ಅಂಜುಶ್ರೀ ಪಾರ್ವತಿ ಸಾವಿಗೆ ಇಲಿ ವಿಷ ಸೇವೆನಯೇ ಕಾರಣ, ಬಿರಿಯಾನಿ ಅಲ್ಲ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢ


ಅಂಜುಶ್ರೀ ಪಾರ್ವತಿ ಸಾವಿಗೆ ಇಲಿ ವಿಷ ಸೇವೆನಯೇ ಕಾರಣ, ಬಿರಿಯಾನಿ ಅಲ್ಲ ಎಂದು ಬಂದ ಮರಣೋತ್ತರ ಪರೀಕ್ಷೆಯ 

Anjushree Parvati Death case: ಮಂಜೇಶ್ವರ ಗೋವಿಂದ ಪೈ ಕಾಲೇಜು ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿ(Anjushree Parvati) ಇತ್ತೀಚಿಗೆ ಒಂದು ಹೋಟೆಲ್ ನಿಂದ ಪಾರ್ಸೆಲ್ ತರಿಸಿ ತಿಂದ ಬಿರಿಯಾನಿಯಿಂದ ಸಾವನ್ನಪ್ಪಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಆದರೆ ಆಕೆಯ ಸಾವಿಗೆ ಇಲಿ ವಿಷ ಸೇವನೆಯೇ ಕಾರಣ ಎಂದು ರಾಸಾಯನಿಕ ಪರೀಕ್ಷೆಗಳು ದೃಢಪಟ್ಟಿವೆ. 

Anjushree Parvati Death case
Anjushree Parvati Death case

 

ಕಾಸರಗೋಡು ಸಮೀಪದ ಪೆರುಂಬಳದ ಅಂಜುಶ್ರೀ ಪಾರ್ವತಿ ಅವರು ಡಿಸೆಂಬರ್ 31 ರಂದು ಕಾಸರಗೋಡಿನ ರೊಮ್ಯಾನ್ಸಿಯಾ ಎಂಬ ರೆಸ್ಟೋರೆಂಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಿದ ‘ಕುಜಿಮಂತಿ ಬಿರಿಯಾನಿ’ ತಿಂದಿದ್ದರು.  ನಂತರ ಆಕೆ ಸಾವನ್ನಪ್ಪಿದ್ದಳು. ಅಂಜುಶ್ರೀ ಪಾರ್ವತಿ ಅವರ ಹೆತ್ತವರು ಕಾಸರಗೋಡಿನ ರೋಮ್ಯಾನ್ಸಿಯಾ ಎಂಬ ಹೋಟೆಲ್ ವಿರುದ್ಧ ಕೇಸ್ ದಾಖಲಿಸಿದ್ದರು. ಮತ್ತು ಹೋಟೆಲ್ ನ ವಿರುದ್ಧ ತನಿಖೆಯು ಆರಂಭಗೊಂಡಿತ್ತು. 

 

ತನಿಖೆ ವೇಳೆ ಮೃತರ ನಿವಾಸದಲ್ಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ನಂತರ ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯು ಅಂಜುಶ್ರೀ ಪಾರ್ವತಿ((Anjushree Parvati Death case) ಇಲಿ ಪಾಷಾಣ ಸೇವಿಸಿ ಮೃತಪಟ್ಟಿದ್ದಾಳೆ ಎಂದು ದೃಢಪಡಿಸಿದೆ. ಅಂಜುಶ್ರೀ ಪಾರ್ವತೀ ಜನವರಿ 7 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೋಝಿಕೋಡ್‌ನ ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ ಅಂಜುಶ್ರೀ ಸಾವಿಗೆ ಇಲಿ ವಿಷ ಸೇವನೆಯೇ ಕಾರಣ ಎಂದು ದೃಢಪಟ್ಟಿದೆ. ವರದಿಯು ತನಿಖಾ ತಂಡಕ್ಕೆ ತಲುಪಿದೆ. 

 

ಸದ್ಯ ಆಹಾರವು ಆಕೆಯ ಸಾವಿಗೆ ಕಾರಣವಾಗಿಲ್ಲ ಎಂದು ತನಿಖೆಯ ನಂತರ ಈಗ ತಿಳಿದುಬಂದಿದೆ. ಆಕೆಯ ದೇಹಕ್ಕೆ ಸೇರಿದ ವಿಷಕಾರಿ ಅಂಶವೇ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ. ಹಾಗಾಗಿ ಅಂಜುಶ್ರೀ ಅವರ ಆಂತರಿಕ ಅಂಗಗಳನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಲಾಗಿದೆ.

 

 

Click to Join Whatsapp Group

 

Read Also

 


Leave a Comment

x
error

Enjoy this blog? Please spread the word :)

Why Manish Sisodia Was Arrested, CBI Explained