ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ 

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ 

 

Loading poll ...

 

Mangalore North Constituency MLA : 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಹಿಂದೂ ಮುಖಂಡ, ಸಾಮಾಜ ಸೇವಕ ಸತ್ಯಜಿತ್ ಸುರತ್ಕಲ್(Satyajit Suratkal) ರಿಗೆ ಹೈಕಮಾಂಡ್ ಟಿಕೇಟ್ ನೀಡದೆ, ಹೊಸ ಮುಖವಾದ ಯುವ ಉದ್ಯಮಿ ಮತ್ತು ವೈದ್ಯರಾದ ಡಾ. ಭರತ್ ಶೆಟ್ಟಿ ವೈ ರಿಗೆ ಟಿಕೆಟ್ ನೀಡಿ ಇವರಿಗೆ ತೀವ್ರ ಮುಖಭಂಗ ಆಗುವಂತೆ ಮಾಡಿತ್ತು. ಇದರಿಂದ ಸತ್ಯಜಿತ್ ಸುರತ್ಕಲ್(Satyajit Suratkal) ಅವರ ಅಪಾರ ಅಭಿಮಾನಿ ಬಳಗಕ್ಕೂ ಮತ್ತು ಸ್ಥಳೀಯ ಮತದಾರರಿಗೂ ಅತಿಯಾದ ನೋವು ಉಂಟಾಗಿತ್ತು.  ನಂತರ ಬಂಡಾಯವೆದ್ದ ಸತ್ಯಜಿತ್ ಸುರತ್ಕಲ್ ಮತ್ತು ಅವರ ಅಭಿಮಾನಿ ಬಳಗ ಪಕ್ಷೇತರವಾಗಿ ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿತ್ತಾದರೂ ಹೈಕಮಾಂಡ್ ನ ಒತ್ತಡಕ್ಕೆ ಮತ್ತು ಬಿಜೆಪಿ ಯ ಹಿತ ದೃಷ್ಟಿಯಿಂದ ಹಿಂಜರಿಯಬೇಕಾಯಿತು. 

 

ಅಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ದ ಶಾಸಕರಾಗಿ ಆಯ್ಕೆಯಾದ ಡಾ. ಭರತ್ ಶೆಟ್ಟಿ ವೈ(Dr. Bharath Shetty Y) ಜನರಿಗೆ ತೀರಾ ಹೊಸ ಮುಖವಾಗಿತ್ತು. ಆದರೆ ಕ್ರಮೇಣ ಇವರ ಕಾರ್ಯ ವೈಖರಿ ಜನರಿಗೆ ಹಿಡಿಸಿದ್ದಂತೂ ನಿಜ. ಮಾತು ಕಮ್ಮಿ ಕೆಲಸ ಜಾಸ್ತಿ ಎಂಬ ಧ್ಯೇಯ ವಾಕ್ಯದಲ್ಲಿ  ನಡೆಯುವ ಡಾ. ಭರತ್ ಶೆಟ್ಟಿ ಅದೇ ರೀತಿ ಯಾವುದೇ ಕಾಂಟ್ರವರ್ಸಿ ಗೆ ಸಿಲುಕದೆ ತಮ್ಮ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. 

 

ಈಗ 2023 ರ ವಿಧಾನಸಭಾ ಚುನಾವಣೆ ಸಮೀಪಿಸಿದ್ದು ಈ ಸಲ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ದ ಟಿಕೆಟ್ ಯಾರಿಗೆ ಕೊಡುತ್ತಾರೆ ಮತ್ತು ಈ ಸಲ ಯಾರು ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಕುತೂಹಲ ಮೂಡಿದೆ. ಸತ್ಯಜಿತ್ ಸುರತ್ಕಲ್ ಸ್ಪರ್ಧಿಸುವ ಬಗ್ಗೆ ಯಾವುದೇ ಹೇಳಿಕೆ ನೀಡಿದ್ದರು, ಅವರ ಅಭಿಮಾನಿ ಬಳಗ ಈ ಸಲ ಸತ್ಯಜೀತ್ ಸುರತ್ಕಲ್ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

 

ಇನ್ನೂ ಹೈಕಮಾಂಡ್ ಯಾರಿಗೆ ಈ ಸಲ ಮಂಗಳೂರು ಉತ್ತರದಲ್ಲಿ ಮನೆ ಹಾಕುತ್ತದೆ ಎಂದು ಕಾಡು ನೋಡಬೇಕಿದೆ. ನಿಮ್ಮ ನಿಮ್ಮ ಅಭಿಪ್ರಾಯವನ್ನು ಇಲ್ಲಿ ವೋಟ್ ಮಾಡುವ ಮುಖಾಂತರ ತಿಳಿಸಿ. 

 

Click to Join Whatsapp Group

 

Read Also

Loading poll ...

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio