ಮದ್ಯಪಾನ ನೀಡಿ ಮಹಿಳೆಯರ ಮೇಲೆ ಅತ್ಯಾಚಾರ, ನಟನಿಗೆ 30 ವರ್ಷ ಜೈಲು
ಮೂವರೂ ಮಹಿಳೆಯರು, ಚರ್ಚ್ ಆಫ್ ಸೈಂಟಾಲಜಿಯ ಮಾಜಿ ಸದಸ್ಯರಾದ ನಟ ಡ್ಯಾನಿ ಮಾಸ್ಟರ್ಸನ್ 2001 ಮತ್ತು 2003 ರ ನಡುವೆ ಹಾಲಿವುಡ್ ಹಿಲ್ಸ್ ಮನೆಯಲ್ಲಿ ತಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಬುಧವಾರ, ಲಾಸ್ ಏಂಜಲೀಸ್ ನ್ಯಾಯಾಲಯದಲ್ಲಿ ಈ ವಿಷಯದ ವಿಚಾರಣೆ ನಡೆಯಿತು. ತೀರ್ಪುಗಾರರು ನಟನಿಗೆ ಶಿಕ್ಷೆ ವಿಧಿಸಿದ್ದಾರೆ.
ಹಾಲಿವುಡ್ ಇಂಡಸ್ಟ್ರಿಯ ಖ್ಯಾತ ನಟ ಡ್ಯಾನಿ ಮಾಸ್ಟರ್ಸನ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಈಗ ಸಾಬೀತಾಗಿದೆ. ಮಾಸ್ಟರ್ಸನ್ ತನ್ನ ಹಾಲಿವುಡ್ ಹಿಲ್ಸ್ ಮನೆಯಲ್ಲಿ ಮೂವರು ಮಹಿಳೆಯರ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಯಿತು. ಬುಧವಾರ ಲಾಸ್ ಏಂಜಲೀಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ತೀರ್ಪುಗಾರರು ಮೂವರು ಮಹಿಳೆಯರಲ್ಲಿ ಇಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ನಟನನ್ನು ತಪ್ಪಿತಸ್ಥರೆಂದು ಪರಿಗಣಿಸಿದ್ದಾರೆ.
ಸದ್ಯ ಹಾಲಿವುಡ್ ಇಂಡಸ್ಟ್ರಿಯ ಖ್ಯಾತ ನಟ ಡ್ಯಾನಿ ಮಾಸ್ಟರ್ಸನ್ ಗೆ ಶಿಕ್ಷೆ ಪ್ರಕಟವಾಗಲು ಬಾಕಿ ಇದ್ದು, ಸಂತ್ರಸ್ಥರ ಪರ ವಕೀಲರು ಈತನಿಗೆ 30 ವರ್ಷಗಳ ಜೈಲು ಶಿಕ್ಷೆ ನೀಡಬೇಕು ಎಂದು ತಾಕೀತು ಮಾಡಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಯ ನಂತರ, ನಟನನ್ನು ಕೈಕೋಳ ಹಾಕಿ ಹೊರಗೆ ಕರೆದೊಯ್ಯಲಾಯಿತು.