ರಾಧಾಕೃಷ್ಣ ಧಾರಾವಾಹಿಯ ಮುದ್ದು ಕೃಷ್ಣ sumedh mudgalkar Biography in kannada
Table of Contents
ಶ್ರೀ ಕೃಷ್ಣ ಅಂದಾಕ್ಷಣ ಈಗ ಸದ್ಯಕ್ಕೆ ಎಲ್ಲರ ತಲೆಯಲ್ಲಿ ಮೊದಲು ಬರುವುದು Star Bharath ಚಾನೆಲ್ ನಲ್ಲಿ ಬರುತ್ತಿದ್ದ ಹಿಂದಿಯ Radha Krishna ಧಾರಾವಾಹಿಯ ಕೃಷ್ಣನ ಪಾತ್ರ. ಈಗ Star Suvarna ಚಾನಲ್ ನಲ್ಲಿ ಕನ್ನಡದಲ್ಲಿ ಡಬ್ಬಿಂಗ್ ಆಗಿ ಮೂಡಿ ಬರ್ತಾ ಇದೆ. ನಿಜವಾದ ಶ್ರೀ ಕೃಷ್ಣನೇ ಇಡೀ ಜಗತ್ತಿನ ಹಿಂದೂಗಳ ಬಹಳ ಪ್ರೀತಿಯ ಮತ್ತು ಹೆಚ್ಚು ಆರಾಧಿಸಲ್ಪಡುವ ದೇವರಾಗಿದ್ದಾನೆ. ಬಾಲ ಕೃಷ್ಣ, ಮುದ್ದು ಕೃಷ್ಣ ಅಂದರೆ ಇನ್ನೂ ಅಚ್ಚುಮೆಚ್ಚು. ಅಂತಹ ಮುದ್ದು ಕೃಷ್ಣನ ಪಾತ್ರಕ್ಕೆ ಜೀವ ತುಂಬುತ್ತಿರುವ ಪಾತ್ರಧಾರಿ ನಟ ಸುಮೇದ್ ಮುದ್ಗಲ್ಕರ್ Sumedh Mudgalkar Biography in kannada ಬಗ್ಗೆ ಈ ಬ್ಲಾಗ್ ನಲ್ಲಿ ತಿಳಿಯೋಣ.
ಅಂದಿನ ಕೃಷ್ಣ ಗೋಕುಲದ ಗೋಪಿಕೆಯರ ಮನಸ್ಸು ಕದ್ದಿದ್ದರೆ ಇಂದಿನ ಈ ನೀಲ ಕಂಗಳ ಚೆಲುವ ಕೃಷ್ಣ ಸುಮೇದ್ ಈಗಿನ ಗೋಪಿಕೆಯರ ಮನಗೆದ್ದಿದ್ದಾನೆ ಅಂದರೆ ತಪ್ಪಾಗಲಾರದು. ತನ್ನ ನಟನೆ, ಸಂಭಾಷಣೆ, ನೋಟದಿಂದ ಕೃಷ್ಣನ ಪಾತ್ರಕ್ಕೆ ಅಕ್ಷರಸಹ ಜೀವ ತುಂಬುತ್ತಿರುವ ಕಲಾವಿದ ಸುಮೇದ್ ಮುದ್ಗಲ್ಕರ್.
ಕುಟುಂಬ / ಪರಿವಾರ
1996 ನವೆಂಬರ್ 2ರಂದು Maharashtra ಪುಣೆಯ ಒಂದು ಗ್ರಾಮ ನಾಂದೇಡ್ ನಲ್ಲಿ ಮಾಧ್ಯಮ ವರ್ಗದ ಮರಾಠಿ ಕುಟುಂಬದಲ್ಲಿ ಸುಮೇದ್ ನ ಜನನವಾಯಿತು. ತಂದೆಯ ಹೆಸರು ವಾಸುದೇವ್ ಮುದ್ಗಲ್ಕರ್ ಮತ್ತು ತಾಯಿಯ ಹೆಸರು ವಸಂತಿ ಮುದ್ಗಲ್ಕರ್. ಸುಮೇದ್ ಗೆ ಇಬ್ಬರು ಅಣ್ಣಂದಿರು ( ಸಮೀರನ್ ಮುದ್ಗಲ್ಕರ್ ಮತ್ತು ಸಂಕೇತ್ ಮುದ್ಗಲ್ಕರ್).
ಗುರು ಇಲ್ಲದೆ ಗುರಿ ಮುಟ್ಟುವ ಪ್ರಯತ್ನ
ಚಿಕ್ಕಂದಿನಿಂದಲೂ ಡಾನ್ಸ್ ನಲ್ಲಿ ಬಹಳ ಆಸಕ್ತಿ ಹೊಂದಿದ್ದ ಸುಮೇದ್ ಗೆ ಹೆತ್ತವರಿಂದ ತುಂಬಾ ಸಪೋರ್ಟ್ ಸಿಗುತ್ತದೆ. ಯಾವುದೇ ಡ್ಯಾನ್ಸ್ ಕ್ಲಾಸ್ ಗೆ ಹೋಗದೆ ಯಾರೇ ಗುರು ಇಲ್ಲದೆ ಸ್ವಂತ ಅಭಿರುಚಿಯಿಂದ ವಿಡಿಯೋಗಳನ್ನ ನೋಡಿ ಬಹಳ ಸರಾಗವಾಗಿ ಕಲಿತು ಡಾನ್ಸ್ ಮಾಡುತ್ತಿದ್ದ. ತಾನು ಇಷ್ಟಪಟ್ಟ ಕ್ಷೇತ್ರದಲ್ಲಿ ಮುಂದುವರಿಯಲು ಮತ್ತು ಇನ್ನಷ್ಟು ಸಾಧನೆ ಮಾಡಲು ಸುಮೇದ್ ಪುಣೆಯಿಂದ ಮುಂಬಯಿಗೆ ತೆರಳುತ್ತಾನೆ.
ತನ್ನಲ್ಲಿರುವ ಪ್ರತಿಭೆಯನ್ನು ಇನ್ನಷ್ಟು ಬೆಳಗಲು ಮತ್ತು ಜಗತ್ತಿನ ಮುಂದೆ ಪ್ರದರ್ಶಿಸಲು ಸರಿಯಾದ ವೇದಿಕೆ ಹುಡುಕಲು ಮುಂಬಯಿಗೆ ಬಂಡ ಸುಮೇದ್ ಗೆ ಮೊದಲು ಸಿಕ್ಕಿದ್ದು ಡಾನ್ಸ್ ಮಹಾರಾಷ್ಟ್ರ ಡಾನ್ಸ್ ಅನ್ನುವ ರಿಯಾಲಿಟಿ ಶೋ. Dance Maharashtra Dance ರಿಯಾಲಿಟಿ ಶೋ ಗೆ ಸುಮೇದ್ ಆಡಿಷನ್ ಕೊಡುತ್ತಾನೆ ಮತ್ತು ಯಶಸ್ವಿಯಾಗಿ ಆಯ್ಕೆಯಾಗುತ್ತಾನೆ. ಈ ಸಾಧನೆ ಸುಮೇದ್ ಗೆ ಅಲ್ಲೀ ತನಕದ ಬಹು ದೊಡ್ಡ ಸಾಧನೆಯಾಗಿತ್ತು.
ನಂತರದ ದಿನಗಳಲ್ಲಿ ಆ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಪ್ರದರ್ಶನಕೊಟ್ಟು ಎಲ್ಲರಿಂದಲೂ ಸೈ ಎನಿಸಿಕೊಳ್ಳುತ್ತಾನೆ. ಡಾನ್ಸ್ ಮಹಾರಾಷ್ಟ್ರ ಡಾನ್ಸ್ ರಿಯಾಲಿಟಿ ಷೋ ನ ತೀರ್ಪುಗಾರರಾಗಿದ್ದ ಶ್ರುತಿ ಅವರು ಸುಮೇದ್ ನ ಡಾನ್ಸ್ ನಿಂದ ಪ್ರಭಾವಿತರಾಗಿ ಆತನಿಗೆ Beatking ಅನ್ನುವ ಬಿರುದನ್ನು ನೀಡುತ್ತಾರೆ. ಇದು ಸುಮೇದ್ ನಲ್ಲಿ ಇನ್ನಷ್ಟು ಸಾಧನೆ ಮಾಡುವ ಹುರುಪನ್ನು ತುಂಬಿತು.
ಸುಮೇದ್ ನಲ್ಲಿರುವ ಅದ್ಭುತ ಡಾನ್ಸ್ ಪ್ರತಿಭೆಯು ನಂತರ ಆತನನ್ನು Dance India Dance ಗೆ ಸೆಲೆಕ್ಟ್ ಆಗುವಂತೆ ಮಾಡುತ್ತದೆ. ಡಾನ್ಸ್ ಇಂಡಿಯಾ ಡಾನ್ಸ್ ನಲ್ಲಿ ಎಲ್ಲರ ಗಮನವನ್ನು ಸೆಳೆಯುದರ ಜೊತೆ ಆತನಲ್ಲಿರುವ ನಟನಾ ಕಲೆಯೂ ಜಗತ್ತಿಗೆ ಪರಿಚಯವಾಗುತ್ತದೆ. ಸುಮೇದ್ ಗೂ ನಟನೆಯಲ್ಲಿ ಆಸಕ್ತಿ ಬೆಳೆಯುತ್ತದೆ. ಡಾನ್ಸ್ ಇಂಡಿಯಾ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಸುಮೇದ್ ಫೈನಲ್ ಗೆ ತಲುಪುತ್ತಾನೆ. ಆದರೆ ವಿನ್ನರ್ ಪಟ್ಟವನ್ನು ಪಡೆಯದಿದ್ದರೂ ಅಸಂಖ್ಯ ಡಾನ್ಸ್ ಅಭಿಮಾನಿಗಳ ಮನವನ್ನು ಜಯಿಸಿದ್ದರು.
ಸುಮೇದ್ ನ ವಿದ್ಯಾಭ್ಯಾಸ
Sumedh ಬಾಲ್ಯದಿಂದಲೂ ಬಹಳ ತುಂಟ ಹುಡುಗ. ಆದರೆ ಓದಿನಲ್ಲಿ ಸದಾ ಮುಂದು. ಸುಮೇದ್ ನನ್ನು ಪ್ರೀತಿಯಿಂದ ಆತನ ಗೆಳೆಯರು ಮತ್ತು ಮನೆಯವರು ‘ಸುಮಾ’ ಎಂದು ಕರೆಯುತ್ತಾರೆ. ಆತನಲ್ಲಿರುವ ಡಾನ್ಸ್ ನ ಹುಚ್ಚು ಯಾವತ್ತೂ ಆತನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿಲ್ಲ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಿಂಗದ್ ಸ್ಪ್ರಿಂಗ್ ಡೇಲ್ ಪಬ್ಲಿಕ್ ಸ್ಕೂಲ್ ಪುಣೆ ನಲ್ಲಿ ಮಾಡಿ ನಂತರ ಮಹಾರಾಷ್ಟ್ರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪುಣೆಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಮುಗಿಸುತ್ತಾನೆ.
ತನ್ನ ಶಾಲಾ ದಿನಗಳಲ್ಲಿ ಡಾನ್ಸ್ ನ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದ. ನಂತರ ಪದವಿ ವ್ಯಾಸಂಗ ಮಾಡುತ್ತಿರಬೇಕಾದರೆ ಡಾನ್ಸ್ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸುವುದರ ಜೊತೆ ಅದಾಗಲೇ ಸಿನಿಮಾ ರಂಗಕ್ಕೂ ಕಾಲಿಡುತ್ತಾನೆ.
ಖಳನಾಯಕ ಯುವರಾಜ್ ಸುಶೀಮ್
ಡಾನ್ಸ್ ಇಂಡಿಯಾ ಡಾನ್ಸ್ ರಿಯಾಲಿಟಿ ಶೋ (dance india dance sumedh mudgalkar) ನಲ್ಲಿ ಭಾಗವಹಿಸಿ ಫೈನಲ್ ಗೆ ತಲುಪಿದ ಸುಮೇದ್ ಗೆ ಅದಾಗಲೇ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ಇದರಿಂದ ಝೀ ಚಾನೆಲ್ ನಲ್ಲಿ ಬರುವ ಒಂದು ರಿಯಾಲಿಟಿ ಷೋನಲ್ಲಿ ನಟಿಸುವ ಅವಕಾಶವೂ ಸಿಗುತ್ತದೆ. ನಂತರ ಕಲರ್ಸ್ ಚಾನೆಲ್ ನಲ್ಲಿ ಶುರುವಾದ ಸಾಮ್ರಾಟ್ ಅಶೋಕ್ ಚಕ್ರವರ್ತಿ ಯ ಐತಿಹಾಸಿಕ ಧಾರಾವಾಹಿಯಲ್ಲಿ ಯುವರಾಜ್ ಸುಶೀಮ್ ಎಂಬ ಖಳನಾಯಕನ ಪಾತ್ರವು ಸುಮೇದ್ ನ ನಟನಾ ಜೀವನವನ್ನೇ ಬದಲಿಸಿತು.
ಈ ಧಾರಾವಾಹಿಯಲ್ಲಿನ ಸುಮೇದ್ ನ ನಟನಾ ಕೌಶಲ್ಯ ಆತನಿಗೆ ಹಲವು ಸಿನಿಮಾಗಳಲ್ಲಿ ಅವಕಾಶ ಸಿಗುವಂತೆ ಮಾಡಿತು. ಮರಾಠಿ ಸಿನಿಮಾ ವೆಂಟಿಲೇಟರ್ ನಲ್ಲಿ ಸಣ್ಣ ಪಾತ್ರ ಮಾಡಿದ ಸುಮೇದ್ ಗೆ ನಂತರ ಮರಾಠಿಯ ಮಾಂಜಾ ಸಿನಿಮಾದಲ್ಲಿ ವಿಕ್ಕಿ ಎಂಬ ಪ್ರಮುಖ ಪಾತ್ರ ಸಿಗುತ್ತದೆ. ಆ ಸಿನಿಮಾ ಬಹಳಷ್ಟು ಯಶಸ್ವಿ ಕಾಣುತ್ತದೆ. ಹಿಂದಿಯಲ್ಲಿ ಮಾಧುರಿ ದೀಕ್ಷಿತ್ ರ ಜೊತೆ ಸಹ ಒಂದು ಪಾತ್ರವನ್ನು ಮಾಡುವ ಅವಕಾಶವನ್ನು ದಕ್ಕಿಸಿಕೊಂಡು ತನ್ನ ಕನಸು ನನಸು ಮಾಡಿಸಿಕೊಂಡಿದ್ದಾನೆ.
ರಾಧಾ ಕೃಷ್ಣನ ಪಾತ್ರ ನಿಭಾಯಿಸಲು ಭಯ ಕಾಡಿತ್ತು
ಸ್ಟಾರ್ ಭಾರತದಲ್ಲಿ ಪ್ರಸಾರವಾಗಳು ಪೌರಾಣಿಕ ಧಾರಾವಾಹಿ ರಾಧಾ ಕೃಷ್ಣ ದ ಕೃಷ್ಣನ ಪಾತ್ರಕ್ಕೆ ಸುಮೇದ್ ಆಯ್ಕೆಯಾಗುತ್ತಾರೆ. ಈ ಪಾತ್ರವನ್ನು ನಿಭಾಯಿಸುವುದು ಸುಮೇದ್ ಗೆ ಬಹಳ ದೊಡ್ಡ ಸವಾಲಾಗಿತ್ತು. ಈ ಪಾತ್ರಕ್ಕೆ ತನ್ನಿಂದ ನ್ಯಾಯ ಒದಗಿಸಲು ಸಾಧ್ಯವೇ ಎಂಬ ಭಯ ಸುಮೇದ್ ನಲ್ಲಿತ್ತು. ಈ ಪಾತ್ರಕ್ಕಾಗಿ ಸುಮೇದ್ ಬಹಳಷ್ಟು ತಯಾರಿ ನಡೆಸುತ್ತಾನೆ. ಆದರೆ ನಂತರ ನಡೆದದ್ದೇ ಇತಿಹಾಸ. ಸುಮೇದ್ ನಿಭಾಯಿಸಿದ ಕೃಷ್ಣನ ಪಾತ್ರ ಎಲ್ಲಾ ವೀಕ್ಷಕರ ಮನಗೆಲ್ಲುವಲ್ಲಿ ಸಫಲವಾಗುತ್ತದೆ. Sumedh Mudgalkar Biography in kannada
ಸುಮೇದ್ ಬಿಟ್ಟು ಬೇರೆ ಯಾರೇ ಆ ಪಾತ್ರ ಮಾಡಿದ್ದರೂ ಅಷ್ಟು ಸೂಕ್ತವಿರುತ್ತಿರಲಿಲ್ಲವೇನೋ ಎಂಬಂತೆ ಆ ಪಾತ್ರಕ್ಕೆ ನ್ಯಾಯ ತುಂಬುತ್ತಾನೆ. ಸಾಕಷ್ಟು ಅಭಿಮಾನಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತದೆ. ಈಗಲೂ ಈ ಕೃಷ್ಣ ಅದೆಷ್ಟೋ ಮಂದಿಯ ಮೋಸ್ಟ್ ಫೇವರಿಟ್. ಪ್ರತಿಯೊಬ್ಬರ ವಾಟ್ಸಾಪ್ ಸ್ಟೇಟಸ್ ಲಿ ಈ ಕೃಷ್ಣ ನ ಪ್ರೇರಣಾದಾಯಕ ನುಡಿಗಳು ಹರಿದಾಡುತ್ತಿವೆ. ಸುಮೇದ್ ಮತ್ತು ಮಲ್ಲಿಕಾ ಸಿಂಗ್ ರ(sumedh mudgalkar and mallika singh) ಜೋಡಿ ನಿಜವಾದ ರಾಧಾ ಕೃಷ್ಣರು ಕಂಡಂತೆ ಸಾಮಾಜಿಕ ಜಾಲತಾಣದಲ್ಲೆಲ್ಲ ಫೇಮಸ್ ಆಗಿದ್ದಾರೆ. Shree Krishna janmashtami ಬಂತೆಂದರೆ mallika singh and sumedh mudgalkar ರ ರಾಧಾಕೃಷ್ಣ ಜೋಡಿಯ ಫೋಟೋಗಳು ಹೆಚ್ಚು ಹೆಚ್ಚು ಶೇರ್ ಆಗುತ್ತವೆ.
ಫೇವರಿಟ್ ಹೀರೋಯಿನ್
ಸುಮೇದ್ ಗೆ ನೀಲಿ ಬಣ್ಣ ಅಂದರೆ ಅಚ್ಚುಮೆಚ್ಚು. ಆತನ ಹೆಚ್ಚಿನ ಎಲ್ಲಾ ಫೋಟೋಗಳು ನೀಲಿ ಡ್ರೆಸ್ ನಲ್ಲೆ ಇರುವುದು ಈತನಿಗೆ ನೀಲಿ ಬಣ್ಣದಲ್ಲಿರುವ ಮೋಹವನ್ನು ತೋರಿಸುತ್ತದೆ. sumedh mudgalkar instagram ಖಾತೆಯಲ್ಲಿ ನೀಲಿ ಬಣ್ಣದ ಡ್ರೆಸ್ ಹೆಚ್ಚು ಇರುವುದು ಗಮನಿಸಬಹುದು. ಸುಮೇದ್ ನ ಫೇವರಿಟ್ ಹೀರೋಯಿನ್ ದೀಪಿಕಾ ಪಡುಕೋಣೆ. ತನ್ನ ಫೇವರಿಟ್ ಹೀರೋಯಿನ್ ಜೊತೆ ಒಂದಾದರೂ ಸಿನಿಮಾದಲ್ಲಿ ನಟಿಸಬೇಕೆಂಬ ಮಹದಾಸೆಯನ್ನು ಸುಮೇದ್ ಒಂದು ಬಾರಿ ಇಂಟರ್ವ್ಯೂನಲ್ಲಿ ಹೇಳಿದ್ದ.
ಪ್ರೀತಿಯ ಬಾಲ್ಯದ ಗೆಳೆಯ
ಬಾಲ್ಯದಿಂದಲೇ ಸುಮೇದ್ ಗೆ ಒಬ್ಬ ಆತ್ಮೀಯ ಗೆಳೆಯ ಸಿಕ್ಕಿದ್ದ. ಆತನ ಹೆಸರು ಪವನ್. ಪ್ರತಿ ನೋವು ನಲಿವಿನಲ್ಲೂ ಪವನ್ ಸಾಥ್ ಬಿಡುತ್ತಿರಲಿಲ್ಲ ಎಂಬುದನ್ನುಈಗಲೂ ಸುಮೇದ್ ನೆನಪಿಸಿಕೊಳ್ಳುತ್ತಾನೆ. ಟಿವಿ ಮಾಧ್ಯಮದಲ್ಲಿ ಸಿದ್ದಾರ್ಥ್ ನಿಗಮ್ ಸುಮೇದ್ ನ ಉತ್ತಮ ಸ್ನೇಹಿತನಾಗಿದ್ದಾನೆ. ಸುಮೇದ್ ಗೆ ಚಿಕ್ಕಂದಿನಿಂದ ನಾಯಿ ಅಂದರೆ ಬಲು ಪ್ರೀತಿ. ತನ್ನ ಸಾಮಾಜಿಕ ಜಾಲತಾಣದಲ್ಲಿ ಸುಮೇದ್ ಹಲವು ಬಾರಿ ತನ್ನ ಪ್ರೀತಿಯ ನಾಯಿಯೊಂದಿಗಿನ ವಿಡಿಯೋ ಮತ್ತು ಫೋಟೋವನ್ನು ಹಲವು ಬಾರಿ ಹಂಚಿಕೊಂಡಿದ್ದಾನೆ.
ಸುಮೇದ್ ಪಡೆದ ಮೊದಲ ಸಂಬಳ
ಒಂದು ಡಾನ್ಸ್ ರಿಯಾಲಿಟಿ ಶೋನಲ್ಲಿ ಸಿಕ್ಕಿದಂತಹ 700 ರೂಪಾಯಿ ಸುಮೇದ್ ಗೆ ಸಿಕ್ಕಿದ ಮೊದಲ ಸಂಬಳವಾಗಿತ್ತು. ಪ್ರಸ್ತುತ ಪಡೆಯುವ ಸಂಬಳಕ್ಕಿಂತ ಮೊದಲು ಪಡೆದ ಸಂಬಳವೇ ನನಗೆ ಯಾವತ್ತಿದ್ದರೂ ಶ್ರೇಷ್ಠ ಎಂದು ಹೇಳುತ್ತಾರೆ ಸುಮೇದ್. ಸುಮೇದ್ ಇತ್ತೀಚಿಗೆ ತನ್ನ ಹೆತ್ತವರಿಗೆ ಕಾರೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದು ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣ ಎಂದು Sumedh Vasudev mudgalkar ಹೇಳುತ್ತಾನೆ.
ಸಂದ ಪ್ರಶಸ್ತಿ ಮತ್ತು ಗೌರವಗಳು
ರಾಧ ಕೃಷ್ಣ ನ ಪಾತ್ರಕ್ಕೆ 2019 ರಲ್ಲಿ ಇಂಡಿಯನ್ ಟೆಲಿ ಅವಾರ್ಡ್ಸ್ ಮತ್ತು ಗೋಲ್ಡ್ ಅವಾರ್ಡ್ಸ್ ಗಳು ಸುಮೇದ್ ಪಾಲಿಗೆ ಸಂದಿದೆ. ಮಾಂಜಾ ದಲ್ಲಿ ನ ನಟನೆಗೆ ಸುಮೇದ್ ಗೆ ಅತ್ಯುತ್ತಮ ನಟ ವಿಭಾಗದಲ್ಲಿ ಮರಾಠಿ ಫಿಲಂ ಫೇರ್ ಅವಾರ್ಡಿಗೂ ನಾಮನಿರ್ದೇಶಿತನಾಗಿದ್ದನು. ಅದಲ್ಲದೆ ಹಲವು ಸನ್ಮಾನ ಗೌರವಕ್ಕೂ ಸುಮೇದ್ ಪಾತ್ರನಾಗಿದ್ದಾನೆ.
ಸಿನಿಮಾ ಮತ್ತು ಧಾರಾವಾಹಿ / ರಿಯಾಲಿಟಿ ಷೋಗಳು
ಸಿನಿಮಾ
ವೆಂಟಿಲೇಟರ್ – ಮರಾಠಿ ಭಾಷೆ – 2016
ಮಾಂಜಾ – ಮರಾಠಿ ಭಾಷೆ – 2017
ಬಕೆಟ್ ಲಿಸ್ಟ್ – ಮರಾಠಿ ಭಾಷೆ – 2018
ಮನ್ ಎದ್ಯಾಗತ್ ಜಾಲ – ಮರಾಠಿ ಭಾಷೆ – 2021
ಧಾರಾವಾಹಿ / ರಿಯಾಲಿಟಿ ಶೋ
ಡಾನ್ಸ್ ಇಂಡಿಯಾ ಡಾನ್ಸ್ ಸೀಸನ್ 4 – 2013-2014
ದಿಲ್ ದೋಸ್ತಿ ಡಾನ್ಸ್ – 2014
ಚಕ್ರವರ್ತಿ ಅಶೋಕ್ ಸಾಮ್ರಾಟ್ – 2015-2016
ಝಲಕ್ ದಿಕ್ ಲಾಜಾ – 2017
ರಾಧಾಕೃಷ್ಣ – 2018 – Present
ನಚ್ ಬಲಿಯೇ – 2019
ಜಗ ಜನನಿ ಮಾ ವೈಷ್ನೋ ದೇವಿ – ಕಹಾನಿ ಮಾತಾ ರಾಣಿ – 2019
ದೇವಾ ಸಶ್ರೀ ಗಣೇಶ – 2020
Instagram profile of Sumedh Vasudev Mudgalkar – beatking_sumedh
FAQs
- Sumedh Mudgalkar is a Brahmin?
Ans: No. He belongs to Marathi Family
- What is the name of the Radhakrishna serial Krishna?
Ans: Sumedh Mudgalkar
- Why Sumedh is called beatking?
Ans: ‘BeatKing’ name was given by a Sruthi who was the jury of Dance Maharashtra Dance reality show for his extraordinary permormance.
- Who is Sumedh Mudgalkar’s best friend?
Ans: As of now Mallika Singh is the best friend, who is a co-artist in Radhakrishna. In Childhood Pawan was his close friend.
- Who is Mallika Singh?
Ans: Mallika Singh is an artist who is playing the role of Radha RadhaKrishna Serial
- Who is the girlfriend of Sumedh Mudgalkar?
Ans: Tunisha Sharma. It is just roomer
- Is Sumedh Madgalker married?
Ans: As per known source Sumedh got married. But there is no information about his wife.
11 thoughts on “Radhakrishna Serial Sumedh Mudgalkar Biography in kannada”