ವಿಜಯ”ದಲ್ಲಿ “ಕಾಳಿ”, “ಶ್ರೀ ದೇವಿ ಮಹಾತ್ಮೆ”ಯಲ್ಲಿ “ಪಿಂಗಲಾಕ್ಷ”ನಾಗಿ ಹಾಗೂ “ಲವಕುಶ ಕಾಳಗ “ದಲ್ಲಿ “ಲವ” ನಾಗಿ ಇನ್ನೂ ಹಲವಾರು ಯಕ್ಷಗಾನದಲ್ಲಿ ರಂಗವೇರಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

Read Also :   ಯೂಟ್ಯೂಬರ್ ಪುತ್ತೂರಿನ ಜಯಂತ್ ಕುಲಾಲ್

Read Also :   ಅಭಿನವ ವಜ್ರಮುನಿ’ ರಮೇಶ್ ರೈ ಕುಕ್ಕುವಳ್ಳಿ

Read Also :  “ಮುದ್ದು ಲಕ್ಷ್ಮೀ ಯ ಗಂಡ ಡಾ.ಧ್ರುವಂತ್ ” ರ ಸಾಧನೆಯ ಹಾದಿ

2016ರಲ್ಲಿ ಬಿಡುಗಡೆಗೊಂಡ “ಬರ್ಸ” ತುಳು ಚಲನಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟು ನಂತರ “ಮೈ ನೇಮ್ ಈಸ್ ಅಣ್ಣಪ್ಪ”, “ಅಪ್ಪೆ ಟೀಚರ್” ತುಳು ಚಲನಚಿತ್ರದಲ್ಲಿ ಬಾಲನಟಿಯಾಗಿ ಹಾಗೂ “ಜನನಿ” ಕನ್ನಡ ಕಿರುಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಕರುನಾಡಿನ ಮಾತಿನ ಮಲ್ಲಿ ಇವರು ಭಾಷಣ ಮಾಡುವುದರಲ್ಲಿಯೂ ಎತ್ತಿದ ಕೈ. ಹಲವಾರು ವೇದಿಕೆಗಳಲ್ಲಿ ಭಾಷಣ ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಕಥೆ, ಕವನ ಬರೆಯುವುದು, ಡ್ರಾಯಿಂಗ್, ಪೈಂಟಿಂಗ್ ಇವುಗಳೆಂದರೆ ಪಂಚಪ್ರಾಣ.

ಇವರ ಎಲ್ಲಾ ಸಾಧನೆಗಳಿಗೆ 700ಕ್ಕೂ ಹೆಚ್ಚು ಪ್ರಶಸ್ತಿ ಮತ್ತು 250ಕ್ಕೂ ಹೆಚ್ಚು ಹಲವಾರು ಸಂಘ ಸಂಸ್ಥೆಗಳಲ್ಲಿ ಸನ್ಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2017ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ “ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿ”,. 2017 ರಲ್ಲಿ ರಾಜ್ಯದ ರಾಜ್ಯಪಾಲರಾದ ವಜುಭಾಯ್ ವಾಲಾ ಅವರಿಂದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ” ಕರ್ನಾಟಕ ರಾಜ್ಯ ಅಸಾಧಾರಣ ಸಾಧನ ಪ್ರಶಸ್ತಿ” ಪಡೆದಿದ್ದು ,ರಾಜ್ಯಪಾಲರು ಈಕೆಯ ಹೆಸರನ್ನು ರಾಷ್ಟಪ್ರಶಸ್ತಿ ಗೆ ಶಿಫಾರಸ್ಸು ಮಾಡಿದ್ದರು.

 

–>Download Now and Get Rs1000 Bitcoin free

 

2019 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಿತಿ ಯಿಂದ “ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ “,2015 ರಲ್ಲಿ “ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ “ಕರ್ನಾಟಕ ರಾಜ್ಯೋತ್ಸವ ಸಾಧಕ ಪ್ರಶಸ್ತಿ”,2010ರಲ್ಲಿ “ಲಿಟ್ಲ್ ಮಾಸ್ಟರ್ ಪ್ರಶಸ್ತಿ” ಮತ್ತು “ಬೂಗಿ-ಊಗಿ ಪ್ರಶಸ್ತಿ” “2011ರಲ್ಲಿ “ಬಂಟ ಕುಮಾರಿ” ಪ್ರಶಸ್ತಿ, 2011ರಲ್ಲಿ “ಜೀಸಿ ಕ್ವೀನ್ ಪ್ರಶಸ್ತಿ”, 2012ರಲ್ಲಿ “ಉಡುಪಿ ಪ್ರಿನ್ಸೆಸ್” ಪ್ರಶಸ್ತಿ, 2013ರಲ್ಲಿ “ಪೊರ್ಲುದ ಬಂಟೆದಿ” ಪ್ರಶಸ್ತಿ, 2015ರಲ್ಲಿ “ರಾಜ್ಯ ಮಟ್ಟದ ಸೌರಭ ಪ್ರತಿಭಾ ಪ್ರಶಸ್ತಿ, 2016ರಲ್ಲಿ “ರಾಜ್ಯ ಮಟ್ಟದ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ”, 2016ರಲ್ಲಿ “ರಾಜ್ಯ ಮಟ್ಟದ ಸ್ವಸ್ತಿಕ್ ಸಂಭ್ರಮ ಪುರಸ್ಕಾರ”, 2016ರಲ್ಲಿ ಬಂಟ್ಸ್ ಸಂಘ ಬೆಂಗಳೂರು ಇದರ “ಅಚ್ಯುಮೆಂಟ್ ಅವಾರ್ಡ್”, 2016ರಲ್ಲಿ “ಅಗ್ನಿ ದುರ್ಗಾ ಪುರಸ್ಕಾರ”, “2016ರಲ್ಲಿ ಧರ್ಮೊಸ್ಥಾನ ಪ್ರಶಸ್ತಿ”, “ಬೆಸ್ಟ್ ಎಂಟರ್‍ಟೈನರ್ ಅವಾರ್ಡ್” . 2017 ರಲ್ಲಿ ಡಾ|ಶಿವರಾಮ ಕಾರಂತ ಪಿಲಿಕುಲ ನಿಸರ್ಗ ಧಾಮದಲ್ಲಿ ನಡೆದ ವಿಶ್ವ ತುಳುವೆರೆ ಆಯನೋ ಕೂಟ ಕಾರ್ಯಕ್ರಮದಲ್ಲಿ “ತುಳುನಾಡೋಚ್ಛಯ ಪ್ರಶಸ್ತಿ”, “2019 ರಲ್ಲಿ ಉಡುಪಿ ಪಾರಿಮಾರು ಮಠದಲ್ಲಿ ನಡೆದ ವಿಶ್ವ ಬಹು ಭಾಷಾ ಕವಿ ಸಾಹಿತ್ಯ ಸಮ್ಮೇಳನದಲ್ಲಿ ಪರ್ಯಾಯ ಶ್ರೀ ವಿದ್ಯಾದೀಶ ಪಾದ ರವರಿಂದ “ಕಲಾ ರತ್ನ “ಪ್ರಶಸ್ತಿ..2019 ರಲ್ಲಿ ನಮ್ಮ ಕುಡ್ಲ ಚಾರಣ ಸಂಘ ದವರಿಂದ “ನಾಟ್ಯ ಸಿಂಚನ” ಪ್ರಶಸ್ತಿ..2019 ರಲ್ಲಿ ಕಾಸರಗೋಡು ದಸರಾ ಉತ್ಸವ ದಲ್ಲಿ “ಕಾಸರಗೋಡು ಮಕ್ಕಳ ದಸರಾ ಗೌರವ ಪ್ರಶಸ್ತಿ “2018 ರಲ್ಲಿ ಮಡಿಲು cultural ಟ್ರಸ್ಟ್ ಅವರಿಂದ “ಮಡಿಲು ಸಮ್ಮಾನ್ ಪುರಸ್ಕಾರ ” 2020 ರಲ್ಲಿ ನಮನ ಫ್ರೆಂಡ್ಸ್ ಮುಂಬೈ ಇವರಿಂದ “ನಮನ ಸಿರಿ ಯೂತ್ ಅವಾರ್ಡ್”2016 ರಲ್ಲಿ “ಬದಿಯಡ್ಕದಲ್ಲಿ ನಡೆದ ವಿಶ್ವ ತುಳುವೆರೆ ಆಯನೋ ಕಾರ್ಯಕ್ರಮದಲ್ಲಿ ಅತಿಥಿ ಯಾಗಿ ಭಾಗವಹಿಸಿ ಸನ್ಮಾನ” 2016 ರಲ್ಲಿ ರೋಟರಿ ಕ್ಲಬ್ ಮಂಗಳೂರು ವತಿಯಿಂದ “ಯಂಗ್ ಅಚೀವರ್ ಪ್ರಶಸ್ತಿ”, “ರೋಟರಾಕ್ಟ “ಝೂಟ್ಸ್-2016” ಕಾರ್ಯಕ್ರಮದಲ್ಲಿ “ಬೆಸ್ಟ್ ಡಾನ್ಸರ್ ಪ್ರಶಸ್ತಿ”, “ಎರ್ಲಪಾಡಿ ಯುವಕಮಂಡಲ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಸನ್ಮಾನ”, “ಮಂಗಳೂರು ವಿಶ್ವವಿದ್ಯಾಲಯ ಕೊಣಾಜೆಯಲ್ಲಿ ನಡೆದ “ದರ್ಪಣ 2017” ಕಾರ್ಯಕ್ರಮದಲ್ಲಿ ಸನ್ಮಾನ”, “ಪ್ರಥಮ ದರ್ಜೆ ಕಾಲೇಜು ಬಾರಕೂರಿನಲ್ಲಿ ನಡೆದ ತಾಲೂಕು ಮಟ್ಟದ ಕಾಲೇಜು “ತೇರು-2016” ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಯಾಗಿ ಸನ್ಮಾನ” “ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮಂಗಳೂರು ಇವರ ಇಂಟರ್ ನ್ಯಾಷನಲ್ ಲಾ ಪೇಸ್ಟ್ “ಲೆಕ್ಸ್ ಅಲ್ಟಿಮ 2017″ಕಾರ್ಯಕ್ರಮದಲ್ಲಿ ಸನ್ಮಾನ”, 2017 ರಲ್ಲಿ “ಶ್ರೀ ನಿರಂಜನ ಸ್ವಾಮಿ ಹಳೆ ವಿದ್ಯಾರ್ಥಿಗಳ ಸಂಘ ಸುಂಕದಕಟ್ಟೆ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಯಾಗಿ ಸನ್ಮಾನ”2018 ರಲ್ಲಿ ಇವರು ಮಸ್ಕತ್ ನ ಬಂಟರ ಐಸಿರಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಸನ್ಮಾನ ಗೊಂಡಿದ್ದಾರೆ. 2016 ರಲ್ಲಿ ಮೂಲ್ಕಿಯಲ್ಲಿ ನಡೆದ “ತುಳುವ ಐಸಿರಿದ ಐಸ್ರ” ತುಳು ಸಾಹಿತ್ಯ ಸಮ್ಮೇಳನದಲ್ಲಿ “ತುಳುವ ಸಿರಿ ಬಿರುದು”, 2013ರಲ್ಲಿ “ಪ್ಯಾಷನ್ ಎಬಿಸಿಡಿ ಯವರು ನಡೆಸಿದ “ಮಿಸ್ಸಿ ಎಂಡ್ ಮಾಸ್ಟರ್ ಮಂಗಳೂರು ಬ್ಯೂಟಿ ಕಾಂಟೆಸ್ಟ್ ಕಿಡ್ಸ್ ಪ್ಯಾಷನ್ ಶೋನಲ್ಲಿ “ಮಿಸ್ಸಿ ಮಂಗಳೂರು” ಆಯ್ಕೆಗೊಂಡು “ಮಿಸ್ಸಿ ಟ್ಯಾಲೆಂಟ್ ಬಿರುದು”, ಕನ್ನಡ ಪ್ರಭಾ ಪತ್ರಿಕೆಯವರು ಗುರುತಿಸಿದ “2017ರ ಚೋಟಿ ಚೇತನ ಬಿರುದು”.

 

Earn Free Bitcoin

2012ರಲ್ಲಿ ಬೆಂಗಳೂರಿನಲ್ಲಿ ನಡೆದ “*ಈಟಿವಿ ಕನ್ನಡ*” ವಾಹಿನಿಯಲ್ಲಿ ಪ್ರಸಾರವಾದ “ಡಿ ಜ್ಯೂನಿಯರ್” ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಆಯ್ಕೆಯಾದ 6 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಇವರ ತುಂಟ ಮಾತಿನಿಂದ ಜಡ್ಜ್ ಗಳಾದ ಚಿನ್ನಿ ಪ್ರಕಾಶ್, ಶುಭಾ ಪೂಂಜಾ, ಪ್ರಿಯಾಂಕ ಉಪೇಂದ್ರರವರ ಮನಗೆದ್ದಿದ್ದಾರೆ.ರಾಷ್ಟ್ರೀಯ ಚಾನೆಲ್ ಝೀ ಟಿವಿ (ಹಿಂದಿ)ಯಲ್ಲಿ 2014ರಲ್ಲಿ ಪ್ರಸಾರವಾದ “ಡಾನ್ಸ್ ಇಂಡಿಯಾ ಡಾನ್ಸ್-ಲಿಟ್ಲ್ ಮಾಸ್ಟರ್” ರಿಯಾಲಿಟಿ ಶೋನಲ್ಲಿ ದೇಶದಾದ್ಯಂತದಿಂದ ಬಂದ ಲಕ್ಷ ಲಕ್ಷ ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸಿ ಅಂತಿಮ ಸುತ್ತಿನ 16 ಸ್ಪರ್ಧಿಗಳಲ್ಲಿ ಒಬ್ಬರಾಗಿ, ದಕ್ಷಿಣ ಭಾರತದದಿಂದ ಈ ರಿಯಾಲಿಟಿ ಶೋ ಗೆ ಮೊದಲನೆಯದಾಗಿ ಆಯ್ಕೆಯಾದ ಏಕೈಕ ಪ್ರತಿಭೆ ಅದ್ವಿಕ ಶೆಟ್ಟಿ. ಇವರ ಅಸಮಾನ್ಯ ಪ್ರತಿಭೆಯಿಂದ ರಿಯಾಲಿಟಿ ಶೋ ನ ಜಡ್ಜ್ ಗಳಾದ ಮಿಥುನ್ ಚಕ್ರವರ್ತಿ, ಗೀತಾ ಕಪೂರ್, ಅಹ್ಮದ್ ಖಾನ್, ಮುದಸ್ಸರ್ ಇವರ ಮನಸ್ಸು ಗೆದ್ದು ಚೋಟಿ ಮಾಧುರಿ ದೀಕ್ಷಿತ್, ಕ್ಯೂಟಿ, ಚಕ್ಕರ್ ರಾಣಿ ಮೊದಲಾದ ಹೆಸರಿನಿಂದ ಕರೆಸಿಕೊಂಡ ಅದ್ಭುತ ಬಾಲ ಪ್ರತಿಭೆ ಇವರು.2015ರಲ್ಲಿ ಕಲರ್ಸ್ ಕನ್ನಡ ಚಾನ್ನೆಲ್ ಆಯೋಜಿಸಿದ ” ಡ್ಯಾನ್ಸಿಂಗ್ ಸ್ಟಾರ್ಸ್” ಕನ್ನಡ ಸೆಲೆಬ್ರಿಟಿ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಲಕ್ಷೋಪಾಲಕ್ಷ ವೀಕ್ಷಕರ ಅಭಿಮಾನವನ್ನು ಗಳಿಸಿದ್ದಾರೆ. ಇವರ ತುಂಟ ಮಾತಿನಿಂದ ಜಡ್ಜ್ ಗಳಾದ ರವಿಚಂದ್ರನ್ ಸರ್ ,ಮಯೂರಿ ,ಪ್ರಿಯಾಮಣಿ ಹಾಗೂ ಅಕುಲ್ ಬಾಲಾಜಿ ಯವರ ಮನ ಗೆದ್ದಿದ್ದಾರೆ ..ಹೈದರಾಬಾದ್ ನಲ್ಲಿ 2014ರಲ್ಲಿ ನಡೆದ “ಈ ಟಿವಿ ತೆಲುಗು” ಚಾನೆಲ್‍ನಲ್ಲಿ ಅತಿಥಿ ಕಲಾವಿದೆಯಾಗಿ ಭಾಗವಹಿದ ಖುಷಿ ಇವರಿಗಿದೆ.ನಮ್ಮ ತುಳುನಾಡಿನ ಪುಟ್ಟ ರಾಜಕುಮಾರಿ ತನ್ನ ಬಹುಮುಖ ಪ್ರತಿಭೆಯಿಂದ ಸಾಧನೆಯ ಶಿಖರವೇರುತ್ತಿರುವ ಈ ಬಾಲ ಕಲಾವಿದೆಗೆ ತಾನೊಬ್ಬ ಐ.ಎ.ಎಸ್ ಅಧಿಕಾರಿ ಮತ್ತು ಅಂತರಾಷ್ಟ್ರೀಯ ಮಾನ್ಯತೆಯ ಮೂಲಕ ಕೊರಿಯೋಗ್ರಾಫರ್ ಆಗುವುದು ಹಾಗೂ ನಮ್ಮ ತುಳುನಾಡಿನ ಆಚಾರ ವಿಚಾರಗಳನ್ನು ಇಡೀ ಜಗತ್ತಿಗೆ ತಿಳಿಯುವಂತೆ ಮಾಡುವುದು, ಯಕ್ಷಗಾನದ ಬಗ್ಗೆ ಅಧ್ಯಯನ ಮಾಡುವ ಗುರಿಯನ್ನು ಹೊಂದಿದ್ದಾರೆ. ಇವರ ಈ ಎಲ್ಲಾ ಸಾಧನೆಗೆ ಕರುನಾಡಿನ ಜನರ ಆಶೀರ್ವಾದ ಮತ್ತು ಕಲಾ ಮಾತೆ ಶಾರದೆಯ ಅನುಗ್ರಹ ಸದಾ ಇವರ ಮೇಲಿರಲಿ ಎಂಬುದೇ ಸಾಧಕರ ಹಾದಿಯ ಆಶಯ.

✍️

ಬರಹ :  ರಂಜಿನಿ ಬಂಗೇರ ಕಳಂಗಜೆ 

     ಸಹಕಾರ :ಸಾಯಿ ದೀಕ್ಷಿತ್ ಪುತ್ತೂರು 

Tags – Adhvik Shetty DID, colors kannada, zee kannada, Tulunada siri, cool-saadhakaru, yakshagana, dance, bharathanatyam, Tulu movie, Kannada Movie.

6 thoughts on “ಕರಾವಳಿ ಕಡಲ ಕಿನಾರೆಯ ಮುದ್ದು ಮೊಗದ ಪುಟ್ಟ ಹುಡುಗಿ ”ತುಳುವ ಸಿರಿ” ‘ಎಂ. ಅಧ್ವಿಕಾ ಶೆಟ್ಟಿ” ಯವರ ಸಾಧನೆಯ ಹಾದಿ.”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ