Raj B Shetty’s Garuda Gamana Vrishabha Vahana (GGVV) | ಗರುಡ ಗಮನ ವೃಷಭ ವಾಹನ ಕನ್ನಡ ಸಿನಿಮಾಗೆ ಪ್ರೇಕ್ಷಕರು ಫಿದಾ. 

Raj B Shetty’s Garuda Gamana Vrishabha Vahana (GGVV) ಕನ್ನಡ ಸಿನಿಮಾಗೆ ಪ್ರೇಕ್ಷಕರು ಫಿದಾ. 

KGF 2 ಗೆ ಕಾಯುತ್ತಿರುವಂತಹ ಸಿನಿ ಪ್ರೇಕ್ಷಕರಿಗೆ ಶಾಕ್ ಕೊಡುವ ರೀತಿಯಲ್ಲಿ ಹೊಸದೊಂದು ಕನ್ನಡ ಸಿನಿಮಾವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಒಂದು ರೀತಿಯಲ್ಲಿ ಹೇಳಬೇಕಾದರೆ KGF2 ನ ಕ್ರೇಜ್ ಈ ಚಿತ್ರದ ಕಡೆ ತಿರುಗಿ ಇಂದು ದಿನದಿಂದ ದಿನಕ್ಕೆ ಸಿನಿಮಾ ದ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸುತ್ತಲೇ ಇದೆ. ಆ ಚಿತ್ರ ಯಾವುದು ಗೊತ್ತಾ ? ಒಂದು ಮೊಟ್ಟೆಯ ಕಥೆಯ(OMK) ಮೂಲಕ ಮುಗ್ಧ ಮೇಷ್ಟ್ರ ಪಾತ್ರದಲ್ಲಿ ಗಮನ ಸೆಳೆದ Raj B Shetty ಯವರ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬಂದ Garuda Gamana Vrishabha Vahana (GGVV) ಸಿನಿಮಾ. 

ಒಬ್ಬ ಹೀರೋ ಆಗಬೇಕಾದರೆ ಕಟ್ಟು ಮಸ್ತಾದ ದೇಹ, ಜಿಮ್ ಗೆ ಹೋಗಿ ಬೈಸೆಪ್ಸ್ ಟ್ರೈಸೆಪ್ಸ್ ಸಿಕ್ಸ್ ಪ್ಯಾಕ್ ಬೆಳೆಸಿದ ದೃಢಕಾಯ, ಮತ್ತು ಸ್ಪುರ ದ್ರುಪಿ ಆಗಿರಬೇಕು ಎಂಬ ವಾಡಿಕೆಯನ್ನು ರಾಜ್ ಬಿ ಶೆಟ್ಟಿ ಅಕ್ಷರಸಹ ತುಳಿದು ನಿಂತಿದ್ದಾರೆ. ಹೀರೊ ಅನ್ನಿಸಿಕೊಳ್ಳಬೇಕಾದರೆ ಟ್ಯಾಲೆಂಟ್ ಇದ್ದರೆ  ಸಾಕು, ನಟನಾ ಕೌಶಲ್ಯ ಇದ್ದರೆ ಸಾಕು, ಮೇಲಾಗಿ ನಟಿಸಬೇಕು ಎಂಬ ಹುಚ್ಚು ಭರವಸೆ ಇದ್ದರೆ ಸಾಕು ಎಂಬುದನ್ನು ರಾಜ್ ಬಿ ಶೆಟ್ಟಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

 

Ondu Motteya Kathe ಯಿಂದ ಶುರುವಾದ ಸಿನಿ ಪಯಣ 

Ondu Motteya Katheಗೆ ಸ್ಪೂರ್ತಿ ಅವರೇ ಒಂದು ಇಂಟರ್ವ್ಯೂ ನಲ್ಲಿ ಹೇಳುವಂತೆ ಅವರ ತಲೆಯಲ್ಲಿ ಕೂದಲು ಸ್ವಲ್ಪ ಕಮ್ಮಿ ಇರುವುದರಿಂದ ಅವರು ಎದುರಿಸಿದ ಕೆಲವೊಂದು ಕ್ಲಿಷ್ಟಕರ ಪರಿಸ್ಥಿಯನ್ನು ಕಥೆಗೆ ಎಳೆಯಾಗಿಸಿ ಪೋಣಿಸಿದ್ದಾರೆ. ತಲೆಯಲ್ಲಿ ಕೂದಲಿಲ್ಲದವನಿಗೆ ಬಾನಲಿ ತಲೆಯವನು ಅಥವಾ ಮೊಟ್ಟೆ ತಲೆಯವನು ಎಂದು ಕರೆಯುತ್ತಾರೆ. ಅಂಥವರಿಗೆ ಹುಡುಗಿ ಹುಡುಕುವುದು, ಕಂಡವರು ತಮಾಷೆ ಮಾಡುವುದು ಇವೆಲ್ಲಾ ಸಮಸ್ಯೆಗಳನ್ನು ಸವಾಲುಗಳನ್ನು ಇಂಥ ಮೊಟ್ಟೆ ತಲೆಯವರು ಎದುರಿಸಬೇಕಾಗುತ್ತದೆ. ಈ ಪರಿಸ್ಥಿತಿ ಬಹುಷಃ ರಾಜ್ ಬಿ ಶೆಟ್ಟಿ ಯವರಿಗೂ ಒದಗಿರಬಹುದು. 

Garuda Gamana Vrishabha Vahana

Raj B Shetty’s Garuda Gamana Vrishabha Vahana

ಅನುಭವದಲ್ಲಿ ಮೂಡಿಬಂದ ಕಥೆ ಸಿನಿಮಾವಾದರ ಅದು ಯಶಸ್ಸನ್ನು ಗಳಿಸುವುದರಲ್ಲಿ ಎರಡು ಮಾತಿಲ್ಲ. ಒಂದು ಮೊಟ್ಟೆಯ ಕಥೆಯು ಬ್ಲಾಕ್  ಬಸ್ಟರ್ ಹಿಟ್ ಆಗಿತ್ತು. ಸಿನಿಮಾ ಚಿತ್ರೀಕರಣದ ವೇಳೆ ಮತ್ತು ಅದು ಬಿಡುಗಡೆಗೊಳ್ಳುವ ಮೊದಲು ಯಾರೂ ಕನಸಲ್ಲಿಯೂ ಊಹಿಸಿರಲಿಲ್ಲ ಅಷ್ಟೊಂದು ಜನಪ್ರಿಯ ಆಗುತ್ತದೆ ಎಂದು. ಯಾಕೆಂದರೆ ತಿಳಿದವರು ಹೇಳುವಂತೆ ಒಂದು ಮೊಟ್ಟೆಯ ಕಥೆಯು ಮೊದಲು ಟೆಲೆಫಿಲ್ಮ್ ಗಾಗಿ ಚಿತ್ರೀಕರಿಸಲಾಗಿತ್ತಂತೆ. ಆದರೆ ಸಿನಿಮಾ ಚಿತ್ರೀಕರಿಸಿದ ನಂತರ ಅದನ್ನು ಹಿರಿತೆರೆಗೆ ತರಲು ನಿರ್ಧರಿಸಲಾಯಿತು. ಸ್ಯಾಂಡಲ್ವುಡ್ ನ ಪ್ರತಿಯೊಬ್ಬ ದೊಡ್ಡ ದೊಡ್ಡ ಕಲಾವಿದರ ಗಮನವನ್ನು ತನ್ನೆಡೆಗೆ ಒಂದು ಮೊಟ್ಟೆಯ ಕಥೆಯು ಸೆಳೆದದ್ದು ಮಾತ್ರ ಇತಿಹಾಸ. 

ಅದರ ನಂತರ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ರಾಜ್ ಶೆಟ್ರು ಇಂದು ತಾನೇ ಬರೆದು ನಿರ್ದೇಶಿಸಿದ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.  Garuda Gamana Vrishabha Vahana (GGVV) ಚಿತ್ರದ ಟ್ರೈಲರ್ ಮೂಲಕವೇ ಸ್ಯಾಂಡಲ್ವುಡ್ ಮಾತ್ರವಲ್ಲದೆ ಬಾಲಿವುಡ್ ಸೇರಿ ಸಾಗರದಾಚೆಗೂ ಹಾಲಿವುಡ್ ನ ಮಹಾನ್ ಜನರನ್ನು ಬೆರಗಾಗಿಸಿದ್ದು ರಾಜ್ ಅವರ ಕಲಾ ಚತುರತೆಗೆ ಸಿಕ್ಕ ಜಯವೇ ಸರಿ. 

Earn Free Bitcoin

Hollywood Reaction for GGVV Movie

Garuda Gamana Vrishabha Vahana (GGVV) ಚಿತ್ರದ ಟ್ರೈಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿದೇಶದ ಪ್ರಸಿದ್ಧ  ಮತ್ತು ಒಂದು ಮಿಲಿಯನಿಗಿಂತಲೂ ಅಧಿಕ ಹಿಂಬಾಲಕರನ್ನು ಹೊಂದಿದ  ”Our Stupid Reactions” ಅನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಇಬ್ಬರು ಚಿತ್ರ ವಿಶ್ಲೇಷಕರು ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದಾರೆ. ಚಿತ್ರದ ಟ್ರೈಲರ್ ನಲ್ಲಿ ಬರುವ ಪ್ರತಿಯೊಂದು ಪಾತ್ರದ ಬಗ್ಗೆ ಮತ್ತು ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ರಾಜ್ ಬಿ ಶೆಟ್ಟಿ ಯವರ ನಟನೆ ಮತ್ತು ಅವರ ಡೈರೆಕ್ಷನ್ ನ್ನು ಕಂಡು ರೋಮಾಂಚನಗೊಂಡ್ದಿದ್ದಾರೆ. ನಿಜವಾಗಿಯೂ ಈ ಚಿತ್ರವನ್ನು ನೋಡಲೇಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಟ್ರೈಲರ್ ನಲ್ಲಿ ಅಲ್ಲಲ್ಲಿ ಬರುವ ತುಳುನಾಡಿನ ಪ್ರಸಿದ್ಧ ಸಂಪ್ರದಾಯದಲ್ಲೊಂದಾದ ಹುಲಿ ಕುಣಿತ ( ಪಿಲಿ ನಲಿಕೆ) ಯ ದೃಶ್ಯವನ್ನು ಕಂಡು ರೋಮಾಂಚನಗೊಂಡಿದ್ದಾರೆ. ತುಳುನಾಡಿನ ಈ ವಿಶೇಷ ಪಿಲಿ ನಲಿಕೆ ನೃತ್ಯ ವಿಶೇಷವಾಗಿ audience ಗಮನ ಸೆಳೆದಿದೆ.

 

Read Also: Puneeth rajkumar Life Story | ಒಂದು ದಿನ ನಾನು ಸಹ ನನ್ನ ತಂದೆಯಂತೆ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತೇನೆ

Read Also: Puneeth Pajkumar ಇನ್ನೂ ಜೀವಂತ ಇದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ !!!

Read Also: How to Earn Money Online for students without investment

 

 

FAQs

Q: Who is the director of Garuda Gamana Vrishabha Vahana movie?

A: Garuda Gamana Vrishabha Vahana movie director Raj B Shetty

 

Q: When Garuda Gamana Vrishabha Vahana Movie  has been released?

A: Garuda Gamana Vrishabha Vahana Movie  released on 19th November 2021

 

Q: Which role did Rishab Shetty play on Garuda Gamana Vrishabha Vahana Movie?

A: Hari Role played by Rishab Shetty on Garuda Gamana Vrishabha Vahana Movie

 

Q: Which was Raj B Shetty’s first film?

A: Raj B Shetty’s first film was Ondu Motteya Kathe. 

 

Q: Which are movies directed by Raj B Shetty?

A: Till now two Kannada movie has been directed by Raj B Shetty, first one is Ondu Motteya Kathe and Garuda Gamana Vrishabha Vahana  

2 thoughts on “Raj B Shetty’s Garuda Gamana Vrishabha Vahana (GGVV) | ಗರುಡ ಗಮನ ವೃಷಭ ವಾಹನ ಕನ್ನಡ ಸಿನಿಮಾಗೆ ಪ್ರೇಕ್ಷಕರು ಫಿದಾ. ”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ