Garuda Gamana Vrishabha Vahana | ಅಪ್ಪು ಅಗಲಿಕೆಯ ನೋವಿನಿಂದ ಸ್ತಬ್ಧರಾಗಿದ್ದ ಚಿತ್ರ ಪ್ರೇಕ್ಷಕರನ್ನು ಬಡಿದೆಬ್ಬಿಸಿದ ಸಿನಿಮಾ

Raj B Shetty’s another Blockbuster movie Garuda Gamana Vrishabha Vahana

ಟ್ರೈಲರ್ ಮೂಲಕವೇ ಇಡೀ ಚಿತ್ರರಂಗದ ಗಮನ ಸೆಳೆದಿದ್ದ ಮತ್ತು ಭರವಸೆ ಮೂಡಿಸಿದ್ದ Garuda Gamana Vrishabha Vahana ಕನ್ನಡ ಚಲನ ಚಿತ್ರವೂ ಬಿಡುಗಡೆಗೊಂಡ ದಿನವೇ ಅದ್ಭುತ ಪ್ರದರ್ಶನಗೊಂಡು ಜನರ ನಂಬಿಕೆಯನ್ನು ಉಳಿಸಿಕೊಂಡಿದೆ. Raj B Shetty ನಿರ್ದೇಶನದಲ್ಲಿ ಮೂಡಿಬಂದ ಗರುಡ ಗಮನ ವೃಷಭ ವಾಹನ ಚಿತ್ರವು ಇಡೀ ಚಿತ್ರರಂಗದ ಗಮನವನ್ನೇ ತನ್ನೆಡೆಗೆ ಸೆಳೆದಿದೆ. 

Earn Free Bitcoin

ಕೊರೊನ ಲಾಕ್ ಡೌನ್ ನಿಂದ ಕಂಗಾಲಾಗಿದ್ದ ಚಿತ್ರೋದ್ಯಮಕ್ಕೆ ಜೀವಕಲೆ ತುಂಬಿದ Garuda Gamana Vrishabha Vahana

ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿಯುವ Garuda Gamana Vrishabha Vahana ಚಿತ್ರ ಕೋರೋಣ ಲಾಕ್ ಡೌನ್ ನಿಂದಾಗಿ ತಟಸ್ಥಗೊಂಡಿದ್ದ ಥಿಯೇಟರ್ ಗಳಲ್ಲಿ ಸಿನಿಮಾ ವೀಕ್ಷಣೆಗಾಗಿ ಹಾತೊರೆಯಿತ್ತಿದ್ದ ಸಿನಿ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ತಂಡ ಗರುಡ ಗಮನ ವೃಷಭ ವಾಹನ ಚಿತ್ರದ ಮೂಲಕ ಭೂರಿ ಭೋಜನವನ್ನೇ ನೀಡಿದೆ. 

ಕಳೆದೆರಡು ವರ್ಷಗಳಿಂದ ಚಿತ್ರೋದ್ಯಮವು ಕೊರೊನದಿಂದಾಗಿ ಸಂಪೂರ್ಣ ಕಂಗಾಲಾಗಿ ಹೋಗಿತ್ತು. ಸದ್ಯ ಕನ್ನಡ ಚಿತ್ರರಂಗವೂ ರಾಜ್ ಬಿ ಶೆಟ್ಟಿ ಯವರ ಗರುಡ ಗಮನ ವೃಷಭ ವಾಹನ ಚಿತ್ರದಿಂದಾಗಿ ಜೀವಕಳೆ ತುಂಬಿದಂತಿದೆ. ಸಿನಿ ಪ್ರಿಯರು ಥಿಯೇಟರ್ ಕಡೆ ಮುಖ ಮಾಡುವಂತೆ ಮಾಡಿದೆ.

Garuda Gamana Vrishabha Vahana

ಶಿವನಾಗಿ ರಾಜ್ ಬಿ ಶೆಟ್ಟಿ ಹರಿಯಾಗಿ ರಿಷಬ್ ಶೆಟ್ಟಿ

ಶಿವನಾಗಿ ರಾಜ್ ಬಿ ಶೆಟ್ಟಿ ಹರಿಯಾಗಿ ರಿಷಬ್ ಶೆಟ್ಟಿ ಶೇಖರನಾಗಿ ದೀಪಕ್ ರೈ ಪಾಣಾಜೆ ಮತ್ತು ಇನ್ನಿತರ ತುಳುನಾಡಿನ ಕಲಾವಿದರು ಸೇರಿ ಕನ್ನಡದ ಹಿರಿಯ ಕಲಾವಿದರ ನಟನೆ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಗರುಡ ಗಮನ ವೃಷಭ ವಾಹನ ಚಿತ್ರವು ಮತ್ತೊಮ್ಮೆ ರಾಜ್ ಬಿ ಶೆಟ್ಟಿಯವರ ಕಲಾ ಚತುರತೆಯನ್ನು ಸಾಬೀತು ಪಡಿಸಿದೆ. 

 

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಮತ್ತು ನಟ Raj B Shetty

ಕನ್ನಡ ಚಿತ್ರರಂಗಕ್ಕೆ ಈ ಮೂಲಕ ತುಳುನಾಡಿನಿಂದ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ನಟ ಲೇಖಕನಾಗಿ  ರಾಜ್ ಬಿ ಶೆಟ್ಟಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಕರಾವಳಿಯಿಂದ ‘R’ ತ್ರಯರಾದ Rakshith ShettyRishab ShettyRaj B Shetty ಕನ್ನಡ ಚಿತ್ರರಂಗವನ್ನು ಅಳುವುದಕ್ಕೆ ಮುಂದಾಗಿದ್ದಾರೆ.  ಮತ್ತು ಕನ್ನಡ ಚಿತ್ರರಂಗಕ್ಕೆ ಈ ‘R’ ತ್ರಯರು ಮುಂದೆ ಜೊತೆ ಸೇರಿ ಇಡೀ ರೀತಿ ಅದ್ಭುತ ಕೊಡುಗೆ ನೀಡುವುದರಲ್ಲಿ ಯಾವುದೇ ಸಂಶಯ ಇಲ್ಲ. 

 

 ‘R’ ತ್ರಯರು ಭವಿಷ್ಯದಲ್ಲಿ  ‘R’ ಚತುಷ್ಟಯರಾದರೆ ಸಂಶಯವಿಲ್ಲ 

ಮತ್ತೊಬ್ಬ ಕರಾವಳಿ ನಟ Roopesh Shetty ಸದ್ದಿಲ್ಲದೇ ಕನ್ನಡ ಸಿನಿಮಾಗಳಲ್ಲಿ ಭರವಸೆ ಮೂಡಿಸುತ್ತಿದ್ದು  ‘R’ ತ್ರಯರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಮತ್ತು ರಾಜ್ ಬಿ ಶೆಟ್ಟಿ ಯ ಜೊತೆ ಸದ್ಯದಲ್ಲೇ ಸೇರಿಕೊಂಡು ”R”  ಚತುಷ್ಟಯರಾದರೆ ಅಚ್ಚರಿಯೇನಿಲ್ಲ. ಒಟ್ಟಾಗಿ ಕನ್ನಡ ಚಿತ್ರರಂಗಕ್ಕೆ ಕರಾವಳಿ ತುಳುನಾಡಿನಿಂದ ಅದ್ಭುತ ಕೊಡುಗೆ ನೀಡುತ್ತಿದೆ. 

Raj N Shetty ಯವರು ಒಬ್ಬ ಭರವಸೆಯ ನಿರ್ದೇಶಕನೆಂದು ಗರುಡ ಗಮನ ವೃಷಭ ವಾಹನ (GGVV) ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ Raj B Shetty ಯವರ ನಿರ್ದೇಶನದಲ್ಲಿ ಚಿತ್ರ ನಿರ್ಮಾಣ ಮಾಡಲು ಕನ್ನಡ ಚಿತ್ರರಂಗದ ಪ್ರಸಿದ್ಧ ಮತ್ತು ಯಶಸ್ವಿ ನಿರ್ಮಾಪಕರು ಮುಂದೆ ಬಂದರೆ ಅಚ್ಚರಿಯೇನಿಲ್ಲ. 

ಗರುಡ ಗಮನ ವೃಷಭ ವಾಹನ (GGVV) ಚಿತ್ರದ ಯಶಸ್ಸಿನಿಂದಾಗಿ ರಾಜ್ ಬಿ ಶೆಟ್ಟಿಯವರ ಮೇಲಿನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಮುಂದೆ ಇವರ ನಿರ್ದೇಶನದಲ್ಲಿ ಅಥವಾ ಇವರ ಕಥೆಯಲ್ಲಿ ಮೂಡಿ ಬರುವ ಚಿತ್ರಗಳು ಪ್ರೇಕ್ಷಕರ ನಿರೀಕ್ಷೆಯನ್ನು ಉಳಿಸುವ ಜವಾಬ್ದಾರಿಯನ್ನೂ ರಾಜ್ ಬಿ ಶೆಟ್ಟಿ ನಿಭಾಯಿಸಬೇಕಾಗುತ್ತದೆ.   ಏನೇ ಆಗಲಿ ಕನ್ನಡ ಚಿತ್ರರಂಗದಲ್ಲಿ ನಮ್ಮ ಕರಾವಳಿಗರು ಮಿಂಚುತ್ತಿರುವುದು ಸಂತಸದ ಸುದ್ದಿಯೇ ಆಗಿದೆ. 

 

ಕನ್ನಡ ಚಿತ್ರರಂಗದ ಯುವರತ್ನ, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ಮಾಸದ ನೋವು 

ಇತ್ತೀಚಿಗೆ ಕನ್ನಡ ಚಿತ್ರರಂಗದ ಮಾಣಿಕ್ಯ ಯುವರತ್ನ ಪವರ್ ಸ್ಟಾರ್ ಎಲ್ಲರ ಪ್ರೀತಿಯ ಅಪ್ಪು Puneeth Raj Kumar ರವರ ಹಠಾತ್ ಅಗಲಿಕೆಯಿಂದ ಕೇವಲ ಚಿತ್ರರಂಗ ಮಾತ್ರವಲ್ಲದೆ ಇಡೀ ಮಾನವ ಕುಲವೇ ಮರುಗಿತ್ತು. ಬೇಸರಿಸಿತ್ತು. ಇಂದಿಗೂ ಆ ಬೇಸರದಿಂದ ಹೊರಬರಲು ತಡಕಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಗಳಿಕೆ ಎಲ್ಲರಿಗೂ ತುಂಬಲಾರದ ನಷ್ಟವಾಗಿದೆ. ಕನ್ನಡ ಚಿತ್ರರಂಗವಂತೂ ನಿಜವಾಗಿಯೂ ಬಡವಾಗಿದೆ ಇವರ ನಿಧನದಿಂದ. ರಾಜ್ ಬಿ ಶೆಟ್ಟಿ ರಿಷಬ್ ಶೆಟ್ಟಿ ಯಂತಹ ಯುವ ಕಲಾವಿದರು ಕನ್ನಡ ಚಿತ್ರ ರಂಗಕ್ಕೆ ಹೊಸ ರೀತಿಯ ಸಿನಿಮಾವನ್ನು ನೀಡುವ ಮುಖಾಂತರ ಚಿತ್ರರಂಗವನ್ನು ಬಡಿದೆಬ್ಬಿಸಬೇಕಿದೆ. 

 

Read Also : ಗರುಡ ಗಮನ ವೃಷಭ ವಾಹನ ಕನ್ನಡ ಸಿನಿಮಾಗೆ ಪ್ರೇಕ್ಷಕರು ಫಿದಾ

Read Also: Puneeth Pajkumar ಇನ್ನೂ ಜೀವಂತ ಇದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ !!!

Read Also: How to Earn Money Online for students without investment

 

FAQs

Q: GGVV budget ?

A: GGVV Budget not yet revealed. No information available about the movie budget

 

Q: Garuda Gamana Vrishabha Vahana Ott platform

A: GGVV Movie not available on OTT platform

 

Q: Garuda Gamana Vrishabha Vahana meaning in kannada

A: ಗರುಡ ಗಮನ ವೃಷಭ ವಾಹನ, ಗರುಡ ಗಮನ ಅಂದರೆ ಗರುಡ ನ ಮೇಲೆ ಸವರಿ ಮಾಡುವವನು ಅಂದರೆ ಹರಿ. ಮತ್ತು ವ್ರಷಭ ವಾಹನ ಅಂದರೆ ವೃಷಭ ದ ಮೇಲೆ ಸಂಚರಿಸುವವನು. ವೃಷಭ ಅಂದರೆ ನಂದಿ ಎಂದರ್ಥ ನಂದಿ ಮೇಲೆ ಸಂಚರಿಸುವವನು ಶಿವನಾಗಿರುತ್ತಾನೆ.

 

Q: Garuda Gamana Vrishabha Vahana meaning in english

A: Garuda means eagle. The person who rides on Eagle is called Garuda Gamana, which means Hari. And the Vrishabha Means Nandi. The person who rides on Nandi is called Vrishabha Vahana, which is Shiva.

 

Q: Garuda Gamana Vrishabha Vahana box office collection

A: GGVV is a blockbuster hit Kannada movie. Box Office collection not yet revealed.

 

 

Leave a Comment