ಗುಡಿಸಲಿನಲ್ಲಿ ವಾಸವಿದ್ದ 90 ವರ್ಷದ ಅಜ್ಜಿಗೆ 1.03 ಲಕ್ಷ ರೂಪಾಯಿ ವಿದ್ಯುತ್ ಬಿಲ್

ಗುಡಿಸಲಿನಲ್ಲಿ ವಾಸವಿದ್ದ 90 ವರ್ಷದ ಅಜ್ಜಿಗೆ 1.03 ಲಕ್ಷ ರೂಪಾಯಿ ವಿದ್ಯುತ್ ಬಿಲ್. 

1 Lakh Electricity Bill For women: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯವು ಒಂದಲ್ಲ ಒಂದು ವಿಚಾರಕ್ಕೆ ದೇಶದ ಜನರ ಗಮನ ಸೆಳೆಯುತ್ತಿದೆ. ಕಾಂಗ್ರೆಸ್ ಸರಕಾರ ಚುನಾವಣೆ ಪೂರ್ವ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಸದ್ಯ ಸುದ್ದಿಯಲ್ಲಿರುವುದು ಕರ್ನಾಟಕದ ಕೊಪ್ಪಳದಲ್ಲಿ ಒಂದು ಗುಡಿಸಲಿನಲ್ಲಿ ಕೇವಲ ಎರಡು ಎಲ್‌ಇಡಿ ಬಲ್ಬ್‌ಗಳನ್ನು ಬಳಸುವ 90 ವರ್ಷದ ಅಜ್ಜಿಯೊಬ್ಬರಿಗೆ ಒಂದು ಲಕ್ಷ ರೂಪಾಯಿಗಳ ವಿದ್ಯುತ್ ಬಿಲ್ ಬಂದಿರುವುದು. 

ಕೊಪ್ಪಳದ ಭಾಗ್ಯನಗರದ ಪುಟ್ಟ ಗುಡಿಸಲಿನಲ್ಲಿ ತನ್ನ ಮಗನೊಂದಿಗೆ ವಾಸವಿರುವ 90 ವರ್ಷದ ಗಿರಿಜಮ್ಮ ಅವರಿಗೆ ಸಾಮಾನ್ಯವಾಗಿ ತಿಂಗಳಿಗೆ ಸರಿ ಸುಮಾರು 80 ರೂಪಾಯಿ ಗಳ ಆಸುಪಾಸು Electricity Bill ಬರುತ್ತಿತ್ತು. ಆದರೆ ಮೇ ತಿಂಗಳಿಗೆ ಈ ಅಜ್ಜಿಗೆ ಬರೋಬ್ಬರಿ 1,03,315 ರೂಪಾಯಿಗಳ ಬಿಲ್ ಬಂದಿದ್ದು ಅಜ್ಜಿ ತೀವ್ರ ಆಘಾತಕ್ಕೆ ಒಳಗಾಗಿದ್ದಳು. ಈಗಾಗಲೇ ವಿದ್ಯುತ್ ದರ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಈ ಸುದ್ದಿ ಕಿವಿಗೆ ಕಾದ ಎಣ್ಣೆ ಸುರಿದಂತಾಗಿದೆ. ಅಜ್ಜಿ ತನ್ನ ಅಳಲನ್ನು ಜನರಲ್ಲಿ ತೋಡಿಕೊಂಡಾಗ ಈ ಸುದ್ದಿ ಅತೀ ವೇಗವಾಗಿ ಹರಡಿತ್ತು. ಆದರೆ ಈ ಬಿಲ್ ಮೀಟರ್ ಸಮಸ್ಯೆಯಿಂದಾಗಿ ಬಂದಿರುವುದು ಎಂಬುದು ಊಹಿಸಬಹುದು. 

Electricity Bill
Electricity Bill

ಈ ಸುದ್ದಿ ಹರಡಿದ ಕೂಡಲೇ ವಿದ್ಯುತ್ ಇಲಾಖೆಗೆ ಸಂಭಂದಪಟ್ಟ ಅಧಿಕಾರಿಗಳು ಅಜ್ಜಿಯ ಮನೆಗೆ ಧಾವಿಸಿ ಪರಿಶೀಲಿಸಿದಾಗ ಅಲ್ಲಿ ಮೀಟರ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು, ಮೀಟರ್ ರೀಡಿಂಗ್ ಸಂಗ್ರಹಿಸಲು ಬಂದ ವ್ಯಕ್ತಿ ಸರಿಯಾಗಿ ಗಮನಿಸದೆ ಈ ಪ್ರಮಾದ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ನಿಟ್ಟುಸಿರು ಬಿಟ್ಟ ಅಜ್ಜಿ ನ್ಯೂಸ್ ಚಾನೆಲ್ ನವರಿಗೆ ಮತ್ತು ಸಹಾಯ ಮಾಡಿದ ಜನರಿಗೆ ಕೃತಜ್ಞತೆ ತಿಳಿಸಿದ್ದಾರೆ.  

ವಿದ್ಯುತ್ ಇಲಾಖೆಯ ಅಧಿಕಾರಿಗಳು ಸುದ್ದಿ ಚಾನೆಲ್ ನವರೊಂದಿಗೆ ಮಾತನಾಡಿ, ಅಜ್ಜಿ ಈ ಬಗ್ಗೆ ಯಾವುದೇ ಚಿಂತೆ ಮಾಡುವ ಅಗತ್ಯ ಇಲ್ಲ, ಮತ್ತು ಅಜ್ಜಿಯು ಗೃಹ ಜ್ಯೋತಿ ಯೋಜನೆಯಡಿ ತಮ್ಮ ಬಿಲ್ಲನ್ನು ಪಾವತಿಸಬೇಕಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಸದ್ಯ ರಾಜ್ಯದ ಜನತೆಗೆ ಗೃಹ ಜ್ಯೋತಿ ಯೋಜನೆಗೆ ಹೇಗೆ ಅಪ್ಲೈ ಮಾಡುವುದು ಎಂಬುವುದೇ ತಲೆ ಬಿಸಿಯಾಗಿದೆ. ಗೃಹಜ್ಯೋತಿಗೆ ಸಂಬಂಧ ಪಟ್ಟ ಸೇವಸಿಂಧು ಆನ್ಲೈನ್ ಪೋರ್ಟಲ್ನಲ್ಲಿ ಜನರು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಸರಕಾರ ತಿಳಿಸಿದೆ. 

 

Read Also: PM Kisan Samman Nidhi ekyc ನಿಮ್ಮ ಫೋನ್ ನಲ್ಲಿ ಚೆಕ್ ಮಾಡಿ

Read Also: ಮನೆಯಿಂದಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ

Read Also: ನಿಮ್ಮ ಪ್ರಕಾರ MP Election 2024 ರ ಬಿಜೆಪಿ ಅಭ್ಯರ್ಥಿ ಯಾರಾಗಬೇಕು? ವೋಟ್ ಮಾಡಿ

Read Also: ಪಾಕಿಸ್ತಾನಿ ಉದ್ಯಮಿ ಪ್ರಧಾನಿ ಮೋದಿಯನ್ನು ಮನಸೋ ಇಚ್ಛೆ ಹೊಗಳಿದ್ದಾರೆ. ಯಾಕೆ ಹೊಗಳಿದ್ದಾರೆ? ಕಾರಣ ಇಲ್ಲಿದೆ ನೋಡಿ. 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio