ಪೆಟ್ಟು ಕೊಡುವ ಲಾಠಿಯಲ್ಲೇ ಇಲ್ಲೊಬ್ಬ ಪೊಲೀಸ್ ಕೊಳಲು ನುಡಿಸಿದ ಅಪರೂಪದ ವಿಡಿಯೋ ವೈರಲ್
ನೀವು ಗನ್ ಹಿಡಿದು ಖಡಕ್ಕಾಗಿ ನಿಂತಿರುವ ಪೊಲೀಸರನ್ನು ನೋಡಿರಬಹುದು. ಲಾಠಿ ಹಿಡಿದು ಕೋರೋಣ ಸಮಯದಲ್ಲಿ ಹೊಡಿ ಬಡಿ ಎಂದು ಅಟ್ಟಾಡಿಸಿದ ಪೊಲೀಸರನ್ನು ನೋಡಿರಬಹುದು. ಲಾಠಿಯಿಂದ ಮೂರೂ ಲೋಕ ತೋರಿಸಿ ಕಳ್ಳ ಖದೀಮರ ಬೆಂಡೆತ್ತಿದ ಪೊಲೀಸರನ್ನು ನೋಡಿರಬಹುದು. ಆದರೆ ಅದೇ ಲಾಠಿಯಿಂದ ಸುಸ್ವರವನ್ನು ನುಡಿಸಿ ನಾದವನ್ನು ಉಣಬಡಿಸಿದ ಪೊಲೀಸನ್ನು ನೋಡಿದ್ದೀರಾ?
ಹೌದು ಇತ್ತೀಚಿಗೆ ಒಂದು ವೈರಲ್ ಆದ ವಿಡಿಯೋದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ತನ್ನ ಲಾಠಿಯ ರುಚಿಯನ್ನು ವೀಕ್ಷಕರಿಗೆ ತೋರಿಸಿ ಎಲ್ಲರನ್ನು ದಿಗ್ಬ್ರಾಂತರನ್ನಾಗಿಸಿದ್ದಾರೆ. ಆದರೆ ಅದು ಲಾಠಿಯ ಏಟಿನ ರುಚಿ ಅಲ್ಲ ಬದಲಾಗಿ ತನ್ನ ಲಾಠಿಯನ್ನೇ ಕೊಳಲನ್ನಾಗಿಸಿ ಅದನ್ನು ನುಡಿಸಿ ಸಂಗೀತ ರುಚಿಯನ್ನು ಉಣ ಬಡಿಸಿದ್ದಾರೆ.
ಕಲೆ ಅನ್ನೋದು ಯಾರ ಅಪ್ಪನ ಸೊತ್ತು ಅಲ್ಲ. ಹಾಗೇನೇ ಅದೇ ಸಮಯ ಅದೇ ದಿನ ಅದೇ ವಸ್ತು ಅನ್ನೋದು ಇಲ್ಲ. ಒಂದು ಸಣ್ಣ ಕಲ್ಲಿನಲ್ಲೂ ಸಂಗೀತ ಅಡಗಿರಬಹುದು. ಅದೇ ರೀತಿ ಈ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಲಾಠಿಯನ್ನೇ ಕೊಳಲನ್ನಾಗಿಸಿ, ಅಂದರೆ ಲಾಠಿ ರೀತಿ ಇರುವ ಮತ್ತು ಲಾಠಿಯಷ್ಟೇ ಗಟ್ಟಿ ಇರುವ ಒಂದು ಕೋಲು ಅಥವಾ ವಸ್ತುವಿನಿಂದ ಕೊಳಲು ತಯಾರಿಸಿ ತನ್ನ ಕೆಲಸದ ಅವಧಿಯಲ್ಲಿ ಸಮಯಸಿಕ್ಕಾಗೆಲ್ಲ ಈ ಕೊಳಲನ್ನು ನುಡಿಸಿ ತಾನೂ ಆನಂದ ಪಟ್ಟು ಉಳಿದವರಿಗೂ ಮನ ರಂಜಿಸುತ್ತಿದ್ದರು.
ಈ ಪೊಲೀಸ್ ಅಧಿಕಾರಿ ಕೊಳಲು ನುಡಿಸುವ ವಿಡಿಯೋದ ಲಿಂಕ್ ಇಲ್ಲಿ ಕೆಳಗೆ ನೀಡಲಾಗಿದೆ. ನೋಡಿ ಆನಂದಿಸಿ. ಮತ್ತು ನಿಮಗೆ ಇಷ್ಟ ಆಗಿದ್ದಲ್ಲಿ ಈ ಅಪರೂಪದ ವಿಷಯವನ್ನು ನಿಮ್ಮ ಆತ್ಮೀಯರೊಂದಿಗೆ ಶೇರ್ ಮಾಡಿಕೊಳ್ಳಿ.
Read Also
- ಪುತ್ತೂರಿನಲ್ಲಿ ಬರುವ ವಿಧಾನಸಭಾ ಚುನಾವಣೆಗೆ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ.
- ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ
Thanks for sharing, very pleasant music.