ಹಳ್ಳಿ ಹುಡುಗ ಹಿಡಿದ ಕ್ಯಾಚ್ ಸಚಿನ್ ತೆಂಡೂಲ್ಕರ್ ಸಹ ಬೆರಗಾಗುವಂತೆ ಮಾಡಿದೆ. ವೈರಲ್ ವಿಡಿಯೋ ನೀವು ಒಮ್ಮೆ ನೋಡಿ.  

ಹಳ್ಳಿ ಹುಡುಗ ಹಿಡಿದ ಕ್ಯಾಚ್ ಸಚಿನ್ ತೆಂಡೂಲ್ಕರ್ ಸಹ ಬೆರಗಾಗುವಂತೆ ಮಾಡಿದೆ. ವೈರಲ್ ವಿಡಿಯೋ ನೀವು ಒಮ್ಮೆ ನೋಡಿ.  

 

Viral catch Video: ಕರ್ನಾಟಕ ಬೆಳಗಾವಿಯ ಹಳ್ಳಿಯೊಂದರಲ್ಲಿ ಆಡಿದ ಆಟ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಹೌದು ಇತ್ತೀಚೆಗೆ ಹಳ್ಳಿಯೊಂದರಲ್ಲಿ ಆಡಿದ ಕ್ರಿಕೆಟ್ ಆಟದಲ್ಲಿ ಓರ್ವ ಕ್ರಿಕೆಟಿಗ ಅದ್ಭುತ ಕ್ಯಾಚ್ ಹಿಡಿದ ವಿಡಿಯೋ ಸಾಕಷ್ಟು ವೈರಲ್ ಆಯಿತು. ಅದನ್ನು ಜಾಗತಿಕ ಮಟ್ಟದ ಕ್ರಿಕೆಟ್ ಆಟಗಾರರು ಸಹ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಶಂಸೆ ವ್ಯಕಪಡಿಸಿದರು. 

 

ಕರ್ನಾಟಕದ ಬೆಳಗಾವಿಯ ಒಂದು ಹಳ್ಳಿಯಲ್ಲಿ ಶನಿವಾರ ನಡೆದ ಟೆನಿಸ್ ಬಾಲ್(ಸಾಮಾನ್ಯವಾಗಿ ಹಳ್ಳಿಯಲ್ಲಿ ಕ್ರಿಕೆಟ್ ಆಡುವುದು ಟೆನಿಸ್ ಬಾಲ್ ಬಳಸಿಕೊಂಡು) ಕ್ರಿಕೆಟ್ ಪಂದ್ಯದಲ್ಲಿ ಬೌಲರ್ ಹಾಕಿದ ಬಾಲ್ ಗೆ ದಾಂಡಿಗ ಅದ್ಭುತವಾಗಿ ಹೊಡೆದು ಚೆಂಡನ್ನು ಬೌಂಡರಿ ಲೈನ್ ನ ಆಚೆಗೆ ಅಟ್ಟುತ್ತಾನೆ. ಆದರೆ ಈ ಚೆಂಡನ್ನು ಫೀಲ್ಡರ್ ಅಮೋಘವಾಗಿ ಬೌಂಡರಿ ಲೈನ್ ನಲ್ಲಿ ಕ್ಯಾಚ್ ಹಿಡಿದ ವೀಡಿಯೋ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. 

 

ಆ ಕ್ರಿಕೆಟಿಗನ ಹೆಸರು ಕಿರಣ್ ತಾರಾಲೇಕರ್(Kiran Taralekar). ಈತ ಹಿಡಿದ ಬೌಂಡರಿ ಕ್ಯಾಚ್ ಅನ್ನು ಸಾಮಾಜಿಕ ಜಾಲತಾಣದಲ್ಲಿ “ಸಾರ್ವಕಾಲಿಕ ಶ್ರೇಷ್ಠ ಕ್ಯಾಚ್” ಎಂದು ಪ್ರಶಂಸಿಸಲಾಗುತ್ತಿದೆ. ಇದಲ್ಲದೆ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ಇಂಗ್ಲಿಷ್ ಕ್ರಿಕೆಟಿಗ ಮೈಕೆಲ್ ವಾಘನ್ ಅವರ ಗಮನವನ್ನು ಸೆಳೆದಿದೆ, ಜೊತೆಗೆ ನ್ಯೂಜಿಲೆಂಡ್ ಕ್ರಿಕೆಟಿಗ ಜಿಮ್ಮಿ ನೀಶಮ್ ಕಿರಣ್ ತಾರಳೇಕಾರ್ ಅವರ ಕ್ಯಾಚ್ ಅನ್ನು ಪ್ರಶಂಶಿಸಿದ್ದಾರೆ. 

 

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಿರಣ್ ತಾರಾಲೇಕರ್ ಗಾಳಿಯಲ್ಲಿ ಜಿಗಿದು ಕಾಲಲ್ಲಿ ಫುಟ್ಬಾಲ್ ರೀತಿ ಕಿಕ್ ಕೊಟ್ಟು ಬೌಂಡರಿ ದಾಟಿದ ಚೆಂಡನ್ನು ಪುನಃ ಗ್ರೌಂಡ್ ಗೆ ಬರುವಂತೆ ಮಾಡುತ್ತಾರೆ. ಫೀಲ್ಡ್ ನಲ್ಲಿದ್ದ ಮತೊಬ್ಬ ಆ ಚೆಂಡನ್ನು ಹಿಡಿಯುತ್ತಾನೆ. ಅಂಪೈರ್ ಬ್ಯಾಟ್ಸಮನ್ ಅನ್ನು ಔಟ್ ಅಂದು ಘೋಷಿಸುತ್ತಾರೆ. ಬೌಂಡರಿ ಗೆರೆ ದಾಟುವ ಮುನ್ನ ಚೆಂಡನ್ನು ಕೈಯಲ್ಲಿ ಎತ್ತಿದ ಕಿರಣ್ ಅವರು ತಕ್ಷಣ ಕಾಲು ನೆಲಕ್ಕೆ ಉರುವ ಮುನ್ನ ಮತ್ತೆ ಗಾಳಿಯಲ್ಲಿ ಎಸೆದು ಬೌಂಡರಿ ಲೈನ್ ದಾಟಿ ಸ್ವಲ್ಪ ಸಮಯ ತೆಗೆದುಕೊಂಡು ಬಹಳ ಆತ್ಮವಿಶ್ವಾಸದಿಂದ ಚೆಂಡನ್ನು ಫುಟ್‌ಬಾಲ್‌ನಂತೆ ಕಾಲಿನಿಂದ ಒದ್ದು ಗ್ರೌಂಡ್ ನ ಕಡೆ  ಕಳುಹಿಸುತ್ತಾರೆ. ನಂತರ ಚೆಂಡನ್ನು ಮತ್ತೊಬ್ಬ ಆಟಗಾರ ಕುನಾಲ್ ಕೊಂಡ ಎಂಬಾತ ಚೆಂಡನ್ನು ಕ್ಯಾಚ್ ಹಿಡಿಯುತ್ತಾರೆ. ಈ ವೈರಲ್ ವಿಡಿಯೋ ನ ಮೂಲ ಕ್ಲಿಪ್ ಅನ್ನು ಮೊದಲು ಸ್ಪೋರ್ಟ್ಸ್ ಆನ್ ಮತ್ತು ನಂತರ ಓಂಕಾರ್ ಮಂಕಮೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

 

ಈ ವೈರಲ್ ವಿಡಿಯೋ ವನ್ನು ಪುನಃ ಹಂಚಿಕೊಂಡ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್  “ನೀವು ಫುಟ್ಬಾಲ್ ಆಡಲು ತಿಳಿದಿರುವ ಹುಡುಗನನ್ನು ಕರೆತಂದಾಗ ಇದು ಸಂಭವಿಸುತ್ತದೆ” ಎಂದು ವಿಡಿಯೋದ ಜೊತೆ ಒಕ್ಕಣೆಯನ್ನು ಬರೆದಿದ್ದಾರೆ. ಹೀಗೆ ಇನ್ನು ಅನೇಕರು ತಮ್ಮ ತಮ್ಮ ಅಭಿಪ್ರಾಯ ಮತ್ತು ಪ್ರಸಂಶೆಗಳ ಮಹಾ ಪೂರವನ್ನು ಈ ವಿಡಿಯೋಗೆ ಮತ್ತು ಆಟಗಾರನ ಕೌಶಲ್ಯತೆಗೆ ತಿಳಿಸಿದ್ದಾರೆ. 

 

 

Click to Join Whatsapp Group

 

Read Also

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ