Charith Balappa Poojary | ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ “ಮುದ್ದು ಲಕ್ಷ್ಮೀ ಯ ಡಾ.ಧ್ರುವಂತ್ ” ರ ಸಾಧನೆಯ ಹಾದಿ

Charith Balappa Poojary

     ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ, ಸ್ಯಾಂಡಲ್ವುಡ್ ನ ಯಾವ ಹೀರೊಗಳಿಗೂ ಕಡಿಮೆಯಿಲ್ಲದ ಸ್ಪುರದ್ರೂಪಿ ಚರಿತ್ ಬಾಳಪ್ಪ ಪೂಜಾರಿ Charith Balappa Poojary ಯ ಸಾಧನೆಯ ಹಾದಿ ಇಂದು ಕೂಲ್-ಸಾಧಕರ ವೇದಿಕೆಯಲ್ಲಿ.

     ಕಣ್ಣು ಬಿಟ್ಟಿರುವಷ್ಟು ದಿನ ನಾವು ಪ್ರಪಂಚವನ್ನು ನೋಡಬಹುದು. ಆದರೆ, ಕಣ್ಣು ಮುಚ್ಚಿದ ನಂತರ ನಮ್ಮನ್ನು ಪ್ರಪಂಚ ನೋಡುವಂತೆ ಮಾಡುವುದೇ ಸಾಧನೆ. ತಾನು ಅದೆಷ್ಟೋ ಕಷ್ಟ ಪಟ್ಟು ಅವಕಾ,ಶಗಳಿಗೆ ವಂಚಿತನಾಗಿ, ಸಾಧನೆಯ ಪಣತೊಟ್ಟು , ಹಂತ ಹಂತವಾಗಿ ಸಾಧಿಸುತ್ತಾ, ಇಂದು ಎಲ್ಲರ ಮನ ಮನೆಗಳಲ್ಲಿ ಮನೆ ಮಾಡಿದ್ದಾರೆ “ಚರಿತ್ ಬಾಳಪ್ಪ ಪೂಜಾರಿ(Charith Balappa Poojary)”.

 

        ಇವರು ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನಲ್ಲಿ ಬಾಳಪ್ಪ ಪೂಜಾರಿ ಮತ್ತು ಪ್ರೇಮ ಬಾಳಪ್ಪ ಪೂಜಾರಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಮೊದಲನೆಯವರಾಗಿ ಜನಿಸಿದರು. ಇವರ ಪತ್ನಿ ಮಂಜುಶ್ರೀ ಚರಿತ್.  ಇವರು ತನ್ನ ಎಲ್ ಕೆ ಜಿ ಮತ್ತು ಯು ಕೆ ಜಿ ಶಿಕ್ಷಣವನ್ನು ಬಂಟ್ವಾಳದಲ್ಲಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕೊಡಗಿನ ಕೊಡ್ಲಿಪೇಟೆ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಶನಿವಾರ ಸಂತೆ ಕಾಲೇಜಿನಲ್ಲಿ, ಪದವಿ ಮತ್ತು ಉನ್ನತ ವ್ಯಾಸಂಗ(ಬಿಬಿಎಂ)ವನ್ನು ನಿಟ್ಟೆ ಯುನಿವರ್ಸಿಟಿಯಲ್ಲಿ ಮುಗಿಸಿ, ಕ್ಯಾಂಪಸ್ ಇಂಟರ್ವ್ಯೂನಲ್ಲಿ ಇಂಟರ್ನ್ಯಾಷನಲ್ ಬ್ಯಾಂಕ್ “ಹೆಚ್ ಎಸ್ ಬಿ ಸಿ”ಯಲ್ಲಿ ಕೆಲಸ ದೊರೆಯುತ್ತದೆ.

        ಬಡ ಕುಟುಂಬದಲ್ಲಿ ಜನಿಸಿದ ಇವರ ತಂದೆ ಕಾಫಿ ಪ್ಲಾಂಟರ್ ಆಗಿ ಕೆಲಸ ಮಾಡುತ್ತಾ ಮತ್ತು ತಾಯಿ ಗೃಹಿಣಿಯಾಗಿ ಇವರನ್ನು ಬೆಳೆಸಿದ್ದಾರೆ. ಇವರು ಬಂಟ್ವಾಳದಲ್ಲಿ ತನ್ನ ಅಜ್ಜ ಅಜ್ಜಿಯ ಜೊತೆಗೆ ತುಂಟಾಟ ಆಡುತ್ತಾ, ತಂದೆ ತಾಯಿಯ ನೆನಪುಗಳನ್ನು ಬಚ್ಚಿಟ್ಟು ಎಲ್‌ಕೆಜಿ ಮತ್ತು ಯು.ಕೆ.ಜಿ ಶಿಕ್ಷಣವನ್ನು ಪಡೆಯುತ್ತಾರೆ. ಇವರ ಅಜ್ಜ “ತಾರನಾಥ್ ಬಂಗೇರ”, ಅಜ್ಜನ ಬಗ್ಗೆ ಹೇಳುವುದಾದರೆ, ಇವರೊಬ್ಬ ಕುಸ್ತಿ ಪಟು. ಇವರು ಬಂಟ್ವಾಳಲ್ಲಿ ಒಬ್ಬ ಹೆಸರುಗಳಿಸಿರುವ ವ್ಯಕ್ತಿ.

       ಚರಿತ್ ರವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಸರತ್ತು, ಈಜು, ಕುಸ್ತಿ ಇವನ್ನೆಲ್ಲಾ ಕಲಿಸಿಕೊಟ್ಟ ಉತ್ತಮ ಕ್ರೀಡಾಪಟು. ಇದೇ ಕಾರಣಕ್ಕೆ ಚರಿತ್ ರವರೂ ಕೂಡ ಒಬ್ಬ ಉತ್ತಮ ಕುಸ್ತಿ ಮತ್ತು ಕ್ರೀಡಾ ಪಟು. ನಂತರ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಕೊಡಗಿನ ಕೊಡ್ಲಿಪೇಟೆಯಲ್ಲಿ ಇವರ ತಂದೆ ತಾಯಿಯ ಜೊತೆಯಲ್ಲಿ ಮುಂದುವರಿಸುತ್ತಾರೆ. ಶನಿವಾರ ಸಂತೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ವನ್ನು ಮುಗಿಸುತ್ತಾರೆ. ನಂತರ  ಡಿಗ್ರಿ ಮತ್ತು ಬಿಬಿಎಮ್ ಪದವಿಯನ್ನು ಪಡೆಯಲು ಕಾರ್ಕಳದ ನಿಟ್ಟೆಗೆ ತೆರಳಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆಯುತ್ತಾರೆ.

 

Read Also : ಯೂಟ್ಯೂಬರ್ ಪುತ್ತೂರಿನ ಜಯಂತ್ ಕುಲಾಲ್ 

Read Also : ಅಭಿನವ ವಜ್ರಮುನಿ’ ರಮೇಶ್ ರೈ ಕುಕ್ಕುವಳ್ಳಿ

Read Also : ಬರಹಗಾರ, ಕಥೆಗಾರ  “ಸಾಯಿ ದೀಕ್ಷಿತ್ ಪುತ್ತೂರು” 

 

          ಇವರ ತಂದೆಗೆ ಇವರೊಬ್ಬ ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಮನೆಯಲ್ಲಿ ಕಲಿಕೆಗೆ ಒಂದು ಬಿಟ್ಟರೆ ಬೇರೆ ಯಾವುದೇ ವಿಷಯಕ್ಕೂ ಪ್ರೋತ್ಸಾಹ ಇರಲಿಲ್ಲ. ಶಾಲೆ ಕಾಲೇಜುಗಳಲ್ಲಿ ಸಾಂಸ್ಕೃತಿಕ ವಿಷಯದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆಯುತ್ತಿದ್ದರು. ಬಾಲ್ಯದಲ್ಲಿ ಇವರಿಗೆ ವೇದಿಕೆಯ ಮೆಟ್ಟಿಲು ಏರೋದಂದ್ರೆ ತುಂಬಾನೇ ಖುಷಿ. ಹಾಗಾಗಿಯೇ ಯಾವುದೇ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕ್ರೀಡೆಗಳಲ್ಲಿ ಭೇಷ್ ಎನಿಸಿಕೊಂಡು ವೇದಿಕೆಯಲ್ಲಿ ಗಣ್ಯಾತಿಗಣ್ಯರಿಂದ ಬಹುಮಾನ ಸ್ವೀಕಾರ ಮಾಡಿ ಆನಂದ ಪಡುತ್ತಿದ್ದರು. ಮುಖ್ಯವಾಗಿ ವೇದಿಕೆಗೆ ಹೋದಾಗ ಜನರಿಂದ ಸಿಗೋ ಚಪ್ಪಾಳೆ ಮತ್ತು ಶಿಳ್ಳೆಗಳೆ ಇವರಿಗೆ ಪ್ರೋತ್ಸಾಹ. ಇವತ್ತು ಇವರು ಈ ಮಟ್ಟಕ್ಕೆ ಬೆಳೆಯಲು ಜನರ ಪ್ರೋತ್ಸಾಹವೇ ಕಾರಣ. ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಯ ಹಾದಿ ಹಿಡಿದವರು. ಹೆಸರು ಗಳಿಸ್ಬೇಕು, ಇವರಿಂದಾಗಿ ಇವರ ತಂದೆ ತಾಯಿಯನ್ನು ಗುರುತಿಸಬೇಕು ಎಂಬುದು ಇವರ ಅತಿ ದೊಡ್ಡ ಕನಸು.

      ಇವರು ಅಭಿನಯಿಸಿದ ಮೊದಲನೇ ಧಾರವಾಹಿ “ಝೀ ಕನ್ನಡ” ಚಾನೆಲ್ ನಲ್ಲಿ ಪ್ರಸಾರವಾದ “ಲವಲವಿಕೆ”, ಎರಡನೇ ಧಾರವಾಹಿ “ಸ್ಟಾರ್ ಸುವರ್ಣ” ಚಾನೆಲ್ ನಲ್ಲಿ ಪ್ರಸಾರವಾದ “ಅಮ್ಮ”, ಮೂರನೇ ಧಾರವಾಹಿ “ಕಲರ್ಸ್” ಚಾನೆಲ್ ನಲ್ಲಿ ಪ್ರಸಾರವಾದ “ಸರ್ಪ ಸಂಬಂಧ”, ನಾಲ್ಕನೇ ಸೂಪರ್ ಹಿಟ್ ಧಾರವಾಹಿ ಈಗ “ಸ್ಟಾರ್ ಸುವರ್ಣ” ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ “ಮುದ್ದು ಲಕ್ಷ್ಮೀ”. ಇವರು ಅಭಿನಯಕ್ಕೆ ಎರಡು ಧಾರಾವಾಹಿ ಗಳಲ್ಲಿ ಪ್ರಶಸ್ತಿ ಮತ್ತು ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಲಭಿಸಿದೆ. ರಾಜ್ಯಮಟ್ಟಗಳಲ್ಲಿ ಇವರು ಸನ್ಮಾಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಾಲೇಜ್ ಮತ್ತು ಕಂಪನಿಗಳಲ್ಲಿಯೂ ಅವಾರ್ಡ್ ಗಳನ್ನು ಪಡೆದಿದ್ದಾರೆ.

        ಇವರಿಗೆ ಪ್ರೋತ್ಸಾಹ ನೀಡುವವರು ಯಾರೂ ಇರಲಿಲ್ಲ. ಇವರೇ ಎಲ್ಲ ವಿಷಯಗಳನ್ನು ತಿಳಿದುಕೊಂಡು ಇವರದ್ದೇ ಆದ  ಸ್ವಂತ ದಾರಿಯಿಂದ ನಡೆದು ಯಾವುದೇ ಕಷ್ಟಗಳು ಕಣ್ಮುಂದೆ ಬಂದರೂ, ಮನೆಯೇ ಇಲ್ಲದಿದ್ದರೂ ಈ ಯಾವ ನೋವನ್ನು ತಂದೆ ತಾಯಿಗೆ ಕಾಣಿಸದೆ ಸಾಧನೆ ಮಾಡಬೇಕೆಂಬ ಒಂದೇ ಒಂದು ಧ್ಯೇಯವನ್ನು ಮನದಲ್ಲಿರಿಸಿಕೊಂಡು, ಎಲ್ಲ ಕಷ್ಟಗಳನ್ನು ಎದುರಿಸಿ, ಇವತ್ತು ಕರ್ನಾಟಕದಲ್ಲಿ ಗುರುತಿಸಿಕೊಳ್ಳುವಂತಹ ವ್ಯಕ್ತಿ ಆಗಿದ್ದಾರೆ. ಇದು ಇವರ ಪ್ರಾರಂಭ ಅಷ್ಟೇ. ಇನ್ನು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಬೇಕೆಂಬ ಛಲದಿಂದ ಮುನ್ನಡೆಯುತ್ತಿದ್ದಾರೆ. ಇವರ ಬೆನ್ನ ಹಿಂದೆ ನಿಂತು ನಿನಗೆ ನಾವಿದ್ದೇವೆ ನೀನು ಸಾಧನೆ ಮಾಡು ಎಂದು ಹೇಳುವವರು ಯಾರು ಇಲ್ಲ. ಈಗ ತಂದೆ ತಾಯಿಯ ಒಪ್ಪಿಗೆಯೂ ಇದೆ, ಪ್ರೋತ್ಸಾಹವೂ ಇದೆ. ಮುಖ್ಯವಾಗಿ ಇವರ ಕೈ ಹಿಡಿದ ಪತ್ನಿಯ ಸಂಪೂರ್ಣ ಸಹಕಾರ, ಬೆಂಬಲದಿಂದಾಗಿ ಇವರಿಗೆ ಇವತ್ತು ಯಾವ ಕಷ್ಟನೂ ಕಷ್ಟ ಅನ್ನಿಸುತ್ತಿಲ್ಲ. ಸಾಧನೆಯ ಗುರಿ ಇನ್ನಷ್ಟು ಹತ್ತಿರವೆನಿಸುತ್ತಿದೆ.

             ಸಾಧಿಸುವವನಿಗೆ ಸಾವಿನ ಭಯ ಇರಲ್ಲ. ಅದರ ಬದಲು ಸಾವಿಗೇ ಸವಾಲೊಡ್ಡುತ್ತಾನೆ. ಸಾವನ್ನೇ ಗೆದ್ದು ನಿಲ್ಲುತ್ತಾನೆ. ಅಂತಹ ಅಪಾರ ಸಾಧಕರಲ್ಲಿ ಒಬ್ಬರಾದ ಇವರು ಇನ್ನಷ್ಟು ಸಾಧನೆಯನ್ನು ಸಾಧಿಸಲಿ ಎಂದು ಆಶಿಸೋಣ.

   ”ನಮ್ಮ ಕಲಾವಿದರು ನಮ್ಮ ಹೆಮ್ಮೆ”

ಬರಹ : ಸಾಯಿ ದೀಕ್ಷಿತ್ ಪುತ್ತೂರುನಟ ಮತ್ತು ಹವ್ಯಾಸಿ ಬರಹಗಾರರು,)

 

 

 

Tags – Cool Achievements, Charith Balappa Poojary, Dr. Dhruvanth, Muddulakshmi, Star Suvarna, Mangalore, Bangalore, Tulunadu, Kannada Serial, Sandalwood, Actors, Bollywood Actors, 

 

 

 

 

 

 



7 thoughts on “Charith Balappa Poojary | ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ “ಮುದ್ದು ಲಕ್ಷ್ಮೀ ಯ ಡಾ.ಧ್ರುವಂತ್ ” ರ ಸಾಧನೆಯ ಹಾದಿ”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ