ಟೋಕ್ಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಮೊದಲ ದಿನವೇ ಭಾರತಕ್ಕೆ ಮೀರಾಬಾಯಿ ಚಾನು ರವರು ಮೊದಲ ಪದಕ ಗಳಿಸಿಕೊಟ್ಟಿದ್ದಾರೆ. ಮಹಿಳೆಯರ 49 ಕೆಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ 26 ರ ಹರೆಯದ ಇವರು ಬೆಳ್ಳಿ ಪದಕ ಗೆದ್ದಿದ್ದಾರೆ.
ಒಟ್ಟು 202 ಕೆಜಿ (87 ಕೆಜಿ + 115 ಕೆಜಿ) ಎತ್ತಿದ ಮೀರಾಬಾಯಿ ಚಾನು ರವರು ಈ ಕ್ರೀಡಾಕೂಟದಲ್ಲಿ 2000 ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಕರ್ಣಂ ಮಲ್ಲೇಶ್ವರಿ ನಂತರ ಎರಡನೇ ವೇಟ್ಲಿಫ್ಟರ್ ಎನಿಸಿಕೊಂಡಿದ್ದಾರೆ. ಚಿನ್ನದ ಪದಕ ಚೀನಾದ ಪಾಲಾದರೆ ಕಂಚು ಇಂಡೋನೇಷ್ಯಾದ ಪಾಲಾಗಿದೆ.
ಪ್ರಸ್ತುತ ಒಲಿಂಪಿಕ್ಸ್ ನಲ್ಲಿ ಮೊದಲ ಪದಕ ಜಯಿಸಿಕೊಟ್ಟ ಮೀರಾಬಾಯಿ ಚಾನು ದಾಖಲೆಯನ್ನು ನಿರ್ಮಿಸಿದ್ದಾರೆ. ಒಲಿಂಪಿಕ್ಸ್ ಪದಕಗಳ ಪಟ್ಟಿಯಲ್ಲಿ ಸೇರುವಂತೆ ಮಾಡಿದ್ದಾರೆ. ವಿಶ್ವ ಚಾಂಪಿಯನ್ಸ್ ಶಿಪ್ ಮತ್ತು ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಹಲವು ಪದಕಗಳನ್ನು ಗೆದ್ದಿರುವಂತಹ ಸಾಯಿಕೋಮ್ ಮೀರಾಬಾಯಿ ಚಾನು ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿರುತ್ತಾರೆ. 2018 ಇವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರವನ್ನೂ ಭಾರತ ಸರಕಾರ ನೀಡಿ ಗೌರವಿಸಿದೆ.
ಸದ್ಯ ಪದಕ ಪಟ್ಟಿಯಲ್ಲಿ ಭಾರತ 12ನೇ ಸ್ಥಾನದಲ್ಲಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕಗಳು ಭಾರತದ ಪಾಲಾಗುವ ಭರವಸೆಯನ್ನು ಈಗಾಗಲೇ ಹಲವು ಸ್ಪರ್ಧಿಗಳು ಮೂಡಿಸಿದ್ದಾರೆ. ಕೂಟದಲ್ಲಿ ಭಾಗವಹಿಸುವ ಎಲ್ಲಾ ಭಾರತೀಯ ಸ್ಪರ್ಧಿಗಳಿಗೂ ಈ ಮೂಲಕ ಶುಭ ಹಾರೈಸೋಣ.

ಇದನ್ನೂ ಓದಿ: ಅಮೀರ್ ಖಾನ್ ಸ್ನಾನ ಮಾಡಲ್ಲ. ವಿಪರೀತ ತಿಂತಾನೆ – ವಿಚ್ಚೇದನ ಕಾರಣ ಬಿಚ್ಚಿಟ್ಟ ಕಿರಣ್ ರಾವ್
ಇದನ್ನೂ ಓದಿ: ಅಶ್ಲೀಲ ಚಲನಚಿತ್ರಗಳ ತಯಾರಿಯಲ್ಲಿ ಭಾಗಿ – ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ
1 thought on “ಟೋಕಿಯೋ ಒಲಿಂಪಿಕ್ಸ್ ನ ಮೊದಲನೇ ದಿನ ಭಾರತಕ್ಕೆ ಮೊದಲ ಪದಕ ಜಯಿಸಿಕೊಟ್ಟ ಮೀರಾಬಾಯಿ ಚಾನು”