Puneeth rajkumar Life Story | ಒಂದು ದಿನ ನಾನು ಸಹ ನನ್ನ ತಂದೆಯಂತೆ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತೇನೆ

ಒಂದು ದಿನ ನಾನು ಸಹ ನನ್ನ ತಂದೆಯಂತೆ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತೇನೆ

Puneeth rajkumar Life Story : ”ಒಂದು ದಿನ ನಾನು ಸಹ ನನ್ನ ತಂದೆ ಡಾ. ರಾಜ್‌ಕುಮಾರ್ ಅವರ ತರಹ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತೇನೆ”. ಹೀಗೆ ಒಂದು ಸಂದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ಹೇಳಿದ್ದು ನಾವು ನೆನಪಿಸಬಹುದು.

ಅಕ್ಟೋಬರ್ 29 ಬೆಳಗ್ಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಅಭಿಮಾನಿಗಳ ನೆಚ್ಚಿನ ಅಪ್ಪು Puneeth rajkumar ಅವರು ಹೃದಯಾಘಾತದಿಂದ ತನ್ನ 46 ನೇ ವಯಸ್ಸಿನಲ್ಲಿಯೇ ನಿಧನರಾಗಿದ್ದು ಎಂದೂ ಮರೆಯಲಾಗದ ನೋವು. ಈ ಆಘಾತ ದೇಶ ಮಾತ್ರವಲ್ಲ ವಿದೇಶದಲ್ಲಿರುವ ಅಪಾರ ಅಭಿಮಾನಿಗಳಿಗೂ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಬಹುಷಃ ಪುನೀತ್ ರಾಜ್ ಕುಮಾರ್ ಅವರ ಸಾವಿಗೆ ಮಿಡಿದಷ್ಟು ಮನಗಳು ಇಡೀ ಜಗತ್ತಿನಲ್ಲಿ ಯಾರ ಸಾವಿಗೂ ಮಿಡಿಯಲಿಲ್ಲವೇನೋ. ತನ್ನ ಸ್ವಂತ ಮನೆಯವರನ್ನೇ ಕಳೆದುಕೊಂಡವರಂತೆ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿ ಹೋಗಿದ್ದಾರೆ. ಪುನೀತ್ ರಾಜ್ ಕುಮಾರ್ ಗತಿಸಿ ಹನ್ನೊಂದು ದಿನಗಳೂ ಕಳೆದರು ಇನ್ನೂ ಸಹ ಅಭಿಮಾನಿಗಳು ಶೋಕದಿಂದ ಹೊರ ಬಂದಿಲ್ಲ.

Puneeth rajkumar biography

ದೀಪಾವಳಿಯು ಸಹ ಅದೆಷ್ಟೋ ಮನೆಗಳಲ್ಲಿ ನೀರಸವಾಗಿತ್ತು. Appu Sir ನ ಪ್ರೀತಿಯ ಅಭಿಮಾನಿಗಳು Deepavaliಯನ್ನೂ ಸಹ ಆಚರಿಸಲೇ ಇಲ್ಲ. ಸೂತಕದ ಛಾಯೆಯಲ್ಲಿ ಹೇಗೆ ತಾನೇ ಆಚರಿಸಬಲ್ಲರು ಬೆಳಕಿನ ಹಬ್ಬವನ್ನು. Puneeth raj kumar ಮರೆಯಾದ ದಿನವೇ ಅಭಿಮಾನಿಗಳ ಹರ್ಷದ ಬೆಳಕು ಆರಿದಂತೆ ಭಾಸವಾಗುತ್ತದೆ. ಈ ಆಘಾತದಿಂದ ಹೊರಬರಲು ಅಭಿಮಾನಿಗಳೂ ಇನ್ನೂ ಪರದಾಡುತ್ತಿದ್ದಾರೆ.

Puneeth rajkumar Life Story : ಬಾಲ್ಯದಲ್ಲಿ ಹಲವು ಸಿನಿಮಾಗಳಲ್ಲಿ ತಂದೆ ಡಾ. ರಾಜಕುಮಾರ್ ಅವರೊಂದಿಗೆ ಬಾಲನಟನಾಗಿ ಅಭಿನಯಿಸಿ ಬಹಳಷ್ಟು ಪ್ರಖ್ಯಾತಿ ಪಡೆದು ಅತ್ಯುತ್ತಮ ಬಾಲನಟ ಎಂದು ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಪುನೀತ್ ರಾಜ್ ಕುಮಾರ್ ರವರು ಸುಮಾರು ಹದಿಮೂರು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿಯುತ್ತಾರೆ.

Puneeth rajkumar ಅವರಿಗೆ ಬಾಲ್ಯದಲ್ಲಿ ದೊಡ್ಡವನಾಗಿ ಡಾಕ್ಟರ್ ಆಗಬೇಕು ವಿದೇಶದಲ್ಲಿ ನೆಲೆಸಬೇಕು ದುಡ್ಡು ಮಾಡಬೇಕು ಎಂಬ ಆಸೆಯಿತ್ತು. ಆದರೆ ತಂದೆ ಡಾ ರಾಜಕುಮಾರ್ ಅವರಿಗೆ ಪುನೀತ್ ಒಬ್ಬ ನಟನಾಗಿ ಬೆಳೆಯಬೇಕು ಎಂಬ ಹಂಬಲವನ್ನು ತೋರಿಕೊಂಡಿದ್ದರು. ಪುನೀತ್ ಮಾತ್ರ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸದೆ ತನ್ನ ಸಣ್ಣ ವಯಸ್ಸಿಗೇನೇ ಬಿಸಿನೆಸ್ ಮಾಡಲು ಮುಂದಾಗುತ್ತಾನೆ.

ಅದೆಷ್ಟೋ ಬೇರೆ ಬೇರೆ ತರಹದ ಬಿಸಿನೆಸ್ ಗಳನ್ನು ಪ್ರಯತ್ನ ಮಾಡಿದ ಪುನೀತ್ ರಾಜ್ ಕುಮಾರ್ ಯಾವುದರಲ್ಲೂ ಯಶಸ್ಸು ಕಾಣುವುದಿಲ್ಲ. ಪುನೀತ್ ಗೆ ತಂದೆಯ ಸಂಪತ್ತು ಮತ್ತು ಪ್ರಭಾವವನ್ನು ಬಳಸದೆ ತಾನೇ ದುಡಿದು ಮೇಲೆ ಬರಬೇಕು ಎಂಬ ಹಂಬಲದಿಂದ ಹಲವು ಪ್ರಯತ್ನಗಳನ್ನು ಮಾಡುತ್ತಾನೆ. ಆದರೆ ವಿಧಿ ಮಾತ್ರ ಅವರನ್ನು ಸಿನಿಮಾ ರಂಗದಲ್ಲಿಯೇ ಬೆಳೆಸಬೇಕು ಎಂದು ನಿರ್ಧರಿಸಿಯಾಗಿತ್ತು .

ಅದರಂತೆ ಪುನೀತ್ ರಾಜ್ ಕುಮಾರ್ 2002 ರಂದು Appu Movie ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪುನಃ ಎಂಟ್ರಿಯಾಗುತ್ತಾರೆ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಸೂಪರ್ ಹಿಟ್ ಆಗುತ್ತದೆ. ಮತ್ತೆ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಡುವ ಮೂಲಕ ತನ್ನ ತಂದೆ Dr. Raj Kumar ಅವರ ಕನಸಿನಂತೆ ಪುನೀತ್ ಸಿನಿಮಾದಲ್ಲಿ ಶಾಶ್ವತವಾಗಿ ನೆಲೆವೂರುತ್ತಾರೆ. ಮತ್ತು ಪ್ರಸಿದ್ದಿಯನ್ನು ಗಳಿಸುತ್ತಾರೆ.

coolinglass telegram

Puneeth rajkumar Life Story : ಸಿನಿಮಾ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿ ಬೆಳೆದ ಪುನೀತ್ ರಾಜ್ ಕುಮಾರ್ ಚಂದನವನದ ಅಧಿಪತಿಯಾಗುತ್ತಾರೆ ಮತ್ತು ಅಭಿಮಾನಿಗಳಿಗೆ ಪವರ್ ಸ್ಟಾರ್ ಆಗಿ ಮೆರೆಯುತ್ತಾರೆ. ಪುನೀತ್ ಅವರ ನಟನೆ ಬಹಳ ಸಹಜ ಮತ್ತು ಆ ಪಾತ್ರಕ್ಕೆ ಜೀವ ತುಂಬುತ್ತಿತ್ತು. ಅದಲ್ಲದೆ ಪುನೀತ್ ಅವರು ಯಾವುದೇ ಡ್ಯೂಪ್ ಗಳ ಸಹಾಯವಿಲ್ಲದೆ ಸ್ವತಃ Stunts ಮಾಡುತ್ತಿದ್ದದ್ದು ಅಭಿಮಾನಿಗಳು ಇನ್ನಷ್ಟು ಖುಷಿ ಕೊಡುತ್ತಿತ್ತು.

Puneeth rajkumar ನಂತರ ಸಿನಿಮಾದ ಜೊತೆ ಕಿರುತೆರೆಯಲ್ಲೂ ಮತ್ತು ರಿಯಾಲಿಟಿ ಷೋಗಳಿಗೂ ಅವರು ಸಾರಥ್ಯ ವಹಿಸಿ ಸೈ ಎನಿಸಿಕೊಂಡರು. ಪುನೀತ್ ರಾಜ್ ಕುಮಾರ್ ಅವರ ನೈಜ ನಟನೆ, ನಿಷ್ಕಲ್ಮಶ ನಗು ಮತ್ತು ಪ್ರೀತಿ ಭರಿತ ಮಾತಿನಿಂದ ಅದಾಗಲೇ ಜನರು ಅವರಿಗೆ ಮಾರು ಹೋಗಿದ್ದರು.

ಆದರೆ ಪುನೀತ್ ರಾಜ್ ಕುಮಾರ್ ಅವರು ತೆರೆಮರೆಯಲ್ಲಿ ಮಾಡುತ್ತಿದ್ದ ಅಪಾರ ಸಹಾಯ, ನೊಂದವರಿಗೆ ಆಸರೆ, ಕಷ್ಟ ಹೇಳಿಕೊಂಡು ಬಂದವರಿಗೆ ನಿಸ್ವಾರ್ಥ ಸಹಾಯ ಇವೆಲ್ಲವೂ ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅಕ್ಟೋಬರ್ ೨೯ ರಂದು ಮರಣ ಹೊಂದಿದ ಬಳಿಕ ಬೆಳಕಿಗೆ ಬಂದಾಗ ಪುನೀತ್ ಅವರ ಮೇಲಿದ್ದ ಅಭಿಮಾನ, ಪ್ರೀತಿ, ಭಕ್ತಿ ನೂರ್ಮಡಿಯಷ್ಟು ಹೆಚ್ಚಾಗಿದ್ದು ಅಕ್ಷರಸಹ ಸತ್ಯ.

ಏನೇ ಆಗಲಿ ನಮ್ಮ ಮಾನವ ಕುಲ ಒಂದು ಅನರ್ಘ್ಯ ರತ್ನವನ್ನು ಕಳೆದುಕೊಂಡು ಈಗ ಅನಾಥವಾಗಿ ಕುಳಿತಂತೆ ಭಾಸವಾಗುತ್ತಿದೆ. ಪುನೀತ್ ಒಬ್ಬ ಕೇವಲ ನಟನಾಗಿರುತ್ತಿದ್ದರೆ ಇಷ್ಟು ಸಂಕಟ ಆಗುತ್ತಿರಲಿಲ್ಲವೇನೋ. ಆದರೆ ಅವರ ನಿಸ್ವಾರ್ಥ ಸೇವೆ ಮತ್ತು ಸಹಾಯಗಳು ಪುನೀತ್ ಅವರನ್ನು ನಿಜವಾದ ಪರಮಾತ್ಮನನ್ನಾಗಿಸಿದೆ.

Earn Free Bitcoin

Read Also: Puneeth Rajkumar Real Story

Read Also: Padma Shree Awardee Harekala Hajabba Biography 

Read Also: RadhaKrishna Serial Sumedh Mudgalkar Biography

 

 

FAQs

Q: Puneeth Rajkumar Death date

A: Puneeth died on October 29, 2021

 

Q: Puneeth Rajkumar Death reason

A: Puneeth died due to a cardiac attack 

 

Q: Puneeth Rajkumar siblings

A: Shivarajkumar, Raghavendra Rajkumar, Lakshmi, Poornima

 

Q: Puneeth rajkumar Wife name

A: Ashwini Revanath

 

Q: Puneeth Rajkumar daughters name

A: Vanditha Rajkumar and Druthi Rajkumar 

 

Q: Who played a lead role in the Ninnindale movie?

A: Puneeth Rajkumar

 

Q: Who is the director of Yuvarathnaa Movie?

A: Santhosh Ananddram

Earn free tron

Q: When raajakumara movie released?

A: Raajakumara Movie has been released in the year 2017

 

Q: Who is the director of the movie natasaarvabhowma?

A:  The Movie natasaarvabhowma directed by Pawan Wadeyar

 

Q: Who is the heroine of  Appu kannada movie?

A: Rakshitha prem

 

Q: When Dodmane huduga kannada movie has been released?

A: dodmane huduga kannada movie has been released on September 30, 2016

 

Q: Who hosted Kannada Kotyadhipathi?

A: Puneeth Rajkumar

 

Q: What was the puneeth rajkumar age?

A: He was 46.

 

Q: Puneeth Rajkumar birthdate?

A: 17 March 1975

 

 

 

 

 

9 thoughts on “Puneeth rajkumar Life Story | ಒಂದು ದಿನ ನಾನು ಸಹ ನನ್ನ ತಂದೆಯಂತೆ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತೇನೆ”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ