”ನಾ’ನೊಂದು’ ಕಥೆಯಾದೆ” ಕನ್ನಡ ಕಥಾ ಸಂಪುಟ ಗೀತೆ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ.
ಸುಳ್ಯ : ‘ಫ್ರೆಂಡ್ಸ್ ಫಾರೆವರ್’ ಇವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ವಿಭಿನ್ನ ಮತ್ತು ಸತ್ಯಾಧಾರಿತ ಕಥಾ ಹಂದರವುಳ್ಳ ಕನ್ನಡಾ ಕಥಾ ಸಂಪುಟ ಗೀತೆಯ ರೂಪದಲ್ಲಿ ”ನಾ’ನೊಂದು’ ಕಥೆಯಾದೆ” ಎಂಬ ಆಲ್ಬಮ್ ಹಾಡೊಂದು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಗೊಳ್ಳಲಿದ್ದು ಸದ್ಯ ಹಾಡಿನ ಫಸ್ಟ್ ಲುಕ್ ಪೋಸ್ಟರ್ ನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನು ವ ಗಾದೆ ಮಾತಿನಂತೆ ಮುಂದೆ ಕಲಾ ಜಗತ್ತಿನಲ್ಲಿ , ಹಿರಿ ತೆರೆಯಲ್ಲಿ ಮಿಂಚಲು ಹೊರಟಿರುವ ಅದೆಷ್ಟೋ ಯುವ ಉತ್ಸಾಹಿ ಕಲಾವಿದರಿಗೆ ಕಿರುಚಿತ್ರಗಳು, ಆಲ್ಬಮ್ ಹಾಡುಗಳು ಒಂದು ಮಹತ್ತರ ಹೆಜ್ಜೆಯನ್ನು ಕಲ್ಪಿಸಿಕೊಡುತ್ತಿದೆ. ಅದೇ ರೀತಿ ”ನಾ’ನೊಂದು’ ಕಥೆಯಾದೆ” ಎಂಬ ಆಲ್ಬಮ್ ಹಾಡಿನಲ್ಲಿ ಯುವ ಕಲಾವಿದ ಲಕ್ಷ್ಮೀಶ್ ಆಚಾರ್ಯ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು ತಮ್ಮ ನಟನೆಯ ಮುಖಾಂತರ ಚಿತ್ರಾಸಕ್ತರ ಮನ ಗೆಲ್ಲಲು ರೆಡಿಯಾಗಿದ್ದಾರೆ.

ಅದರಂತೆ ಈ ಆಲ್ಬಮ್ ಹಾಡಿಗೆ ಮತ್ತೋರ್ವ ಯುವ ಕಲಾವಿದ , ಹಾಸ್ಯಮಯ ನಾಟಕಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಮತ್ತು ಅನೇಕ ಕಿರುಚಿತ್ರಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿರುವ ರಂಗಭೂಮಿ ಕಲಾವಿದರಾದ ‘ರಂಜು ರೈ ಸುಳ್ಯ‘ ಇವರು ಕಥೆ ಮತ್ತು ಸಾಹಿತ್ಯ ವನ್ನು ಬರೆದಿದ್ದಾರೆ.
”ನಾ’ನೊಂದು’ ಕಥೆಯಾದೆ” ಆಲ್ಬಮ್ ಹಾಡಿನ ನಿರ್ದೇಶನ ಮತ್ತು ಪೋಸ್ಟರ್ ಡಿಸೈನ್ ಜವಾಬ್ದಾರಿಯನ್ನು ತೀಕ್ಷಣ್ ಅಚಾರ್ಯ ನಿರ್ವಹಿದ್ದಾರೆ. ಮತ್ತು ಬಹಳ ಮುಖ್ಯವಾಗಿ ಈ ಆಲ್ಬಮ್ ಹಾಡಿನ ಸಾಹಿತ್ಯಕ್ಕೆ ಅಭಿಜ್ಞ ಕೆ ಗೌಡ ರವರು ಧ್ವನಿಯಾಗಿದ್ದು, ಎಲ್ವಿಸ್ ಪ್ರೆಸ್ಲಿ ರವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡಿನ ಚಿತ್ರೀಕರಣ ಮತ್ತು ಸಂಕಲನವನ್ನು ರತೀಶ್ ಪೊದುವಳ್ ರವರು ಮಾಡಿದ್ದು ಬಹಳ ಸುಂದರವಾಗಿ ಮೂಡಿಬಂದಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಫಸ್ಟ್ ಲುಕ್ ಪೋಸ್ಟರ್ naಲ್ಲೇ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ”ನಾ’ನೊಂದು’ ಕಥೆಯಾದೆ” ಆಲ್ಬಮ್ ಹಾಡು ಸದ್ಯದಲ್ಲೇ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಗೊಳ್ಳಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
Read Also: Puneeth rajkumar Life Story | ಒಂದು ದಿನ ನಾನು ಸಹ ನನ್ನ ತಂದೆಯಂತೆ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತೇನೆ
Read Also: ಪುತ್ತೂರಿನ ಯುವ ಉತ್ಸಾಹಿ ಬರಹಗಾರ, ಕಥೆಗಾರ, ಸಿನಿಮಾ ನಟ “ಸಾಯಿ ದೀಕ್ಷಿತ್ ಪುತ್ತೂರು” ಇವರ ಸಾಧನೆಯ ಹಾದಿ

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh