Harekala Hajabba Biography in Kannada | Padma Shri Harekala Hajabba Life Story | ಹರೇಕಳ ಹಾಜಬ್ಬ ಜೀವನ ಚರಿತ್ರೆ

Harekala Hajabba Biography in Kannada | ಹರೇಕಳ ಹಾಜಬ್ಬ ಜೀವನ ಚರಿತ್ರೆ

Harekala Hajabba Biography in Kannada : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಕ್ಷರ ಸಂತ ಶಿಕ್ಷಣದಲ್ಲಿ ಕ್ರಾಂತಿಯನ್ನು ಮಾಡಿದ ಒಬ್ಬ ಸಾಮಾನ್ಯ ಮತ್ತು ಅತೀ ಸರಳ ಜೀವಿ ಹೃದಯ ಶ್ರೀಮಂತ ಹರೇಕಳ ಹಾಜಬ್ಬ ರವರಿಗೆ ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾರತದ ಮಾನ್ಯ  ರಾಷ್ಟ್ರಪತಿಗಳಾದ ರಮಾನಾಥ ಕೊವಿಂದ್ ರವರು ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು . 

 

ಕಿತ್ತಳೆ ಹಣ್ಣು ಮಾರಿ ಜೀವನ ಸಾಗಿಸುತ್ತಿದ್ದ ಹಿರಿಯ ಜೀವ ಹರೇಕಳ ಹಾಜಬ್ಬರವರಿಗೆ ಈಗಾಗಲೇ ಹಲವು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ಹಾಜಬ್ಬ ರವರು ಮಕ್ಕಳ ಶಿಕ್ಷಣಕ್ಕಾಗಿ ಕಿತ್ತಳೆ ಹಣ್ಣು ಮಾರಿ ಅದರಿಂದ ಬಂದ ಹಣದಿಂದ ತನ್ನ ಊರಲ್ಲಿ ಶಾಲೆಯನ್ನು ಕಟ್ಟಿ ಉಚಿತ ಶಿಕ್ಷಣ ಒದಗಿಸುವ ಮೂಲಕ ಎಲ್ಲರಿಗೂ ಮಾದರಿಯಾದರು ಮತ್ತು ಆಧುನಿಕ ಅಕ್ಷರ ಸಂತ ಎನಿಸಿಕೊಂಡವರು. 

 

ಕಳೆದ ವರ್ಷ ಗಣರಾಜ್ಯೋತ್ಸವ ದಿನದ ಸಂದರ್ಭದಲ್ಲಿ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಮಾರ್ಚ್ ತಿಂಗಳಲ್ಲಿ ಪ್ರಧಾನ ಮಾಡಬೇಕಾಗಿದ್ದ ಪ್ರಶಸ್ತಿಯು ಕೋರೋಣ ಕಾರಣದಿಂದಾಗಿ ಮುಂದೂಡಲಾಗಿತ್ತು. 

 

ಇಂದು ಅಂದರೆ ನವೆಂಬರ್ 8 ರಂದು ದೆಹಲಿಯಲ್ಲಿ ಎಲ್ಲಾ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದಲ್ಲಿ President Ramnath Kovind ರವರು ದಕ್ಷಿಣ ಕನ್ನಡ ಜಿಲ್ಲೆಯ ಅಕ್ಷರ ಸಂತ Harekala Hajabba ರವರಿಗೆ Padma Shri ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  

 

ಹಾಜಬ್ಬರವರನ್ನು ಪ್ರಧಾನ ಸಭಾಂಗಣ ದ ದರ್ಬಾರ್ ಹಾಲ್ ಗೆ  ಪ್ರಶಸ್ತಿಯನ್ನು ಸ್ವೀಕರಿಸಲು ಕರೆಯುತ್ತಿದ್ದಂತೆ ಹರೇಕಳ ಹಾಜಬ್ಬರವರು ತನ್ನ ಕಾಲಿನಲ್ಲಿದ ಚಪ್ಪಲಿಯನ್ನು ಅಲ್ಲಿಯೇ ಬಿಟ್ಟು ಬರಿಗಾಲಿನಲ್ಲಿ ಹೋಗುತ್ತಾರೆ. ವಿನಯತೆಯಿಂದ ಎರಡೂ ಕೈಗಳನ್ನು ಮುಗಿದು ರಾಷ್ಟ್ರಪತಿಗೆ ತಲೆಬಾಗಿ ”Padma Shree” ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ. ಪ್ರಶಸ್ತಿಯನ್ನು ಸ್ವೀಕರಿಸಿ ಹಿಂತಿರುಗುವಾಗಲೂ ನೆರೆದಿದ್ದ ಗಣ್ಯರಿಗೂ ಕೈ ಮುಗಿದು ತನ್ನ ಸರಳತೆ ಮತ್ತು ಮುಗ್ಧತೆಯನ್ನು ಪ್ರದರ್ಶಿಸಿದ್ದಾರೆ. ನಿಜವಾದ ಸಂತನಿಗೆ ದೊರೆತ ನಿಜವಾದ ಗೌರವ ಎಂದು ಹಾಜಬ್ಬರವರನ್ನು ಸಮಸ್ತ ಜನತೆ ಹೊಗಳಿದ್ದಾರೆ ಮತ್ತು ಶುಭ ಹಾರೈಸಿದ್ದಾರೆ. 

 

Mangalore ಸ್ಟೇಟ್ ಬ್ಯಾಂಕ್ ಸಿಟಿ ಹತ್ತಿರ ಹಾಜಬ್ಬರವರು ಕಿತ್ತಳೆ ಹಣ್ಣು ಮಾರಾಟ ಮಾಡುತ್ತಿರಬೇಕಾದರೆ ಒಂದು ಬಾರಿ ವಿದೇಶಿ ಮಹಿಳೆಯು ಕಿತ್ತಳೆ ಹಣ್ಣು ಕೊಳ್ಳಲು ಬರುತ್ತಾಳೆ. ಆಗ ಆಕೆ ಆಂಗ್ಲ ಭಾಷೆಯಲ್ಲಿ ಏನೋ ಹೇಳುತ್ತಾಳೆ. ಆದರೆ ಅನಕ್ಷರಸ್ಥರಾಗಿದ್ದ ಹರೇಕಳ ಹಾಜಬ್ಬರವರಿಗೆ ಈಕೆಯ ಮಾತು ಅರ್ಥವಾಗದೇ ಹೋಗುತ್ತದೆ. ಈ ಘಟನೆಯಿಂದ ನೊಂದ ಹಾಜಬ್ಬರವರಿಗೆ ಶಿಕ್ಷಣದ ನಿಜವಾದ ಮಹತ್ವ ಅರಿವಾಗುತ್ತದೆ. ಮತ್ತು ಶಿಕ್ಷಣದಲ್ಲಿ ಹೊಸ ಕ್ರಾಂತಿಯೊಂದಕ್ಕೆ ನಾಂದಿ ಹಾಡುತ್ತದೆ. 

 

ಹರೇಕಳ ಹಾಜಬ್ಬರವರು ಮರು ಯೋಚನೆ ಮಾಡದೆ ತನ್ನ ಊರಲ್ಲಿ ಶಿಕ್ಷಣ ವಂಚಿತ ಮಕ್ಕಳಿಗಾಗಿ ಶಾಲೆಯೊಂದನ್ನು ಕಟ್ಟಬೇಕು ಮತ್ತು ಅದರಲ್ಲಿ ಉಚಿತ ಶಿಕ್ಷಣ ನೀಡಬೇಕು ಎಂದು ನಿರ್ಧರಿಸುತ್ತಾರೆ. ಕಿತ್ತಳೆ ಹಣ್ಣು ಮಾರುತ್ತಾಳೆ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಶಾಲೆಯನ್ನು ಕಟ್ಟಿಯೇ ಬಿಡುತ್ತಾರೆ. ಇದರಲ್ಲಿ ಹಲವು ಮಕ್ಕಳಿಗೆ ಶಿಕ್ಷಣವನ್ನು ಒದಗಿಸುತ್ತಾರೆ. ಹರೇಕಳ ಹಾಜಬ್ಬರವರು ಅಕ್ಷರ ಸಂತ (Akshara santa) ಎನಿಸಿಕೊಳ್ಳುತ್ತಾರೆ. 

Earn Free Bitcoin

ನಿಸ್ವಾರ್ಥ ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಅಕ್ಷರ ಸಂತ ಹರೇಕಳ ಹಾಜಬ್ಬರ ಮಡಿಲಿಗೆ ಕೊನೆಗೂ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಕೈ ಸೇರಿದೆ.

 

ಹರೇಕಳ ಹಾಜಬ್ಬ ರವರ ಬಗ್ಗೆ ತಿಳಿಯಬೇಕಾದ ವಿಷಯಗಳು : Harekala Hajabba Biography in Kannada

 

ಹರೇಕಳ ಹಾಜಬ್ಬರವರ ಊರು ಯಾವುದು ?

ಹರೇಕಳ ಹಾಜಬ್ಬರವರ ಊರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮುಡಿಪು ಸಮೀಪದ ಹರೇಕಳ. 

 

ಹರೇಕಳ ಹಾಜಬ್ಬರವರ ಹುಟ್ಟಿದ ದಿನಕ್ಕೆ ಯಾವುದು Harekala Hajabba Dob ?

ಹರೇಕಳ ಹಾಜಬ್ಬರವರು 17 ಅಕ್ಟೋಬರ್  1952 ರಂದು ಹರೇಕಳದಲ್ಲಿ ಜನಿಸುತ್ತಾರೆ. 

 

ಹರೇಕಳ ಹಾಜಬ್ಬ ರ ವಯಸ್ಸು – Harekala Hajabba Age ?

ಹರೇಕಳ ಹಾಜಬ್ಬರವರ ವಯಸ್ಸು 69

 

ಹಾಜಬ್ಬರವರು ಕಟ್ಟಿದ ಶಾಲೆ ಎಲ್ಲಿದೆ ?

ಮಂಗಳೂರು ತಾಲೂಕಿನ ಮುಡಿಪುವಿನ ಹರೇಕಳದಲ್ಲಿ ಹಾಜಬ್ಬರವರು ಕಟ್ಟಿದ ಶಾಲೆ ಇದೆ. 

 

ಹಾಜಬ್ಬ ಎಲ್ಲಿ ಕಿತ್ತಳೆ ಹಣ್ಣು ಮಾರುತ್ತಿದ್ದರು ?

ಮಂಗಳೂರಿನ ಸ್ಟೇಟ್ ಬ್ಯಾಂಕ್ ನ ವೃತ್ತದ ಹತ್ತಿರ ಹರೇಕಳ ಹಾಜಬ್ಬರವರು ಕಿತ್ತಳೆ ಹಣ್ಣು ಮಾರುತ್ತಿದ್ದರು 

 

ಹರೇಕಳ ಹಾಜಬ್ಬರವರಿಗೆ ಸಂದ ಪ್ರಶಸ್ತಿಗಳು Harekala Hajabba awards? 

2021 ರ ನವೆಂಬರ್ 8 ರಂದು ನಾಲ್ಕನೇ ಅತ್ತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ 

2004 ರಲ್ಲಿ ಕನ್ನಡ ಪತ್ರಿಕೆ ಕನ್ನಡ ಪ್ರಭದಿಂದ ವರ್ಷದ ವ್ಯಕ್ತಿ ಪ್ರಶಸ್ತಿ 

ದೆಹಲಿಯಲ್ಲಿ ಸಿಎನ್‍ಎನ್- ಐಬಿಎನ್ ರಿಯಲ್ ಹೀರೋ ಪ್ರಶಸ್ತಿ 

ಮಂಗಳೂರು ವಿಶ್ವವಿದ್ಯಾಲದ ಸಿಲ್ಲಬಸ್ ಪುಸ್ತಕದಲ್ಲಿ ಹಾಜಬ್ಬರ ಕುರಿತ ಜೀವನ ಚರಿತ್ರೆಯ (Harekala Hajabba Biography in Kannada) ಪಾಠ. 

 

ಹರೇಕಳ ಹಾಜಬ್ಬರವರ ಕುರಿತ ಪುಸ್ತಕ 

ಸಾಮಾಜಿಕ ಕಾರ್ಯಕರ್ತ ಮತ್ತು ಲೇಖಕರು ಆದ ಇಸ್ಮತ್ ಪಜೀರ್ ರವರು ಹಾಜಬ್ಬ ರ ಜೀವನ ಕುರಿತಾದ ”ಹರೇಕಳ ಹಾಜಬ್ಬ ಜೀವನ ಚರಿತ್ರೆ” 

 

ಹರೇಕಳ ಹಾಜಬ್ಬರವರ ಕುಟುಂಬ Harekala Hajabba family details

ಮಾಹಿತಿ ಇಲ್ಲ 

 

ಹರೇಕಳ ಹಾಜಬ್ಬ ರವರಿಗೆ ಇರುವ ಬಿರುದು 

ಹರೇಕಳ ಹಾಜಬ್ಬರವರನ್ನು ಆಧುನಿಕ ಅಕ್ಷರ ಸಂತ ಎಂದು ಕರೆಯುತ್ತಾರೆ. 

 

ಹರೇಕಳ ಹಾಜಬ್ಬ ಕಾಂಟಾಕ್ಟ್ ನಂಬರ್ – Harekala Hajabba Contact details
ಮಾಹಿತಿ ಇಲ್ಲ

 

Also read: Radhakrishan  SerialSumedh Mudgalkar Biography in Kannada 

Also Read: Ruth Clare D’Silva Mangalore Biography 

 

 

2 thoughts on “Harekala Hajabba Biography in Kannada | Padma Shri Harekala Hajabba Life Story | ಹರೇಕಳ ಹಾಜಬ್ಬ ಜೀವನ ಚರಿತ್ರೆ”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio