ಹೈಲೈಟ್ಸ್:
- ಬಾಕ್ಸಿಂಗ್ ನಲ್ಲಿ ಮಹಿಳೆಯರ 51 ಕೆಜಿ ವಿಭಾಗದಲ್ಲಿ ಕೊನೆಯ 16ರ ಘಟ್ಟ ತಲುಪಿದ ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್.
- ಮೇರಿ ಕೋಮ್ ಡೊಮಿನಿಕನ್ ರಿಪಬ್ಲಿಕ್‌ನ ಬಾಕ್ಸರ್ ಹೆರ್ನಾಂಡೆಸ್ ಗಾರ್ಸಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ.
- ಮೇರಿ ಕೋಮ್ ತಮಗಿಂತ 15 ವರ್ಷ ಕಿರಿಯರಾದ ಬಾಕ್ಸರ್ ವಿರುದ್ಧ ಗೆದ್ದ ಭಾರತೀಯ ತಾರೆ.

ಟೋಕಿಯೋ: ಆರು ಬಾರಿಯ ವಿಶ್ವ ಚಾಂಪಿಯನ್ ತಾರೆ ಎಂ ಸಿ ಮೇರಿ ಕೋಮ್ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 51 ಕೆ.ಜಿ ಯ ವಿಭಾಗದ ಬಾಕ್ಸಿಂಗ್‌ನಲ್ಲಿ ಅಂತಿಮ ಹದಿನಾರರ ಘಟ್ಟಕ್ಕೆ ಇಂದು ಕಾಲಿಟ್ಟಿದ್ದು ಪದಕ ದ ಭರವಸೆಯನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಅನುಭವದ ಆಟವಾಡಿದ 38 ವರ್ಷದ ಬಾಕ್ಸಿಂಗ್ ದಂತಕತೆ ಮೇರಿ ಕೋಮ್, ತಮಗಿಂತಲೂ 15 ವರ್ಷ ಕಿರಿಯ ಬಾಕ್ಸರ್ ಡೊಮಿನಿಕನ್ ರಿಪಬ್ಲಿಕ್‌ನ ಮುಗ್ಯೂಲಿನಾ ಹೆರ್ನಾಂಡೆಸ್ ಗಾರ್ಸಿಯಾ ಅವರನ್ನು ಮಣಿಸಿ ಪ್ರಿ-ಕ್ವಾರ್ಟರ್‌ಫೈನಲ್ಸ್ ತಲುಪಿದ್ದಾರೆ.
ಭಾರತಕ್ಕೆ ಹಿಂದಿರುಗಿದ ಮೀರಾಬಾಯ್ ಚಾನೂಗೆ ಸಿಕ್ತು ಭವ್ಯ ಸ್ವಾಗತ! – Tokyo Olympics
Mari Kom qualified for the pre-quarter finale in Tokyo Olympics 2021
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಮೇರಿ ಕೋಮ್, ಗಾರ್ಸಿಯಾ ಎದುರು ಅನುಭವದ ಆಟವಾಡಿ 4-1 ಅಂತರದ ಜಯ ಗಳಿಸುವಲ್ಲಿ ಯಶಸ್ವಿಯಾದರು. ಕೊನೆಯ ಸುತ್ತಿನಲ್ಲಿ ತಮ್ಮ ನೇರ ಪಂಚ್‌ಗಳನ್ನು ಎದುರಾಳಿಯ ಮುಖಕ್ಕೆ ಇಳಿಯುವಂತೆ ಮಾಡಿ ಅಂಕಗಳನ್ನು ಗಳಿಸಿ ಗಮನ ಸೆಳೆದರು.
“ಕೋವಿಡ್ – 19 ಸೋಂಕಿನ ಪರಿಣಾಮವಾಗಿ ಕಳೆದ ಎರಡು ವರ್ಷಗಳು ಎಲ್ಲರ ಪಾಲಿಗೆ ಬಹಳ ನೋವು ತಂದೊಡ್ಡಿತ್ತು . ಲಾಕ್ ಡೌನ್ ಆದ್ದರಿಂದ ಎಲ್ಲವೂ ಮುಚ್ಚಿದ್ದು, ಈ ಸಂದರ್ಭದಲ್ಲಿ ಅಥ್ಲೀಟ್‌ಗಳಿಗೆ ಮನೆಯಲ್ಲೇ ಅಭ್ಯಾಸ ಮಾಡುವಂತಾಗಿತ್ತು. ಆದರೆ, ಬಾಕ್ಸರ್‌ಗಳಿಗೆ ಮಾತ್ರ ಅಭ್ಯಾಸ ಮಾಡಲು ಎದುರಾಳಿಯ ಅಗತ್ಯವಿರುತ್ತದೆ,” ಎಂದು ತನ್ನ ಅದ್ಭುತ ಪಂದ್ಯದ ಬಳಿಕ ಮೇರಿಕೋಮ್ ಹೇಳಿಕೊಂಡಿದ್ದಾರೆ.
“ಈ ವಿಚಾರದಲ್ಲಿ ನಾನು ಕೊಂಚ ಅದೃಷ್ಟವಂತೆ. ಏಕೆಂದರೆ ನನ್ನದೇ ಜಿಮ್ ಮತ್ತು ಅಗತ್ಯದ ಸಲಕರಣೆಗಳನ್ನು ಹೊಂದಿದ್ದೆ. ಆದರೂ ನನ್ನ ತರಬೇತಿಗೆ ಜೊತೆಗಾರನ ಕೊರತೆ ಇತ್ತು. ಎದುರಾಳಿಯ ಕಣ್ಣಲ್ಲಿ ಕಣ್ಣಿಟ್ಟು ಆಟವಾಡುವ ಅಭ್ಯಾಸ ಲಭ್ಯವಾಗಿರಲಿಲ್ಲ,” ಎಂದು ಒಲಿಂಪಿಕ್ಸ್‌ಗೆ ಪೂರ್ವಸಿದ್ಧತೆ ಬಗ್ಗೆ ಕೋಮ್ ಹೇಳಿಕೊಂಡಿದ್ದಾರೆ.
ಆಸ್ಟ್ರೆಲಿಯಾ ಎದುರು 1-7 ಅಂತರದ ಹೀನಾಯ ಸೋಲುಂಡ ಭಾರತ! – Tokyo Olympics men’s hockey
ಆಟದ ಮೊದಲ ಸುತ್ತಿನಲ್ಲಿ ಸೂಕ್ಷ್ಮವಾಗಿ ರಕ್ಷಣಾತ್ಮಕ ಆಟವನ್ನಾಡಿದ ಮೇರಿ ಕೋಮ್, ಎದುರಾಳಿಯ ನಡೆಗಳನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಆದರೆ, ಎರಡನೇ ಸುತ್ತಿನಲ್ಲಿ ಗಾರ್ಸಿಯಾ ತಮ್ಮ ಉತ್ತಮ ಪಂಚ್‌ಗಳ ಮೂಲಕ ಆಟವಾಡಿ ಜಯ ತಮ್ಮದಾಗಿಸಿಕೊಳ್ಳುತ್ತಾರೆ. ಆದರೆ, ಕೊನೆಯ ಮೂರೂ ನಿಮಿಷದಲ್ಲಿ ತಮ್ಮ ನೈಜ ಆಟವನ್ನು ಹೊರ ತಂದ ಭಾರತೀಯ ಬಾಕ್ಸಿಂಗ್ ತಾರೇ ತಮ್ಮ ಅದ್ಭುತ ಪಂಚ್‌ಗಳೊಂದಿಗೆ ಅಂಕ ಗಳಿಸಿ ಪಂದ್ಯದ ಚಿತ್ರಣವನ್ನೇ ತಿರುಗಿಸಿ ಗೆಲುವನ್ನು ತಮ್ಮದಾಗಿಸಿಕೊಳ್ಳುತ್ತಾರೆ.
4 ಮಕ್ಕಳ ತಾಯಿ ಎಂ ಸಿ ಮೇರಿ ಕೋಮ್ ಇನ್ನು ಮುಂದಿನ ಸುತ್ತಿನ ಪಂದ್ಯದಲ್ಲಿ 3 ನೇ ಶ್ರೇಯಾಂಕಿತ ಕೊಲಂಬಿಯಾದ ಬಾಕ್ಸರ್ ಇಂಗ್ರಿಟ್ ವೆಲೆನ್ಸಿಯಾ ರ ಎದುರು ಪಂದ್ಯದ ಅಂತಿಮ 8ರ ಘಟ್ಟದ ಅರ್ಹತೆಗಾಗಿ ಪೈಪೋಟಿ ನಡೆಸಲಿದ್ದಾರೆ. ವೆಲೆನ್ಸಿಯಾ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅಂದಹಾಗೆ ಕೊಲಂಬಿಯಾದ ಬಾಕ್ಸರ್ ಎದುರು ಕಳೆದ ಎರಡು ಮುಖಾಮುಖಿಗಳಲ್ಲಿ ಮೇರಿ ಕೋಮ್ ಜಯ ದಾಖಲಿಸಿದ್ದಾರೆ. 2019ರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಷಿಪ್ ನ ಕ್ವಾರ್ಟರ್ ಫೈನಲ್‌ನಲ್ಲಿ ಇದೇ ವೆಲೆನ್ಸಿಯಾ ಎದುರು ಮೇರಿ ಕೋಮ್ ಜಯ ದಾಖಲಿಸಿದ್ದರು.

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh