Garuda Gamana Vrishabha Vahana (GGVV) movie story ಸಿನಿಮಾದ ಕಥೆ
Table of Contents
ಆಧುನಿಕ ಮಂಗಳೂರಿನ ಕರಾವಳಿ ಮತ್ತು ಸಾಂಸ್ಕೃತಿಕ ನಗರಿ ಮಂಗಳಾದೇವಿಯ ಹಿನ್ನೆಲೆಯಲ್ಲಿ ಹೊಂದಿಸಲಾದ ಗರುಡ ಗಮನ ವೃಷಬ ವಾಹನವು ಇಬ್ಬರು ಪುರುಷರ ಕಥೆಯಾಗಿದೆ. ರಿಷಬ್ ಶೆಟ್ಟಿ ಹರಿಯಾಗಿ ಮತ್ತು ಅವನ ಅತ್ಮೀಯ ಗೆಳೆಯನಾಗಿ ರಾಜ್ ಬಿ ಶೆಟ್ಟಿ ಶಿವನಾಗಿ ಮಂಗಳೂರಿನ ಕುಖ್ಯಾತ ದರೋಡೆಕೋರರಾಗುತ್ತಾರೆ. ದುರಾಸೆ, ಅತಿಯಾಸೆ, ರಾಜಕೀಯ ಮತ್ತು ಅವರ ಅಹಂಕಾರಗಳಿಂದ ಅವರ ವರ್ಷಗಳ ಸ್ನೇಹ ಪರೀಕ್ಷೆಗೆ ಒಳಗಾಗುತ್ತದೆ.
ಬಾಲ್ಯದಲ್ಲೇ ಶಿವ ಮತ್ತು ಹರಿ ಇಬ್ಬರು ಜೀವದ ಗೆಳೆಯರಾಗುತ್ತಾರೆ. ಹರಿ ಶಾಂತ ಸ್ವಭಾವದವನಾದ ಶಿವ ರುದ್ರ ಸ್ವಭಾವದವನಾಗಿರುತ್ತನೆ. ಬಾಲ್ಯದಲ್ಲೇ ಹರಿ ಗೆ ಏನಾದರೂ ಕೆಡುಕುಂಟು ಮಾಡಿದರೆ ಹರಿ ಅವರ ಮೇಲೆ ಉರಿದು ಬೀಳುತ್ತಾನೆ. ಶಿವ ಹರಿಯ ಹೆಸರನ್ನು ತನ್ನ ಕೈಯಲ್ಲಿ ಹಚ್ಚೆ ಹಾಕಿಸಿಕೊಳ್ಳುವಷ್ಟು ಅಳವಾದ ಗೆಳೆತನ ಅವರದ್ದಾಗಿತ್ತು.
ಕಥೆ ಮಂಗಳೂರಿನ ರೌಡಿಸಂ ನ ಸುತ್ತ ಸುಳಿಯುತ್ತದೆ. ಶಿವನ ಕೈಯಲ್ಲಿ ಕೊಲೆಗಳು ನಡೆಯುತ್ತವೆ. ಕಥೆಯು ಮಂಗಳೂರಿನ ಒಂದು ಸಾಂಸ್ಕೃತಿಕ ನಗರಿ ಎಂದು ಎನಿಸಿಕೊಂಡಿರುವ ನಗರ ಮಂಗಳಾದೇವಿ ಯ ಸುತ್ತ ಸುತ್ತುತ್ತದೆ. ಸಿನಿಮಾ ನೋಡುಗರಿಗೆ ತಾವೇ ಮಂಗಳಾದೇವಿಯಲ್ಲಿ ಇದ್ದೇವೆಯೋ ಅನ್ನುವಷ್ಟು ಕಥೆ ನೈಜತೆಯನ್ನು ಕಟ್ಟಿ ಕೊಟ್ಟಿದೆ.
ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಮಂಗಳೂರಿನ ಪಿಲಿ ನಲಿಕೆ
ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಮಂಗಳೂರಿನ ಪಿಲಿ ನಲಿಕೆ. ತುಳುನಾಡಿನ ಸಾಂಪ್ರದಾಯಿಕ ಕುಣಿತವಾದ ಹುಲಿ ಕುಣಿತವು Garuda Gamana Vrishabha Vahana ಚಿತ್ರದ ವಿಶೇಷ ಆಕರ್ಷಣೆಯಾಗಿತ್ತು. ಚಿತ್ರದಲ್ಲಿ ರೋಚಕ ಭಾಗಗಳನ್ನು ರಾಜ್ ಬಿ ಶೆಟ್ಟಿ ಯಾವ ರೀತಿ ಡಿಸೈನ್ ಮಾಡಿದ್ದಾರೆ ಎಂದರೆ ಆ ದೃಶ್ಯವನ್ನು ನೋಡುವಾಗವಂತೂ ಮೈ ಮನ ರೋಮಾಂಚನಗೊಳ್ಳುತ್ತದೆ. ಕೆಲವೊಂದು ದೃಶ್ಯದಲ್ಲಿ ಹುಲಿ ಕುಣಿತದ ಹಿನ್ನೆಲೆ ಸಂಗೀತ ಕೊಟ್ಟಿದ್ದು ಅದು ಪ್ರೇಕ್ಷಕರನ್ನು ಇನ್ನಷ್ಟು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ.
ಒಬ್ಬ ಹೀರೋ ಆಗಬೇಕಾದರೆ ಕಟ್ಟು ಮಸ್ತಾದ ದೇಹ, ಜಿಮ್ ಗೆ ಹೋಗಿ ಬೈಸೆಪ್ಸ್ ಟ್ರೈಸೆಪ್ಸ್ ಸಿಕ್ಸ್ ಪ್ಯಾಕ್ ಬೆಳೆಸಿದ ದೃಢಕಾಯ, ಮತ್ತು ಸ್ಪುರ ದ್ರುಪಿ ಆಗಿರಬೇಕು ಎಂಬ ವಾಡಿಕೆಯನ್ನು Raj B Shetty ಅಕ್ಷರಸಹ ತುಳಿದು ನಿಂತಿದ್ದಾರೆ. ಹೀರೊ ಅನ್ನಿಸಿಕೊಳ್ಳಬೇಕಾದರೆ ಟ್ಯಾಲೆಂಟ್ ಇದ್ದರೆ ಸಾಕು, ನಟನಾ ಕೌಶಲ್ಯ ಇದ್ದರೆ ಸಾಕು, ಮೇಲಾಗಿ ನಟಿಸಬೇಕು ಎಂಬ ಹುಚ್ಚು ಭರವಸೆ ಇದ್ದರೆ ಸಾಕು ಎಂಬುದನ್ನು ರಾಜ್ ಬಿ ಶೆಟ್ಟಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ನಾಯಕಿ ಇಲ್ಲದ ಗರುಡ ಗಮನ ವೃಷಭ ವಾಹನ
ವಿಶೇಷ ಎಂದರೆ ಈ ಚಿತ್ರದಲ್ಲಿ ನಾಯಕಿ ಇಲ್ಲ. ನಾಯಕಿ ಇಲ್ಲದೆ, ಲವ್ ಹಾಡು ಇಲ್ಲದೆ ಮತ್ತು ಕ್ಯಾಬರೆ ದೃಶ್ಯ ಇಲ್ಲದೆ ಕೇವಲ ಕಥೆ ಮತ್ತು ಅದನ್ನು ಪ್ರಸ್ತುತ ಪಡಿಸಿದ ರೀತಿ ಮತ್ತು ಪ್ರತಿಯೊಂದು ಪಾತ್ರದ ಅದ್ಭುತ ನಟನೆಯು ಗರುಡ ಗಮನ ವೃಷಭ ವಾಹನ Garuda Gamana Vrishabha Vahana (GGVV) ಚಿತ್ರವನ್ನು ಗೆಲ್ಲುವಂತೆ ಮಾಡಿದೆ. ಕೇವಲ ದಷ್ಟ ಪುಷ್ಠ ವಾದ ನಾಯಕ ಗ್ಲಾಮರ್ ಆದ ನಾಯಕಿ, ಕೆಲವೊಂದು ಬಿಸಿ ಬಿಸಿ ದೃಶ್ಯ ಇದ್ದರೇನೇ ಒಂದು ಸಿನಿಮಾ ಗೆಲ್ಲೋದು ಎಂಬ ಜನರ ಮತ್ತು ನಿರ್ಮಾಪಕರ ಆ ತಪ್ಪು ಕಲ್ಪನೆಯನ್ನು ಗರುಡ ಗಮನ ವೃಷಭ ವಾಹನ ಚಿತ್ರ ಹುಸಿ ಮಾಡಿದೆ.
Garuda Gamana Vrishabha Vahana (GGVV) ಸಿನಿಮಾಕ್ಕೆ Film Companian ಸಂಸ್ಥೆಯ FCGold ಗೌರವ
ಗರುಡ ಗಮನ ವೃಷಭ ವಾಹನ Garuda Gamana Vrishabha Vahana (GGVV) ಸಿನಿಮಾವು ಫಿಲಂ ಕಂಪಾನಿಯನ್ ಸಂಸ್ಥೆಯ FCGold ಗೌರವಕ್ಕೆ ಪಾತ್ರವಾಗಿದ್ದು ದೇಶದಲ್ಲಿ ಈ ವರ್ಷದ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಸಂತಸವನ್ನು Garuda Gamana Vrishabha Vahana (GGVV) Movie Hero Raj B Shetty ಮತ್ತು ನಿರ್ದೇಶಕರಾದ ರಾಜ್ ಬಿ ಶೆಟ್ಟಿಯವರು ತನ್ನ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮತ್ತು ಇದರ ಸಂಪೂರ್ಣ ಶ್ರೇಯಸ್ಸು ಪ್ರೇಕ್ಷಕರಿಗೆ ಹೋಗುತ್ತದೆ ಎಂದು ರಾಜ್ ಹೇಳಿದ್ದಾರೆ.
Read Also: Garuda Gamana Vrishabha Vahana is in new controversy
Read Also: Garuda Gamana Vrishabha Vahana Review in Kannada
Read Also: Puneeth Rajkumar Life Story
FAQs:
Q: Raj B Shetty’s next movie as a director?
A: unknown
Q: Which honor got Garuda Gamana Vrishabha Vahana recently?
A: Garuda Gamana Vrishabha Vahana Cinema honored with FCGold from Film Companion for best film of the year.