Thooduru Villagers ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ
Table of Contents
ತೂಡೂರು ಗ್ರಾಮದ ಯುವತಿಯರಿಬ್ಬರು ಸಾವನಪ್ಪಿದ ಘಟನೆ ಬೆಳಕಿಗೆ
ತೀರ್ಥಹಳ್ಳಿ: ಅಕ್ರಮವಾಗಿ ಮಾರಾಟವಾಗುತ್ತಿದ್ದ ಮದ್ಯ ಸೇವಿಸಿ ತೀರ್ಥಹಳ್ಳಿಯ ತೂಡೂರು ಗ್ರಾಮದ ಯುವತಿಯರಿಬ್ಬರು ಸಾವನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಅಲ್ಲಿನ ಗ್ರಾಮಸ್ಥರು ಅಬಕಾರಿ ಇಲಾಖೆಯ ವಿರುದ್ಧವೇ ರೊಚ್ಚಿಗೆದ್ದಿದ್ದಾರೆ.
ಅಕ್ರಮ ಮದ್ಯ ಮಾರಾಟವನ್ನು ತಡೆಯದ ಅಬಕಾರಿ ಇಲಾಖೆಯ(criminal case against the excise department) ವಿರುದ್ಧ ಗ್ರಾಮ ಪಂಚಾಯಿತಿಯ ಪರವಾಗಿ ಅಲ್ಲಿನ ಗ್ರಾಮಸ್ಥರು ಲೋಕಾಯುಕ್ತ, ಎಸಿಬಿ, ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣದ ದೂರನ್ನು ನೀಡಲು Thooduru Villagers ಪಂಚಾಯಿತಿಯ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ನಿರ್ಧರಿಸಿದರು.
ಗ್ರಾಮ ಸಭೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಕರೆಸುವಂತೆ ಹಠ
ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಧುರಾಜ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಚರ್ಚೆಯನ್ನು ಆರಂಭಿಸಿದ ಗ್ರಾಮದ ಜನರು, ಗ್ರಾಮ ಸಭೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಕರೆಸುವಂತೆ ಹಠ ಹಿಡಿದರು. ಮಧ್ಯಾಹ್ನದ ವೇಳೆಗೆ ಸಭೆಗೆ ಬಂದ ಅಬಕಾರಿ ಇಲಾಖೆಯ ನಿರೀಕ್ಷಕ ಅಮಿತ್ ಪ್ರಸಾದ್ ರ ವಿರುದ್ಧ ಅಲ್ಲಿ ಸೇರಿದ ತೂಡೂರು ಗ್ರಾಮದ ಜನರು ಆಕ್ರೋಶ ಹೊರ ಹಾಕಿದರು. ಅಕ್ರಮ ಮದ್ಯ ಮಾರಾಟವನ್ನು ತಡೆಯುವ ಅಧಿಕಾರ ಇಲಾಖೆಗೆ ಇಲ್ಲವೇ ಎಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಧುರಾಜ್ ಹೆಗ್ಡೆ ಮತ್ತು ಸದಸ್ಯರಾದ ಅರವಿಂದ್, ಭುಜಂಗ, ಶರತ್, ಪ್ರಮುಖರಾದ ಬೇಗುವಳ್ಳಿ ಕವಿರಾಜ್, ಬೇಗುವಳ್ಳಿ ಸತೀಶ್ ಸೇರಿದಂತೆ ಎಲ್ಲಾ ಗ್ರಾಮಸ್ಥರು ಪ್ರಶ್ನೆ ಮಾಡಿದರು.

Thooduru Villagers ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ (ಸಾಂದರ್ಭಿಕ ಚಿತ್ರ)
Read Also: ಮಂಗಳೂರಿನ ಹುಡುಗಿ ರುತ್ ಕ್ಲೇರ್ ಡಿಸಿಲ್ವಾ ಸಿಎ ಪರೀಕ್ಷೆಯಲ್ಲಿ ಸಾಧನೆ
Read Also: ಕೃತಿ ಸನೊನ್ ಖರೀದಿ ಮಾಡಿದ ಐಷಾರಾಮಿ ಕಾರು ಯಾವುದು ಗೊತ್ತಾ?
ಅಕ್ರಮ ಮದ್ಯಮಾರಾಟದ ದಂಧೆಯೊಂದಿಗೆ ಅಬಕಾರಿ ಇಲಾಖೆ ಶಾಮೀಲಾಗಿದೆ ಎಂದು ಗ್ರಾಮಸ್ಥರ ಗಂಭೀರ ಆರೋಪ
ತೂದೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಈ ಅಕ್ರಮ ಮದ್ಯ ಮಾರಾಟದ ಜಾಲ ವ್ಯಾಪಕವಾಗಿ ಹರಡಿದ್ದು, ಅನೇಕ ಬಾರಿ ಅಬಕಾರಿಯ ಇಲಾಖೆಯ ಗಮನಕ್ಕೆ ತಂದರೂ ಈ ದಂಧೆ ನಿಯಂತ್ರಣವಾಗಿಲ್ಲ. ಕಳೆದ ಎರಡು ದಿನಗಳಲ್ಲಿ ಮಾರಾಟ ಮಡಿದ ಅಕ್ರಮ ಮದ್ಯ ಸೇವನೆಯ ಪರಿಣಾಮ 20 ವರ್ಷದ ಇಬ್ಬರು ಯುವತಿಯರು ಜೀವ ಕಳೆದುಕೊಂಡಿದ್ದಾರೆ. ಈ ಸಾವಿಗೆ ಕಾರಣ ಅಕ್ರಮವಾಗಿ ಥರ್ಡ್ಸ್ ಮದ್ಯ ಮಾರಾಟವೇ ಆಗಿದೆ. ಈ ಅಕ್ರಮ ಮದ್ಯಮಾರಾಟದ ದಂಧೆಯೊಂದಿಗೆ ಅಬಕಾರಿ ಇಲಾಖೆಯು ಸಹ ಶಾಮೀಲಾಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದರು.
ಬಾರ್, ವೈನ್ಸ್ ಶಾಪ್ ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ
ಶೀಘ್ರವೇ ಈ ಅಕ್ರಮ ಮದ್ಯ ಮಾರಾಟದ ಜಾಲದ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಕ್ರಮ ಮದ್ಯ ಪೂರೈಕೆ ಮಾಡುತ್ತಿರುವ ಬಾರ್, ವೈನ್ಸ್ ಶಾಪ್ ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಕ್ರಮ ಮದ್ಯ ಮಾರಾಟದ ಬಾಟಲಿಗಳಲ್ಲಿ ಯಾವುದೇ ರೀತಿಯ ಕಂಪನಿ ಯ ಉಲ್ಲೇಖ ಇಲ್ಲ ಯಾವುದೇ ಮುದ್ರೆ ಇಲ್ಲ. ಇದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳೇ ನೇರ ಕಾರಣ ಎಂದು ಗ್ರಾಮಸ್ಥರು ಇವರನ್ನು ತರಾಟೆಗೆ ತೆಗೆದುಕೊಂಡರು.

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh