Ganesh Chaturthi 2021 | ಗಣೇಶ ಚತುರ್ಥಿ ವಿಶೇಷತೆ in Kannada
Table of Contents
Ganesha Chaturthi Speciality | ಗಣೇಶ ಚತುರ್ಥಿ ವಿಶೇಷತೆ 2021
ಈ ವರ್ಷ ಗಣೇಶ ಚತುರ್ಥಿಯನ್ನು Ganesh Chaturthi Special 2021 ಸೆಪ್ಟೆಂಬರ್ ೧೦ ರಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಆದರೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಮಾತ್ರ ದೇಶದಲ್ಲಿ ಒಂದೊಂದು ಕಡೆ ಕಾಲಮಾನಕ್ಕನುಗುಣವಾಗಿ ಬೇರೆ ಬೇರೆ ದಿನಗಳಲ್ಲಿ ಆಚರಿಸುವ ವಾಡಿಕೆಯಿದೆ. ಆದರೆ ಚತುರ್ಥಿಯನ್ನು ಮಾತ್ರ ಒಂದೇ ದಿನ ಆಚರಿಸಲಾಗುತ್ತದೆ. Ganesh Chaturthi ಅಥವಾ ಗಣೇಶ ಚೌತಿಯಂದು ಗಣೇಶನ ವಿಗ್ರಹವನ್ನು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿ ವಿಘ್ನವಿನಾಶಕನನ್ನು ಬಹಳ ಅದ್ಧೂರಿಯಿಂದ ಪೂಜೆ ಮಾಡಿ ಸಂಪ್ರಾದಯದಂತೆ ಮೂರು ದಿನಗಳಲ್ಲಿ ಅಥವಾ ಕೆಲವೆಡೆ ಐದು ದಿನಗಳಲ್ಲಿ ಅಥವಾ ಏಳು ದಿನಗಳಲ್ಲಿ ಗಂಗೆಯಲ್ಲಿ ವಿಸರ್ಜನೆ ಮಾಡಿ ಸಂಭ್ರಮಾಚರಿಸುವ ಪ್ರತೀತಿ ಇದೆ.
Gowri Festival | ಗೌರಿ ಹಬ್ಬ ಆಚರಣೆ
Ganesh Chaturthi ಹಬ್ಬ ಕೇವಲ ಒಂದು ದಿನ ಆಚರಿಸುವ ಹಬ್ಬ ಅಲ್ಲ. ಚತುರ್ಥಿಯ ಮೊದಲ ದಿನದಂದು ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತದೆ. ಗಣೇಶ ಚತುರ್ಥಿ ಹಬ್ಬದ ಹಿಂದಿನ ದಿನ ಗೌರಿ ಹಬ್ಬವನ್ನು ಆಚರಿಸುತ್ತಾರೆ. ಗೌರಿಹಬ್ಬ ಮಹಿಳೆಯರಿಗೆ ವಿಶೇಷವಾದ ಹಬ್ಬವಾಗುತ್ತದೆ. ಗೌರಿ ಎಂದರೆ ಶಿವನ ಪತ್ನಿ ಗಣೇಶನ ತಾಯಿ ಪಾರ್ವತೀ ದೇವಿ. ಗಣೇಶ ಚತುರ್ಥಿ ಹಬ್ಬದ ಒಂದು ದಿನ ಮೊದಲು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಸುಮಂಗಲಿಯರು ತಮ್ಮ ವೈವಾಹಿಕ ಜೀವನ ಮಂಗಳವಾಗಿರಲಿ ಸುಖವಾಗಿರಲಿ ಸುಭದ್ರವಾಗಿರಲಿ ಎಂದು ಸುವರ್ಣಗೌರಿ ವ್ರತ ಮಾಡುವ ಮೂಲಕ ಆಚರಿಸುತ್ತಾರೆ. ಈ ದಿನದಂದು ಮದುವೆಯಾದ ಮಹಿಳೆಯರು ತನ್ನ ಮನೆಗೆ ತೆರೆಯಲಿ ಹೆತ್ತವರ ಆಶೀರ್ವಾದ ಪಡೆದು ಬರುತ್ತಾರೆ ಎಂಬ ನಂಬಿಕೆ ಇದೆ.
Suvarna Gowri Festival | ಸುವರ್ಣ ಗೌರಿ ಹಬ್ಬ
ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನದಂದು ಗಣೇಶ ಜನಿಸಿದ್ದು ಈ ದಿನವನ್ನು ಗಣೇಶ ಚತುರ್ಥಿ ಎಂದು ಆಚರಿಸಲಾಗುತ್ತದೆ. ಚೌತಿಯ ಈ ದಿನದಂದು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಗಣೇಶನಿಗೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಬಡಿಸಿ ಪೂಜೆ ಸಲ್ಲಿಸಲಾಗುತ್ತದೆ. ಗಣೇಶನಿಗೆ ಇಷ್ಟವಾದ ಲಾಡು, ಮೋದಕ, ಕಡುಬು ಮುಂತಾದ ಸಿಹಿತಿಂಡಿಗಳನ್ನು ತಿನಿಸಿ ನೈವೇಧ್ಯ ಮಾಡಲಾಗುತ್ತದೆ. ಕಬ್ಬು ಗಣೇಶನಿಗೆ ಇಷ್ಟವಾದ ತಿನಿಸು ಆದ್ದರಿಂದ ಕಬ್ಬನ್ನು ಉಪಯೋಗಿಸಿ ವಿಶೇಷಾದ ತಿಂಡಿಯನ್ನು ತಯಾರಿಸಲಾಗುತ್ತದೆ ಮತ್ತು ಭಕ್ತವೃಂದರಿಗೆ ಪ್ರಸಾದದ ರೂಪದಲ್ಲಿ ಎಲ್ಲೆಡೆ ಹಂಚಿ ಗಣೇಶನ ಕೃಪೆಗೆ ಪಾತ್ರರಾಗುತ್ತಾರೆ.
The dissolution of Ganesha | ಗಣೇಶ ವಿಸರ್ಜನೆ | Ganesh Chaturthi Special 2021
ನಂತರದ ದಿನಗಳಲ್ಲಿ ಗಣೇಶನಿಗೆ ವಿವಿಧ ಪೂಜೆಗಳ ಜೊತೆ ಭಜನೆ ಹರಿಕತೆಗಳು ನೆರವೇರುತ್ತದೆ. ಹಲವು ದೇವಸ್ಥಾನಗಳಲ್ಲಿ ಮುಂದಿನ ನಾಲ್ಕೈದು ದಿನಗಳೂ ವಿವಿಧ ಭಜನಾ ತಂಡಗಳಿಂದ ಭಜನಾ ಸ್ಪರ್ಧೆಗಳು ಭಕ್ತಿಗೀತೆಗಳು ಆಯೋಜಿಸಲಾಗುತ್ತದೆ. ಗಣೇಶನ ವಿಸರ್ಜನೆಯ ದಿನದವರೆಗೂ ಬಹಳ ಸಂಭ್ರಮವನ್ನು ಆಚರಿಸಲಾಗುತ್ತದೆ. ಕೆಲವೆಡೆ ಸಾಂಪ್ರದಾಯಿಕ ಆಟೋಟ ಸ್ಪರ್ಧೆಗಳು ಇರುತ್ತದೆ. ನಂತರ ದೇವ ಗಣೇಶನನ್ನು ಅದ್ಧೂರಿ ಮೆರವಣಿಗೆ ಮೂಲಕ ಸಾಗಿ ಗಂಗೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಭೂಲೋಕಕ್ಕೆ ತನ್ನ ತಾಯಿ ಮನೆಗೆ ಬಂದ ಪಾರ್ವತಿ ಗೌರಿಯನ್ನು ಗಣೇಶನು ಮರಳಿ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ ಎಂಬ ನಂಬಿಕೆ. ಆದರಂತೆ ಗಣೇಶನನ್ನು ಅಷ್ಟು ದಿನ ಸತ್ಕರಿಸಿ ಕೊನೆಗೆ ಬಹಳ ಅದ್ಧೂರಿ ಮೆರವಣಿಗೆ ಮೂಲಕ ಸಡಗರದಿಂದ ಬೀಳ್ಕೊಡಲಾಗುತ್ತದೆ. Ganesh Chaturthi Special 2021