Ankola: ಬದುಕುವ ಛಲ ಇದ್ದರೆ, ಸಾಧಿಸುವ ಹಠ ಇದ್ದರೆ, ಅದೇನೇ ಕಷ್ಟ ಎದುರಾದರು ಗೆಲ್ಲಬಲ್ಲೆ ಎಂಬುದಕ್ಕೆ ನೇರ ಉದಾಹರಣೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ಮಂಜುನಾಥ್ ನಾಯ್ಕ ಇವರು. ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಕೈಕಟ್ಟಿ ಕುಳಿತಿರಬೇಕಾದರೆ ಮಂಜುನಾಥ್ ರವರು ಮಾತ್ರ ತನ್ನ ಕೃಷಿ ಭೂಮಿಯಲ್ಲಿ ಕಾಕಡ ಮಲ್ಲಿಗೆ(Kakada Jasmine) ಬೆಳೆದು ಯಶಸ್ವಿ ಕೃಷಿಕರೆನಿಸಿಕೊಂಡಿದ್ದಾರೆ. ಹೂವಿನ ಬೇಸಾಯದಲ್ಲಿ ಯಶಸ್ಸನ್ನು ಕಂಡ ಮಂಜುನಾಥ ಮತ್ತು ಮಂದಾ ದಂಪತಿ ಇತರರಿಗೂ ಸ್ಫೂರ್ತಿಯಾಗಿದ್ದಾರೆ.
ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸಕಲ ಬೇಣದ ಅರೆಗದ್ದೆಯ ನಿವಾಸಿಗಳಾಗಿರುವ ಮಂಜುನಾಥ್ ರವರು ಹುಟ್ಟಿನಿಂದಲೇ ಕೃಷಿಕರು. ಕೇವಲ ಶೇಂಗಾ, ಭತ್ತ ಬೇಸಾಯಕ್ಕೆ ಮಾತ್ರ ಈ ಕುಟುಂಬ ಸೀಮಿತವಾಗಿತ್ತು. ಮಂಜುನಾಥ ಮಾತ್ರ ಚಿಕ್ಕಂದಿನಿಂದಲೂ ಕ್ರಿಯಾಶೀಲರಾಗಿರುವ ಕೃಷಿಕ. ಕೃಷಿಯಲ್ಲಿ ಒಂದಲ್ಲಾ ಒಂದು ಹೊಸ ಪ್ರಯೋಗಕ್ಕೆ ಮಾಡುತ್ತಿದ್ದವರು. ಈ ಸಲ ಅವರು ಹೂವಿನ ಬೇಸಾಯ ಮಾಡುವುದನ್ನು ಆಯ್ಕೆಮಾಡಿಕೊಂಡವರು. ಪತ್ನಿ ಮಂದಾ ಹಾಗೂ ತಾಯಿ ಭಾಗೀರಥಿಯೂ ಇವರ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದರು.
ಹೈನುಗಾರಿಕೆಯು ಈ ಕುಟುಂಬದ ಉಪ ಕಸುಬಾಗಿದೆ. ಹತ್ತಿರದ ಕಾಡಿನಿಂದ ಸೊಪ್ಪು – ತರಗೆಲೆಗಳನ್ನು ತಂದು ಸೆಗಣಿಗೆ ಬೆರೆಸಿ ಸಾವಯವ ಗೊಬ್ಬರವನ್ನು ಮಂಜುನಾಥ್ ಆವರೇ ಸಿದ್ಧಗೊಳಿಸುತ್ತಾರೆ. ಸಮೃದ್ಧ ನೈಸರ್ಗಿಕ ಗೊಬ್ಬರ ಇವರ ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಬಲ ತುಂಬಿದೆ. ಇವರಿಗಿರುವ ಒಂದು ಸಣ್ಣ ಭೂಮಿಯಲ್ಲಿ ಬೆಳೆದ ಭತ್ತ, ಶೇಂಗಾ ಇವರಿಗೆ ಸರಿಯಾದ ಆದಾಯ ನೀಡದ ಕಾರಣ ವಿನೂತನ ಕೃಷಿ ಮಾಡಬೇಕೆಂಬ ಕನಸು ಕಂಡಿದ್ದರು. ಆಗ ಮಂಜುನಾಥ್ ಆಯ್ಕೆ ಮಾಡಿದ್ದು ಕಾಕಡ ಹೂವಿನ ಬೇಸಾಯ. ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಯವರು ನೀಡುವ ಆರ್ಥಿಕ ಸಾಲ ಇವರ ಹೂ ಬೇಸಾಯಕ್ಕೆ ಇನ್ನಷ್ಟು ಆಸರೆಯಾಯಿತು.
Festival Offer on in Amazon – Check Now
ಇವರ ಐದು ಗುಂಟೆ ಸಾಗುವಳಿ ಭೂಮಿಯಲ್ಲಿ Kakada Jasmine ಕೃಷಿ ಮಾಡಲು ಮುಂದಾದಾಗ, ನೋಡಿದ ಅನೇಕರು ದಂಪತಿಯ ಈ ಸಾಹಸ ವ್ಯರ್ಥ ಪ್ರಯತ್ನ ಎಂದು ಅನೇಕರು ಮೂಗು ಮುರಿದಿದ್ದರು. ಆದರೆ ಇಂತಹ ಯಾವುದೇ ಡೆಮೋಟಿವ್ ಮಾತುಗಳಿವೆ ಕಿವಿಕೊಡದೆ, ಇಂತಹ ಮಾತುಗಳಿಂದ ಕುಗ್ಗದೇ ಕಾಕಡ ಮಲ್ಲಿಗೆಯ ಗಿಡ ನೆಟ್ಟು ಪೋಷಿಸಿದ ಮಂಜುನಾಥ್ ಕುಟುಂಬಕ್ಕೆ ಅವರ ನಿರೀಕ್ಷೆಗೂ ಮೀರಿ ಯಶಸ್ಸು ಸಿಕ್ಕಿದೆ. ಶುರುವಿನಲ್ಲಿ 500ಕ್ಕೂ ಗಿಡಗಳಿಗಿಂತಲೂ ಹೆಚ್ಚಿನ ಕಾಕಡಾ ಗಿಡಗಳಲ್ಲಿ ಅಲ್ಪ ಪ್ರಮಾಣದ ಹೂ ಅರಳಿತು. ಆದರೆ ಈಗ ಅವರ ನಿರೀಕ್ಷೆಗೂ ಮೀರಿ ಹೂ ನೀಡಲಾಂಬಿಸಿದೆ. ಮಕ್ಕಳಂತೆ ಪೋಷಣೆ ಮಾಡಿ ಬೆಳೆಸಿಕೊಂಡಿರುವ ಕಾಕಡ ಮಲ್ಲಿಗೆಯ ವನ ಈಗ ಇನ್ನಷ್ಟು ವಿಸ್ತಾರಗೊಂಡಿದೆ.
ದಿನಾ ಬೆಳಗ್ಗೆಯಿಂದ ಸಂಜೆಯವರೆಗೂ ಹೂ ಬೇಸಾಯದಲ್ಲೇ ದುಡಿದು ಬೆವರಿಸುವ ಮಂಜುನಾಥ್ ದಂಪತಿ ಹೂ ಕೊಯ್ಲು ಮಾಡಿ, ಅದನ್ನು ಮಾಲೆ ಕಟ್ಟುವ ನಾಲ್ಕಾರು ಕೆಲಸದಾಳುಗಳಿಗೆ ಉದ್ಯೋಗ ದಾತರಾಗಿದ್ದರೆ. ಒಂದು ಮಾರು ಕಾಕಡ ಹೂ ಕಟ್ಟಲು ಸುಮಾರು 6 ರೂ. ನೀಡಲಾಗುತ್ತದೆ. ಸುಮಾರು 500 ಮಾರುದ್ದದ ಕಾಕಡ ಮಲ್ಲಿಗೆ ಹೂ ಮಂಜುನಾಥ್ ಅವರ ಭೂಮಿಯಲ್ಲಿ ಪ್ರತಿದಿನ ಸಿದ್ಧಗೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಹೂವಿನ ಮಾರಾಟಗಾರರಿಗೆ ಒಂದು ಮಾರಿಗೆ 30 ರೂ ರಂತೆ ಮಾರಾಟ ಮಾಡಲಾಗುತ್ತದೆ.
ಮಂಜುನಾಥ್ ಕುಟುಂಬ ತೋಟದ Kakada Jasmine ಹೂವಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಬೆಂಗಳೂರು, ತುಮಕೂರು ಮುಂತಾದೆಡೆಯಿಂದಲೂ ಹೂ ಪೇಟೆಗೆ ಬರುತ್ತವೆಯಾದರೂ, ಆದರೆ ಗ್ರಾಹಕರ ಪ್ರಕಾರ ಇವರ ಮಲ್ಲಿಗೆಯ ತಾಜಾತನವಿರದು. ಹಾಗಾಗಿ ಮಂಜುನಾಥ್ ಅವರ ಕಾಕಡ ಮಲ್ಲಿಗೆ ಹೂವಿನ ತೋಟ ವರ್ಷದಿಂದ ವರ್ಷಕ್ಕೆ ಬೇಡಿಕೆಯಿಂದಾಗಿ ವಿಸ್ತಾರವಾಗುತ್ತಿದೆ.
ವರ್ಷದಲ್ಲಿ ಸಾಧಾರಣ 11 ತಿಂಗಳು ಯಥೇಚ್ಛವಾಗಿ ಕಾಕಡ ಹೂ ಅರಳುತ್ತವೆ. ಎಲ್ಲ ಖರ್ಚು ವೆಚ್ಚಗಳನ್ನು ಕಳೆದು ಮಂಜುನಾಥ್ ಅವರಿಗೆ ದಿನಕ್ಕೆ 500 ರೂ. ಲಾಭದ ಅಂಶ ಬರುತ್ತದೆ ಎಂದು ಹೇಳುತ್ತಾರೆ. ಇತರರೂ ಇಂತಹ ಪ್ರಾಯೋಗಿಕ ಕೃಷಿ ಕೈಗೊಂಡು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿದೆ ಎಂದು ಮಂಜುನಾಥ್ ಅವರು ಇತರರಿಗೂ ಸ್ಫೂರ್ತಿ ತುಂಬಲು ಪ್ರಯತ್ನಿಸುತ್ತಾರೆ.
Also Read: ಅಕ್ರಮ ಮಧ್ಯ ಸೇವಿಸಿ 20 ವರ್ಷದ ಯುವತಿಯರಿಬ್ಬರು ಸಾವು
Also Read: ಮಂಗಳೂರಿನ ಹುಡುಗಿ ರುತ್ ಕ್ಲೇರ್ ಡಿಸಿಲ್ವಾ ಸಿಎ ಪರೀಕ್ಷೆಯಲ್ಲಿ ಸಾಧನೆ
1 thought on “Kakada Jasmine: ಕಾಕಡ ಮಲ್ಲಿಗೆ ಬೆಳೆದು ಯಶಸ್ವಿ ಕಂಡ ಅಂಕೋಲಾದ ಕೃಷಿಕ । ಲಾಕ್‌ಡೌನ್ ಅವಧಿಯಲ್ಲಿ ಬದುಕು ಅರಳಿಸಿದ ಕಾಕಡ ಮಲ್ಲಿಗೆ”