How did lord Krishna die in Kannada: ಭಗವಾನ್ ಶ್ರೀ ಕೃಷ್ಣನ ಅಂತ್ಯ ಹೇಗಾಯಿತು

ಭಗವಾನ್ ಶ್ರೀ ಕೃಷ್ಣನ ಅಂತ್ಯ ಹೇಗಾಯಿತು ? ಸಂಪೂರ್ಣ ಮರಣ ವೃತ್ತಾಂತ 

श्री कृष्ण की मृत्यु के बाद क्या हुआ |  Krishna death story | श्री कृष्ण की मृत्यु और अंतिम संस्कार

 

ಸಂಪೂರ್ಣ ಮಹಾಭಾರತದ ರೂವಾರಿ ಪಾರ್ಥಸಾರಥಿ ಶ್ರೀ ಕೃಷ್ಣನ ಅಂತ್ಯ ಹೇಗಾಯಿತು ಎಂಬ ಕುತೂಹಲಕಾರಿ ಪ್ರಶ್ನೆ ಪ್ರತಿಯೊಬ್ಬರಲ್ಲೂ ಬಂದೇ ಬರುತ್ತದೆ. ಈ ಲೇಖನದಲ್ಲಿ ಭಗವಾನ್ ಶ್ರೀ ಕೃಷ್ಣ ಹೇಗೆ ಸತ್ತ ಮತ್ತು ಯಾರು ಕೊಂದರು (How did lord Krishna die) ಎಂಬ ಮಾಹಿತಿಯನ್ನು ಪುರಾಣ ಸಹಿತ ತಿಳಿಯೋಣ.

ಭಗವಾನ್ ಶ್ರೀ ಕೃಷ್ಣ ತನ್ನ ಅಂತ್ಯಕ್ಕೆ ಎರಡು ಪ್ರಮುಖ ಕಾರಣಗಳನ್ನು ನಿಶ್ಚಯಿಸಿರುತ್ತಾನೆ. ನಾವು ಪುರಾಣಗಳಲ್ಲಿ ಓದಿರುವ ಪ್ರಕಾರ, ಧಾರಾವಾಹಿಗಳಲ್ಲಿ ನೋಡಿರುವ ಪ್ರಕಾರ ಹೆಚ್ಚಿನ ಜನರು ಕೃಷ್ಣನ ಸಾವಿಗೆ ಕೌರವರ ತಾಯಿ ದೃತರಾಷ್ಟ್ರನ ಮಡದಿ ಗಾಂಧಾರಿಯ ಶಾಪ ಅಂದುಕೊಂಡಿದ್ದಾರೆ. ಆದರೆ ಇದು ಅರ್ಧ ಸತ್ಯ.

ಶ್ರೀ ಕೃಷ್ಣನ ಸಾವಿಗೆ ಪ್ರಮುಖ ಎರಡು ಕಾರಣ ? – The reason to Krishna’s death 

ಮಹಾಭಾರತದ ಸೂತ್ರದಾರಿಯ ಸಾವಿಗೆ ಪ್ರಮುಖ ಎರಡು ಕಾರಣಗಳು ಇವೆ. ಮೊದಲನೆಯದು, ತನ್ನ ರಾಮನ ಅವತಾರದಲ್ಲಿ ಕಿಷ್ಕಿಂದೆಯ ರಾಜನಾಗಿದ್ದ ವಾಲಿಗೆ ನೀಡಿದ ವರ ಮತ್ತು ಇನ್ನೊಂದು, ಗಾಂಧಾರಿ ತನ್ನ ಪುತ್ರರ ವಿಯೋಗದಿಂದ ದುಃಖಿತರಾಗಿ ಕೋಪದಿಂದ ಶ್ರೀ ಕೃಷ್ಣನಿಗೆ ನೀಡಿದ ಶಾಪ. ಈ ಎರಡು ಕಾರಣಗಳು ಭಗವಾನ್ ಶ್ರೀ ಕೃಷ್ಣನ ಸಾವಿಗೆ ನಿಮಿತ್ತ ಮಾತ್ರವಾಗಿತ್ತು. 

 

ವಾಲಿಯ ಸಂಹಾರ ! ವಾಲಿಯ ಶಾಪ ! – The curse of Vaali 

ರಾಮಾಯಣ ಪುರಾಣದಲ್ಲಿ ಬರುವ ಕಥೆಯ ಪ್ರಕಾರ ಮರ್ಯಾದಾ ಪುರುಷೋತ್ತಮ ಶ್ರೀ ರಾಮನು ಸೀತಾ ಮಾತೆಯನ್ನು ಹುಡುಕುತ್ತಾ ಹೊರಟ ಸಮಯದಲ್ಲಿ, ವಾನರರ ಸಾಮ್ರಾಜ್ಯ ಕಿಷ್ಕಿಂದೆಯ ರಾಜ ವಾಲಿಯಿಂದ ಮೋಸ ಮತ್ತು ಅನ್ಯಾಯಕ್ಕೊಳಗಾಗಿ ರಿಷಿಮುಖ ಪರ್ವತದಲ್ಲಿ (Rishimukh Parvata) ಆಶ್ರಯ ಪಡೆದಿದ್ದ ವಾಲಿಯ ಸಹೋದರ ಸುಗ್ರೀವ, ರಾಮ ಲಕ್ಷ್ಮಣ ರ ಜೊತೆ ಸಹಾಯಕ್ಕಾಗಿ ಮೊರೆ ಇಡುತ್ತಾನೆ.

ಸತ್ಯ ಧರ್ಮವನ್ನೇ ನಂಬಿಕೊಂಡಿದ್ದ ಸುಗ್ರೀವನಿಗೆ ಶ್ರೀ ರಾಮನು ಸಹಾಯ ಮಾಡಲು ಒಪ್ಪುತ್ತಾನೆ. ಸುಗ್ರೀವ ಈ ಸಹಾಯದ ಬದಲಾಗಿ ಸೀತೆಯನ್ನು ಹುಡುಕಲು ತನ್ನ ಸಂಪೂರ್ಣ ವಾನರ ಸೈನ್ಯ ನಿಮಗೆ ಸಹಾಯ ಮಾಡುವುದು ಎಂದು ಮಾತನ್ನು ಸಹ ಕೊಡುತ್ತಾನೆ.

ವಾಲಿಗೆ ಒಂದು ವಿಶೇಷ ವರ ಇರುವುದರಿಂದ ಅವನನ್ನು ಅಷ್ಟು ಸುಲಭವಾಗಿ ಕೊಲ್ಲಲು ಸಾಧ್ಯವಿಲ್ಲ ಎಂಬ ಅರಿವು ರಾಮನಿಗಿತ್ತು. ವಾಲಿಯ ಜೊತೆ ಯುದ್ಧಕ್ಕೆ ಬಂದು ಯಾರೇ ಎದುರು ನಿಂತರೂ ಅವರ ಅರ್ಧ ಶಕ್ತಿಯೆಲ್ಲಾ ವಾಲಿಗೆ ಸೇರುತ್ತಿದ್ದವು. ಇಂಥ ಅದ್ಭುತ ವರ ಪಡೆದಿದ್ದ ವಾಲಿಯನ್ನು ಸೋಲಿಸಲು ಯಾವುದೇ ಅರಸನಿಗೂ ಆಗುತ್ತಿರಲಿಲ್ಲ. ಹೀಗಾಗಿ ವಾಲೀ ಅಜೇಯನಾಗಿರುತ್ತಿದ್ದ. ಇದರಿಂದ ಅಹಂಕಾರವು ಆತನಲ್ಲಿ ಹೆಚ್ಚಾಗಿತ್ತು.

ವಾಲಿಯನ್ನು ಉಪಾಯದಲ್ಲಿ ಕೊಲ್ಲಲು ಶ್ರೀ ರಾಮ ಸುಗ್ರೀವನಿಗೆ ಸಲಹೆ ನೀಡುತ್ತಾನೆ. ಶ್ರೀ ರಾಮ ನ ಆಜ್ಞೆಯಂತೆ ಸುಗ್ರೀವನು ವಾಲಿಯ ಜೊತೆ ಯುದ್ಧಕ್ಕೆ ಹೊರಡುತ್ತಾನೆ. ಯುದ್ಧ ನಡೆಯುತ್ತಿರಬೇಕಾದರೆ ಶ್ರೀ ರಾಮನು ಮರದ ಅಡ್ಡದಲ್ಲಿ ನಿಂತುಕೊಂಡು ವಾಲಿಗೆ ಮಾರಣಾಂತಿಕ ಬಾಣ ಹೂಡುತ್ತಾನೆ. ಇದರಿಂದ ವಾಲಿ ನೆಲಕ್ಕುರುಳುತ್ತಾನೆ.

ವಾಲಿಗೆ ತನ್ನ ಕೊನೆಯ ಸಮಯದಲ್ಲಿ ತಾನು ಮಾಡಿದ ತಪ್ಪು ಅರಿವಾಗುತ್ತದೆ. ಶ್ರೀ ರಾಮನು ಶ್ರೀ ವಿಷ್ಣುವಿನ ಅವತಾರವೆಂದೂ ಮನದಟ್ಟಾಗುತ್ತದೆ. ತಾನು ಮಾಡಿದ ಅನ್ಯಾಯಕ್ಕೆ ಕ್ಷಮೆಯನ್ನು ಕೇಳುತ್ತಾನೆ. ಆದರೆ ತಾನು ಮೋಸಕ್ಕೊಳಗಾಗಿ ಸಾಯುತ್ತಿದ್ದೇನೆ ಎಂದು ವಾಲೀ ರಾಮನಿಗೆ ಒಂದು ಶಾಪವನ್ನು ಕೊಡುತ್ತಾನೆ. (ಕೆಲವು ಕಥೆಗಳ ಪ್ರಕಾರ ವಾಲೀ ಕೊನೆಯ ಕ್ಷಣದಲ್ಲಿ ರಾಮನಲ್ಲಿ ಒಂದು ವರ ಕೇಳುತ್ತಾನೆ ಎಂಬ ಉಲ್ಲೇಖವಿದೆ.) ಮುಂದಿನ ಜನ್ಮದಲ್ಲಿ ವಿಷ್ಣುವಿನ ಅವತಾರವೂ ತನ್ನ ಕೈಯಿಂದಲೇ ವಧೆಯಾಗಬೇಕು ಎಂದು ಕೇಳಿಕೊಳ್ಳುತ್ತಾನೆ.

How did lord Krishna die

ಗಾಂಧಾರಿಯ ಶಾಪ – The curse of Gandhari

ದ್ವಾಪರಯುಗದಲ್ಲಿ ಕೌರವರ ಅಧರ್ಮಗಳನ್ನು ನಾಶಮಾಡಿ ಧರ್ಮವನ್ನು ನೆಲೆಸುವಂತೆ ಮಾಡುವ ಪ್ರಯತ್ನದಲ್ಲಿ ಶ್ರೀ ಕೃಷ್ಣನು ಪ್ರಮುಖ ಸೂತ್ರದಾರನೆನಿಸಿಕೊಂಡಿರುವನು. ಧರ್ಮಕ್ಕಾಗಿ ನಡೆದ ಮಹಾಭಾರತ ಯುದ್ಧದಲ್ಲಿ ಗಾಂಧಾರಿಯ 100 ಪುತ್ರರ ಅವಸಾನವಾಗುತ್ತದೆ. ಧರ್ಮ ನೆಲೆಸಿ ಹಸ್ತಿನಾಪುರ ಸಂಸ್ಥಾನ ಪಾಂಡವರ ಪಾಲಾಗುತ್ತದೆ. ಶ್ರೀ ಕೃಷ್ಣನು ಹಸ್ತಿನಾಪುರದಲ್ಲಿ ಧರ್ಮ ನೆಲೆಸುವಂತೆ ಮಾಡುವ ತನ್ನ ಉದ್ದೇಶವನ್ನು ಪೂರ್ತಿಗೊಳಿಸುತ್ತಾನೆ.

ತನ್ನ ನೂರು ಗಂಡು ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿದ್ದ ಗಾಂಧಾರಿಯು ಈ ಎಲ್ಲಾ ಘಟನೆಗಳಿಗೆ ಸೂತ್ರನಾದ ಶ್ರೀ ಕೃಷ್ಣನಿಗೆ ಶಾಪ ಕೊಡಲು ಮುಂದಾಗುತ್ತಾಳೆ. ತನ್ನ ಕೌರವ ಸಾಮ್ರಾಜ್ಯ ಅವಸಾನವಾಗಲು, ತನ್ನ ವಂಶ ನಿರ್ವಂಶವಾಗಲು ಕಾರಣನಾದ ಶ್ರೀ ಕೃಷ್ಣನ ಯಾದವ ವಂಶವೂ ಸಹ ಇದೇ ರೀತಿ ಸರ್ವನಾಶವಾಗಲಿ.(How did lord Krishna die). ಭೀಕರ ಅಂತ್ಯ ಕಾಣಲಿ ಎಂದು ಶಪಿಸುತ್ತಾಳೆ. ಕೃಷ್ಣನು ಗಾಂಧಾರಿಯ ಶಾಪಕ್ಕೆ ಮುಗುಳ್ನಕ್ಕು ತಥಾಸ್ತು ಎಂದು ಹಾರೈಸುತ್ತಾನೆ.

ದೂರ್ವಾಸ ಮುನಿಯ ಶಾಪ ! ಒನಕೆಗೆ ಜನ್ಮ – The curse of Durvasa Sage

ಕುರುಕ್ಷೆತ್ರ ಯುದ್ಧ ಕಳೆದು ಹಲವು ವರ್ಷಗಳಾಗುತ್ತವೆ. ಯಾದವರು ಸ್ವಲ್ಪ ಅಶಿಸ್ತಿನಿಂದಲೇ ಬೆಳೆಯುತ್ತಾರೆ. ಯಾದವ ವಂಶಜರ ನಡುವೆ ಕಲಹಗಳು ಏರ್ಪಟ್ಟಿದ್ದರಿಂದ ಕೆಲವು ಪ್ರಾಂತ್ಯಗಳು ವಿಭಜನೆಯಾಗಿರುತ್ತದೆ. ಯಾದವ ಪ್ರಜೆಗಳ ನಡುವೆ ಘರ್ಷಣೆ ಸಾಮಾನ್ಯವಾಗಿತ್ತು. ಅಹಂಕಾರ ಅಶಿಸ್ತು ಹೇರಳವಾಗಿ ಬೆಳೆದಿತ್ತು. ಒಟ್ಟಾರೆಯಾಗಿ ಯಾದವ ವಂಶದ ನಾಶಕ್ಕೆ ಯಾದವ ಪ್ರಜೆಗಳೇ ನಾಂದಿ ಹಾಡಿದಂತಿತ್ತು ಪರಿಸ್ಥಿತಿ.

ಮಹಾನ್ ತಪಸ್ವಿಗಳಾದ ಋಷಿ ದೂರ್ವಾಸ ಮುನಿ, ವಶಿಷ್ಠ ಮಹರ್ಷಿ, ನಾರದ, ವಿಶ್ವಾಮಿತ್ರರು ಅದೆಷ್ಟೋ ಸಲ ಇಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಇಲ್ಲಿನ ಜನರ ಕುಚೇಷ್ಟೆಗೆ ಬಲಿಯಾಗಿದ್ದರು. ಮತ್ತು ಋಷಿಗಳ ಶಾಪವು ಇವರಿಗೆ ಅದೆಷ್ಟೋ ಬಾರಿ ಸಿಕ್ಕಿತ್ತು. ಒಂದು ಬಾರಿ ದುರ್ವಾಸ ಮುನಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ವಿಕೃತ ಜನಗಳು ಇವರನ್ನು ಪರೀಕ್ಷಿಸಲು ಹೋಗುತ್ತಾರೆ. ಜಾಂಬವತಿಯ ಮಗ ಸಾಂಬಾ ತನ್ನ ಸ್ನೇಹಿತರೊಡನೆ ಸೇರಿಕೊಂಡು ಗರ್ಭಿಣಿಯ ವೇಷವನ್ನು ಹಾಕಿಕೊಂಡು ದುರ್ವಾಸ ಮುನಿಯ ಬಳಿ ಹೋಗುತ್ತಾರೆ.

ಮಹಾ ತಪಸ್ವಿಗಳಾದ್ದರಿಂದ ದುರ್ವಾಸ ಮುನಿಗಳು ಇವರ ಕುಚೇಷ್ಟೆಯನ್ನು ತಮ್ಮ ತಪಶ್ಶಕ್ತಿಯಿಂದ ಮುಂಚೆನೇ ಅರಿಯುತ್ತಾರೆ. ಸಾಂಬಾ ಮತ್ತು ಅವನ ಸ್ನೇಹಿತರು ಋಷಿಗಳ ಬಳಿ ಬಂದು ಈ ಮಹಿಳೆ ಜನ್ಮ ನೀಡುವ ಮಗು ಹೆಣ್ಣ ಅಥವಾ ಗಂಡಾ ಎಂದು ಸವಾಲೊಡ್ಡುತ್ತಾರೆ. ಇವರ ಕುತಂತ್ರಗಳನ್ನು ಅರಿತ ಮುನಿಗಳು ಆಕ್ರೋಶಿತಗೊಂಡು ನಿಮ್ಮ ಇಡೀ ಯಾದವ ವಂಶ ಸರ್ವನಾಶವಾಗಳು ಕಾರಣವಾಗುವ ಒನಕೆಗೆ ಸಾಂಬಾ ಜನ್ಮ ನೀಡುತ್ತಾನೆ ಎಂದು ಶಾಪ ಕೊಡುತ್ತಾರೆ.

ಅದರಂತೆ ಮರುದಿನವೇ ಹೆರಿಗೆನೋವು ಉಂಟಾಗಿ ಸಾಂಬಾ ಒಂದು ಒನಕೆಗೆ ಜನ್ಮ ನೀಡುತ್ತಾನೆ. ಇದರಿಂದ ಭಯಭೀತರಾದ ಪ್ರಜೆಗಳು ನೇರವಾಗಿ ಕೃಷ್ಣನ ಚಿಕ್ಕಪ್ಪ ಅಕ್ರೂರನ ಬಳಿ ಸಲಹೆ ಕೇಳುತ್ತಾರೆ. ಅಕ್ರೂರನು ತನ್ನ ಬುದ್ದಿವಂತಿಕೆ ಬಳಸಿ ಆ ಒನಕೆಯನ್ನು ಪುಡಿ ಪುಡಿ ಮಾಡಿ ಅದನ್ನು ದೂರದ ನದಿಗೆ ಎಸೆದು ಬರಲು ಸೂಚಿಸುತ್ತಾನೆ. ಅಕ್ರೂರನ ಸೂಚನೆಯಂತೆ ಯಾದವರು ಆ ಒನಕೆಯನ್ನು ಸರಿಯಾಗಿ ಪುಡಿ ಮಾಡಲು ಸಾಧ್ಯವಾಗದೆ ತುಂಡು ತುಂಡು ಮಾಡಿ ನದಿಗೆ ಎಸೆದು ಬರುತ್ತಾರೆ ಮತ್ತು ನಿಟ್ಟುಸಿರು ಬಿಡುತ್ತಾರೆ.

ನೀರಿಗೆ ಬಿದ್ದ ಆ ಒನಕೆಯ ಹುಡಿಗಳು ದಡಕ್ಕೆ ಸೇರಿಕೊಂಡು ಅದರಿಂದ ಅಲ್ಲಲ್ಲಿ ಎತ್ತರದ ದರ್ಬೆ ಹುಲ್ಲುಗಳು ಬೆಳೆಯುತ್ತದೆ. ನೀರಿನಾಳಕ್ಕೆ ಹೋದ ಒನಕೆಯ ಕೆಲವು ತುಂಡುಗಳು ಮೀನಿನ ಹೊಟ್ಟೆ ಸೇರುತ್ತದೆ. ಹೀಗೆ ಯಾದವರು ತಮಗೆ ಬಂದ ಸಂಕಟವನ್ನು ತಪ್ಪಿಸಿದ್ದೇವೆ ಎಂಬ ಸಂತೋಷದಿಂದ ಜೀವನ ಮುಂದುವರಿಸುತ್ತಾರೆ.

 

ಪರಸ್ಪರ ಹೊಡೆದಾಟ ! ಯಾದವರ ಅಂತ್ಯ ! – End of Yadav dynasty

ತುಂಬಾ ವರ್ಷ ಕಳೆದ ನಂತರ ಯಾದವರು ತಮ್ಮ ಆಚರಣೆಯ ವಿಚಾರವಾಗಿ ಅದೇ ನದಿಯ ದಡದಲ್ಲಿ ಜಮಾಯಿಸುತ್ತಾರೆ. ಸೇರಿದ ಯಾದವರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಮಾತು ಕೈ ಕೈ ಮಿಲಾಯಿಸುವರೆಗೂ ಹೋಗುತ್ತದೆ. ಅಲ್ಲಿ ಆಚರಣೆಯ ವಿಚಾರವಾಗಿ ಮಾತುಕತೆಗೆ ಸೇರಿದ್ದರಿಂದ ಯಾವುದೇ ಆಯುಧಗಳು ಅವರ ಕೈಯಲ್ಲಿರಲಿಲ್ಲ. ಹಾಗಾಗಿ ಗಲಾಟೆ ಜೋರಾಗಿ ಹಲವಾರು ನದಿಯಲ್ಲಿ ಬಿದ್ದು ಗುದ್ದಾಡಿದರು. ನಂತರ ಆಯುಧಕ್ಕಾಗಿ ಅಲ್ಲಿಯೇ ಒನಕೆಯ ಹುಡಿಯಿಂದ ಬೆಳೆದು ನಿಂತಿದ್ದ ದರ್ಬೆ ಹುಲ್ಲನ್ನೇ ಆಯುಧವನ್ನಾಗಿ ಬಳಸಿಕೊಂಡು ಒಬ್ಬರಿಗೊಬ್ಬರು ಆಕ್ರಮಣ ಮಾಡಿಕೊಳ್ಳುತ್ತಾರೆ. ಇದರಿಂದ ಇಡೀ ಯಾದವ ಜನಾಂಗವೇ ಅಲ್ಲಿ ಅಂತ್ಯವಾಗುತ್ತದೆ.

ಬೇಟೆಗಾರ ಜರಾನ ಬಾಣಕ್ಕೆ ಪ್ರಾಣ ಬಿಟ್ಟ ಶ್ರೀ ಕೃಷ್ಣ – Lord Shri Krishna Death

ಇದನ್ನೆಲ್ಲಾ ಗಮನಿಸಿಕೊಂಡ್ಡಿದ್ದ ಶ್ರೀ ಕೃಷ್ಣ ತನ್ನ ಸರದಿಗೆ ಕಾಯುತ್ತಿದ್ದ. ಅಂತಿಮವಾಗಿ ಗಾಂಧಾರಿಯ ಶಾಪ ನಿಜವಾಗಲೂ ತಾನೂ ಧ್ಯಾನ ಮಾಡುವ ಸಲುವಾಗಿ ಮತ್ತು ತನ್ನ ಅಂತ್ಯಕ್ಕೆ ಹತ್ತಿರವಾಗಲು ಕಾಡಿನತ್ತ ಪಯಣ ಬೆಳೆಸುತ್ತಾನೆ.

ಒನಕೆಯ ಒಂದು ತುಂಡು ಯಾವುದೋ ಒಂದು ಮೀನಿನ ಹೊಟ್ಟೆ ಸೇರಿತ್ತು. ಒಬ್ಬ ಕಾಡಿನ ಬೇಟೆಗಾರನ(ಜರಾ) ಬೇಟೆಗೆ ಸಿಕ್ಕಿದ ಮೀನಿನ ಒಳಗಿದ್ದ ಒನಕೆಯ ತುಂಡನ್ನು ಬೇಟೆಗಾರ ಬಿಲ್ಲಿನ ಮೊನಚಾಗಿ ಬಳಸಿಕೊಳ್ಳುತ್ತಾನೆ. ಆ ಬೇಟೆಗಾರ ಒಂದು ದಿನ ಕಾಡಿನಲ್ಲಿ ಬೇಟೆ ಆಡುತ್ತಿರಬೇಕಾದರೆ ಸ್ವಲ್ಪವೇ ದೂರದಲ್ಲಿ ಕೇಳಿದ ಶಬ್ದಕ್ಕೆ ಒನಕೆ ತುಂಡು ಇದ್ದ ಬಾಣವನ್ನು ಹೂಡುತ್ತಾನೆ. ಆದರೆ ಆ ಬಾಣಕ್ಕೆ ಬಲಿಯಾಗಿದ್ದು ಮಾತ್ರ ಭಗವಾನ್ ಶ್ರೀ ಕೃಷ್ಣ. (How did lord Krishna die) 

ಹತ್ತಿರಕ್ಕೆ ಬಂದು ನೋಡಿದಾಗ ಶ್ರೀ ಕೃಷ್ಣ ಬಾಣಕ್ಕೆ ತುತ್ತಾಗಿ ಬಿದ್ದಿರುವದನ್ನು ಕಂಡು ಬೇಟೆಗಾರ ತಪ್ಪಾಗಿ ಗ್ರಹಿಸಿ ನಿಮಗೆ ಬಾಣ ತಗುಲಿದೆ ನನ್ನನ್ನು ಕ್ಷಮಿಸಿ ಎಂದು ಅಂಗಲಾಚಿ ಕ್ಷಮೆ ಕೇಳುತ್ತಾನೆ. ಆದರೆ ಮುಗುಳುನಕ್ಕ ಕೃಷ್ಣ, ನಾನು ನಿನ್ನ ಬಾಣಕ್ಕಾಗಿಯೇ ಕಾಯುತ್ತಿದ್ದೆ. ಇದು ವಿಧಿ ಲಿಖಿತ ಮತ್ತು ನೀನು ಹಿಂದಿನ ಜನ್ಮದಲ್ಲಿ ವಾಲಿಯಾಗಿ ಅಂತ್ಯದ ಸಮಯದಲ್ಲಿ ನಿನ್ನ ಬೇಡಿಕೆಯಂತೆ ಈ ಜನ್ಮದಲ್ಲಿ ನನ್ನನ್ನು ಕೊಲ್ಲಲೆಂದೇ ಜನಿಸಿದ್ದಿಯಾ ಎಂದು ಬೇಟೆಗಾರನ ಸತ್ಯವನ್ನು ಹೇಳಿ ಸಮಾಧಾನಪಡಿಸುತ್ತಾನೆ. ಇದರಿಂದ ವಾಲಿ ಪಡೆದ ವಾರವೂ ಮತ್ತು ಗಾಂಧಾರಿ ಕೊಟ್ಟ ಶಾಪಾವೂ ಪೂರ್ಣಗೊಳ್ಳುತ್ತದೆ.

ಹೀಗೆ ಮಹಾವಿಷ್ಣುವಿನ ಪರಮಾವತಾರ ಭಗವಾನ್ ಶ್ರೀ ಕೃಷ್ಣನ ಉದ್ದೇಶ ದ್ವಾಪರಯುಗದಲ್ಲಿ ಪೂರ್ಣಗೊಂಡು ವಾಲಿಯು ಪಡೆದ ವರದಂತೆ ಮತ್ತು ಗಾಂಧಾರಿಯು ಕೊಟ್ಟ ಶಾಪದಂತೆ ಬಹಳ ಹೀನಾಯವಾಗಿ ಅಂತ್ಯವಾಗುತ್ತದೆ.

 

Read Also: ಭಗವಾನ್ ಶ್ರೀ ಕೃಷ್ಣನ ವಿವಿಧ ಹೆಸರುಗಳು

 

 

 

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio