ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ life story
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಯುವ ಮತ್ತು ಸ್ಟಾರ್ ಆಟಗಾರ Devdutt Padikkal Biography in kannada ಮೊದಲ ಬಾರಿ ನಿಮಗಾಗಿ. ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅಮೋಘ ಆಟವನ್ನಾಡಿ ಕ್ರಿಕೆಟ್ ಪ್ರೇಮಿಗಳ ಗಮನವನ್ನು ತನ್ನೆಡೆಗೆ ಸೆಳೆದ ಕಿರಿಯ ಪ್ರಾಯದ ಸ್ಪುರದ್ರೂಪಿ ಆಟಗಾರ ಕೇರಳದ ದೇವದತ್ ಪಡಿಕ್ಕಲ್ ಜೀವನದ ಕುರಿತ ಒಂದಷ್ಟು ಮಾಹಿತಿಗಳು.
ದೇವದತ್ ಪಡಿಕಲ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಆಡುತ್ತಿರುವ ಓರ್ವ ಅದ್ಭುತ ಆಟಗಾರ. ದೇವದತ್ ಪಡಿಕ್ಕಲ್ ಭಾರತ ತಂಡದ ಅಂಡರ್ 19 ಪರ ಸಹ ಆಡಿದ್ದಾರೆ. ಸದ್ಯ ಇವರು ಐಪಿಎಲ್ ನ ಆವೃತ್ತಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಒಪನಿಂಗ್ಸ್ ನಲ್ಲಿ ಆಡುತ್ತಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಲ್ ನ ಪಡಿಕ್ಕಲ್ ಕುಟುಂಬದಲ್ಲಿ ಬಾಬುನ್ ಕುನ್ನತ್ ಮತ್ತು ಅಂಬಲಿ ಬಾಲನ್ ದಂಪತಿಯ ಮಗನಾಗಿ ಜುಲೈ 7 ರ 2000 ದಲ್ಲಿ ದೇವದತ್ ಪಡಿಕ್ಕಲ್ ಜನಿಸುತ್ತಾರೆ. ದೇವದತ್ತ ಪಡಿಕ್ಕಲ್ ರವರ ಸಂಪೂರ್ಣ ಹೆಸರು ದೇವದತ್ ಬಾಬುನ್ ಪಡಿಕ್ಕಲ್. ಪಡಿಕ್ಕಲ್ ರಿಗೆ ಓರ್ವ ಸಹೋದರ ಮತ್ತು ಸಹೋದರಿ ಇದ್ದಾರೆ. ಸಹೋದರಿ ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Create a website that’s free with GoDaddy!
ಪಡಿಕ್ಕಲ್ ರವರ ತಂದೆ ಬಬೂನ್ ಕುಣ್ಣತ್ ಓರ್ವ ಕೇರಳದ ಉದ್ಯಮಿಯಾಗಿದ್ದು ಸಣ್ಣಂದಿನಿಂದಲೂ ಕ್ರಿಕೆಟ್ ನ ಬಹುದೊಡ್ಡ ಅಭಿಮಾನಿಯಾಗಿದ್ದರೆ. ಹಾಗಾಗಿ ತನ್ನ ಮಗನಿಗೂ ಕ್ರಿಕೆಟ್ ನಲ್ಲಿ ಆಸಕ್ತಿಯನ್ನು ಕಂಡು ಮಗನಿಗೆ ಕ್ರಿಕೆಟ್ ನಲ್ಲಿ ಬೆಳೆಯಲು ಬೇಕಾದ ಎಲ್ಲಾ ತರಹದ ಸುಪೋರ್ಟ್ ನ್ನು ತಂದೆ ನೀಡುತ್ತಾರೆ. ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಅವರ ಕುಟುಂಬವೇ ಬೆಂಗಳೂರಿಗೆ ಶಿಫ್ಟ್ ಆಗಿ ನೆಲೆಸುತ್ತದೆ.
ಅತೀ ಸಣ್ಣ ಪ್ರಾಯದಲ್ಲೀ ದೇವದತ್ ಗೆ ಕ್ರಿಕೆಟ್ ನಲ್ಲಿ ಅತೀವ ಆಸಕ್ತಿ ಇರುವುದನ್ನು ತಂದೆ ಗಮನಿಸುತ್ತಾರೆ. ಬ್ಯಾಟ್ ಹಿಡಿಯುವ ಶೈಲಿಯಾಗಲಿ ಚೆಂಡು ಎಸೆಯುವ ಆಸಕ್ತಿಯಾಗಲಿ ಇರುವದನ್ನು ತಂದೆ ಬಬೂನ್ ಕುನ್ನತ್ ಗಮನಿಸಿ ಮಗನ ಕ್ರಿಕೆಟ್ ಭವಿಷ್ಯವನ್ನು ರೂಪಿಸುವ ಸಲುವಾಗಿ ತನ್ನ ಇಡೀ ಕುಟುಂಬವನ್ನು 2011 ರಲ್ಲಿ ಬೆಂಗಳೂರಿಗೆ ಶಿಫ್ಟ್ ಮಾಡುತ್ತಾರೆ. ಮತ್ತು ಅಲ್ಲಿಯೇ ಮಗನ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸುತ್ತಾರೆ.
ಎಡಗೈ ಬ್ಯಾಟ್ಸ್‌ಮನ್ ಆಗಿ ಕ್ರಿಕೆಟ್ ನಲ್ಲಿ ಚಾತುರ್ಯತೆ ತೋರಲು ಶುರು ಮಾಡಿದ ಪಡಿಕ್ಕಲ್ ನನ್ನು ೯ ವರ್ಷ ಪ್ರಾಯವಾಗುತ್ತಲೇ ತಂದೆ ಬೆಂಗಳೂರು ಕ್ರಿಕೆಟ್ ಮಂಡಳಿಯಲ್ಲಿ ಮಗನ ಹೆಸರನ್ನು ನೋಂದಾವಣೆ ಮಾಡಿಸಿಕೊಳ್ಳುತ್ತಾರೆ. ಯಶಸ್ವಿ ಕ್ರಿಕೆಟರ್ ಆಗಲು ಬೇಕಾದ ಎಲ್ಲಾ ಸವಲತ್ತು ಮತ್ತು ಪ್ರೋತ್ಸಾಹವನ್ನು ತಂದೆ, ದೇವದತ್ ಪಡಿಕ್ಕಲ್ ಗೆ ಕೊಡುತ್ತಾ ಬರುತ್ತಾರೆ.
ದೇವದತ್ ಪಡಿಕ್ಕಲ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ Army Public Schoolನಲ್ಲಿ ಮುಗಿಸಿ ನಂತರ ಪ್ರೌಢ ಶಿಕ್ಷಣವನ್ನು ಸಂತ ಜೋಸೆಫ್ ಹುಡುಗರ ಪ್ರೌಢ ಶಾಲೆಯಲ್ಲಿ ಪೂರೈಸುತ್ತಾರೆ. ನಂತರ St. Joseph’s College ನಲ್ಲಿ ಪದವಿ ಮುಗಿಸುತ್ತಾರೆ.
ಕರ್ನಾಟಕ ಕ್ರಿಕೆಟ್ ಸಂಸ್ಥೆ (Karnataka Institute of Cricket) ಬೆಂಗಳೂರಿನಲ್ಲಿ ಕ್ರಿಕೆಟ್ ಪಡೆಯುತ್ತಿದ್ದ ದೇವದತ್ ಪಡಿಕ್ಕಲ್ ನ ಕ್ರಿಕೆಟ್ ಕೌಶಲ್ಯವನ್ನು ಬಹಳ ಬೇಗನೆ Devdutt’s Coach Naseeruddin ಅರ್ಥ ಮಾಡಿಕೊಳ್ಳುತ್ತಾರೆ. ಮುಂದೊಂದು ದಿನ ಭಾರತ ಕ್ರಿಕೆಟ್ ತಂಡವನ್ನು ಪ್ರತಿಸಿಧಿಸುವ ಸಾಮರ್ಥ್ಯವನ್ನು ಪಡಿಕ್ಕಲ್ ನಲ್ಲಿ ಕೋಚ್ ಕಾಣುತ್ತಾರೆ. ಅದಕ್ಕಾಗಿ ಆತನಿಗೆ ಬೇಕಾದ ಎಲ್ಲಾ ತರಹ ಕೋಚಿಂಗ್ ಸಪೋರ್ಟ್ ಕೊಡುತ್ತಾರೆ. ಇದೆ ಸಂಸ್ಥೆಯಲ್ಲಿ ಕ್ರಿಕೆಟ್ ನ ಸಂಪೂರ್ಣ ತರಬೇತಿಯನ್ನು ಪಡೆಯುತ್ತಾರೆ ಪಡಿಕ್ಕಲ್.
Register for GameFly™ Video Game Rentals – Start for Free!
ದೇವದತ್ ಪಡಿಕ್ಕಲ್, 2014 ರ ನಂತರ 16 ವರ್ಷದ ಮತ್ತು 19 ವರ್ಷದ ವಯೋಮಿತಿಯ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ. ೨೦೧೭ ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಕ್ಕೆ ಬಳ್ಳಾರಿ ಟಸ್ಕರ್ಸ್ ತಂಡಕ್ಕೆ ಆಯ್ಕೆಯಾಗುತ್ತಾರೆ. ಈ ಲೀಗ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಆಕರ್ಷಕ ಪಂದ್ಯವನ್ನಾಡಿ ಜನರ ಗಮನ ಸೆಳೆಯುತ್ತಾರೆ.
ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಬಳ್ಳಾರಿ ಟಸ್ಟರ್ಸ್ ಪರವಾಗಿ ಆಡಿದ ದೇವದತ್ ಪಡಿಕ್ಕಲ್ ಕೆಪಿಎಲ್ ನ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಅಮೋಘ 72 ರನ್ನುಗಳನ್ನು ಕೇವಲ 53 ಬಾಲ್ ಗಳಲ್ಲಿ ಪೂರೈಸಿ ಸಾಧನೆ ಮೆರೆದಿದ್ದರು.
ನಂತರ 2014 ರಲ್ಲಿ ಮಹಾರಾಷ್ಟ್ರದ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಆಯ್ಕೆಯಾದ ದೇವದತ್, ಅಲ್ಲಿಯೂ ಅದ್ಭುತ ಪ್ರದರ್ಶನವನ್ನು ನೀಡುತ್ತಾರೆ. ಈ ಎಲ್ಲಾ ಅಮೋಘ ಪ್ರದರ್ಶನಗಳಿಂದ ಜನರ ಗಮನ ಸೆಳೆದ ಪಡಿಕ್ಕಲ್ ಅಂಡರ್ 19 ಭಾರತೀಯ ಕ್ರಿಕೆಟ್ ತಂಡಕ್ಕೆ ಅದೇ ವರ್ಷ ಆಯ್ಕೆಯಾಗುತ್ತಾರೆ.
2019 ರಲ್ಲಿ ನಡೆದ ವಿಜಯ್ ಹಜಾರೆ ಪಂದ್ಯದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಪಡಿಕ್ಕಲ್ ಜಾರ್ಖಂಡ್ ವಿರುದ್ಧ 52 ರನ್ ಬಾರಿಸಿದ್ದರು. ಈ ಟೂರ್ನಿಯಲ್ಲಿ ಒಟ್ಟು 11 ಪಂದ್ಯಗಳು ನಡೆದಿದ್ದು ದೇವದತ್ತ ಪಡಿಕ್ಕಲ್ ಒಟ್ಟು 609 ರನ್ ಬಾರಿಸಿ ಮುಂಚೂಣಿಯಲ್ಲಿದ್ದರು.
ನಂತರ 2019 ರ ಅಕ್ಟೋಬರ್ ನಲ್ಲಿ ಭಾರತದ ಕ್ರಿಕೆಟ್ ತಂಡದ ಭಾರತ ಎ ತಂಡಕ್ಕೆ ಆಯ್ಕೆಯಾಗುತ್ತಾರೆ. ಬಿಸಿಸಿಐ ಆಯ್ಕೆ ಮಾಡುವ ತಂಡವು ಪ್ರತಿನಿಧಿಸುವ ದಾಮೋದರ್ ಟ್ರೋಫಿ ಪಂದ್ಯದಲ್ಲಿ ಪಡಿಕ್ಕಲ್ ಆಡುತ್ತಾರೆ. ನಂತರ 2019 ನವೆಂಬರ್ ನಲ್ಲಿ ಕರ್ನಾಟಕದಲ್ಲಿ ನಡೆದ ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಪಂದ್ಯ ಆಡುವ ಮುಖಾಂತರ ಟಿ20 ಪಂದ್ಯಕ್ಕೆ ಪಾದಾರ್ಪಣೆ ಮಾಡುತ್ತಾರೆ.
ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಪಂದ್ಯ ಆಡಿ ಗಮನ ಸೆಳೆದ ಪಡಿಕ್ಕಲ್ ರನ್ನು 2020 ರ ಇಂಡಿಯನ್ ಪ್ರೀಮಿಯರ್ ಲೀಗ್ ಕೆ ಆಡಲು ಬಿಡ್ ನಲ್ಲಿ ಆಯ್ಕೆ ಮಾಡಲಾಗುತ್ತದೆ. ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರವಾಗಿ ಪಡಿಕ್ಕಲ್ ಆಡುತ್ತಾರೆ. ಈ ಸೀಸನ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರವಾಗಿ ೪೭೩ ರನ್ ಗಳಿಸುತ್ತಾರೆ.
2021 ಏಪ್ರಿಲ್ 22 ರಂದು ನಡೆದ Indian Premier League 2021 ಸೀಸನ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ದೇವದತ್ ಪಡಿಕ್ಕಲ್ ಅಜೇಯವಾಗಿ ಉಳಿಯುತ್ತಾರೆ. ಈ ಪಂದ್ಯವನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್, ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ವಿಕೆಟ್ ಗಳ ಜಯವನ್ನು ಸಾಧಿಸುತ್ತದೆ.
ಈ ಆವೃತ್ತಿಯಲ್ಲಿ 101 ನಾಟ್ ಔಟ್ ರನ್ ಗಳಿಸಿದ ದೇವದತ್ ಪಡಿಕ್ಕಲ್ ನ ಕಡೆ ಕ್ರಿಕೆಟ್ ಪ್ರಿಯರೆಲ್ಲರ ಗಮನ ಹರಿಯುತ್ತದೆ. ಮತ್ತು ಈ ಒಂದೇ ಒಂದು ಮ್ಯಾಚ್ ನಿಂದ ಪಡಿಕ್ಕಲ್ ಕ್ರಿಕೆಟ್ ಪ್ರಿಯರ ಹಾಟ್ ಫೇವರಿಟ್ ಆಗುತ್ತಾರೆ. ದೇವದತ್ ರ ಪರ್ಫಾರ್ಮೆನ್ಸ್ ನೋಡಿ ಇವರನ್ನು ಜೂನಿಯರ್ ಯುವರಾಜ್ ಸಿಂಗ್ ಎಂದು ಈಗ ಕರೆಯುತ್ತಾರೆ.
2021 ರ ಸೆಪ್ಟೆಂಬರ್ 19 ರಿಂದ ಯುಎಐ ನಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಆಡಲು ದೇವದತ್ ಆಯ್ಕೆಯಾಗುತ್ತಾರೆ. ಮೊದಲ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಆಡುತ್ತಾರೆ.
ನೀವು ದೇವದತ್ ಪಡಿಕ್ಕಲ್ ರನ್ನು ಮತ್ತು ಅವರ ಪಂದ್ಯವನ್ನು ಇಷ್ಟ ಪಡುತ್ತೀರಾದರೆ ಈ ಬಯಾಗ್ರಫಿ ಲೇಖನವನ್ನು ನಿಮ್ಮ ಗೆಳೆಯ ಗೆಳೆಯತಿಯರಿಗೂ ಶೇರ್ ಮಾಡಿ. ಮತ್ತು ಕಾಮೆಂಟ್ ಮಾಡಲು ಮರೆಯಬೇಡಿ.
Read Also: Radhakrishna Serial Sumedh Mudgalkar Biography in Kannada
ದೇವದತ್ ಪಡಿಕ್ಕಲ್ ಬಯೋಗ್ರಫಿ | Devdutt Padikkal Biography in Kannada
ಹೆಸರು : ದೇವದತ್ತ್ ಪಡಿಕ್ಕಲ್
ಪೂರ್ಣ ಹೆಸರು : ದೇವದತ್ ಬಬೂನ್ ಪಡಿಕ್ಕಲ್
ಅಡ್ಡ ಹೆಸರು : ದೇವದತ್ತ್
ಜನ್ಮ ದಿನಾಂಕ : 7 ಜೂಲೈ 2000
ವಯಸ್ಸು : 21 ವರ್ಷ
ದೇವದತ್ ಎತ್ತರ : 6.3 – 191 ಸೆಂಟಿಮೀಟರ್
ದೇಹದ ಅಳತೆ : 36 – 30 – 12
ತೂಕ : 77 ಕೆಜಿ
ಹುಟ್ಟಿದ ಊರು : ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಲ್
ಪ್ರಸ್ತುತ ವಿಳಾಸ : ಬೆಂಗಳೂರು ಕರ್ನಾಟಕ
ತಂದೆಯ ಹೆಸರು : ಬಾಬುನ್ ಕುನ್ನತ್
ತಾಯಿಯ ಹೆಸರು : ಅಂಬಲಿ ಬಾಲನ್
ಸಹೋದರಿ : ನಂದಿನಿ ಪಡಿಕ್ಕಲ್
ಸಹೋದರ : Unknown
ವೈವಾಹಿಕ ಜೀವನ : ಮದುವೆಯಾಗಿಲ್ಲ
ಸಂಗಾತಿ : Unknown
ಆತ್ಮೀಯ ಗೆಳೆಯ : Unknown
ಪ್ರಾಥಮಿಕ ಶಾಲೆ : ಬೆಂಗಳೂರು ಮಿಲಿಟರಿ ಶಾಲೆ
ಪ್ರೌಢ ಶಿಕ್ಷಣ : ಸಂತ ಜೋಸೆಫ್ ಬಾಯ್ಸ್ ಪ್ರೌಢ ಶಾಲೆ
ಪದವಿ ಶಿಕ್ಷಣ : ಸಂತ ಜೋಸೆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಕಾಲೇಜು
ಪದವಿ : ಬ್ಯಾಚುಲರ್ ಡಿಗ್ರಿ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ (ಬಿಬಿಎಂ)
ದೇವದತ್ ತಂದೆಯ ವೃತ್ತಿ : ಬ್ಯುಸಿನೆಸ್
ತಾಯಿಯ ವೃತ್ತಿ : ಹೌಸ್ ವೈಫ್
ಧರ್ಮ : ಹಿಂದೂ
ಜಾತಿ : Unknown
ರಾಶಿ : ಕರ್ಕಾಟಕ
ದೇವದತ್ ವೃತ್ತಿ : ಕ್ರಿಕೆಟ್
ದೇವದತ್ ಪ್ರವೃತ್ತಿ : ಕ್ರಿಕೆಟ್
ದೇವದತ್ ಹವ್ಯಾಸ : ಪ್ರವಾಸ ಮತ್ತು ಫುಟ್ಬಾಲ್ ನೋಡುವುದು.
ಫೆವರಿಟ್ ಆಟ : ಕ್ರಿಕೆಟ್ ಮತ್ತು ಫುಟ್ಬಾಲ್
ಫೆವರಿಟ್ ಫುಟ್ಬಾಲ್ ಕ್ಲಬ್ : ಮ್ಯಾಂಚೆಸ್ಟರ್ ಯುನೈಟೆಡ್
ಫೆವರಿಟ್ ಹಾಡುಗಾರ : ತೈವೋ ಕ್ರೂಜ್
ಫೆವರಿಟ್ ಸಿನಿಮಾ : ಬ್ಯಾಡ ಬಾಯ್ಸ್ , ತ್ರೀ ಈಡಿಯಟ್ಸ್ , ಜಾನಿ ಇಂಗ್ಲಿಷ್
ಫೆವರಿಟ್ ಕ್ರಿಕೆಟ್ ಆಟಗಾರ : ವಿರಾಟ್ ಕೊಹ್ಲಿ
ಕ್ರಿಕೆಟ್ ತರಬೇತಿ : ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೆಂಗಳೂರು
ಕ್ರಿಕೆಟ್ ಕೋಚ್ : ನಸೀರುದ್ದೀನ್
ಬ್ಯಾಟಿಂಗ್ ಶೈಲಿ : ಎಡಗೈ
ಬೌಲಿಂಗ್ ಶೈಲಿ : ರೈಟ್ ಆರ್ಮ್ ಆಫ್ ಬ್ರೇಕ್
ಬ್ಯಾಟಿಂಗ್ ಕ್ರಮಾಂಕ : ಓಪನಿಂಗ್ ಬ್ಯಾಟ್ಸಮನ್
ಕ್ರಿಕೆಟ್ ಪಾದಾರ್ಪಣೆ : 2014
ದೇಶಿಯ ಕ್ರಿಕೆಟ್ ಪಾದಾರ್ಪಣೆ : 2017 – ಬಳ್ಳಾರಿ ಟಸ್ಕರ್ಸ್ ಮೂಲಕ ಕೆಪಿಎಲ್ ಗೆ
ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ : 2019 ಗ್ರೂಪ್ ಎ ಭಾರತೀಯ ಕ್ರಿಕೆಟ್ ತಂಡ
ಟಿ20 ಕ್ರಿಕೆಟ್ ಪಾದಾರ್ಪಣೆ : ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಕರ್ನಾಟಕ ತಂಡ
ಪ್ರತಿನಿಧಿಸುವ ದೇಶಿಯ ತಂಡ : ಕರ್ನಾಟಕ
ಪ್ರತಿನಿಧಿಸುವ ಅಂತಾರಾಷ್ಟ್ರೀಯ ತಂಡ : ಭಾರತ
ಮೊದಲ ಐಪಿಎಲ್ ಪಂದ್ಯ : 2020
ಪ್ರತಿನಿಧಿಸುವ ಐಪಿಎಲ್ ತಂಡ : ಬೆಂಗಳೂರು ರಾಯಲ್ ಚಾಲೆಂಜರ್ಸ್
ಐಪಿಎಲ್ ನ ಅತಿ ಹೆಚ್ಚು ರನ್ : 122 ನಾಟ್ ಔಟ್
ದೇವದತ್ ಆಡಿದ ಅಂತಾರಾಷ್ಟ್ರೀಯ T20 ಪಂದ್ಯಗಳು : 2
ದೇವದತ್ ಆಡಿದ ಇತರೆ T20 ಪಂದ್ಯಗಳು : 41
ದೇವದತ್ ಆಡಿದ ಫಸ್ಟ್ ಕ್ಲಾಸ್ ಪಂದ್ಯಗಳು : 15
ದೇವದತ್ ಆಡಿದ ತಂಡ ಎ ಪಂದ್ಯಗಳು : 20
ದೇವದತ್ ಗಳಿಸಿದ ಒಟ್ಟು ಅರ್ಧ ಶತಕಗಳು : 29
ದೇವದತ್ ಗಳಿಸಿದ ಒಟ್ಟು ಶತಕಗಳು : 8
ದೇವದತ್ ಪಡಿಕ್ಕಲ್ ಒಟ್ಟು ಆದಾಯ : ಅಂದಾಜು 6 ರಿಂದ 8 ಕೋಟಿ
ದೇವದತ್ ಪಡಿಕ್ಕಲ್ ವೇತನ : Unknown
ಆದಾಯದ ಮೂಲ : ಕ್ರಿಕೆಟ್ ಮತ್ತು ಬ್ರಾಂಡ್ ಕೊಲಬೋರೇಷನ್
ದೇವದತ್ ಪಡಿಕ್ಕಲ್ ಇನ್ಸ್ಟಾಗ್ರಾಮ್ ಪ್ರೊಫೈಲ್ : Devpadikkal19
ದೇವದತ್ ಪಡಿಕ್ಕಲ್ ಫೇಸ್ಬುಕ್ ಪೇಜ್ : Devduttpadikkal19
ದೇವದತ್ ಪಡಿಕ್ಕಲ್ ಟ್ವಿಟರ್ ಅಕೌಂಟ್ : devdpd07
ವಿಕಿಪೀಡಿಯ ಪೇಜ್ : ದೇವದತ್ ಪಡಿಕ್ಕಲ್
ಮೊಬೈಲ್ ಸಂಖ್ಯೆ : Unknown
ಇಮೇಲ್ ವಿಳಾಸ : Unknown
ದೇವದತ್ ಇಷ್ಟದ ಕಾರು : Unknown
ದೇವದತ್ ಇಷ್ಟದ ಬೈಕ್ : Unknown
ಈ ಎಲ್ಲಾ ಮಾಹಿತಿಗಳಿಗೆ ಮೂಲಗಳು : Wikipedia, celebwale
ಸದ್ಯ ಐಪಿಎಲ್ ಕ್ರಿಕೆಟ್ ಪ್ರೇಮಿಗಳ ಫೆವರಿಟ್ ಕ್ರಿಕೆಟ್ ಆಗಿರುವ ದೇವದತ್ ಪಡಿಕ್ಕಲ್ ರವರ ಜೀವನದ ಕುರಿತ ಮಾಹಿತಿಗಳು ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ. ನಮ್ಮ coolinglas.com ಜಾಲತಾಣದಲ್ಲಿ ಬಯೋಗ್ರಫಿಗಳು, ತ್ವರಿತ ಸುದ್ದಿಗಳು, ತಂತ್ರಜ್ನಾದ ಕುರಿತ ಮಾಹಿತಿಗಳು, ಆಪ್ ಬಗ್ಗೆ ರಿವ್ಯೂ, ಸಾಧಕರ ಮಾಹಿತಿ ಹೀಗ ಇನ್ನೂ ಹಲವು ಮಾಹಿತಿಗಳನ್ನು ನಾವು ಹಂಚುತ್ತಾ ಇರುತ್ತೇವೆ. ನಮ್ಮ ವೆಬ್ಸೈಟ್ ಆಗಾಗ ಬೇಟಿಯಾಗುತ್ತ ಇರಿ. ಮತ್ತು ನಿಮಗೆ ಇನ್ನೂ ಹೆಚ್ಚಿನ ಮಾಹಿತಿಗಳು ಬೇಕಿದ್ದಲ್ಲಿ ನಮ್ಮ ಕಾಂಟ್ಯಾಕ್ಟ್ ಅಸ್ ಗೆ ನಿಮ್ಮ ಸಲಹೆಯನ್ನು ಕಳುಹಿಸಬಹುದು ಅಥವಾ ಇಲ್ಲಿ ಕೆಳಗೆ ಕಾಮೆಂಟ್ ಸಹ ಮಾಡಬಹುದು.
5 thoughts on “Devdutt Padikkal Biography in Kannada | ದೇವದತ್ ಪಡಿಕ್ಕಲ್ ಬಯೋಗ್ರಫಿ. ”