ತುಳು ಚಿತ್ರರಂಗದ ‘ಅಭಿನವ ವಜ್ರಮುನಿ’ ರಮೇಶ್ ರೈ ಕುಕ್ಕುವಳ್ಳಿ ಸಾಧನೆಯ ಹಾದಿ

 

      ಕೂಲ್-ಸಾಧಕರ ವೇದಿಕೆಯಲ್ಲಿ ತುಳು, ಕನ್ನಡ ಚಿತ್ರರಂಗದಲ್ಲಿ,  ನಾಟಕರಂಗದಲ್ಲಿ, ಧಾರಾವಾಹಿಗಳಲ್ಲಿ, ಬಣ್ಣ ಹಚ್ಚಿ ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಂಡು ತುಳು ಹಾಗೇನೇ ಕನ್ನಡ ಚಿತ್ರ ರಸಿಕರ ಮನಸ್ಸನ್ನು ಗೆದ್ದoತಹ ಹಿರಿಯ ಕಲಾವಿದರಾದ ರಮೇಶ್ ರೈ ಕುಕ್ಕುವಳ್ಳಿಯವರ ಸಾಧನೆಯ ಹಾದಿ.

     ನೀಲ ಕಾಯ ಗಟ್ಟಿಮುಟ್ಟಾದ ದೇಹವನ್ನು ಹೊಂದಿರುವ ಇವರನ್ನು ಖಳನಟನಾಗಿ ನೋಡಿದರೆ ಹೆದರದವರೂ ಕೂಡ ಒಮ್ಮೆಗೆ ಹೆದರಿ ಬಿಡುತ್ತಾರೆ. ಯಾಕೆಂದ್ರೆ, ಅವರ ಗಾಂಭೀರ್ಯ ತುಂಬಿದ ಕಣ್ಣಿನ ನೋಟ, ಎತ್ತರದ ನಿಲುವು, ಅವರ ಮಾತಿನ ಗಡಸುತನ ಭಯವನ್ನು ಉಂಟು ಮಾಡಿಸುತ್ತದೆ. ಇವರಿಗೆ ಈ ಕಲೆಯ ಅಭಿರುಚಿ ಇವರ ತಂದೆಯ ರಕ್ತದಿಂದ ಹುಟ್ಟಿಕೊಂಡಿದೆ. ಇವರ ತಂದೆ ಸ್ವತಃ ಯಕ್ಷಗಾನ ಕಲಾವಿದ ಅದೇ ಇವರ ಕಲಾ ಸೇವೆಗೆ ಆಸ್ತಿ ಎನ್ನಬಹುದು.

 

 

ಸಾಧನೆಯ ಹಾದಿಯಲ್ಲಿ ಬೆಳೆಯುತ್ತಿರುವ ಕಲಾವಿದ “ರಮೇಶ್ ರೈ ಕುಕ್ಕುವಳ್ಳಿ” ಇವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ, ಪ್ರತಿಷ್ಟಿತ ಬಾಲ್ಯೊಟ್ಟು ಗುತ್ತಿನ ಕುಕ್ಕುವಳ್ಳಿ ಮನೆತನದಲ್ಲಿ 03/06/1972ರಂದು ದಿ| ಶ್ರೀಮತಿ ಗಿರಿಜಾ ಕೆ.ರೈ ಮತ್ತು ದಿ| ಶ್ರೀ ಕರಿಯಪ್ಪ ರೈ ಕಲ್ಲಡ್ಕ ಇವರ ಆರನೇ ಪುತ್ರನಾಗಿ. ನಾರಾಯಣ ರೈ, ಭಾಸ್ಕರ ರೈ, ಜತ್ತಪ್ಪ ರೈ, ಕೊರಗಪ್ಪ ರೈ, ಉಮೇಶ್ ರೈ ಕುಕ್ಕುವಳ್ಳಿ ಅಣ್ಣಂದಿರು ಮತ್ತು ವೇದಾವತಿ ಎಸ್ ರೈ, ಶಶಿಕಲಾ ಜಿ ರೈ ಸಹೋದರಿಯರನ್ನು ಹೊಂದಿದ್ದಾರೆ. ವಿಶೇಷ ಎಂದರೆ ಇವರ ಅಣ್ಣಂದಿರು ಕೂಡ ಕಲಾವಿದರು ಮತ್ತು ಬರಹಗಾರರು. ಇವರ ನಾಲ್ಕನೇ ತರಗತಿಯವರೆಗಿನ ವಿದ್ಯಾಭ್ಯಾಸಕ್ಕೆ ಇವರ ಅಣ್ಣ ನಾರಾಯಣ ರೈ ಇವರೇ ಮೇಷ್ಟ್ರು ಆಗಿದ್ದರು.

 

 

ಇವರು ಈ ಕೂಡು ಕೃಷಿಕ ಕುಟುಂಬದಲ್ಲಿ ಹುಟ್ಟಿದ್ದರಿಂದ ಯಾವುದೇ ಕಷ್ಟಗಳನ್ನು ಅನುಭವಿಸಿಲ್ಲ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದರು. ಇವರು ಚಿಕ್ಕಂದಿನಿಂದಲೂ ಸ್ವಲ್ಪ ತುಂಟ. ಆದ್ದರಿಂದ ವಿದ್ಯೆ ತಲೆಗೆ ಹತ್ತದೆ ಪ್ರೌಢ ಶಿಕ್ಷಣಕ್ಕೆ ನಿಲ್ಲಿಸಿ ಮಂಗಳೂರಿನಲ್ಲಿ ಒಂದು ಪೀಠೋಪಕರಣಗಳ ಅಂಗಡಿ ತೆರೆದು ವ್ಯವಹಾರ ನಡೆಸುವುದರೊಂದಿಗೆ ಊರಿನಲ್ಲಿ ಕೃಷಿಯ ಕಾಯಕವನ್ನೂ ಬಿಡದೆ, 18/10/1999 ರಂದು ಲತಾ ಇವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರ ಪ್ರೀತಿಯ ಪ್ರತೀಕವಾಗಿ ವರ್ಷ ರಮೇಶ್ ಪ್ರಥಮ ಪುತ್ರಿ ಮತ್ತು ದೀಕ್ಷಾ ರಮೇಶ್ ,ರಕ್ಷಾ ರಮೇಶ್ ಅವಳಿ ದ್ವಿತೀಯ ಪುತ್ರಿಯರಾಗಿ ಜನಿಸುತ್ತಾರೆ. ಮೊದಲ ಪುತ್ರಿ ವರ್ಷ ಪದವಿ ವ್ಯಾಸಂಗ ಮಾಡುತ್ತಿದ್ದು, ದೀಕ್ಷಾ ಮತ್ತು ರಕ್ಷಾ ಪ್ರೌಢ ಶಿಕ್ಷಣ ಮಾಡುತ್ತಿದ್ದಾರೆ. ಈ ಮೂವರು ಮಕ್ಕಳು ಮತ್ತು ಪತ್ನಿಯೊಂದಿಗೆ ಸುಂದರ ಜೀವನವನ್ನು ಕಟ್ಟಿಕೊಂಡು, ಕಲಾವಿದನಾಗಿ ನಾಟಕ ಮತ್ತು ಚಲನಚಿತ್ರಗಳಲ್ಲಿ ನಟನೆ ಮಾಡುತ್ತಾ ಕಲಾ ಮಾತೆ ಶಾರದೆಯ ಸೇವೆಯನ್ನು ಮಾಡುತ್ತಿದ್ದಾರೆ.

ಇವರ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟ್ಟಂಪಾಡಿ ಹಾಗೂ ಪ್ರೌಢ ಶಿಕ್ಷಣವನ್ನು ನವೋದಯ ಹೈ ಸ್ಕೂಲ್ ಬೆಟ್ಟಂಪಾಡಿ ಇಲ್ಲಿ ಮುಗಿಸಿ, 1989ರಲ್ಲಿ ದಿ|ಶಾಂತರಾಮ ಕಲ್ಲಡ್ಕರವರ “ಶೀಲಾವತಿ” ನಾಟಕದ ಮುಖಾಂತರ ಖಳನಾಯಕನಾಗಿ ರಂಗ ಪ್ರವೇಶ ಮಾಡಿ ಪೌರಾಣಿಕ, ಜಾನಪದ, ಐತಿಹಾಸಿಕ, ಹಾಸ್ಯ ಮುಂತಾದ 1255ನಾಟಕಗಳಲ್ಲಿ ಅಭಿನಯಿಸಿ, ಮೂರು ಸಾವಿರಕ್ಕಿಂತಲೂ ಹೆಚ್ಚು ಪ್ರದರ್ಶನ ನೀಡಿದ ಹೆಗ್ಗಲಿಕೆ ಇವರದ್ದು.
ರಂಗಭೂಮಿಯ ಸೇವೆಗಾಗಿ “ರಂಗ ಕೇಸರಿ”, “ತುಳುನಾಡ ಚಾಣಕ್ಯ”, “ರಂಗ ವಿಚಕ್ಷಣ”, “ರಂಗದರಾಜ”, “ಅಭಿನವ ವಜ್ರಮುನಿ” ಮುಂತಾದ ಬಿರುದುಗಳು ದೊರಕಿವೆ.


“ಗಡಿನಾಡ ಕಲಾವಿದರು ಕಾಸರಗೋಡು”, “ಮಸ್ಕಿರಿ ಕುಡ್ಲ”, “ರಂಗತರಂಗ ಕಾಪು”, “ಶಾರದಾ ಆರ್ಟ್ಸ್ ಮಂಜೇಶ್ವರ”, “ನಿಸರ್ಗ ಕುಡ್ಲ”, “ನಮ್ಮ ಕಲಾವಿದೆರ್ ಬೆದ್ರ”, “ಕಲಾ ಸಂಗಮ ಮಂಗಳೂರು”, ಪ್ರಸ್ತುತ “ವಿಧಾತ್ರಿ ಕಲಾವಿದೆರ್ ಕೈಕಂಬ-ಕುಡ್ಲ” ತಂಡದಲ್ಲಿ ಸಮಗ್ರ ನಿರ್ವಹಣೆಯೊಂದಿಗೆ ಅಭಿನಯಿಸಿದ್ದಾರೆ.

 

2007ರಲ್ಲಿ “ಬದಿ” ತುಳು ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿ ಒಟ್ಟು 25ತುಳು ಮತ್ತು 10ಕನ್ನಡ ಸಿನಿಮಾಗಳಲ್ಲಿ ಹಾಗೂ 6ಧಾರವಾಹಿಗಳಲ್ಲಿ ಅಭಿನಯಿಸಿದ ಹೆಮ್ಮೆ ಇವರದ್ದು. ಡಿಡಿ ಚಂದನದಲ್ಲಿ ಪ್ರಸಾರವಾಗುತ್ತಿದ್ದ ಹಾಸ್ಯ ಧಾರವಾಹಿ “ಸಜ್ಜಿಗೆ ಬಜಿಲ್” ಇದರ ನಿರ್ಮಾಣ ಹಾಗೂ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದು ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿದ ಸಂತೋಷ ಇವರದ್ದು. ಹಲವಾರು ಸ್ಪರ್ಧಾ ನಾಟಕಗಳಲ್ಲಿ ತಿರ್ಪುಗಾರನಾಗಿ ದುಡಿದ ಅನುಭವ ಇವರದ್ದು.

Read Also : ಯೂಟ್ಯೂಬರ್ ಪುತ್ತೂರಿನ ಜಯಂತ್ ಕುಲಾಲ್ 

Read Also : “ಮುದ್ದು ಲಕ್ಷ್ಮೀ ಯ ಗಂಡ ಡಾ.ಧ್ರುವಂತ್ ” ರ ಸಾಧನೆಯ ಹಾದಿ

Read Also : ಬರಹಗಾರ, ಕಥೆಗಾರ  “ಸಾಯಿ ದೀಕ್ಷಿತ್ ಪುತ್ತೂರು” 

32 ವರ್ಷದ ಕಾಲದಲ್ಲಿ ಕಲಾವಿದನಾಗಿ ತುಂಬಾ ಪರಿಶ್ರಮ ಪಟ್ಟಿದ್ದಾರೆ. ಕಲಾ ಕ್ಷೇತ್ರದಲ್ಲಿ ದೊಡ್ಡವರು ಚಿಕ್ಕವರು ಅಂತ ನೋಡದೆ ಎಲ್ಲರೂ ತನ್ನವರು ಮತ್ತು ಕಲಾ ಬದುಕಿನಲ್ಲಿ ಜಾತಿ ಭೇದವಿಲ್ಲ ಎಲ್ಲಾ ಜಾತಿಯೂ ಒಂದೇ. ಜಾತಿ ಅಂದರೆ ಅದು ಪ್ರಾಣಿಗಳಂತೆ ಮಾನವ ಜಾತಿಯೂ ಒಂದು. ಅದು ಬಿಟ್ಟರೆ ಹೆಣ್ಣು ಗಂಡು ಎಂಬ ವರ್ಗಗಳು ಅಷ್ಟೇ ಎಂಬ ದಿಟ್ಟ ಹೆಜ್ಜೆ ಇವರದ್ದು. ಇವರ ಈ ಕಲಾ ಮಾತೆಯ ಸೇವೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ನಮ್ಮ ನಾಡಿಗೆ ಕೊಡುಗೆಯಾಗಲಿ ಎಂದು ಆಶಿಸೋಣ. ನಮ್ಮ ಕಲಾವಿದರು ನಮ್ಮ ಹೆಮ್ಮೆ.
ಬರಹ: ರಂಜಿನಿ ಬಂಗೇರ ಕಳಂಗಜೆ
ಸಹಕಾರ: ಸಾಯಿ ದೀಕ್ಷಿತ್ ಪುತ್ತೂರು

5 thoughts on “ತುಳು ಚಿತ್ರರಂಗದ ‘ಅಭಿನವ ವಜ್ರಮುನಿ’ ರಮೇಶ್ ರೈ ಕುಕ್ಕುವಳ್ಳಿ ಸಾಧನೆಯ ಹಾದಿ”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio