Ola Electric Scooter Review and Booking | ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ₹499 ಗೆ

OLA S 1 ಮತ್ತು S 1 Pro ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ.

ಓಲಾ ತನ್ನ ಎಸ್ 1 ಎಲೆಕ್ಟ್ರಿಕ್ ಸ್ಕೂಟರ್ ನ್ನು ಕಳೆದ ತಿಂಗಳು ಮಾರುಕಟ್ಟೆಗೆ ಲಾಂಚ್ ಮಾಡಿದ್ದೂ ಬುಕಿಂಗ್ ಶುರುವಾಗಿದೆ. ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಬುಕಿಂಗ್ ಆಗಿದ್ದೂ ಬಹಳ ಟ್ರೆಂಡಿಂಗ್ ನಲ್ಲಿದೆ. ಓಲಾ ಸಂಸ್ಥೆಯ ಸಂಸ್ಥಾಪಕ ಭಾವಿಶ್ ಅಗರವಾಲ್ ಸಾಂಕೇತಿಕವಾಗಿ ತನ್ನ ಮೊದಲ ಐತಿಹಾಸಿಕ ಎಲೆಕ್ಟ್ರಿಕ್ ಸ್ಕೂಟರ್ ಎಸ್ 1 ಅನ್ನು ಬಿಡುಗಡೆಗೊಳಿಸಿದ್ದರು. Ola Electric Scooter Review

 

Ola Electric Scooter Review

ನಂತರ ಮಾತಾಡಿದ ಇವರು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಒಂದು ಹೊಸ ಕ್ರಾಂತಿ ಸೃಷ್ಟಿ ಮಾಡಲಿದೆ. ಮತ್ತು ಇಡೀ

 ಜಗತ್ತಿದೆ ನಮ್ಮ ದೇಶ ಆಟೋಮೊಬೈಲ್ ಉದ್ಯಮದಲ್ಲಿ ಒಂದು ಮಾದರಿಯಾಗಲಿದೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ನಿರ್ಮಾಣ ಹಂತದಲ್ಲಿರುವ ಓಲಾ ಸ್ಕೂಟರ್ ತಯಾರಿಕಾ ಘಟಕಾ ಇಡೀ ಭಾರತದಲ್ಲಿ ಅತೀ ದೊಡ್ಡ ತಯಾರಿಕಾ ಘಟಕವಾಗಿ ರೂಪುಗೊಳ್ಳಲಿದೆ. ದೆಹಲಿ ಮತ್ತು ಮುಂಬಯಿ ವಿಮಾನ ನಿಲ್ದಾಣಗಳು ಈ ಒಂದು ಕಟ್ಟಡದಲ್ಲಿ ಹಿಡಿಯುವಷ್ಟು ದೊಡ್ಡದಾಗಿ ಇದು ನಿರ್ಮಾಣವಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಭಾವಿಶ್ ಅಗರವಾಲ್ ಹೇಳುತ್ತಾರೆ.

 

OLA S 1 ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು : Specification of OLA Electric scooter

  • ಓಲಾ ಸ್ಕೂಟರ್ ನ ವಿಶೇಷತೆ ಬಗ್ಗೆ ಮಾತಾಡಿದ ಅಗರ್ವಾಲ್ ಓಲಾ ಸ್ಕೂಟರ್ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು ಇದರ ವೇಗಮಿತಿಯನ್ನು ಗಂಟೆಗೆ 115kmph ಗೆ ಸೆಟ್ ಮಾಡಲಾಗಿದೆ. ಇದರಲ್ಲಿ ನಾರ್ಮಲ್, ಸ್ಪೋರ್ಟ್, ಹೈಪರ್ ಎಂದು ಮೂರು ರೀತಿಯ ಡ್ರೈವಿಂಡ್ ಮೋಡ್ ವ್ಯವಸ್ಥೆ ಮಾಡಲಾಗಿದ್ದು ಡ್ರೈವಿಂಗ್ ನಲ್ಲಿ ಹೊಸ ಅನುಭವವನ್ನು ಕೊಡಲಿದೆ ಎಂದು ಹೇಳಿದರು.
  • ಉಳಿದಂತೆ ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ಮೂರು ಸೆಕೆಂಡುಗಳಲ್ಲಿ 40 kmph ವೇಗಮಿತಿಯನ್ನು ತಲುಪುವಷ್ಟು ಕ್ಷಮತೆ ಹೊಂದಿದೆ.
  • ಈ ಸ್ಕೂಟರಲ್ಲಿ ಓಕ್ಟಾ ಕೋರ್ ಚಿಪ್ಸೆಟ್ ಪ್ರಾಯೋಜಿತ ಏಳು ಇಂಚಿನ ಡಿಸ್ಪ್ಲೇ ಇದ್ದು ಮೂರೂ ಜಿಬಿ ರಾ ಮ್ ಹೊಂದಿದೆ. ಸ್ಕೂಟರ್ ನ್ನು ಲಾಕ್ ಮಾಡುವುದನ್ನು ಮತ್ತು ಅನ್ಲಾಕ್ ಮಾಡುವುದನ್ನು ಒಂದು ಮೊಬೈಲ್ ಅಪ್ಲಿಕೇಶನ್ ಮುಖಾಂತರ ನಿಯಂತ್ರಿಸಬಹುದು. Ola Electric Scooter Review
  • ಇದರಲ್ಲಿರುವ ಆಧುನಿಕ ತಂತ್ರಜ್ಞಾನದ ಪರದೆ ವಿವಿಧ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದ್ದು ಚಾಲಕನ ಮೂಡ್ ಗೆ ಅನುಗುಣವಾಗಿ ಸ್ಕೂಟರ್ ನ ಸೌಂಡ್ ನ್ನು ಸಹ ಬದಲಾಯಿಸಬಹುದು. ಇದರಲ್ಲಿರುವ ಈ ವಿಶೇಶತೆಗೆ ‘ಮೂಡ್’ ಎಂದು ಹೆಸರಿಸಲಾಗಿದೆ.
  • ಸ್ಕೂಟರ್ ನಲ್ಲಿ ಅಳವಡಿಸಲಾದ ಸ್ಪೀಕರ್ ವ್ಯವಸ್ಥೆಯು ಫೋನ್ ಕರೆಗಳನ್ನು ಸ್ವೀಕರಿಸಲು ಮತ್ತು ಹಾಡು ಕೇಳಲು ಉಪಕಾರಿಯಾಗುತ್ತದೆ. ಅದಲ್ಲದೆ ನೇವಿಗೇಶನ್ ಸಹ ಅಳವಡಿಲಾಗಿದೆ.
  • ಸಾಮಾನ್ಯವಾಗಿ ಎಲ್ಲಾ ದ್ವಿಚಕ್ರ ವಾಹನದಲ್ಲಿ ಕೇವಲ ಒಂದು ಹೆಲ್ಮೆಟ್ ಅನ್ನು ಇಡುವ ಅವಕಾಶ ಕಲ್ಪಿಸಲಾಗುತ್ತದೆ. ಆದ್ರೆ ಓಲಾ ಎಸ್ 1 ಸ್ಕೂಟರ್ ನಲ್ಲಿ ಎರಡು ಹೆಲ್ಮೆಟ್ ಅನ್ನು ಇಡುವಂತಹ ವ್ಯವಸ್ಥೆ ಮಾಡಲಾಗಿದ್ದು ಹಿಂಬದಿ ಸವಾರರಿಗೂ ಅನುಕೂಲವಾಗಲಿದೆ.
  • ಇದರ ಮತ್ತೊಂದು ವೈಶಿಷ್ಟ್ಯತೆ ಎಂದರೆ ಇದರಲ್ಲಿ ರಿವರ್ಸ್ ಗೇರಿನ ವ್ಯವಸ್ಥೆ ಇರುವುದು. ಅದಲ್ಲದೆ ಅದೆಷ್ಟೋ ಕೋಟಿ ಬೆಲೆ ಬಾಳುವ ದೊಡ್ಡ ದೊಡ್ಡ ಕಾರುಗಳಲ್ಲಿ ಇರುವಂತಹ ಸಾಮಿಪ್ಯ ಸಂವೇದಕ ವ್ಯವಸ್ಥೆಯು ಈ ಓಲಾ ಸ್ಕೂಟರಲ್ಲಿ ಕೊಡಲಾಗಿದೆ.
  • ವಾಹನವು ಇಳಿಜಾರು ಪ್ರದೇಶದಲ್ಲಿ ಚಲಿಸುತ್ತಿರಬೇಕಾದರೆ ಒಂದು ವೇಳೆ ನಿಂತು ಹಿಂಬದಿ ಬರಲಾರಂಭಿಸಿದರೆ ಇದರಲ್ಲಿರುವ ಹಿಲ್ ಹೋಲ್ಡ್ ಅನ್ನುವ ವ್ಯವಸ್ಥೆಯು ಸ್ಕೂಟರ್ ನ್ನು ತಕ್ಷಣ ನಿಲ್ಲಿಸಲು ಸಹಕಾರಿಯಾಗುತ್ತದೆ.

 

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಬೆಲೆ ? OLA Electric scooter Price

ಓಲಾ ಎಸ್ ೧ ಸ್ಕೂಟರ್ ನ ಎಕ್ಷ್ ಶೋರೂಮ್ ನ ಬೆಲೆ ₹99,999 ರಿಂದ ಶುರುವಾಗುತ್ತದೆ. ಮತ್ತು ಓಲಾ ಎಸ್ ೧ ಸ್ಕೂಟರ್ ನ ಪ್ರೊ ವರ್ಷನ್ ನ ಎಕ್ಷ್ ಶೋರೂಮ್ ನ ಬೆಲೆ ₹1,29,999 ರಿಂದ ಶುರುವಾಗುತ್ತದೆ. ಫೇಮ್ ಸಬ್ಸಿಡಿ ಆಧಾರದಲ್ಲಿ ಕೆಲವೊಂದು ರಾಜ್ಯಗಳಿಗೆ ಈ ಬೆಲೆಯಲ್ಲಿ ಬದಲಾವಣೆ ಇರುತ್ತದೆ.

ಇದರಿಂದಾಗಿ ದೆಹಲಿ, ರಾಜಸ್ಥಾನ, ಮಹಾರಾಷ್ತ್ರ ಗುಜರಾತ್ ನಲ್ಲಿ ಓಲಾ ಸ್ ೧ ಸ್ಕೂಟರ್ ಇನ್ನೂ ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಇದನ್ನು ಬುಕಿಂಗ್ ಮಾಡಲು ಬಯಸುವವರು ₹499 ಗಳನ್ನೂ ಪಾವತಿಸಿ ಬುಕಿಂಗ್ ಮಾಡಿಕೊಳ್ಳಬಹುದು. Ola Electric Scooter Review

 

Read Also: HPZ Token is Fake Or Real | Complete genuine Review

Read Also : ಅಫ್ಘಾನಿಸ್ತಾನ ಸಂಪೂರ್ಣ ತಾಲಿಬಾನಿ ಉಗ್ರರ ಕೈವಶವಾಗಲು ನಿಜವಾದ ಕಾರಣ ಗೊತ್ತಾ ?

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಹೇಗೆ ? How to book OLA Electric scooter?

ಓಲಾ ಎಲೆಕ್ಟ್ರಿಕ್ ಸಂಸ್ಥೆಯ ಅಧಿಕೃತ ಜಾಲತಾಣ olaelectric ನಲ್ಲಿ Reserve Now ಅನ್ನುವ ಆಯ್ಕೆಗೆ ಹೋಗಿ ಅಲ್ಲಿ ನಿಮಗೆ ಬೇಕಾದ ಅಥವಾ ನೀವು ಬಯಸುವ ಸ್ಕೂಟರ್ ನ ವರ್ಷನ್ ಮತ್ತು ಬೇಕಾದ ಬಣ್ಣವನ್ನು ಅನ್ನು ಆಯ್ಕೆ ಮಾಡಿ ಅಲ್ಲಿ Reserve ಅನ್ನು ಒತ್ತಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ₹499 ಗಳನ್ನೂ ಆನ್ಲೈನಲ್ಲಿ ಪಾವತಿಸಿ ನಿಮ್ಮ ಆಯ್ಕೆಯ ಸ್ಕೂಟರನ್ನು ಕಾದಿರಿಸಬಹುದು. ನೀವು ಉಳಿದ ಹಣವನ್ನು ಒಮ್ಮೆಲೇ ಪಾವತಿಸಬೇಕೆಂಬ ಯಾವುದೇ ಒತ್ತಡವಿಲ್ಲ. ನಿಮ್ಮ ಉಳಿದ ಹಣವನ್ನು ಪಾಲಿಸಲು ನಿಮಗೆ ಸುಲಭ ಕಂತುಗಳ ಅವಕಾಶವನ್ನು ಸಹ ಸಂಸ್ಥೆ ಮಾಡಿದೆ.

 

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ಯಾವಾಗ ? OLA Electric scooter delivery

ನಿಮ್ಮ ಬುಕಿಂಗ್ ಸ್ಟೇಟಸ್ ನ್ನು ಓಲಾದ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಬಹುದು. ಈ ಸ್ಕೂಟರ್ ನ ಡೆಲಿವರಿ ಸೆಪ್ಟೆಂಬರ್ ರಲ್ಲಿ ಪ್ರಾರಂಭವಾಗಲಿದೆ ಮತ್ತು ಈಗಾಗಲೇ ಬುಕ್ ಮಾಡಿದವರಿಗೆ ಅಕ್ಟೊಬರ್ ಮಾಸಾಂತ್ಯಕ್ಕೆ ಗ್ರಾಹಕರ ಕೈ ಸೇರಲಿದೆ ಎಂದು ಸಂಸ್ಥೆ ತಿಳಿಸಿದೆ.

 

 

 

 

 

2 thoughts on “Ola Electric Scooter Review and Booking | ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ₹499 ಗೆ”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio