ಜೀವನ ಅನ್ನೋ ಪಯಣದಲ್ಲಿ ಪ್ರತಿಯೋಬ್ಬರಿಗೂ ಒಂದಲ್ಲ ಒಂದು ಕಷ್ಟಗಳು ಬಂದೆ ಬರುತ್ತದೆ. ದೇವರು ಕಷ್ಟ ಕೊಡುವುದು ಮನುಷ್ಯನನ್ನು ಪರೀಕ್ಷೆ ಮಾಡುವುದಕ್ಕೋಸ್ಕರ ಎಂದು ಹಿರಿಯವರು ಹೇಳುತ್ತಿರುತ್ತಾರೆ. ಆದರೆ ಸಾಗುವ ದಾರಿಯಲ್ಲಿ ಮುಳ್ಳು ಸಿಕ್ಕರೆ ಹೇಗೋ ಸರಿಸಿಕೊಂಡು ಅಥವಾ ಒಮ್ಮೆ ಸಹಿಸಿಕೊಂಡು ಮುಂದೆ ಸಾಗಬಹುದು. ಆದರೆ ಸಾಗುವ ದಾರಿಯೇ ಮುಳ್ಳಿನದ್ದಾಗಿದ್ದರೆ… ಎಷ್ಟು ದೂರ ಸಾಗಬಹುದು ಅಥವಾ ಮುಳ್ಳಿನ ಮೇಲೆ ಸಾಗುವ ಪರಿಸ್ಥಿತಿ ಹೇಗಿರಬಹುದು? ಊಹಿಸೋಕೆ ಅಸಾಧ್ಯ ಆಲ್ವಾ. ಇಂತಹದ್ದೇ ಕ್ಷೀಣ ಪರಿಸ್ಥಿತಿಗೆ ಒಳಗಾದವರು ಮತ್ತು ಕಾಲನ ಕೆಟ್ಟ ಲೀಲೆಗೆ ಗುರಿಯಾದವರು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಅಂಕತ್ತಡ್ಕದ ಮಂಜುನಾಥ್ ರೈ ಯವರು.
ಟ್ಯಾಂಕರ್ ನಲ್ಲಿ ಚಾಲಕನಾಗಿ ದುಡಿದು ತನ್ನ ಇಬ್ಬರು ಸಣ್ಣ ಸಣ್ಣ ಮಕ್ಕಳನ್ನು ಸಾಕುತ್ತಾ ಮಡದಿಯೊಂದಿಗೆ ಸಾಗುತ್ತಿದ್ದ ಸಣ್ಣ ಸುಂದರ ಸಂಸಾರ ಮಂಜುನಾಥ್ ರೈ ಯವರದ್ದು. ಮಕ್ಕಳಿನ್ನೂ ಪ್ರಾಥಾಮಿಕ ಶಾಲೆಗೆ ಹೋಗುತ್ತಿದ್ದರು. ಸಂಸಾರ ಮಂಜುನಾಥ್ ರವರ ದುಡಿಮೆಯಿಂದಲೇ ಹೇಗೋ ಸಾಗುತ್ತಿತ್ತು.
ಆದರೆ ಅದು ಯಾವ ಕೆಟ್ಟ ದೃಷ್ಟಿ ಈ ಸುಂದರ ಸಂಸಾರದ ಮೇಲೆ ಬಿತ್ತೋ ಗೊತ್ತಿಲ್ಲ. ಒಂದು ದಿನ ಆ ವಿಧಿಯ ಕ್ರೂರ ಲೀಲೆಗೆ ಮಂಜುನಾಥ್ ರವರು ಬಲಿಯಾಗಬೇಕಾಯಿತು. ಟ್ಯಾಂಕರ್ ನಲ್ಲಿ ಚಾಲನೆ ಮಾಡುತ್ತಿರಬೇಕಾದರೆ ಅಚಾನಕ್ಕಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಬೆಂಗಳೂರಿಗೆ ತಲುಪಿದಾಗ ಈ ಘಟನೆ ನಡೆದಿತ್ತು. ಮಂಜುನಾಥ್ ರವರಿಗೆ ಸೀರಿಯಸ್ ಪಾರ್ಶ್ವವಾಯು ಅಟ್ಯಾಕ್ ಆಗುತ್ತದೆ. ಮಂಜುನಾಥ್ ತಮ್ಮ ಜೀವನದ ಬಗ್ಗೆ ಕಂಡಿದ್ದ ನೂರಾರು ಕನಸು ನುಚ್ಚು ನೂರಾಗಿ ಹೋಗುತ್ತದೆ.
ತಮ್ಮ ಸಂಸಾರಕ್ಕೆ ಏಕೈಕ ಆಸರೆಯಾಗಿದ್ದ ಮಂಜುನಾಥ್, ವರ್ಷಗಳ ಕಾಲ ಆಸ್ಪತ್ರೆಯ ಬೆಡ್ ನಲ್ಲಿ ಮಲಗಿ ಕಣ್ಣೀರು ಸುರಿಸುತ್ತಾ ನಿಸ್ಸಾಹಕವಾಗಿ ಜೀವನವನ್ನು ಸವೆಸುವ ಪರಿಸ್ಥಿತಿ ಎದುರಾಗುತ್ತದೆ. ತಲೆಯ ಶಸ್ತ್ರ ಚಿಕಿತ್ಸೆಗೆ ಮಂಜುನಾಥ್ ಒಳಗಾಗುತ್ತಾರೆ. ಆದರೆ ಮಂಜುನಾಥ್ ನ ದೇಹದ ಒಂದು ಭಾಗವೇ ಸ್ವಾಧೀನ ಕಳೆದುಕೊಳ್ಳುತ್ತದೆ. ಚಿಕಿತ್ಸೆಗೆ ಲಕ್ಷಗಟ್ಟಲೆ ಖರ್ಚಾಗುತ್ತದೆ. ಆದರೆ ಆಪತ್ಭಾಂಧವನಂತೆ ಪ್ರಧಾನ ಮಂತ್ರಿ ಮೋದಿಯವರ ಅಯುಷ್ಮಾನ್ ಭಾರತ ಯೋಜನೆಯ ಮುಖಾಂತರ ಮಂಜುನಾಥ್ ಅವರ ಆಸ್ಪತ್ರೆಯ ಖರ್ಚು ವೆಚ್ಚ ಸಂಪೂರ್ಣವಾಗಿ ಭರಿಸಲಾಗುತ್ತದೆ.
ಚಿಕಿತ್ಸೆಯಿಂದಾಗಿ ಮಂಜುನಾಥ್ ಹೇಗೋ ಜೀವವನ್ನು ಉಳಿಸಿಕೊಂಡು ಮನೆಗೆ ವಾಪಸಾಗುತ್ತಾರೆ. ಆದರೆ ಪಾರ್ಶ್ವವಾಯುವಿನಿಂದಾಗಿ ತನ್ನ ದೇಹದ ಒಂದು ಭಾಗದ ಸಂಪೂರ್ಣ ಸ್ವಾಧೀನತೆ ಕಳೆದುಕೊಂಡು ಮನೆಯಲ್ಲೂ ಮಲಗಿಕೊಂಡೆ ಜೀವನದ ಇನ್ನುಳಿದ ದಿನಗಳನ್ನು ಕಳೆಯುವ ಪರಿಸ್ಥಿತಿ ಇವರದ್ದು. ಇಬ್ಬರು ಸಣ್ಣ ಸಣ್ಣ ಮಕ್ಕಳು ಶಾಲೆ ಬಿಟ್ಟು ಕೆಲಸದ ಕಡೆ ಮುಖ ಮಾಡುವ ಪರಿಸ್ಥಿತಿ. ಗಂಡನ ಜೊತೆ ಮಕ್ಕಳು ಮತ್ತು ಮನೆಯ ಸಂಪೂರ್ಣ ಜವಾಬ್ದಾರಿ, ಮಹಿಳಾ ಸಂಘದಲ್ಲಿ ಸೇವಾ ನಿರತರಾಗಿ ಕಾರ್ಯ ನಿರ್ವಹಿಸುವ ಪತ್ನಿಯ ಹೆಗಲ ಮೇಲೆ.
Read Also: 10 Interesting Facts About Mohandas Karamchand Gandhi
Read Also: RCB Devdutt Padikkal Biography in Kannada | ದೇವದತ್ ಪಡಿಕ್ಕಲ್ ಬಯೋಗ್ರಫಿ.
Read Also: ಅಕ್ರಮ ಮಧ್ಯ ಸೇವಿಸಿ 20 ವರ್ಷದ ಯುವತಿಯರಿಬ್ಬರು ಸಾವು
Read Also: BMW Electric Bike CE 02 Concept Bike to The Market
ಆಸ್ಪತ್ರೆಯ ಖರ್ಚು ಭರಿಸಿದರೂ ಜೀವನ ನಿರ್ವಹಣೆಗೆ ದಿಕ್ಕೇ ತೋಚದಂತೆ ಕುಳಿತ ಮಂಜುನಾಥ್ ಅವರಿಗೆ ಈಗ ಬೇಕಿದೆ ಸಹೃದಯಿ ದಾನಿಗಳ ಕೈಲಾದಷ್ಟು ನೆರವು. ಮಂಜುನಾಥ್ ಅವರ ಜೀವನ ಪರ್ಯಂತಕ್ಕಾಗುವಷ್ಟು ಸಹಾಯ ಮಾಡಲು ಸಾಧ್ಯವಾಗದಿದ್ದರೂ, ನಮ್ಮಿಂದ ಕೈಲಾಗುವಷ್ಟು ಸಹಾಯಧನವನ್ನು ಅವರಿಗೆ ಕೊಟ್ಟರೆ ಅವರ ಮಣ ಭಾರದ ಕಷ್ಟವನ್ನು ಸ್ವಲ್ಪವಾದರೂ ತಗ್ಗಿಸಬಹುದಲ್ಲವೇ..?
ಸಹೃದಯಿಗಳೇ ನಿಮಗೆ ಸಹಾಯ ಮಾಡುವ ಇಚ್ಛೆ ಇದ್ದರೆ ಮಂಜುನಾಥ್ ಅವರ ಗೂಗಲ್ ಪೇ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ವಿವರವನ್ನು ಕೆಳಗೆ ಕೊಟ್ಟಿದ್ದೇವೆ. ದಯವಿಟ್ಟು ನಿಮ್ಮ ಕೈಲಾದಷ್ಟು ನೀವು ಸಹಾಯ ಮಾಡಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಈ ಸಂದೇಶವನ್ನು ಕಳಿಸಿ. ಅವರೂ ಸಹಾಯ ಮಾಡುವಂತೆ ಪ್ರೇರೇಪಿಸಿ. ಒಂದು ಅಸಹಾಯಕ ಕುಟುಂಬಕ್ಕೆ ಬೆಳಕಾಗೋಣ.
Note: Due to some reason helping account number, gpay, phonepay removed.
1 thought on “ನೆರವಿನ ಹಸ್ತ ಬೇಕಿದೆ: ಪಾರ್ಶ್ವ ವಾಯುವಿನಿಂದ ಹಾಸಿಗೆಯಲ್ಲಿ ಜೀವನ ಸವೆಸುತ್ತಿರುವ ಪುತ್ತೂರಿನ ಅಂಕತ್ತಡ್ಕದ ಮಂಜುನಾಥ್ ರವರ ಬಡ ಕುಟುಂಬಕ್ಕೆ ಬೇಕಿದೆ ಸಹೃದಯಿ ದಾನಿಗಳ ನೆರವಿನ ಹಸ್ತ.”