ಮನೆಯಿಂದಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ

ಮನೆಯಿಂದಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಿ

Apply for Grihajyothi Yojana: ಕರ್ನಾಟಕ ಸರಕಾರ ಘೋಷಿಸಿರುವ ಐದು ಗ್ಯಾರಂಟಿಗಳ ಪೈಕಿ ಒಂದಾದ ಗೃಹ ಜ್ಯೋತಿ ಯೋಜನೆಯ (Gruhajyothi Yojana) ಲಾಭ ಪಡೆಯಲು ಗ್ರಾಹಕರು ಸೇವಾ ಸಿಂಧು ಪೋರ್ಟಲ್(Seva Sindhu Portal) ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸರಕಾರ ತಿಳಿಸಿದೆ. ಜೂನ್ 18 ರಿಂದ ಆನ್ಲೈನ್ ನಲ್ಲಿ ಅಥವಾ ಜನ ಸೇವಾ ಕೇಂದ್ರದಲ್ಲಿ ಗೃಹ ಜ್ಯೋತಿ ಸ್ಕೀಮ್ ಗೆ ಅರ್ಜಿ ಸಲ್ಲಿಸಬಹುದು ಎಂದು ರಾಜ್ಯ ಸರಕಾರ ತಿಳಿಸಿದೆ. ಈಗಾಗಲೇ ”ಗೃಹ ಜ್ಯೋತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು?” ಎಂದುವುದನ್ನು ಗ್ರಾಹಕರು ಆನ್ಲೈನ್ ನಲ್ಲಿ ಹುಡುಕುತ್ತಿದ್ದಾರೆ. ಈ ಲೇಖನದಲ್ಲಿ ನಿಮಗೆ ಸೂಕ್ತ ಮಾಹಿತಿಯನ್ನು ನಾವು ಒದಗಿಸುತ್ತೇವೆ. 

Gruha jyothi Yojana ge ಅಪ್ಲೈ ಮಾಡಲು ನಿಮ್ಮಲ್ಲಿ ಆಧಾರ್ ಕಾರ್ಡ್ ಮತ್ತು ವಿದ್ಯುತ್ ಬಿಲ್ ಇದ್ದರೆ ಸಾಕು. ನೀವೇ ಮನೆಯಲ್ಲಿಯೇ ಕುಳಿತು ಗೃಹ ಜ್ಯೋತಿಗೆ(Apply for Griha jyothi Yojana) ಅರ್ಜಿ ಸಲ್ಲಿಸಬಹುದು. ಯಾವುದೇ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾಗಿಲ್ಲ. 

Apply for Grihajyothi Yojana
Apply for Grihajyothi Yojana

 

ಗೃಹಜ್ಯೋತಿ ಯೋಜನೆಗೆ ಹೇಗೆ ಅಪ್ಲೈ ಮಾಡುವುದು? How to Apply for Gruhajyothi Yojana?

ಸರಕಾರವು ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಲು ಸೇವಾ ಸಿಂಧು ಪೋರ್ಟಲ್(Apply Gruha Jyothi in SevaSindhu portal) ನಲ್ಲಿ ಅವಕಾಶ ಕಲ್ಪಿಸಿದೆ. ಗೃಹಜ್ಯೋತಿ ಗ್ರಾಹಕರು ಅರ್ಜಿ ಸಲ್ಲಿಸಲು ಸರಕಾರ ಒಂದು ಸಬ್ ಡೊಮೇನ್ ಅನ್ನು ರಚಿಸಿದ್ದಾರೆ. ಅದರ ಮುಖಾಂತರ ಗೃಹಜ್ಯೋತಿಗೆ ಮನೆಯಿಂದಲೇ ತಮ್ಮ ತಮ್ಮ ಮೊಬೈಲ್ ನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. 

Click to Join Whatsapp Group

ನಿಮ್ಮಲ್ಲಿ ಸ್ಮಾರ್ಟ್ ಫೋನ್ ಇಲ್ಲದಿದ್ದರೆ, ಜನ ಸೇವಾ ಕೇಂದ್ರದಲ್ಲೂ ಸಹ ನೀವು ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಬಹುದು. 

 

ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಲು ಹಂತ ಹಂತ ಮಾಹಿತಿಗಳು ಇಲ್ಲಿ ಕೊಡಲಾಗಿದೆ. 

  1. ಮೊದಲು sevasindhugs.karnataka.gov.in ಲಿಂಕ್ ಗೆ ಕ್ಲಿಕ್ ಮಾಡಿ. 
  2. ಗೃಹ ಜ್ಯೋತಿ’‘ ಯೋಜನೆಗೆ ಕ್ಲಿಕ್ ಮಾಡಿ. 
  3. ನಿಮ್ಮ ಇಷ್ಟದ ಭಾಷೆ ಆಯ್ಕೆ ಮಾಡಿ. 
  4. ಎಸ್ಕಾಂ ಹೆಸರನ್ನು ಸೆಲೆಕ್ಟ್ ಮಾಡಿ. 
  5. ಅಕೌಂಟ್ ಐಡಿ ಅಥವಾ ಕನೆಕ್ಷನ್ ಐಡಿ ಕಾಲಂ ನಲ್ಲಿ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ ಕನ್ಸೂಮರ್ ಐಡಿ ಯನ್ನು ನಮೂದಿಸಿ. 
  6. ನಂತರ ನೀವು ಯಜಮಾನ ಅಥವಾ ಬಾಡಿಗೆದಾರರೇ ಎಂದು ” Type of  occupancy” ಯಲ್ಲಿ ತಿಳಿಸಿ
  7. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. 
  8. ನಂತರ ಮೊಬೈಲ್ ನಂಬರ್ ಅನ್ನು ನಮೂದಿಸಿ. 
  9. ಘೋಷಣೆ ಗೆ  I Agree ಎಂದು ಟಿಕ್ ಮಾಡಿ 
  10. Captcha ವನ್ನು ಭರ್ತಿ ಮಾಡಿ. 
  11. ನಿಮ್ಮ ಮೊಬೈಲ್ ಗೆ OTP ಬರುತ್ತದೆ. ಅದನ್ನ ಇಲ್ಲಿ ನಮೂದಿಸಿ. 
  12. Submit ಗುಂಡಿ ಒತ್ತಿ. 

 

ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಏನು? Required document for Grihajyothi Yojana

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ವಿದ್ಯುತ್ ಬಳಕೆದಾರನ ಆಧಾರ್ ಕಾರ್ಡ್ ಮತ್ತು ಹಿಂದಿನ ವಿದ್ಯುತ್ ಬಿಲ್ ಇದ್ದಾರೆ ಸಾಕು. ಜೊತೆಗೆ ಒಟಿಪಿ ಪಡೆಯಲು ನಿಮ್ಮ ಬಳಿ ಮೊಬೈಲ್ ಇರಲಿ. ಆಧಾರ್ ಕಾರ್ಡ್ ನಂಬರ್ ಸಲ್ಲಿಸಿದ ನಂತರ ನಿಮ್ಮ ಆಧಾರ್ ದೃಢೀಕರಣ ಮಾಡಲು ಒಟಿಪಿ ಬೇಕಾಗುತ್ತದೆ. 

 

ಗೃಹ ಜ್ಯೋತಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?

ಕರ್ನಾಟಕ ಸರಕಾರದ ಗೃಹ ಜ್ಯೋತಿ ಯೋಜನೆಗೆ ಪ್ರತಿ ವಿದ್ಯುತ್  ಬಳಕೆದಾರರು ಸಹ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯಲ್ಲಿ ಓನರ್ ಮತ್ತು ಬಾಡಿಗೆದಾರರು ಎಂದು ನಮೂದಿಸಿದ್ದು, ಬಿಲ್ ಪಡೆಯುವ ಇಬ್ಬರೂ ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆದರೆ ಮನೆಯ ಪ್ರತಿಯೊಬ್ಬ ಸದಸ್ಯನೂ ಸಹ ಯೋಜನೆಗೆ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ. 

 

ಗೃಹ ಜ್ಯೋತಿಗೆ ಅರ್ಜಿ ಸಲ್ಲಸುವ ಲಿಂಕ್ ಯಾವುದು?

ವಿದ್ಯುತ್ ಬಳಕೆದಾರರು ಗೃಹ ಜ್ಯೋತಿ ಯೋಜನೆಗೆ ಈ ಕೆಳಗಿನ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು. 

 

ಅರ್ಜಿ ಸಲ್ಲಿಸುವ ಲಿಂಕ್ (Link)sevasindhugs.karnataka.gov.in

 

ಸೂಚನೆ: ಗೃಹ ಜ್ಯೋತಿ ಯೋಜನೆಗೆ ಒಮ್ಮೆಲೇ ಹೆಚ್ಚಿನ ಬಳಕೆದಾರರು ಅರ್ಜಿ ಸಲ್ಲಿಸುತ್ತಿರುವ ಕಾರಣ ಪೋರ್ಟಲ್ ನ ಸರ್ವರ್ ಸಮಸ್ಯೆಗೀಡಾಗಬಹುದು. ತಾಳ್ಮೆಯಿಂದ ಅರ್ಜಿ ಸಲ್ಲಿಸಿ. ಹಾಗು ಸರಕಾರ ಈ ಯೋಜನೆಗೆ ಸಂಭಂದ ಪಟ್ಟ ಪೋರ್ಟಲ್ ಅನ್ನು ಜನರ ಅನುಕೂಲಕ್ಕೆ ತಕ್ಕಂತೆ ಅಪ್ಡೇಟ್ ಮಾಡುತ್ತಿದ್ದು, ಅರ್ಜಿ ಸಲ್ಲಿಸುವ ವಿಧಾನ ಬದಲಾಗುತ್ತಿರಬಹುದು. 

Read Also: ನಿಮ್ಮ ಪ್ರಕಾರ MP Election 2024 ರ ಬಿಜೆಪಿ ಅಭ್ಯರ್ಥಿ ಯಾರಾಗಬೇಕು? ವೋಟ್ ಮಾಡಿ
Read Also: ಮದ್ಯಪಾನ ನೀಡಿ ಮಹಿಳೆಯರ ಮೇಲೆ ಅತ್ಯಾಚಾರ, ನಟನಿಗೆ 30 ವರ್ಷ ಜೈಲು

 

 

Leave a Comment