BMW Electric Bike CE 02 Concept Bike to The Market | BMW ಎಲೆಕ್ಟ್ರಿಕ್ ಬೈಕ್ ಸಿಇ 02

BMW ಎಲೆಕ್ಟ್ರಿಕ್ ಬೈಕ್ ಸಿಇ 02 ಮಾರುಕಟ್ಟೆಗೆ ಪರಿಚಯ.

ಐಷಾರಾಮಿ ವಾಹನಗಳಿಗೆ ಪ್ರಸಿದ್ಧವಾಗಿರುವಂತಹ BMW ಕಂಪನಿಯು ಹೊಸ ಎಲೆಕ್ಟ್ರಿಕ್ ವಾಹನವೊಂದನ್ನು ಬಿಡುಗಡೆ ಮಾಡಿದೆ ಆದರೆ ಅದು ಕಾರು ಅಲ್ಲ, ಅದು ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ. ಅದರ ಹೆಸರು BMW CE 02. ಇದು ಮಿನಿ ಎಲೆಕ್ಟ್ರಿಕ್ ಬೈಕ್ ಆಗಿದ್ದು, BMW Electric Bike CE 02 Concept Bike ವಿಶಿಷ್ಟವಾದ ಮತ್ತು ಅತ್ಯಂತ ಆಧುನಿಕ ಶೈಲಿಯ ವಿನ್ಯಾಸವನ್ನು ಹೊಂದಿದೆ.

ಕಂಪನಿಯು ಇದನ್ನು ಸದ್ಯ ಜರ್ಮನಿಯಲ್ಲಿ ಪರಿಚಯಿಸಿದೆ. ಇದು BMW ಬಿಡುಗಡೆ ಮಾಡುತ್ತಿರುವ ಮೊದಲ ಪರಿಕಲ್ಪನೆಯ ಎಲೆಕ್ಟ್ರಿಕ್ ಬೈಕ್ ಅಲ್ಲ. ಈಗಾಗಲೇ ಕಂಪನಿಯು ಸಿಇ 04 ಮಾದರಿಯ ಬೈಕ್ ನ ಬಗ್ಗೆ ಹೇಳಿತ್ತು, ಆದರೆ ಈ ಎಲೆಕ್ಟ್ರಿಕ್ ಬೈಕು ಉತ್ಪಾದನೆಯು ಇನ್ನೂ ಪ್ರಾರಂಭವಾಗಿಲ್ಲ.

 

ಗಂಟೆಗೆ 90 ಕಿಮೀ ವೇಗದ ಮಿತಿ ಸಾಧಿಸಲಿರುವ BMW ಎಲೆಕ್ಟ್ರಿಕ್ ಬೈಕ್ ಸಿಇ 02

BMW ಬಿಡುಗಡೆ ಮಾಡಿರುವ ನೂತನ ಎಲೆಕ್ಟ್ರಿಕ್ ಬೈಕ್ ಸಿಇ 02 ಗಂಟೆಗೆ 90 ಕಿಮೀ ವೇಗವನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು BMW ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನೂ ಅನೇಕ ವಿಶಿಷ್ಟ ತಂತ್ರಜ್ಞವನ್ನೂ ಹೊಂದಿದ್ದೂ ಗ್ರಾಹಕರಿಗೆ ಬಹಳಷ್ಟು ಇಷ್ಟವಾಗಲಿದೆ ಎಂದು ತಿಳಿಸಿದೆ.

BMW Electric Bike CE 02 Concept Bike

Modern features of BMW Electric CE 02 Concept Bike | ಆಧುನಿಕ ವಿನ್ಯಾಸದ BMW ಎಲೆಕ್ಟ್ರಿಕ್ ಬೈಕ್ ಸಿಇ 02 ನ ವಿಶೇಷತೆ

ಬಿಎಂಡಬ್ಲ್ಯು ಸಿಇ 02 ಕಾನ್ಸೆಪ್ಟ್ ಮಿನಿ ಬೈಕನ್ನು ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ತನ್ನ ಮಾರುಕಟ್ಟೆಯಲ್ಲಿ ಪರಿಚಯಿಸಿತು. ಈ ಮಿನಿ ಎಲೆಕ್ಟ್ರಿಕ್ ಬೈಕ್ ತುಂಬಾನೇ ಸರಳವಾಗಿ ಕಾಣುತ್ತದೆ ಆದರೆ ಅದು ಅಷ್ಟೇ ಆಧುನಿಕವಾಗಿ ವಿನ್ಯಾಸಿಸಲ್ಪಟ್ಟಿದೆ. ಹಾಗಾಗಿ ಆಧುನಿಕ ನೋಟ ಒದಗಿಸಲಾಗಿದೆ.

 

Read Also: How to Book OLA Electric Scooter online

Read Also: Ola Electric Scooter Review and Booking | ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ₹499 ಗೆ

 

ಮುಂಭಾಗದಲ್ಲಿ, ನಾಲ್ಕು ಸಣ್ಣ ಎಲ್‌ಇಡಿ ದೀಪಗಳಿವೆ, ಅದರ ಮೇಲೆ ಸಣ್ಣ ಹ್ಯಾಂಡಲ್ ಬಾರ್‌ನ ಮಧ್ಯದಲ್ಲಿ ಸಣ್ಣ ವೃತ್ತಾಕಾರದ ಡಿಜಿಟಲ್ Displayನ್ನು ಹೊಂದಿದ್ದು, ಇದು ಬೈಕ್ ಸವಾರನಿಗೆ ಅಗತ್ಯ ಮಾಹಿತಿಯನ್ನು ತೋರಿಸಲು ಸಹಕಾರಿಯಾಗುತ್ತದೆ. ಆದರೆ, ಇದು ಸ್ಮಾರ್ಟ್ ಡಿಸ್‌ಪ್ಲೇ ಅಲ್ಲ, ಬಿಎಂಡಬ್ಲ್ಯು ಇದರಲ್ಲಿ ಮೊಬೈಲ್ ಸಂಪರ್ಕ ವೈಶಿಷ್ಟ್ಯವನ್ನು ಒದಗಿಸಿಲ್ಲ.

 

The new BMW Motorrad Concept CE 02

ತನ್ನ BMW Official YouTube Channel BMW Motorrad ನಲ್ಲಿ ಕಂಪನಿಯು ತನ್ನ The new BMW Motorrad Concept CE 02 ಪರಿಚಯದ ವಿಡಿಯೋವನ್ನು ಹಾಕಿದ್ದು ಈಗಾಗಲೇ ಜನರಲ್ಲಿ ಕ್ರೇಜ್ ಸೃಷ್ಟಿಯಾಗುವಂತೆ ಮಾಡಿದೆ.

ಯುವಕರಿಗೆ ಇಷ್ಟವಾಗಲಿದೆ BMW ಎಲೆಕ್ಟ್ರಿಕ್ ಬೈಕ್ ಸಿಇ 02

ಬಿಎಂಡಬ್ಲ್ಯು ಸಿಇ 02 ಎಲೆಕ್ಟ್ರಿಕ್ ಬೈಕ್ 11 ಕೆಡಬ್ಲ್ಯೂ ಮೋಟಾರ್ ನಿಂದ ನಿಯಂತ್ರಿಸಲ್ಪಡುತ್ತಿರುವುದು ಇದರ ವಿಶೇಷತೆಗಳಲ್ಲೊಂದು. ಈ ಎಲೆಕ್ಟ್ರಿಕ್ ಬೈಕ್ ಗಂಟೆಗೆ 90 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಉತ್ಪಾದನಾ ಕಂಪನಿಯು ಬ್ಯಾಟರಿಯ ಬಗ್ಗೆ ಯಾವುದೇ ಮಾಹಿತಿಯನ್ನು ತಿಳಿಸಿಲ್ಲ. ಒಮ್ಮೆ ಚಾರ್ಜ್ ಮಾಡಿದಾಗ ಬೈಕು 90 ಕಿಮೀ ದೂರವನ್ನು ಕ್ರಮಿಸುತ್ತದೆ ಎಂದು ಹೇಳಲಾಗಿದೆ.

 

ಸದ್ಯ, ಕಂಪನಿಯು ಈ ಬೈಕ್ ನ ಉತ್ಪಾದನೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ, ಸದ್ಯದಲ್ಲೇ ಇದರ ಪ್ರೊಡಕ್ಷನ್ ಶುರು ಮಾಡಿ ಮಾರುಕಟ್ಟೆಗೆ ತರುವುದಾಗಿ ಕಂಪನಿ ಹೇಳಿದೆ. ಖಂಡಿತವಾಗಿ ಈ ಬೈಕ್ ಯುವಕರಿಗೆ ತುಂಬಾನೇ ಇಷ್ಟವಾಗಲಿದೆ. ಇದರ ವಿನ್ಯಾಸವನ್ನು ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಕಾಂಬಿನೇಷನ್ ನಲ್ಲಿ ಮಾಡಲಾಗಿದ್ದು ಹೊಸತನದ ಟಚ್ ಕೊಡಲಿದೆ.

 

BMW Concept CE 02 Price in India

BMW Electric Bike CE02 ನ ದರ ಭಾರತೀಯ ಮರುಕಟ್ಟೆಯಾಗಲಿ ಅಥವಾ ಜರ್ಮನಿಯ ಮರುಕಟ್ಟೆಯಲ್ಲಾಗಲಿ ನಿರ್ಣಯವಾಗಿಲ್ಲ. ಇದು ಮಾದರಿ ಬೈಕ್ ಆಗಿದ್ದು ಇನ್ನು ನಿಜವಾದ ಬೈಕ್ ನ ಉತ್ಪದಾನೆ ಶುರುವಾಗಬೇಕಷ್ಟೆ. ಹಾಗಾಗಿ ಕಂಪನಿ ಹೇಳಿರುವಂತೆ ಸದ್ಯದಲ್ಲೇ ಮಾರುಕಟ್ಟೆ ದರವನ್ನು ನಿಗದಿಪಡಿಸಲಾಗುವುದು.

 

Article Reference from Economics Times Auto.com

 

 

3 thoughts on “BMW Electric Bike CE 02 Concept Bike to The Market | BMW ಎಲೆಕ್ಟ್ರಿಕ್ ಬೈಕ್ ಸಿಇ 02”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio