Krishna Janmashtami 2023 । Lord Shri Krishna Life Story । ಭಗವಾನ್ ಶ್ರೀ ಕೃಷ್ಣನ ಜೀವನ ಕಥೆ : Quick Story

ಭಗವಾನ್ ಶ್ರೀ ಕೃಷ್ಣನ ಜೀವನ ಕಥೆ । Lord Shri Krishna Life Story

ಶ್ರೀ ಕೃಷ್ಣ ನು ಹಲವು ನಾಮಗಳಿಂದ ಅತ್ಯಂತ ವ್ಯಾಪಕವಾಗಿ ಪೂಜಿಸಲ್ಪಡುವ ಭಾರತೀಯ ದೇವರುಗಳಲ್ಲಿ ಒಬ್ಬರಾಗಿದ್ದರೆ. ಮತ್ತು ಅತ್ಯಂತ ಜನಪ್ರಿಯ ಹಿಂದೂ ದೇವರಾದ ವಿಷ್ಣುವಿನ ಎಂಟನೇ ಅವತಾರವಾದ ಭಗವಾನ್ ಶ್ರೀ ಕೃಷ್ಣನನ್ನು ಎಲ್ಲಾ ಭಾರತೀಯ ದೇವರುಗಳಲ್ಲಿ ಪರಮೋಚ್ಚ ದೇವರಾಗಿ ಪೂಜಿಸಲಾಗುತ್ತದೆ.

ಶ್ರೀ ಕೃಷ್ಣನು ಹಲವಾರು ಭಕ್ತಿ ಪಂಥಗಳ ಕೇಂದ್ರಬಿಂದುವಾಗಿದ್ದಾನೆ, ಹಲವಾರು ಶತಮಾನಗಳಿಂದಲೂ ಕೃಷ್ಣನ ಕುರಿತಾದ ಧಾರ್ಮಿಕ ಕಾವ್ಯ, ಸಂಗೀತ ಮತ್ತು ಚಿತ್ರಕಲೆಯ ಸಂಪತ್ತು ಬೆಳೆಯುತ್ತಲೇ ಬಂದಿದೆ. ಕೃಷ್ಣನ ಪುರಾಣದ ಮೂಲಗಳು ಮಹಾಭಾರತ ಮತ್ತು ಅದರ 5 ನೇ ಶತಮಾನದ ಸಿಇ ಅನುಬಂಧ, ಹರಿವಂಶ ಮತ್ತು ಪುರಾಣಗಳು, ವಿಶೇಷವಾಗಿ ಭಾಗವತ-ಪುರಾಣದ X ಮತ್ತು XI ಪುಸ್ತಕಗಳಲ್ಲಿ ನಾವು ಕಾಣಬಹುದು.

 

ಆ ಪುರಾಣದ ಪುಸ್ತಕಗಳಲ್ಲಿ ಶ್ರೀ ಕೃಷ್ಣ ಯಾದವ ಕುಲದಲ್ಲಿ ಹೇಗೆ ಜನಿಸಿದನೆಂದು ಸಂಕ್ಷಿಪ್ತವಾಗಿ ವಿವರಿಸುತ್ತಾರೆ. Shree Krishna ಜನ್ಮ ವೃತ್ತಾಂತದಲ್ಲಿ ಪ್ರಮುಖ ಪಾತ್ರ ವಹಿಸುವವರು ವಾಸುದೇವ ಮತ್ತು ದೇವಕಿ. ವಾಸುದೇವ ಮತ್ತು ದೇವಕಿಯ ಎಂಟನೇ ಮಗನಾಗಿ ಶ್ರೀ ಕೃಷ್ಣಾ ಜನ್ಮ ತಾಳುತ್ತಾನೆ(Krishna Janmashtami 2021). ದೇವಕಿ ಮಥುರಾದ (ಈಗಿನ ಉತ್ತರ ಪ್ರದೇಶದಲ್ಲಿ) ದುಷ್ಟ ರಾಜನಾದ ಕಂಸನ ಸಹೋದರಿಯಾಗಿದ್ದರು.

ದೇವಕಿಗೆ ಮತ್ತು ವಾಸುದೇವನು ಮದುವೆ ಮಾಡಿಕೊಂಡು ಬರುವ ಸಂಧರ್ಭದಲ್ಲಿ, ಕಂಸನು ದೇವಕಿಯ ಮಗುವಿನಿಂದ ನಾಶವಾಗುತ್ತಾನೆ ಎಂಬ ಭವಿಷ್ಯವಾಣಿಯನ್ನು ಕೇಳಿಬರುತ್ತದೆ. ಹಾಗಾಗಿ ಕಂಸನು ದೇವಕಿ ಮತ್ತು ವಾಸುದೇವನನ್ನು ಸೆರೆಮನೆಯಲ್ಲಿ ಕೂಡಿ ಹಾಕಿ ಅವರಿಗೆ ಜನಿಸಿದ ಮಕ್ಕಳನ್ನು ಕೊಳ್ಳಲು ಶುರು ಮಾಡುತ್ತಾನೆ. ಆದರೆ ಎಂಟನೇ ಮಗುವಿನ ಜನನ ಆದೊಡನೆ ವಾಸುದೇವನು ರಾತ್ರಿ ಬೆಳಗಾಗುವುದರೊಳಗಡೆ ಆ ಮಗುವನ್ನು ಸೆರೆಮನೆಯಿಂದ ಕರೆದುಕೊಂಡು ಹೋಗಿ ಯಮುನಾ ನದಿಯನ್ನು ದಾಟಿ ಗೋಕುಲಕ್ಕೆ ತೆರಳಿ ಅಲ್ಲಿ ಗೋಪಾಲಕರ ನಾಯಕ ನಂದ ಮತ್ತು ಯಶೋದಾಳಿಗೆ ಕೊಟ್ಟು ಮರಳಿ ಬರುತ್ತಾನೆ.

Krishna Janmashtami 2021

ಯಶೋದೆಯ ಮಡಿಲು ಸೇರಿದ ಮಗು ಶ್ರೀ ವಿಷ್ಣುವಿನ Paramavathari ಶ್ರೀ ಕೃಷ್ಣನಾಗಿದ್ದಾನೆ. ಮಗು ಕೃಷ್ಣನು ಬಾಲ್ಯದಿಂದಲೇ ತನ್ನ ಚೇಷ್ಟೆಗಳಿಂದಲೇ ಬೆಳೆಯುತ್ತಾನೆ. ಯುವಕನಾಗಿದ್ದಾಗ ಅನೇಕ ಪವಾಡಗಳನ್ನು ಮಾಡುತ್ತಾನೆ. ಪೂತನಿ, ಬಕಾಸುರ, ತೃಣಾವರ್ತ, ಅಘಾಸುರ ಮುಂತಾದ ರಾಕ್ಷಸರನ್ನು ಸಂಹರಿಸುತ್ತಾನೆ. ಕೃಷ್ಣನು ಗೋರಕ್ಷಕ ಪ್ರೇಮಿಯಾಗಿ ಪ್ರಸಿದ್ಧನಾದವನು, ಅವನ ಕೊಳಲಿನ ಧ್ವನಿಯು ಗೋಪಿಯರನ್ನು (ಗೋರಕ್ಷಕರ ಹೆಂಡತಿಯರು ಮತ್ತು ಹೆಣ್ಣುಮಕ್ಕಳು) ತಮ್ಮ ಮನೆಗಳನ್ನು ತೊರೆದು ಚಂದ್ರನ ಬೆಳಕಿನಲ್ಲಿ ತನ್ನೊಂದಿಗೆ ಭಾವಪರವಶವಾಗಿ ನೃತ್ಯ ಮಾಡಲು ಪ್ರೇರೇಪಿಸುತ್ತಿತ್ತು.

 

ಕೃಷ್ಣನು ಅತೀ ಹೆಚ್ಚು ಇಷ್ಟ ಪಟ್ಟ ಗೋಪಿಕೆ ಅಂದರೆ ಅದು ರಾಧೆ. ರಾಧೆಗೆ ಕೃಷ್ಣನ ಮೇಲಿದ್ದ ಪ್ರೀತಿಯು ಇಂದಿಗೂ ಮಾದರಿ. ಇಂದಿಗೂ ಕೃಷ್ಣನನ್ನು ರಾಧಾಕೃಷ್ಣ ಎಂದೂ ಕರೆಯುತ್ತಾರೆ. ರಾಧೆಯು ಲಕ್ಶ್ಮಿಯ ಅವತಾರವಾಗಿದ್ದಳು. ಆದರೆ ಕೃಷ್ಣನು ರಾಧೆಯನ್ನು ಭೂಮಿಯಲ್ಲಿ ಮದುವೆಯಾಗುವುದಿಲ್ಲ. ಗಂಧರ್ವ ವಿವಾಹವಾಗಿದ್ದಾನೆ ಎಂಬ ಪ್ರತೀತಿ ಇದೆ. ಕೃಷ್ಣನು ನಂತರ ರುಕ್ಮಿಣಿ, ಸತ್ಯಭಾಮೆಯನ್ನು ಮದುವೆಯಾಗುತ್ತಾನೆ. (Krishna Janmashtami 2021)

ಪುರಾಣದ ಪ್ರಕಾರ ಕೃಷ್ಣನಿಗೆ ಎಂಟು ಮಡದಿಯರೆಂದು ಹೇಳಲಾಗಿದೆ ಮತ್ತು ಹದಿನಾರು ಸಾವಿರ ಹೆಂಗೆಳೆಯರನ್ನು ಸಹ ಮದುವೆಯಾಗಿದ್ದಾನೆ ಎಂಬ ಉಲ್ಲೇಖ ಇದೆ. ಅದಕ್ಕೆ ಪೂರಕವಾದ ಕಥೆಯು ಇದೆ. ರುಕ್ಮಿಣಿ, ಸತ್ಯಭಾಮೆ, ಜಾಂಬವತಿ ಕಾಳಿಂದಿ, ಭದ್ರ, ಮಿತ್ರವಿಂದಾ, ಸತ್ಯ, ಲಕ್ಷ್ಮಣಾ ಹೀಗೆ ಎಂಟು ಮಡದಿಯರು.

ಕಂಸನ ಅನ್ಯಾಯ ಮಿತಿಮೀರಿದಾಗ ಕೃಷ್ಣ ಮತ್ತು ಕೃಷ್ಣನ ಅಣ್ಣ ಬಲರಾಮ ಮಥುರೆಗೆ ತೆರಳಿ ಕಂಸನ ಜೊತೆ ಯುದ್ಧ ಮಾಡುತ್ತಾರೆ. ಕೃಷ್ಣ ಕಂಸನನ್ನು ಸಂಹಾರ ಮಾಡುತ್ತಾನೆ. ಅಂದು ಕೇಳಿದ, ಕಂಸನನ್ನು ಕೊಲ್ಲುವ ಅಶರೀರವಾಣಿಯು ಶ್ರೀ ಕೃಷ್ಣ ಪೂರ್ಣಗೊಳಿಸುತ್ತಾನೆ. ಹೀಗೆ ಕಂಸನ ಸಂಹಾರವಾಗುತ್ತದೆ.

ನಂತರದ ದಿನಗಳಲ್ಲಿ Hastinapurದಲ್ಲಿ ಅಧರ್ಮ ನೆಲೆಸಿ ಅಲ್ಲಿ ದಾಯಾದಿಗಳ ಕಲಹ ಮುಗಿಲು ಮುಟ್ಟುತ್ತದೆ. ಹಸ್ತಿನಾಪುರದಲ್ಲಿ ಧರ್ಮವನ್ನು ನೆಲೆಸುವಂತೆ ಮಾಡಲು ಕೃಷ್ಣ ಪ್ರತಿಜ್ಞೆ ಮಾಡುತ್ತಾನೆ. ಹಸ್ತಿನಾಪುರದ ಕೌರವರು (ಧೃತರಾಷ್ಟ್ರನ ಪುತ್ರರು, ಕುರು ವಂಶಸ್ಥರು) ಮತ್ತು ಪಾಂಡವರು (ಪಾಂಡುವಿನ ಮಕ್ಕಳು) ನಡುವಿನ ಮಹಾಯುದ್ಧದಲ್ಲಿ ಕೃಷ್ಣನು ಧರ್ಮದ ಪರ ಇದ್ದ ಪಾಂಡವರ ಪರ ನಿಲ್ಲುತಾನೆ. ಆದರೆ ಶಸ್ತ್ರಾಸ್ತ್ರಗಳನ್ನು ಎತ್ತಲು ನಿರಾಕರಿಸಿ ಶಕುನಿಯ ಮೋಸದ ಜಾಲದಲ್ಲಿ ಕೊಟ್ಟ ಮಾತಿಗೆ ಬದ್ಧನಾಗಿ ನಿಲ್ಲಬೇಕಾದ ಪರಿಸ್ಥಿತಿ ಬರುತ್ತದೆ. ಆದರೆ ಇದೆಲ್ಲವೂ ಕೃಷ್ಣನ ಅಣತಿಯಂತೆ ನಡೆಯುತ್ತಿರುವ ನಾಟಕ ಎಂಬುದು ಕಪಟಿ ಕೌರವರಿಗೆ ತಿಳಿದಿರುವುದಿಲ್ಲ.

Krishna ಅರ್ಜುನನಿಗೆ ಸಾರಥಿಯಾಗಿ ಯುದ್ಧವನ್ನು ಮುನ್ನಡೆಸುವ ಜವಾಬ್ದಾರಿ ವಹಿಸುತ್ತಾನೆ. ಧರ್ಮವನ್ನು ನೆಲೆಸುವಂತೆ ಮಾಡುವ ಮಹಾಭಾರತದ ಕುರುಕ್ಷೇತ್ರ ಯುದ್ಧ ನಿರಂತರ ಹದಿನೆಂಟು ದಿನಗಳ ಕಾಲ ನಡೆಯುತ್ತದೆ. ಈ ಯುದ್ಧದಲ್ಲಿ ಭೀಷ್ಮ, ದ್ರೋಣಾಚಾರ್ಯ, ಕೌರವರು, ಶಕುನಿ, ಶಲ್ಯ, ಹೀಗೆ ಅಧರ್ಮ ದ ಜೊತೆ ಇದ್ದವರೆಲ್ಲರಾ ಸಂಹಾರ ಆಗುತ್ತದೆ. ಪಾಂಡವರು ವಿಜಯಿಶಾಲಿಯಾಗಿ ಹಸ್ತಿನಾಪುರದ ರಾಜ್ಯಭಾರ ವಹಿಸಿ ಧರ್ಮವನ್ನು ನೆಲೆಸುವಂತೆ ಮಾಡುತ್ತಾರೆ.

 

Kurukshetra ಯುದ್ಧ ಆಗಿ ವರ್ಷಗಳೇ ಕಳೆಯುತ್ತವೆ. ದ್ವಾರಕದಲ್ಲಿ ಕೃಷ್ಣನ ಆಡಳಿತವಿರುತ್ತದೆ. ಇದು ಯಾದವ ವಂಶಜರ ರಾಜ್ಯವಾಗಿರುತ್ತದೆ. ಕ್ರಮೇಣ ಯಾದವ ವಂಶಜರ ಮಧ್ಯೆ ಜಗಳಗಳು ಶುರವಾಗುತ್ತದೆ. ಯಾದವ ಕುಲದವರಲ್ಲಿ ಇಂತಹ ಕಲಹ ಬರಲು ಪುರಾಣದ ಪ್ರಕಾರ ಯಾದವ ವಂಶದ ಅವಸಾನಕ್ಕೆ ನಾoದಿ ಎಂದು ಹೇಳಲಾಗಿದೆ. ಇದರ ಕುರಿತಾಗಿ ಸಂಕ್ಷಿಪ್ತ ಕಥೆಯು ಲಭ್ಯ ಇದೆ. ಕೃಷ್ಣನ ಅಂತ್ಯವು ಹತ್ತಿರವಾಗುತ್ತದೆ.

ಯಾದವ ವಂಶ ನಾಶ ಆದೊಡನೆ ಕೃಷ್ಣನು ದ್ವಾರಕಾ ಬಿಟ್ಟು ಕಾಡಿಗೆ ಧ್ಯಾನಕ್ಕೆ ತೆರಳುತ್ತಾನೆ. ಶ್ರೀ ಕೃಷ್ಣ ಕಾಡಿನಲ್ಲಿ ಧ್ಯಾನದಲ್ಲಿ ಕುಳಿತಿದ್ದಾಗ ದೂರದಿಂದ ಜರಾ ಅನ್ನುವ ಬೇಟೆಗಾರ ಬಿಟ್ಟ ಬಾಣ ಕೃಷ್ಣನಿಗೆ ತಾಗುತ್ತದೆ. ಜರಾ ತನ್ನ ತಪ್ಪಿಗೆ ಕೃಷ್ಣನಲ್ಲಿ ಕ್ಷಮೆ ಕೇಳುತ್ತಾನೆ. ಆದರೆ ಕೃಷ್ಣ ಜರಾ ನ ಜನ್ಮ ವೃತ್ತಾಂತ ತಿಳಿಸಿ ಆತನನ್ನು ಕ್ಷಮಿಸಿ ತನ್ನ ಪ್ರಾಣವನ್ನು ಬಿಡುತ್ತಾನೆ.

 

Read Also: भगवान श्री कृष्ण की मृत्यु कैसे हुई ! पूरी मौत की कहानी

Read Also: Different Names of Lord Shri Krishna in Kannada

 

 

2 thoughts on “Krishna Janmashtami 2023 । Lord Shri Krishna Life Story । ಭಗವಾನ್ ಶ್ರೀ ಕೃಷ್ಣನ ಜೀವನ ಕಥೆ : Quick Story”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ