ಭಾರತಕ್ಕೆ ಹಿಂದಿರುಗಿದ ಮೀರಾಬಾಯ್ ಚಾನೂಗೆ ಸಿಕ್ತು ಭವ್ಯ ಸ್ವಾಗತ! – Tokyo Olympics

Silver Medal winning weightlifter Mirabai Chanu returns home gets warm reception

ಹೈಲೈಟ್ಸ್‌:

  • ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ವೇಟ್‌ಲಿಫ್ಟರ್‌ ಮೀರಾಬಾಯ್ ಚಾನೂ.
  • ಸೋಮವಾರ ತಾಯ್ನಾಡಿಗೆ ಹಿಂದಿರುಗಿದ ಚಾಂಪಿಯನ್‌ ವೇಟ್‌ ಲಿಫ್ಟರ್‌.
  • 49 ಕೆಜಿ ವಿಭಾಗದಲ್ಲಿ ಒಟ್ಟಾರೆ 202 ಕೆ.ಜಿ. ಭಾರ ಎತ್ತಿ ಬೆಳ್ಳಿ ಗೆದ್ದ ಮೀರಾಬಾಯ್.

Image credit to News18.com

 

ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಅದ್ಭುತ ಪ್ರದರ್ಶನ ನೀಡಿದ ವೇಟ್‌ಲಿಫ್ಟರ್‌ ಮೀರಾಬಾಯ್ ಚಾನೂ, 49 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿ ಸೋಮವಾರ ತಾಯ್ನಾಡಿಗೆ ಹಿಂದಿರುಗಿದ್ದಾರೆ. ಅವರಿಗೆ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಸಿಕ್ಕಿದೆ.

ವಿಮಾನ ನಿಲ್ದಾಣದಲ್ಲಿ ಚಾನೂಗೆ ಬಿಗಿ ಭದ್ರತೆ ನೀಡಲಾಗಿದೆ. “ತಾಯ್ನಾಡಿಗೆ ಹಿಂದಿರುಗಿರುವುದು ಬಹಳಾ ಸಂತಸ ನೀಡಿದೆ. ನಿಮ್ಮೆಲ್ಲರ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು,” ಎಂದು ಚಾನು ಇದೇ ವೇಳೆ ಟ್ವೀಟ್‌ ಮಾಡಿದ್ದಾರೆ.

 

Tokyo Olympics: Silver medalist Mirabai Chanu gets a grand reception on arrival in India

Image Credit to Mathrubhumi

 

26 ವರ್ಷದ ಭಾರತೀಯ ಲಿಫ್ಟರ್‌, ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಡೆದು ಬರುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಜನರೆಲ್ಲಾ ‘ಭಾರತ್‌ ಮಾತಾ ಕಿ ಜೈ’ ಎಂದು ಜೈಕಾರ ಹಾಕುವ ಮೂಲಕ ಸ್ವಾಗತ ಕೋರಿದರು. ಚಾನೂ ಜೊತೆಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

 

ಒಲಿಂಪಿಕ್ಸ್‌ 2021 ಕ್ರೀಡಾಕೂಟದ 49 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ಮೀರಾಬಾಯ್ ಚಾನೂ(Mirabai Chanu), ಸ್ನ್ಯಾಚ್‌ನಲ್ಲಿ 87 ಕೆ.ಜಿ. ಮತ್ತು ಕ್ಲೀನ್‌ ಅಂಡ್‌ ಜರ್ಕ್‌ನಲ್ಲಿ 115 ಕೆ.ಜಿ. ಭಾರತ ಎತ್ತಿದರು. ಈ ಮೂಲಕ ಒಟ್ಟು 202 ಕೆ.ಜಿ ತೂಕ ಎತ್ತುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

 

Image Credit to Mathrubhumi

 

2000ರದ ಇಸವಿಯಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಇದಾದ 21 ವರ್ಷಗಳ ಬಳಿಕ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಒಲಿಂಪಿಕ್‌ ಪದಕ ಲಭ್ಯವಾಗಿದೆ.

 

ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ..

 

ರಿಯೋದಲ್ಲಿ ನಡೆದ 2016ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಮೀರಾಬಾಯ್ ಚಾನು ಫೌಲ್‌ ಮಾಡುವ ಮೂಲಕ ಪದಕ ಗೆಲ್ಲುವ ಅವಕಾಶ ಕೈಚೆಲ್ಲಿದ್ದರು. ಇದಾದ ಬಳಿಕ ಕಾಮನ್‌ವೆಲ್‌ ಗೇಮ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ ಕೂಟಗಳಲ್ಲಿ ಪದಕ ಗೆದ್ದ ಮೀರಾಬಾಯ್ ಈಗ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ. ಇನ್ನು ಒಲಿಂಪಿಕ್ಸ್‌ ಅಲುವಾಗಿ ಮೀರಾಬಾಯ್‌ ಅಮೆರಿಕದಲ್ಲಿ ತರಬೇತಿ ಪಡೆದಿದ್ದರು.

Source link

2 thoughts on “ಭಾರತಕ್ಕೆ ಹಿಂದಿರುಗಿದ ಮೀರಾಬಾಯ್ ಚಾನೂಗೆ ಸಿಕ್ತು ಭವ್ಯ ಸ್ವಾಗತ! – Tokyo Olympics”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio