ಮೋದಿಗೆ ಬಿಸಿ ಮುಟ್ಟಿಸಲು ಹೊರಟ ಬಿಬಿಸಿಗೆ ಐಟಿ ಬಿಸಿ!

IT Raid to BBC: ಮೋದಿಗೆ ಬಿಸಿ ಮುಟ್ಟಿಸಲು ಹೊರಟ ಬಿಬಿಸಿಗೆ ಐಟಿ ಬಿಸಿ!

IT Raid to BBC: ಇತ್ತೀಚಿಗೆ BBC ಒಂದು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು ಮತ್ತು ಕೇಂದ್ರ ಮತ್ತು ಬಿಜೆಪಿ ಪಲಾಯದವರ ಕೆಂಗಣ್ಣಿಗೆ ಗುರಿಯಾಗಿತ್ತು. ಶ್ರೀ ನರೇಂದ್ರ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಉಂಟಾದ ಕೋಮು ಗಲಭೆಯ ಕುರಿತಾದ ಸಾಕ್ಷ್ಯಚಿತ್ರ ‘ಇಂಡಿಯಾ : ದಿ ಮೋದಿ ಕ್ವಶ್ಚನ್’ (India: The Modi Question) ಅನ್ನು BBC ಬಿಡುಗಡೆ ಮಾಡಿತ್ತು. ಇದರಿಂದ ಸಾಕಷ್ಟು ವಿವಾದಗಳು, ಪರ ವಿರೋಧ ಚರ್ಚೆಗಳು ಹುಟ್ಟಿಕೊಂಡಿತು. ಬಹುದೊಡ್ಡ ವಿವಾದಕ್ಕೂ ಕಾರಣವಾಗಿ ಪ್ರತಿಭಟನೆಗಳೂ ನಡೆದವು. 

IT Raid to BBC:
IT Raid to BBC:

 

ಇದೀಗ BBC ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಏಕಕಾಲಕ್ಕೆ ವಿವಿಧ ಕಡೆ ದಾಳಿ ನಡೆಸಿದ್ದಾರೆ ಎಂದು ವರದಿ ಬಂದಿವೆ. ಈ ಬೆಳವಣಿಗೆ ಇನ್ನೊಂದು ರಾಜಕೀಯ ಮಾತಿನ ಸಮರಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರತಿಪಕ್ಷಗಳು ಇದೊಂದು ರಾಜಕೀಯ ಕುತಂತ್ರ ಮತ್ತು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆಯಾದಂತಿದೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ದಾಳಿಯು ಏಕಕಾಲದಲ್ಲಿ ಮುಂಬೈ ಮತ್ತು ದೆಹಲಿಯ ಕಚೇರಿ ಮೇಲೆ ನಡೆದಿದೆ. 

 

BBC ನೌಕರರ ಮೊಬೈಲ್ ಫೋನ್ ಗಳನ್ನೂ, ಲ್ಯಾಪ್ ಟಾಪ್ ಗಳನ್ನೂ ಮತ್ತು ಲೆಕ್ಕ ಪಾತ್ರಕ್ಕೆ ಸಂಬಂದಿಸಿದ ಕೆಲವು ಧಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆಗೆ ಸಂಬಂಧ ಪಟ್ಟ ಅಕ್ರಮಗಳಿಗೆ ಸಂಬಂಧಿಸಿದ ಆರೋಪದ ಹಿನ್ನೆಲೆಯಲ್ಲಿ BBC ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.  ಪರಿಶೀಲನೆಗೆ BBC ಸ್ಪಂದಿಸುತ್ತಿದೆ ಎಂದು ತಿಳಿಸಿದೆ. ತನಿಖೆ ಸಲುವಾಗಿ ಮುಂಬೈ ಮತ್ತು ದೆಹಲಿ BBC ಕಚೇರಿಗೆ ಬೀಗ ಹಾಕಿದ್ದು, ಪರಿಶೀಲನೆ ನಡೆಯುವವರೆಗೂ ಮುಂದುವರಿಯುವುದು ಎಂದು ಇಲಾಖೆ ಹೇಳಿದೆ. ಇದರ ಮಧ್ಯದಲ್ಲಿ BBC ಯು ತನ್ನ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿದೆ.  

 

ಆದರೆ ಇದು ಯಾವುದೇ ದಾಳಿಯಲ್ಲ, ಕೇವಲ ಪರಿಶೀಲನೆ ಅಷ್ಟೇ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.  ಕೆಲವು ವಿಚಾರಗಳ ಬಗ್ಗೆ ಮತ್ತು ದಾಖಲೆಗಳ ಸ್ಪಷ್ಟನೆ ಬೇಕಾಗಿರುವುದರಿಂದ ಐಟಿ ಅಧಿಕಾರಿಗಳು BBC ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ BBC ಗೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಲೆಕ್ಕ ಪತ್ರಗಳ ಮತ್ತು ಬ್ಯಾಲೆನ್ಸ್ ಪುಸ್ತಕದ ಬಗ್ಗೆ ವಿವರ ನೀಡುವಂತೆ ಸಿಐಚನೆ ನೀಡಲಾಗಿದೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.  

 

Click to Join Whatsapp Group

 

Read Also

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ