ಮಂಜು ಪಾವಗಡ ಎರಡನೇ ಇನ್ನಿಂಗ್ಸ್ ನಲ್ಲಿ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ನಿಮಗೊತ್ತಾ?!!!

ತನ್ನ ಹಾಸ್ಯ ಪ್ರಜ್ಞೆಯಿಂದ ಬಿಗ್ ಬಾಸ್ ನ ಮನೆಮಂದಿ ಮಾತ್ರವಲ್ಲದೆ ಬಿಗ್ ಬಾಸ್ ವೀಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡುವ ಮಂಜು ಪಾವಗಡ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಪ್ರತಿ ಟಾಸ್ಕ್ ಗಳಲ್ಲಿಯೂ ಕಾಮಿಡಿಗಳ ಮೂಲಕ ಉತ್ತಮ ಪ್ರದರ್ಶನ ತೋರಿ ಯಶಸ್ವಿಯಾಗಿ ಹತ್ತು ವಾರಗಳನ್ನ ಪೂರೈಸಿದ್ದಾರೆ ಮಂಜು ಪಾವಗಡರವರು.

 

 

ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮಂಜು ಬಹಳ ಕಷ್ಟದ ಜೀವನದಿಂದಲೇ ಮೇಲೆ ಬಂದವರು. ಚಿಕ್ಕಂದಿನಿಂದಲೇ ಸ್ಕಿಟ್ ನಟನೆಗಳಲ್ಲಿ ಆಸಕ್ತಿ ಹೊಂದಿದ ಮಂಜು ಓದು ಮುಗಿಸಿದ ನಂತರ ಜೀವನ ನಿರ್ವಣೆಗೋಸ್ಕರ ಒಂದು ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ತನಗೆ ಸಿಗುತ್ತಿದ್ದಂತಹ ಸಣ್ಣ ಸಣ್ಣ ಅವಕಾಶಗಳನ್ನು ಸಹ ಅವರು ಬಳಸಿಕೊಳ್ಳುತ್ತಾ ತನ್ನ ನಟನಾ ಕೌಶಲ್ಯವನ್ನು ತೋರಿಸುತ್ತಿದ್ದರು.

ಕ್ರಮೇಣ ಮಂಜು ಪಾವಗಡ ಅವರಿಗೆ ಮಜಾ ಭಾರತ ಶೋ ನಲ್ಲಿ ತನ್ನ ನಟನ ಚಾತುರ್ಯವನ್ನು ತೋರಿಸಲು ಅವಕಾಶ ಸಿಗುತ್ತದೆ. ನಿಮಗೆಲ್ಲಾ ಗೊತ್ತಿರುವ ಹಾಗೆ ಮಜಾ ಭಾರತದಲ್ಲಿ ಮಂಜು ಪವಾಗಡರವರ ಕಾಮಿಡಿ ಎಲ್ಲರಿಗೂ ಇಷ್ಟವಾಗಿ ಬಹಳಷ್ಟು ಪ್ರಸಿದ್ದಿ ಪಡೆಯುತ್ತಾರೆ. ಇದರಿಂದ ಅವರಿಗೆ ಹಲವು ಸಿನಿಮಾ ಗಳಲ್ಲೂ ಅವಕಾಶ ಸಿಗುತ್ತದೆ.

ಮಂಜು ಅವರು ನಟಿಸಿದ ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಮತ್ತು ಅನೀಶ್ ನಟನೆಯ ರಾಮಾರ್ಜುನ ಈಗಾಗಲೇ ಬಿಡುಗಡೆಗೊಂಡಿದ್ದು ಮಂಜು ಅವರ ನಟನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಹಲವು ಸಿನಿಮಾಗಳು ಇನ್ನೂ ಬಿಡುಗಡೆಗೊಳ್ಳಬೇಕಿದೆ.

ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಭಾಗವಹಿಸುವ ಅವಕಾಶ ಮಂಜು ಅವರಿಗೆ ಸಿಕ್ಕಿದ್ದು ಇಲ್ಲಿ ಅವರ ಕಾಮಿಡಿ, ಉಳಿದವರ ಜೊತೆ ಬೆರೆಯುವ ವ್ಯಕ್ತಿತ್ವ ವೀಕ್ಷಕರನ್ನು ಮಂಜುರವರನ್ನು ಇಷ್ಟಪಡುವಂತೆ ಮಾಡಿದೆ. ಹೊರಗೆ ಮಂಜು ಅವರಿಗೆ ಅಭಿಮಾನಿಗಳು ಹೆಚ್ಚಾಗಳು ಇದೆ ಅವರ ವ್ಯಕ್ತಿತ್ವ ಎಂದರೆ ತಪ್ಪಾಗಲಾರದು.

 

 

ಬಿಗ್ ಬಾಸ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಇನ್ನೂ ಉತ್ತಮ ಪ್ರದರ್ಶನ ತೋರುತ್ತಿರುವ ಮಂಜು ಅವರು ಸೇಫ್ ಹಂತದಲ್ಲಿದ್ದಾರೆ. ಸದ್ಯ ಈ ಕಾರ್ಯಕ್ರಮದಲ್ಲಿ ಮಂಜು ಅವರು ಐದು ಲಕ್ಷದ ಐವತ್ತು ಸಾವಿರ ಸಂಭಾವನೆ ಪಡೆದುಕೊಂಡಿದ್ದಾರೆ. ಮಂಜು ಅವರು ಸದ್ಯ ಗೆಲ್ಲುವ ಓಟದಲ್ಲಿ ಮುಂದಿದ್ದಾರೆ.

 

ಇದನ್ನು ಓದಿ : ಡಿ ಬಾಸ್ ದರ್ಶನ್ ಮೇಲೆ ಇಂದ್ರಜೀತ್ ಕೇಸು ದಾಖಲು – 5 ವರ್ಷ ನಿಷೇಧಕ್ಕೆ ಆಗ್ರಹ

ಇದನ್ನು ಓದಿ : KGF King ರಾಕಿಂಗ್ ಸ್ಟಾರ್ ಯಶ್ ನಿಜವಾಗಲೂ ಕಿಂಗಾ? ನಿಮಗೆ ಗೊತ್ತಿರದ ಒಂದು ಸತ್ಯ ಸಂಗತಿ

ಇದನ್ನು ಓದಿ : ಅಶ್ಲೀಲ ಚಲನಚಿತ್ರಗಳ ತಯಾರಿಯಲ್ಲಿ ಭಾಗಿ – ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ

 

2 thoughts on “ಮಂಜು ಪಾವಗಡ ಎರಡನೇ ಇನ್ನಿಂಗ್ಸ್ ನಲ್ಲಿ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ನಿಮಗೊತ್ತಾ?!!!”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ