ನಿಮ್ಮ ಪ್ರಕಾರ MP Election 2024 ರ ಬಿಜೆಪಿ ಅಭ್ಯರ್ಥಿ ಯಾರಾಗಬೇಕು? ವೋಟ್ ಮಾಡಿ

Loading poll ...

 

 

MP Election 2024: 2023 ರ ವಿಧಾನಸಭಾ ಚುನಾವಣೆ ಈಗಾಗಲೇ ಮುಗಿದಿದ್ದರೂ ಅದರ ಬಿಸಿ ಇನ್ನೂ ಕಮ್ಮಿ ಆಗಿಲ್ಲ ಎಂಬುದು ನಮೆಗೆಲ್ಲ ತಿಳಿದಿರುವ ವಿಚಾರ. ಅದಕ್ಕೆ ಕಾರಣ ಹಲವು ಇರಬಹುದು. ಗ್ಯಾರಂಟಿಗಳಿಂದಾಗಿ ಅಧಿಕಾರ ಹಿಡಿದ ಕಾಂಗ್ರೆಸ್ ಸರಕಾರ ತಾವು ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗುತ್ತಿರುವುದು ಒಂದೆಡೆಯಾದರೆ, ಮುಂಬರುವ ಎಂಪಿ ಚುನಾವಣೆಗೆ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಯ ವಿಚಾರ ಇನ್ನೊಂದೆಡೆ. 

 

Click to Join Whatsapp Group

 

ಈಗಾಗಲೇ ಪ್ರಚಲಿತದಲ್ಲಿರುವಂತೆ ಬಿಜೆಪಿಯಲ್ಲಿ ಇರುವ ಹಾಲಿ ಸಂಸದರಿಗೆ ಹೆಚ್ಚಿನವರಿಗೆ ಟಿಕೆಟ್ ಕೈ ತಪ್ಪುವ ಗುಮಾನಿ ಎದ್ದಿದ್ದು, ಟಿಕೇಟಿಗಾಗಿ ಭರ್ಜರಿ ಪೈಪೋಟಿ ಗೆ ಎಡೆ ಮಾಡಿದಂತಿದೆ. ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ಪ್ರಯೋಗವನ್ನು ಕೇಂದ್ರ ಸರಕಾರ ಈ ಜನರಲ್ ಎಲೆಕ್ಷನ್ ನಲ್ಲೂ(General Election 2024) ಮಾಡಲು ತಯಾರಿ ಮಾಡುತ್ತಿರುವಂತಿದೆ. ಅಂದರೆ ಇಲ್ಲೂ ಸಹ ಹೊಸ ಮುಖಗಳಿಗೆ ಎಂಪಿ ಟಿಕೆಟ್ ಹಂಚಿಕೆಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ. 

 

ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರ ಇಡೀ ರಾಜ್ಯದ ಗಮನಸೆಳೆದಿತ್ತು.  Arun Kumar Puttila ರವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಸಹ BJP ಟಿಕೆಟ್ ಸಿಗದ ಕಾರಣ ಪಕ್ಷೇತರ ನಿಂತು ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ಕಾಂಗ್ರೆಸ್ ಗೂ ಠಕ್ಕರ್ ಕೊಟ್ಟು ಸುಮಾರು 62 ಸಾವಿರ ಮತಗಳನ್ನು ಗಳಿಸುವ ಮುಖಾಂತರ ಎಲ್ಲರ ಹುಬ್ಬು ಏರುವಂತೆ ಮಾಡಿದ್ದರು. ಹಿಂದುತ್ವದ ಅಜೇಂಡಾದ ಮೇಲೆ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ರವರು ಇದರಿಂದ ಕೇವಲ ಪುತ್ತೂರು ಮಾತ್ರವಲ್ಲದೆ ಇಡೀ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಕಾಸರಗೋಡು ಹೀಗೆ ಸುತ್ತಮುತ್ತಲಿನ ಎಲ್ಲಾ ಜಿಲ್ಲೆಯ ಜನರ ಅದರಲ್ಲೂ ಯುವಕರ ಮನಸ್ಸು ಗೆದ್ದಿದ್ದಾರೆ ಎಂಬುವುದಕ್ಕೆ ಅವರ ಹೆಸರಿನಲ್ಲಿ ರಚಿತವಾದ ನೂರಾರು ಅಭಿಮಾನಿ ಬಳಗಗಳೇ ಸಾಕ್ಷಿ. ಒಂದು ರೀತಿಯಲ್ಲಿ ಹೇಳಬೇಕಾದರೆ ಇಂಥಹ ಅಭಿಮಾನಿ ಬಳಗವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವನೇ ಒಬ್ಬ ಸಿನಿಮಾ ನಟನಿಗೂ ಇರಲಿಕ್ಕಿಲ್ಲ. 

 

Do you Love Music? Then This game is for you.

 

ಸದ್ಯ ದಿನದಿಂದ ದಿನಕ್ಕೆ ತನ್ನ ಅಭಿಮಾನಿಗಳನ್ನು ಮತ್ತು ಅಭಿಮಾನಿ ಸಂಘವನ್ನು ಹೆಚ್ಚಿಸುತ್ತಲೇ ಹೋಗುತ್ತಿರುವ ಅರುಣ್ ಕುಮಾರ್ ಪುತ್ತಿಲ ರವರಿಗೆ ಮುಂದಿನ 2024 ರ ಎಂಪಿ ಚುನಾವಣೆಗೆ ಬಿಜೆಪಿ ಯಿಂದ ಟಿಕೆಟ್ ಸಿಗುತ್ತಾ ಎಂಬ ಪ್ರಶ್ನೆ ಎಲ್ಲರ ಬಾಯಲ್ಲಿ ಇದೆ. ಅಲ್ಲದೆ ಪುತ್ತಿಲ ರ ಪ್ರತಿಯೊಬ್ಬ ಅಭಿಮಾನಿಯೂ ಸಹ ಬರುವ ಎಂಪಿ ಚುನಾವಣೆಯ ಟಿಕೆಟ್ ಅರುಣ್ ಕುಮಾರ್ ಪುತ್ತಿಲ ರಿಗೆ ನೀಡಬೇಕೆಂದು ಬಿಜೆಪಿ ಗೆ ಆಗ್ರಹ ಮಾಡುತ್ತಿದ್ದಾರೆ. ಇದೇ ಉದ್ದೇಶಕ್ಕಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪುತ್ತಿಲ ಫಾರ್ ಎಂಪಿ ಎಂಬ ಗ್ರೂಪ್ ಗಳು ರಚಿತವಾಗಿವೆ. 100 ಅಧಿಕ ಪುತ್ತಿಲ ಪರವಾದ ವಾಟ್ಸಾಪ್ ಗ್ರೂಪ್ ಗಳು ರಚಿತವಾಗಿದ್ದು, ಈಗಾಗಲೇ ಸುಮಾರು 15000 ಮಂದಿ ಈ ಗ್ರೂಪ್ ಗಳಿಗೆ ಸೇರಿಕೊಂಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಪುತ್ತಿಲ ಪರವಾದ ಅಭಿಯಾನ ಆರಂಭಿಸಿದ್ದಾರೆ. 

 

–>ಮೊಬೈಲ್ ನಲ್ಲಿಯೇ ಕೇರಳ ಲಾಟರಿ ಟಿಕೆಟ್ ಖರೀದಿಸಿ – ಬಹುಮಾನ ಗೆಲ್ಲಿ<–

 

ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಅರುಣ್ ಕುಮಾರ್ ಪುತ್ತಿಲ ತಮ್ಮ ಹೊಸ ಸಂಘಟನೆ ಪುತ್ತಿಲ ಪರಿವಾರವನ್ನು ಹುಟ್ಟು ಹಾಕಿ ಹಿಂದೂ ಕಾರ್ಯಕರ್ತರ ಪಡೆಗೆ ಹೊಸ ನಾಂದಿ ಹಾಡಿದಲ್ಲದೆ, ಈ ಹೊಸ ಸಂಘಟನೆಗೆ ಸಿಕ್ಕ ಅಭೂತ ಪೂರ್ವ ಬೆಂಬಲವನ್ನು ಕಂಡು ಬಿಜೆಪಿ ಪಾಳಯದಲ್ಲಿ ನಡುಕ ಉಂಟಾಗಿದ್ದು ಸುಳ್ಳಲ್ಲ. ಇದೇ ಮುಂದಿನ ದಿನಗಳಲ್ಲಿ ಹೊಸ ಪಕ್ಷವಾಗಿ ಹೊರ ಹೊಮ್ಮಿ ರಾಜಕೀಯ ಇತಿಹಾಸದಲ್ಲಿ ಹೊಸ ಭಾಸ್ಯ ಬರೆಯಬಲ್ಲದು ಎಂಬುದು ಕೆಲವರ ಮಾತು. 

MP Election 2024
MP Election 2024

 

ಹಾಲಿ ಸಂಸದರೂ ಹಾಗು ಬಿಜೆಪಿ ರಾಜ್ಯಾಧ್ಯಕ್ಷರು ಆದ ನಳಿನ್ ಕುಮಾರ್ ಕಟೀಲ್ ರ ವಿರೋಧ ಕೂಗುಗಳು ಕೇಳಿಬರುತ್ತಿದ್ದು, ಮುಂದಿನ ಜನರಲ್ ಎಲೆಕ್ಷನ್ ಗೆ ಅವರನ್ನು ಅಭ್ಯರ್ಥಿ ಮಾಡಬಾರದೆಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ  ನಳಿನ್ ಕುಮಾರ್ ಕಟೀಲ್ ರವರೆ ಮುಂದಿನ ಎಂಪಿ ಅಭ್ಯರ್ಥಿಯೆಂದು ಬಿಜೆಪಿ ಘೋಷಿಸಿದ್ದಲ್ಲಿ, ಅರುಣ್ ಕುಮಾರ್ ಪುತ್ತಿಲ ನಿಸ್ಸಂದೇಹವಾಗಿ ಪಕ್ಷೇತರವಾಗಿ ಕಣಕ್ಕಿಳಿಯಲಿದ್ದಾರೆ ಎಂದು ಪುತ್ತಿಲ ಅಭಿಮಾನಿಗಳು ಹೇಳುತ್ತಿದ್ದಾರೆ. ಹಾಗಾಗಿ ಬಿಜೆಪಿಗೆ ಪುತ್ತೂರು ವಿಧಾನಸಭೆಯ ಚುನಾವಣೆಯ ರೀತಿ ಲೋಕಸಭಾ ಚೂಲಾವಣೆಯಲ್ಲೂ ಸವಾಲನ್ನು ಎದುರಿಸುವ ಆತಂಕ ಉಂಟಾಗಿದೆ. ಮತ್ತು ಅಭ್ಯರ್ಥಿಯ ಆಯ್ಕೆ ವಿಚಾರ ನುಂಗಲಾರದ ಕಡಲೆಯಂತಾಗಿದೆ. ಬಿಜೆಪಿ ಎಂಪಿ ಅಭ್ಯರ್ಥಿಯ ಆಯ್ಕೆಯಲ್ಲಿ ಎಡವಟ್ಟು ಮಾಡಿದಲ್ಲಿ, ಇಲ್ಲಿಯೂ ಸಹ ಬಿಸಿ  ಮುಟ್ಟಿಸುವ ಕೆಲಸ ಕಾರ್ಯಕರ್ತರು ಮಾಡುತ್ತಾರೆ ಎಂದರೆ ಅತಿಶಯೋಕ್ತಿಯಾಗದು. 

 

Keep your children away from dangerous radiation from Phone

 

ಸದ್ಯ ಎಂಪಿ ಅಭ್ಯರ್ಥಿ ರೆಸ್ ನಲ್ಲಿ ಕೆಲವು ಹೆಸರುಗಳು ಕೇಳಿ ಬರುತ್ತಿದ್ದು, ಅದರಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೆಸರೂ ಒಂದು. Captain Brijesh Chowta ರವರು ನಿವೃತ್ತ ಸೈನಿಕನಾಗಿದ್ದು ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಗೂರ್ಖಾ ರೆಜಿಮೆಂಟ್ ನಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರು ಕಂಬಳ ದ ರೂವಾರಿಯಾದ ಚೌಟ ರವರು ತುಳುನಾಡಿನ ಪ್ರತಿಯೊಬ್ಬರೂ ಪರಿಚಯ. 

 

ಸುಮಾರು 20 ಲಕ್ಷ ಮತದಾರರಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2024 ರ ಲೋಕಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಯಾರಿಗೆ ಒಲಿಯುತ್ತದೆ ಎಂದು ಕಾತುರದಿಂದ ಎಲ್ಲರೂ ಕಾಯುತ್ತಿದ್ದಾರೆ. ಪುತ್ತೂರಿಗೆ ಸೀಮಿತವಾಗಿದ್ದ ಪುತ್ತೂರಿಗೆ ಪುತ್ತಿಲ ಅಭಿಯಾನ ಈಗ  ತುಳುನಾಡಿಗೆ ಪುತ್ತಿಲ ಎಂಬ ಹೆಮ್ಮರವಾಗಿ ಬೆಳೆದು ನಿಂತಿದೆ. ತುಳುನಾಡಿನ ಜನರು ಬಿಟ್ಟಿ  ಭಾಗ್ಯಗಳಿಗೆ ಮರುಳಾಗುವ ಮೂರ್ಖರಲ್ಲ ಎಂದು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಸಾಬೀತು ಪಡಿಸಿದೆ ಮತ್ತು ಇಲ್ಲಿ ಕೇವಲ ಕಾರ್ಯಕರ್ತರ ದ್ವನಿ ಕೇಳುತ್ತದೆ ಎಂಬುದೂ ರುಜುವಾತಾಗಿದೆ.  ನಿಮ್ಮ ಪ್ರಕಾರ ಬಿಜೆಪಿ ಎಂಪಿ ಚುನಾವಣೆಯಲ್ಲಿ ಯಾರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಬೇಕು? ಮತ್ತು ನಮ್ಮ ಮುಂದಿನ ಸಂಸದರಾಗಬೇಕು? ನಿಮ್ಮ ಆಯ್ಕೆಯನ್ನು ಮೇಲೆ ಕೊಟ್ಟಿರುವ ವೋಟಿಂಗ್ ನಲ್ಲಿ ವೋಟ್ ಮಾಡುವ ಮುಖಾಂತರ ತಿಳಿಸಿ. ಹಾಗೇನೇ. ನಿಮ್ಮ ಎಲ್ಲಾ ಗ್ರೂಪ್ ಗಳಿಗೂ ಈ ವೋಟಿಂಗ್ ಅನ್ನು ಶೇರ್ ಮಾಡಿ. ಜನಾಭಿಪ್ರಾಯ ಯಾರ ಕಡೆ ಎಂಬುದನ್ನು ಅರಿಯೋಣ ಮತ್ತು ಮೋದಿಯನ್ನು ಪುನಃ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡುವ ನಮ್ಮ  ಸಂಸದ ಯಾರಾಗಬೇಕು ಎಂದು ತಿಳಿಯೋಣ. 

 

Read Also

35 thoughts on “ನಿಮ್ಮ ಪ್ರಕಾರ MP Election 2024 ರ ಬಿಜೆಪಿ ಅಭ್ಯರ್ಥಿ ಯಾರಾಗಬೇಕು? ವೋಟ್ ಮಾಡಿ”

  1. ಬಿಜೆಪಿಯ ಅಧಿಕೃತ ಅಭ್ಯರ್ಥಿ ಯಾರೇ ಆದರೂ ನಾನು ಬೆಂಬಲಿಸುತ್ತೇನೆ

    Reply

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio