Shri Krishna Janmashtami 2023 -ಶ್ರೀ ಕೃಷ್ಣಾಷ್ಟಮಿ – Krishna Birth Story in Kannada – ಅಷ್ಟಮಿಯ ವಿಶೇಷತೆ

ಶ್ರೀ ಕೃಷ್ಣಾಷ್ಟಮಿ – ಕೃಷ್ಣನ ಜನ್ಮ ವೃತ್ತಾಂತ – ಅಷ್ಟಮಿಯ ವಿಶೇಷತೆ – Shri Krihsna Janmashtami 2021

ಜಗದ ಪಾಲಕ ಪಾಲನ್ಹಾರ ಶ್ರೀ ವಿಷ್ಣು. ಶ್ರೀ ವಿಷ್ಣುವಿನ ಎಂಟನೇ ಅವತಾರವೇ ಶ್ರೀ ಕೃಷ್ಣನ ಅವತಾರ. ಈ ಅವತಾರವನ್ನು ಶ್ರೀ ಕೃಷ್ಣನ ಪರಮಾವತಾರ ಎಂದೂ ಕರೆಯುತ್ತಾರೆ. ದೈವಿಕ ರೂಪನಾದ ಶ್ರೀ ಕೃಷ್ಣ ಸೃಷ್ಟಿಯಲ್ಲಿರುವ ದುಷ್ಟರನ್ನು ಶಿಕ್ಷಿಸುವ ಹಾಗೂ ಭಕ್ತರ ಪಾಲಿನ ಇಷ್ಟಾರ್ಥ ಸಿದ್ಧಿ ದಯಪಾಲಿಸುವ ದಯಾನಿಧಿಯಾಗಿ ಅವತರಿಸಿದ. ಭಾದ್ರಪದ ಶುಕ್ಲಪಕ್ಷದ ಎಂಟನೇ ದಿನ ಶ್ರೀ ಕೃಷ್ಣನ ಜನನವಾಗುತ್ತದೆ. ಈ ದಿನವನ್ನು ಶ್ರೀ ಕೃಷ್ಣಾ ಜನ್ಮಾಷ್ಟಮಿ (Shri Krishna Janmashtami 2021) ಎಂದು ಆಚರಿಸಲಾಗುತ್ತದೆ

ದಕ್ಷಿಣ ಭಾರತದಲ್ಲಿ ಶ್ರೀ ಕೃಷ್ಣನ ಜನನ ಶ್ರಾವಣ ಮಾಸದಲ್ಲಿ ಆಗಿದೆ ಎಂದು ಹೇಳಲಾಗುತ್ತದೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಮಾಸಗಳಲ್ಲಿ ವ್ಯತ್ಯಾಸವಿರುವುದರಿಂದ ಈ ಗೊಂದಲವಿದೆ. ಆದರೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಒಂದೇ ದಿನ ಆಚರಿಸಲಾಗುತ್ತದೆ. 

 

ಶ್ರೀ ಕೃಷ್ಣನ ಜನ್ಮ ವೃತ್ತಾಂತ

ಮಥುರಾ ರಾಜನಾದ ಕಂಸನು ದಬ್ಬಾಳಿಕೆಯಿಂದ ತನ್ನ ಆಡಳಿತ ನಡೆಸುತ್ತಿದ್ದನು. ಅವನ ದಬ್ಬಾಳಿಕೆಯ ಆಳ್ವಿಕೆಯಿಂದ ಜನರು ಬೇಸತ್ತು ಹೋಗಿದ್ದರು. ಆದರೆ ಕಂಸ ತನ್ನ ತಂಗಿಯಾದ ದೇವಕಿಯನ್ನು ತುಂಬಾ ಪ್ರೀತಿಸುತ್ತಿದ್ದನು. ಕಂಸನು ತಂಗಿ ದೇವಕಿಯನ್ನು ವೃಷ್ನಿಸ್ ನ ರಾಜನಾಗಿದ್ದ ವಾಸುದೇವನ ಜೊತೆ ಮಾಡುವೆ ಮಾಡಿಸುತ್ತಾನೆ. ಮದುವೆಯ ನಂತರ ದೇವಕಿಯನ್ನು ಗಂಡನ ಮನೆಗೆ ಬಿಡಲು ಹೋಗುತ್ತಿರುವಾಗ ಕಂಸನಿಗೆ ಒಂದು ಅಶರೀರವಾಣಿಯಲ್ಲಿ ದೇವಕಿಯ ಎಂಟನೆಯ ಮಗುವಿನಿಂದ ಮೃತ್ಯು ಆಗಲಿದೆ ಎಂದು ಕೇಳಿಬರುತ್ತದೆ. 

ಇದನ್ನು ಕೇಳಿದ Kamsa, ದಂಪತಿಯನ್ನು ಸೆರೆಮನೆಯಲ್ಲಿ ಕೂಡಿ ಹಾಕುತ್ತಾನೆ. ನಂತರ ವಾಸುದೇವ ಮತ್ತು ದೇವಕಿಯ ಎಲ್ಲಾ ಮಕ್ಕಳನ್ನು ಕೊಳ್ಳಲು ನಿರ್ಧರಿಸುತ್ತಾನೆ. ಸಮಯ ಕಳೆದಂತೆ ವಾಸುದೇವ ಮತ್ತು ದೇವಕಿಗೆ ಮೊದಲ ಮಗು ಹುಟ್ಟಿತು. ಈ ವಿಷಯ ತಿಳಿದ ಕಂಸ ಕಾರಾಗೃಹಕ್ಕೆ ಬಂದು ಮಗುವನ್ನು ಎಳೆದು ಗೋಡೆಗೆ ಹೊಡೆದು ಕೊಂಡು ಹಾಕಿದ. ಇದೇ ರೀತಿ Devakiಯ ಏಳು ಶಿಶುಗಳನ್ನು ಕೊಂದು ಹಾಕುತ್ತಾನೆ. 

Shri Krihsna Janmashtami

ಸಮಯ ಕಳೆದಂತೆ ಒಂದು ರಾತ್ರಿ ತುಂಬಾ ಗುಡುಗು ಮಿಂಚು ಸಿಡಿಯುತ್ತಿತ್ತು. ಸುತ್ತಲೂ ಭಯದ ವಾತಾವರಣ ಸೃಷ್ಟಿಯಾಗಿತ್ತು. ಕರಾಳ ಕತ್ತಲೆ ಆವರಿಸಿತ್ತು.  ಆಗ ಕಾರಾಗ್ರಹದಲ್ಲಿ ದೇವಕಿಯ ಎಂಟನೇ ಮಗುವಿನ ಜನನವಾಯಿತು. ಆ ಶಿಶು ನೋಡಲು ಸುಂದರ ಹಾಗೂ ಬಹಳ ಮುಗ್ದವಾಗಿತ್ತು.  ಆ ಮಗುವಿನ ತೇಜೋಪ್ರಕಾಶದಿಂದ ಕಾರಾಗೃಹದ ಕರಾಳ ಕೊಠಡಿ ಪ್ರಕಾಶಮಾನವಾಯಿತು. 

 

ಆ ಮಗುವಿನ ಕಣ್ಣು ಅತ್ಯಂತ ತೇಜದಿಂದ ತುಂಬಿಕೊಂಡಿತ್ತು. ಈ ಮಗುವನ್ನು ನೋಡಿದ ವಾಸುದೇವ(ವಸುದೇವ) ಈ ಮಗುವನ್ನಾದರೂ ಉಳಿಸಿಕೊಳ್ಳಬೇಕು ಎಂದು ಹೇಳಿ ಮಹಾವಿಷ್ಣುವಿನ ಧ್ಯಾನ ಮಾಡುತ್ತಾನೆ. Vasudev ವಿಷ್ಣುವಿನ ಧ್ಯಾನಿಸುತ್ತಿರುವಂತೆ ಕಾರಾಗೃಹದ ಬಾಗಿಲು ತೆರೆಯಿತು. Devaki ಮತ್ತು ವಸುದೇವನಿಗೆ ಅಚ್ಚರಿಯ ಮೇಲೆ ಅಚ್ಚರಿ ಎದುರಾಗುತ್ತದೆ. ತಕ್ಷಣವೇ  ವಾಸುದೇವ ಮಗುವನ್ನು ಕರೆದುಕೊಂಡು ನಗರದ ಹೊರಗೆ ಹೋಗಲು ತಯಾರಾದ. ಕಾರಾಗೃಹದಿಂದ ಹೊರ ಬಂದ ವಾಸುದೇವ ಗೋಕುಲದ ಕಡೆ ಹೋಗಲು ನಿರ್ಧರಿಸುತ್ತಾನೆ.  

 

ಜೋರಾಗಿ ಸರಿಯುತ್ತಿದ್ದ ಮಳೆಯಲ್ಲಿ ನಡೆದು ಬಂಡ ವಾಸುದೇವ Yamuna ನದಿ ತೀರಕ್ಕೆ ತಲುಪುತ್ತಾನೆ. Gokulaಕ್ಕೆ ತಲುಪಬೇಕಾದರೆ ಯಮುನಾ ನದಿಯನ್ನು ದಾಟಲೇ ಬೇಕಿತ್ತು. ವಾಸುದೇವ ಅದೇ ನದಿಯ ತಟದಲ್ಲಿ ಪೂಜೆಗಾಗಿ ತಯಾರಿಸಿದ್ದ ಬುಟ್ಟಿಯೊಂದನ್ನು ಕಾಣುತ್ತಾನೆ. ಅದೇ ಬುಟ್ಟಿಯನ್ನು ಎತ್ತಿಕೊಳ್ಳುತ್ತಾನೆ. ಆ ಬುಟ್ಟಿಯಲ್ಲಿ ಮಗುವನ್ನು ಇತ್ತು ನದಿ ದಾಟಲು ಮುಂದಾಗುತ್ತಾನೆ. ನದಿ ದಾಟಲು ಸಿದ್ದನಾದ ವಸುದೇವನ ಮುಗಿನ ನೇರಕ್ಕೆ ನೀರು ತಲುಪುತ್ತದೆ. 

ಬಾಲರೂಪದಲ್ಲಿರುವ ಭಗವಂತ ಶ್ರೀ ವಿಷ್ಣು ತನ್ನ ಬಲ ಕಾಲನ್ನು ನೀರಿಗೆ ಚಾಚುತ್ತಾನೆ. ಶ್ರೀ ಹರಿಯ ಪಾದ ಸ್ಪರ್ಶವಾಗುತ್ತಿದ್ದಂತೆ ಯಮುನಾ ನದಿಯು ಇಬ್ಬಾಗವಾಗಿ ಸರಿದು ನಿಲ್ಲುತ್ತದೆ. ವಸುದೇವನಿಗೆ ಮುಂದೆ ಸಾಗಲು ಅಣುವು ಮಾಡಿಕೊಡುತ್ತದೆ. ಜೋರಾಗಿ ಮಳೆ ಸುರಿತ್ತಿದ್ದುದರಿಂದ ಶೇಷ ನಾಗನು ವಸುದೇವನ ಹಿಂಬದಿಯಿಂದ ಎದ್ದು ತನ್ನ ಹೆಡೆ ಎತ್ತಿ ಬುಟ್ಟಿಯಲ್ಲಿದ್ದ ಮಗುವಿಗೆ ಮಳೆನೀರು ಬೀಳದಂತೆ ಛತ್ರದ ರೂಪದಲ್ಲಿ ದಾರಿಯುದ್ದಕ್ಕೂ ಆಸರೆಯಾಗಿರುತ್ತದೆ. ವಾಸುದೇವ ಯಮುನಾ ನದಿಯನ್ನು ದಾಟುತ್ತಾನೆ. 

 

ಇತ್ತ ಗೋಕುಲದಲ್ಲಿ ಗೋಪಾಲಕರ ನಾಯಕ ನಂದರಾಜನ ಪತ್ನಿ ಯಶೋದೆಯು ಅದೇ ದಿನ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ರಾತ್ರಿಯಾದ ಕಾರಣ Yashoda ನಿದ್ದೆಗೆ ಜಾರಿರುತ್ತಾಳೆ. ಆಗ  ಗೋಕುಲಕ್ಕೆ ತಲುಪಿದ ವಾಸುದೇವ ಮಗು ಅಳುವುದರ ಸದ್ದು ಕೇಳಿದ ಕಡೆ ಧ್ವನಿಯನ್ನು ಹಿಂಬಾಲಿಸಿ ನಂದನ ಮನೆಗೆ ತಲುಪುತ್ತಾನೆ. ಅಲ್ಲಿ ನಿದ್ರಾವಸ್ಥೆಯಲ್ಲಿ ಇದ್ದ ಯಶೋದೆ ಮತ್ತು ಆಕೆಯ ಹೆಣ್ಣು ಮಗುವನ್ನು ಕಾಣುತ್ತಾನೆ. ನಂತರ ವಾಸುದೇವ, ಕಂಸನು ಹೆಣ್ಣು ಮಗುವನ್ನು ಕೊಳ್ಳುವುದಿಲ್ಲ ಎಂದು ಯೋಚಿಸಿ, ತನ್ನ ಮಗುವನ್ನು ಯಶೋದೆ ಬಳಿ ಇಟ್ಟು ಅವಳ ಮಗುವನ್ನು ತನ್ನ ಬುಟ್ಟಿಯಲ್ಲಿ ಇತ್ತು ಕಾರಾಗೃಹಕ್ಕೆ ಮರಳುತ್ತಾನೆ. 

 

Now Earbuds just for 99Rs – Festival Offer

 

ವಾಸುದೇವ ಕಾರಾಗೃಹಕ್ಕೆ ತಲುಪುತ್ತಿದ್ದಂತೆ ತೆರೆದಂತಹ ಎಲ್ಲಾ ಬಾಗಿಲುಗಳು ಮತ್ತೇ ಒಂದೊಂದೇ ಮುಚ್ಚಿದವು. ಕೆಲ ಸಮಯದ ನಂತರ ಕಂಸನಿಗೆ ದೇವಕಿಯ ಎಂಟನೇ ಮಗುವಿನ ಜನ್ಮದ ವಿಷಯ ತಿಳಿಯುತ್ತದೆ. ಆಗ ಕಂಸನು ಕಾರಾಗೃಹಕ್ಕೆ ಧಾವಿಸುತ್ತಾನೆ. ಕಂಸನನ್ನು ಕಂಡ ವಾಸುದೇವ ಇದು ಹೆಣ್ಣು ಮಗು. ಹೆಣ್ಣು ಮಗು ನಿನಗೆ ಏನು ಮಾಡಲು ಸಾಧ್ಯವಿಲ್ಲ. ಇದನ್ನು ಕೊಲ್ಲಬೇಡ ದಯವಿಟ್ಟು ಬಿಟ್ಟುಬಿಡು ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಾನೆ. ಆದರೆ ನಿಸ್ಕರುಣಿ ಕಂಸ, ವಸುದೇವನ ಮಾತನ್ನು ಕೇಳುವುದಿಲ್ಲ. ಮಗುವನ್ನು ಎತ್ತಿಕೊಂಡವನೇ ಗೋಡೆಗೆ ಬಡಿದು ಕೊಲ್ಲಲು ಮುಂದಾಗುತ್ತಾನೆ. ಆದರೆ  ದುರ್ಗಾದೇವಿಯ ಅವತಾರವಾದ ಆ ಮಗು ಅವನ ಕೈಯಿಂದ ಮಾಯವಾಗಿ ಆಕಾಶದಲ್ಲಿ ಪ್ರತ್ಯಕ್ಷವಾಗಿ ದೇವಿಯ ರೂಪ ತಾಳುತ್ತದೆ. ”ಹೇ ದುಷ್ಟ ಕಂಸ ನಿನ್ನನ್ನು ನಾಶ ಮಾಡುವ ಮಗು ಗೋಕುಲದಲ್ಲಿ ಸುರಕ್ಷಿತವಾಗಿದ್ದಾನೆ. ನಿನ್ನ ಸಂಹಾರ ಆತನ ಕೈಯಿಂದ ನಿಶ್ಚಿತ” ಎಂದು ಹೇಳಿ ಮಾಯವಾಗುತ್ತಲೇ ದುರ್ಗಾದೇವಿ. 

 

ಇತ್ತ ಗೋಕುಲದಲ್ಲಿ ನಂದ ಮತ್ತು ಯಶೋದಾ ಆ ಬಾಲ ರೂಪಿ ಭಗವಂತನಿಗೆ ಕೃಷ್ಣ ಎಂದು ನಾಮಕರಣ ಮಾಡುತ್ತಾರೆ. ಹೀಗೆ ಕೃಷ್ಣನ ಜನುಮವಾಗುತ್ತದೆ. ಈ ದಿನವನ್ನು ಶ್ರೀ ಕೃಷ್ಣಾ ಜನ್ಮಾಷ್ಟಮಿ (Shri Krishna Janmashtami 2021) ಎಂದು ಆಚರಿಸಲಾಗುತ್ತದೆ.  ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಜನರು ಕೇವಲ ಹಣ್ಣುಗಳು ಮತ್ತು ನೀರನ್ನು ಕುಡಿಯುವುದರ ಮೂಲಕ ಉಪವಾಸ ಆಚರಿಸುತ್ತಾರೆ.  Krishna ಬೆಣ್ಣೆ ಪ್ರಿಯನಾದ್ದರಿಂದ ಕೃಷ್ಣಾಷ್ಟಮಿಯಂದು ಕೃಷ್ಣನಿಗೆ ಬೆಣ್ಣೆ ತುಪ್ಪ ಹಾಲು ಮೊಸರುವಿನಿಂದ ಅಭಿಷೇಕ ಮಾಡುತ್ತಾರೆ. ಕೃಷ್ಣಾಷ್ಟಮಿಯ ಮರುದಿನ ಹಲವು ಸಾಂಪ್ರದಾಯಿಕ ಆಟಗಳನ್ನು ಆಡಿ ಸಂತಸ ಸಂಭ್ರಮ ಆಚರಿಸುತ್ತಾರೆ. ಮೊಸರು ತುಂಬಿದ ಮಡಕೆ ಒಡೆಯುದು ಈ ಕ್ರೀಡೆಗಳಲ್ಲಿ ಪ್ರಮುಖವಾದದ್ದು. ಈ ಕ್ರೀಡೆಗೆ ದಹಿ ಹಂಡಿ, ಮೊಸಲು ಕುಡಿಕೆ, ವಿಟ್ಲ ಪಿಂಡಿ ಹೀಗೆ  ಹಲವು ಕಡೆ ಹಲವು ಹೆಸರಿನಿಂದ ಕರೆಯುತ್ತಾರೆ. 

 

ಕೃಷ್ಣಾಷ್ಟಮಿಯ ದಿನದಂದು ಮನೆ ಮತ್ತು ದೇವಸ್ಥಾನಗಳನ್ನು ಬಹಳ ಸುಂದರವಾಗಿ ಅಲಂಕರಿಸಲಾಗುತ್ತದೆ. ಬಾಲ ಕೃಷ್ಣನ ಪುಟ್ಟ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧ ವಿಧವಾಗಿ ಅಲಂಕರಿಸಿ ವಿವಿಧ ಬಗೆಯ ತಿಂಡಿಗಳನ್ನು ಮಾಡಿ ಪೂಜಿಸಲಾಗುತ್ತದೆ.  

ಜೈ ಶ್ರೀ ಕೃಷ್ಣ – ಗೋವಿಂದಾಯ ನಮಃ

ಲೇಖಕರು : ಹರ್ಷಿತಾ ಬಾಲಕೃಷ್ಣ ಕುಲಾಲ್ 

 

Read This Article in Hindi

 

 

Read Also: Lord Shri Krishna Life Story । ಭಗವಾನ್ ಶ್ರೀ ಕೃಷ್ಣನ ಜೀವನ ಕಥೆ: Quick Story

Read Also: भगवान श्री कृष्ण की मृत्यु कैसे हुई ! पूरी मौत की कहानी

Read Also: How did lord Krishna die in Kannada: ಭಗವಾನ್ ಶ್ರೀ ಕೃಷ್ಣನ ಅಂತ್ಯ ಹೇಗಾಯಿತು

Read Also: Different Names of Lord Shri Krishna in Kannada

3 thoughts on “Shri Krishna Janmashtami 2023 -ಶ್ರೀ ಕೃಷ್ಣಾಷ್ಟಮಿ – Krishna Birth Story in Kannada – ಅಷ್ಟಮಿಯ ವಿಶೇಷತೆ”

Leave a Comment