ಹೈಲೈಟ್ಸ್:
- ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ, ಹಾಕಿಯಲ್ಲಿ ಭಾರತಕ್ಕೆ ಆಘಾತ.
- ಬಲಿಷ್ಠ ಆಸ್ಟ್ರೇಲಿಯಾ ಎದುರು ಹೀನಾಯ ಸೋಲುಂಡ ಟೀಮ್ ಇಂಡಿಯಾ.
- ಬರೋಬ್ಬರಿ 1-7 ಗೋಲ್ಗಳಿಂದ ಸೋತು ಸುಣ್ಣವಾದ ಮನ್ಪ್ರೀತ್ ಪಡೆ.
Tokyo Olympics men’s hockey
ಟೋಕಿಯೋ: ನಿರೀಕ್ಷಿತ ಹೋರಾಟ ತರಲು ವಿಫಲವಾದ ಭಾರತ ಪುರುಷರ ಹಾಕಿ ತಂಡ, ಬರೋಬ್ಬರಿ 1-7 ಗೋಲ್ಗಳಿಂದ ಬಲಿಷ್ಠ ಆಸ್ಟ್ರೇಲಿಯಾ ಎದುರು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ‘ಎ’ ಗುಂಪಿನ ಪಂದ್ಯದಲ್ಲಿ ಸೋಲುಂಡಿದೆ.
ಬಹು ಬಾರಿಯ ವಿಶ್ವ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡ ಅಕ್ಷರಶಃ ಅಧಿಕಾರಯುತ ಆಟವಾಡುವ ಮೂಲಕ ಭಾರತ ತಂಡವನ್ನು ತನ್ನ ಕಿರುಬೆರಳ ಮೇಲೆ ಆಟವಾಡಿಸಿದಂತೆ ಕಂಡುಬಂದಿತು. ಭಾರತ ತಂಡ ಕಿಂಚಿತ್ತೂ ಹೋರಾಟ ತರದೇ ಹೋದದ್ದು ಅಭಿಮಾನಿಗಳಿಗೆ ಭಾರಿ ಬೇಸರ ತಂದೊಡ್ಡಿದೆ.
Fo More Sports Updates visit bakwasdunia.com
2019ರ ಏಪ್ರಿಲ್ನಲ್ಲಿ ಆಸೀಸ್ ಮಾಜಿ ಆಟಗಾರ ಗ್ರಹಾಮ್ ರೀಡ್ ಭಾರತ ತಂಡದ ಕೋಚ್ ಆಗಿ ನೇಮಕಗೊಂಡ ನಂತರ ಟೀಮ್ ಇಂಡಿಯಾ ಅನುಭವಿಸಿರುವ ಅತ್ಯಂತ ಹೀನಾಯ ಸೋಲು ಇದಾಗಿದೆ.
ಟೋಕಿಯೋ ಒಲಿಂಪಿಕ್ಸ್: ಪ್ರಿ-ಕ್ವಾರ್ಟರ್ ಫೈನಲ್ಸ್ಗೆ ಕಾಲಿಟ್ಟ Mary Kom!
ಇನ್ನು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಪರ ಡೇನಿಯೆಲ್ ಬೇಲೆ (10ನೇ ನಿ.), ಜೊಶುವಾ ಬ್ಲೆಟ್ಸ್ (26ನೇ ನಿ.), ಆಂಡ್ರೂ ಫ್ಲಿನ್ ಒಗಿಲ್ವೀ (23ನೇ ನಿ., ಜೆರ್ಮಿ ಹೇವಾರ್ಡ್ (21ನೇ ನಿ.), ಬ್ಲೇಕ್ ಗ್ರೋವರ್ಸ್ (40, 42ನೇ ನಿ.) ಮತ್ತು ಟಿಮ್ ಬ್ರಾಂಡ್ (51ನೇ ನಿ.) ಗೋಲ್ ಬಾರಿಸಿ ಜಯದ ರೂವಾರಿಗಳೆನಿಸಿದರು.
ಭಾರತ ತಂಡದ ಪರ 34ನೇ ನಿಮಿಷದಲ್ಲಿ ದಿಲ್ಪ್ರೀತ್ ಸಿಂಗ್ ಏಕೈಕ ಗೋಲ್ ಬಾರಿಸುವ ಮೂಲಕ ಸೋಲಿನ ಅಂತರವನ್ನು ಕೊಂಚ ತಗ್ಗಿಸಲಷ್ಟೇ ಶಕ್ತರಾದರು. ಇದಕ್ಕೂ ಮುನ್ನ ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಅಪಾಯಕಾರಿ ನ್ಯೂಜಿಲೆಂಡ್ ಎದುರು 3-2 ಗೋಲ್ಗಳ ಜಯ ದಾಖಲಿಸಿತ್ತು. ಮನ್ಪ್ರೀತ್ ಸಿಂಗ್ ಸಾರಥ್ಯದ ಭಾರತ ತಂಡ ಈಗ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ತಂಡದ ಸವಾಲನ್ನು ಎದುರಿಸಲಿದೆ.
ಎಂಟು ಬಾರಿಯ ವಿಶ್ವ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡ ಪಂದ್ಯದ ಮೊದಲ ಅವಧಿಯಿಂದಲೂ ಆಕ್ರಮಣಕಾರಿ ಆಟವಾಡುವ ಮೂಲಕ ಮನ್ಪ್ರೀತ್ ಬಳಗದ ಮೇಲೆ ಒತ್ತಡ ಹೇರಿತು. ಮೊದಲ 15 ನಿಮಿಷಗಳ (ಕ್ವಾರ್ಟರ್) ಆಟದಲ್ಲಿ ಭಾರತ ತಂಡ ಹೋರಾಟ ನಡೆಸಿತಾದರೂ ಎದುರಾಳಿ ತಂಡ ಗೋಲ್ ಸುರಿಮಳೆ ಆರಂಭಿಸಿಯಾಗಿತ್ತು.
ಅಂದಹಾಗೆ ಪಂದ್ಯದ 8ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಆರಂಭಿಕ ಮುನ್ನಡೆ ಪಡೆಯುವ ಅವಕಾಶ ಭಾರತ ತಂಡಕ್ಕೆ ಸಿಕ್ಕಿತ್ತು. ಇದರಲ್ಲಿ ಹರ್ಮನ್ಪ್ರೀತ್ ಸಿಂಗ್ ಯಶಸ್ಸು ತಂದುಕೊಡದೇ ಹೋದರು. ಇದಾದ ಎರಡೇ ನಿಮಿಷದಲ್ಲಿ ಆಸ್ಟ್ರೇಲಿಯಾ ಬ್ಯಾಕ್ ಟು ಬ್ಯಾಕ್ ಗೋಲ್ ಬಾರಿಸಿ ಪಂದ್ಯದ ಮೇಲಿನ ಹಿಡಿತ ತನ್ನದಾಗಿಸಿಕೊಂಡಿತು.
1 thought on “ಆಸ್ಟ್ರೆಲಿಯಾ ಎದುರು 1-7 ಅಂತರದ ಹೀನಾಯ ಸೋಲುಂಡ ಭಾರತ! – Tokyo Olympics men’s hockey”