ಮುದ್ದುಲಕ್ಷ್ಮಿಯ ಡಾ.ಧ್ರುವಂತ್ ಆಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ವಾಪಾಸ್

ಮುದ್ದುಲಕ್ಷ್ಮಿಯ ಡಾ.ಧ್ರುವಂತ್ ಮುದ್ದು ಮನಸುಗಳು ಧಾರಾವಾಹಿಯಲ್ಲಿ ಆಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ವಾಪಾಸ್

Star Suvarna ಚಾನೆಲ್ ನಲ್ಲಿ ಕಳೆದೆರಡು ವರ್ಷಗಳ ಹಿಂದೆ ಕನ್ನಡ ಧಾರಾವಾಹಿ ಜಗತ್ತಿನಲ್ಲಿ ಬಹಳಷ್ಟು ಸದ್ದು ಮಾಡಿದ್ದ ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕ ಪಾತ್ರದಲ್ಲಿ ನಮ್ಮ ಕರಾವಳಿ ಮೂಲದ ನಟ Charith Balappa Poojary ಮಿಂಚಿದ್ದರು. Dr. Dhruvanth ಪಾತ್ರದಲ್ಲಿ ಇವರ ನಟನೆ ಮತ್ತು ವರ್ಚಸ್ಸು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿ ಕೊಟ್ಟಿತ್ತು. ಇವರ ನಟನೆ ಕನ್ನಡ ಸಿನಿಮಾದ ಯಾವ ಹೀರೋಗಳಿಗೂ ಕಡಿಮೆ ಇರಲಿಲ್ಲ. Muddulakshmi ಧಾರಾವಾಹಿಯು ಕೂಡ ಸಾಕಷ್ಟು ವೀಕ್ಷಕರನ್ನು ಹೊಂದಿ ಸ್ಟಾರ್ ಸುವರ್ಣ ಚಾನೆಲ್ ಗೆ ಜಾಸ್ತಿ TRP ಗಳಿಸುವಲ್ಲಿ ಯಶಸ್ವಿಯಾಗಿತ್ತು.  ಈ ಧಾರಾವಾಹಿ ಸುಮಾರು ಸಾವಿರ ಎಪಿಸೋಡ್ ಅನ್ನು ಸಹ ಪೂರೈಸಿತ್ತು.  

Dhruvanth
Dhruvanth

 

ಯಶಸ್ವಿ ಶಿಖರದಲ್ಲಿ ಮಿಂಚುತ್ತಿದ್ದ ಮುದ್ದು ಲಕ್ಷ್ಮಿ ಧಾರಾವಾಹಿಯಿಂದ ಅನಿವಾರ್ಯ ಕಾರಣದಿಂದ  ಚರಿತ್ ಬಾಳಪ್ಪ ದೂರವಾಗಿದ್ದು ನಮೆಗೆಲ್ಲ ಗೊತ್ತೇ ಇದೆ. ಅದಕ್ಕೆ ಸಾಕಷ್ಟು ಉಹಾ ಪೋಹಾಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ನಟ ಚರಿತ್ ಬಾಳಪ್ಪ ಅವರು ಸಹ ಯಾವುದೇ ಸುಳಿವು ನೀಡಲಿಲ್ಲ. ಕ್ರಮೇಣ ತಮ್ಮ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲೂ ಸಹ ಅವರು ತಮ್ಮ ಹೆಸರು Dhruvanth Talwar ಎಂದು ಬದಲಾಯಿಸಿದ್ದಾರೆ. ಆದರೆ ಸದ್ಯ ಮುದ್ದು ಲಕ್ಷ್ಮಿಯ ಧ್ರುವಂತ್ ”ಮಾನಸ್” ಎಂಬ ಹೊಸ ಪಾತ್ರದೊಂದಿಗೆ ಆಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ಸುವರ್ಣ ಚಾನೆಲ್ ನ ಧಾರಾವಾಹಿ ಕುಟುಂಬಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಇವರು ಎಂಟ್ರಿ ಕೊಟ್ಟದ್ದು ಹೊಸ ಧಾರಾವಾಹಿ ಮುಖಾಂತರ ಅಲ್ಲ, ಬದಲಾಗಿ ಮುದ್ದುಲಕ್ಷ್ಮಿಯ ಮುಂದುವರಿದ ಭಾಗ ಮುದ್ದು ಮನಸುಗಳು ಧಾರಾವಾಹಿ ಮುಖಾಂತರ.   

 

ಮುದ್ದುಲಕ್ಷ್ಮಿ” ಧಾರಾವಾಹಿ ಕ್ರಮೇಣ ”ಮುದ್ದುಮಣಿಗಳು”ಆಗಿ ರೂಪಾಂತರಗೊಂಡು ಹೊಸ ಕಥೆ ಸೇರಿಕೊಂಡು ಅದು ಸಹ ಸಾಕಷ್ಟು ಜನಮನ್ನಣೆಗಳಿಸಿತ್ತು. ನಂತರ ಇತ್ತೀಚೆಗೆ ಮುದ್ದು ಮಣಿಗಳು ಸಹ ಅಪ್ಡೇಟ್ ಆಗಿ ”ಮುದ್ದು ಮನಸುಗಳು” ಎಂಬ ಹೆಸರಿನೊಂದಿಗೆ ಹೊಸ ಕಥೆ ಹೆಣೆದುಕೊಂಡು ಪ್ರಸಾರವಾಗುತ್ತಿದೆ. ಮುದ್ದುಲಕ್ಷ್ಮಿಯ ಲಕ್ಷ್ಮಿ(Muddu Lakshmi) ಹಾಗೂ ಧ್ರುವಂತ್ ಮತ್ತೆ ಮುದ್ದು ಮನಸುಗಳು ಧಾರಾವಾಹಿಯಲ್ಲಿ ಒಂದಾಗುತ್ತಿದ್ದಾರೆ. ಅಭಿಮಾನಿಗಳು ಬಹಳಷ್ಟು ಇಷ್ಟ ಪಟ್ಟ ಧ್ರುವಂತ್ ಮತ್ತು ಮುದ್ದು ಲಕ್ಷ್ಮಿ  ಜೋಡಿ ಯನ್ನು ಮುದ್ದು ಮನಸುಗಳು ಧಾರಾವಾಹಿಯಲ್ಲಿ ಮತ್ತೆ ಕಂಡು ಖುಷಿ ಪಡುತ್ತಿದ್ದಾರೆ. ಪುನಃ ಈ ಜೋಡಿ ಅಭಿಮಾನಿಗಳಿಗೆ ಸಾಕಷ್ಟು ಮನರಂಜನೆ ಕೊಡಲಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಏನೇ ಆಗಲಿ ಈ ಸರಣಿಯಲ್ಲೂ ಈ ಜೋಡಿ ಮಾಡಲಿದೆಯಾ ಮೋಡಿ ಎಂಬುದನ್ನು ಕಾತರದಿಂದ ಕಾದು ನೋಡಬೇಕಿದೆ. 

 

ಲೇಖಕ : ಪ್ರಮೀತ್ ರಾಜ್ 

   

Read Also: ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ “ಮುದ್ದು ಲಕ್ಷ್ಮೀ ಯ ಡಾ.ಧ್ರುವಂತ್ ” ರ ಸಾಧನೆಯ ಹಾದಿ

Read Also: ಗುಡಿಸಲಿನಲ್ಲಿ ವಾಸವಿದ್ದ 90 ವರ್ಷದ ಅಜ್ಜಿಗೆ 1.03 ಲಕ್ಷ ರೂಪಾಯಿ ವಿದ್ಯುತ್ ಬಿಲ್ 

Read Also: ಮನೆಯಿಂದಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ

Read Also: PM Kisan Samman Nidhi ekyc ನಿಮ್ಮ ಫೋನ್ ನಲ್ಲಿ ಚೆಕ್ ಮಾಡಿ

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio