ಡಿ ಬಾಸ್ ದರ್ಶನ್ ಮೇಲೆ ಇಂದ್ರಜೀತ್ ಕೇಸು ದಾಖಲಿಸಿದ್ದು ಗಲಾಟೆ ತಾರಕ್ಕೇರಿದೆ. ದರ್ಶನ್ ಅವರು ಮಾತಾಡಿದ ಆಡಿಯೋವನ್ನು ರಿಲೀಸ್ ಮಾಡಿದ ಇಂದ್ರಜೀತ್ ಲಂಕೇಶ್, ದರ್ಶನ್ ರವರನ್ನು 5 ವರ್ಷ ಸಿನಿಮಾ ರಂಗದಿಂದ ಬ್ಯಾನ್ ಮಾಡಬೇಕೆಂದು ಫಿಲಂ ಚೇoಬರನ್ನು ಒತ್ತಾಯಿಸಿದ್ದಾರೆ.
ದರ್ಶನ್ ರವರಿಗೆ 25 ಲಕ್ಷದ ಮೋಸ ಮಾಡಲೆತ್ನಿಸಲಾಗಿದೆ ಎಂದು ಹೇಳಲಾದ ಪ್ರಕರಣ ತಿರುವು ಪಡೆಯುತ್ತಾ ದೊಡ್ಮನೆ ದಾಟಿ ಪ್ರೇಮ್ ಅಡ್ಡದಲ್ಲಿ ಓಡಾಡಿ ನಂತರ ಇಂದ್ರಜೀತ್ ಲಂಕೇಶ್ ಕೆಣಕಿ ಸ್ವಾಭಿಮಾನ ಮತ್ತು ಪ್ರತಿಷ್ಠೆಯನ್ನು ಕೆಣಕುವತ್ತ ಬಂದು ನಿಂತ ಪ್ರಕರಣ ಇವಾಗ ಹೆಬ್ಬಂಡೆಯಾಗಿ ಎದ್ದು ನಿಂತಿದೆ. ದಿನೇ ದಿನೇ ತಮ್ಮ ತಮ್ಮ ಹೇಳಿಕೆಗಳಿಂದ ಮಾಧ್ಯಮ ಲೋಕಕ್ಕೆ ಆಹಾರವಾಗುತ್ತಾ ಹೋಗುತ್ತಿದ್ದಾರೆ.

ದರ್ಶನ್ ಮಾಧ್ಯಮಕ್ಕೆ ಕೆಟ್ಟದಾಗಿ ಬಯ್ಯುವoತಹ ಆಡಿಯೋ ರಿಲೀಸ್ ಮಡಿದ ಇಂದ್ರಜೀತ್ ಲಂಕೇಶ್ ಉರಿಯುವ ತುಪ್ಪಕ್ಕೆ ಬೆಂಕಿ ಸುರಿದಂತೆ ಮಾಡಿದ್ದಾರೆ. ದರ್ಶನ್ ರವರು ಹೇಳಿದರೆನ್ನಲಾದ ಕೆಟ್ಟ ಮಾತುಗಳ ವಿರುದ್ಧ ಇಂದ್ರಜೀತ್ ಲಂಕೇಶ್ ಕೇಸು ದಾಖಲಿಸಿದ್ದಾರೆ. ಮತ್ತು ದರ್ಶನ್ ರವರನ್ನು ಚಿತ್ರರಂಗದಿಂದ 5 ವರ್ಷಗಳ ಕಾಲ ಬ್ಯಾನ್ ಮಾಡಬೇಕೆಂದು ಫಿಲಂ ಚೆಂಬರ್ ನ್ನು ಒತ್ತಾಯಿಸಿದ್ದಾರೆ. ಇದರಿಂದ ಕರ್ನಾಟಕಾದ್ಯಂತ ದರ್ಶನ್ ರವರ ಲಕ್ಷಾಂತರ ಅಭಿಮಾನಿಗಳನ್ನು ರೊಚ್ಚಿಗೇಳುವಂತೆ ಮಾಡಿದೆ.
[totalpoll id=”2517″]
1 thought on “ಡಿ ಬಾಸ್ ದರ್ಶನ್ ಮೇಲೆ ಇಂದ್ರಜೀತ್ ಕೇಸು ದಾಖಲು – 5 ವರ್ಷ ನಿಷೇಧಕ್ಕೆ ಆಗ್ರಹ”