ಅರುಣ್ ಕುಮಾರ್ ಪುತ್ತಿಲರಿಗೆ ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು. ಬೆಂಬಲಿಗರ ಆಕ್ರೋಶಕ್ಕೆ ಗುರಿ
ಪುತ್ತೂರು: ಚುನಾವಣೆ ಹತ್ತಿರ ಬರುತ್ತಲೇ ರಾಜಕೀಯ ನಾಯಕರುಗಳ ನಡುವೆ ಮಾತಿನ ಸಮರ ಹುಟ್ಟಿಕೊಳ್ಳುವುದು ಸಹಜ. ಮಾತಿನ ಭರದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗೋದು ಸಹಜ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕರಾದ ಸಂಜೀವ ಮಠಂದೂರು(Sanjeeva Matandoor) ರವರು ಇಂದು ಮಾಧ್ಯಮಕ್ಕೆ ಅಂತಹುವುದೇ ಒಂದು ಹೇಳಿಕೆ(Sanjeeva Matandoor Statement)ನೀಡಿ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂದು ಅವರು ಪುತ್ತೂರಿನಲ್ಲಿ ಮಾಧ್ಯಮದ ಜೊತೆ ಮಾತಾಡುತ್ತಿರಬೇಕಾದರೆ ”ಪುತ್ತೂರಿಗೆ ಪುತ್ತಿಲ” ಟ್ವಿಟ್ಟರ್ ಅಭಿಯಾನದ ಮತ್ತು ಪುತ್ತೂರಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಬರುತ್ತಿರುವ ಹಿನ್ನೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಅರುಣ್ ಕುಮಾರ್ ಪುತ್ತಿಲ(Arun Kumar Puttila) ಹೆಸರಿನಲ್ಲಿರುವ ಬ್ಯಾನರ್ ಕುರಿತು ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಾಸಕರು ”ಪ್ರಜಾ ಪ್ರಭುತ್ವ ದೇಶ ನಮ್ಮದು, ಇಲ್ಲಿ ಇಲ್ಲರಿಗೂ ಎಲ್ಲಾ ಅವಕಾಶಗಳು ಇದೆ. ಚುನಾವಣೆ ಬರುವಾಗ ಇನ್ನೂ ಹೆಚ್ಚು ಅಲಂಕಾರಕ್ಕೆ ಮೆರುಗು ಸಿಗುತ್ತದೆ. ಹೊಸ ಹೊಸ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ, ಮಳೆ ಬಂದಾಗ ಅಣಬೆ ಹುಟ್ಟಿಕೊಳ್ಳುತ್ತವೆ. ಅದು ಬಹಳ ಸಮಯ ಬಾಳಿಕೆ ಬರುವುದಿಲ್ಲ. ಯಾರೇ ಬ್ಯಾನರ್ ಹಾಕಲಿ ಯಾರೇ ಟ್ವಿಟ್ಟರ್ ಅಭಿಯಾನ ಮಾಡಲಿ ಬಿಜೆಪಿ ಅದನ್ನು ಸ್ವಾಗತಿಸುತ್ತದೆ” ಎಂದು ನಗುತ್ತಲೇ ಟಾಂಗ್ ಕೊಟ್ಟರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಅರುಣ್ ಕುಮಾರ್ ಪುತ್ತಿಲ ರವರ ಅಭಿಮಾನಿಗಳ ಆಕ್ರೋಶಕ್ಕೆ ಸಂಜೀವ ಮಠಂದೂರು ರವರು ಕಾರಣರಾಗಿದ್ದಾರೆ. ಪುತ್ತಿಲ ರವರನ್ನು ಅಣಬೆಗೆ ಹೋಲಿಸಿ ಮಾತಾಡಿದ ಸಂಜೀವ ಮಠಂದೂರುರವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ವೈರಲ್ ಆಗುತ್ತಿವೆ. ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಕುತೂಹಲ ತಾರಕ್ಕಕ್ಕೇರಿದ್ದು, ನಾಯಕರುಗಳ ಒಂದೊಂದು ಹೇಳಿಕೆಗಳು ಇಲ್ಲಿನ ಮತದಾರರಿಗೆ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುವುದು ನಿಜ.
ಇದನ್ನೂ ಓದಿ:
- Actor Aravind Bolar Accident: ತುಳು ಚಿತ್ರರಂಗ ಹಾಸ್ಯ ಕಲಾವಿದ ಅರವಿಂದ ಬೋಳಾರವರಿಗೆ ರಸ್ತೆ ಅಪಘಾತ, ಆಸ್ಪತ್ರೆಗೆ ದಾಖಲು
- Best Free Video Editing Apps For Phones, Edit Video and Make Money
- List of Schemes announced by Narendra Modi Government in India
- Secret Method to Lose weight and Naturally | 100% Free Keto Method
- F2 movies Free movie streaming site | f2movies alternative
- ಮಧ್ಯಮ ವರ್ಗಕ್ಕೆ ಮತ್ತು ದೇಶದ ಸುರಕ್ಷತೆಗೆ ಬಂಪರ್ ಕೊಡುಗೆ, ಮೋದಿ 2.0 ಸರ್ಕಾರದ ಕೊನೆಯ ಪೂರ್ಣ ಬಜೆಟ್
12 thoughts on “ಅರುಣ್ ಕುಮಾರ್ ಪುತ್ತಿಲರಿಗೆ ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು”