GGVV controversy | ವಿವಾದದ ಸುಳಿಯಲ್ಲಿ Garuda Gamana Vrishabha Vahana (GGVV) –

ವಿವಾದದ ಸುಳಿಯಲ್ಲಿ Garuda Gamana Vrishabha Vahana (GGVV) ಚಿತ್ರ

GGVV controversy : Raj B Shetty ಕಥೆ ಮತ್ತು ನಿರ್ದೇಶನದ ಜೊತೆ ನಟನೆ ಮಾಡಿರುವ Garuda Gamana Vrishabha Vahana (GGVV) ಚಿತ್ರವು ಗೆಲುವನ್ನು ಸಾಧಿಸುತ್ತಾ ಮುಂದೆ ಸಾಗುತ್ತಿದೆ.   Raj B Shetty ಮತ್ತು Rishab Shetty ಯವರ ಮನೋಜ್ಞ ಅಭಿನಯ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸಿದೆ. ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರವು ಒಂದೊಂದು ನೈಜ ಕಥೆಯನ್ನು ಹೇಳುವಂತಿದೆ. ಚಿತ್ರವು Mangalurina ಮಂಗಳಾದೇವಿ ಎಂಬ ನಗರದ ಸುತ್ತ ನಡೆಯುವ ಕಥೆ ಪ್ರೇಕ್ಷಕರನ್ನು ಮಂಗಳಾದೇವಿಗೆ ಒಮ್ಮೆಯಾದರೂ ಹೋಗಬೇಕು ಎಂಬ ಭಾವನೆಯನ್ನು ಮೂಡಿಸುತ್ತದೆ.

ಚಿತ್ರದ ಸ್ಕ್ರೀನ್ ಪ್ಲೇ ಯನ್ನು ರಾಜ್ ಬಿ ಶೆಟ್ಟಿ ಸ್ವತಃ ಬರೆದಿದ್ದು ಪ್ರತಿಯೊಂದು ಸೀನನ್ನು ಅದ್ಭುತವಾಗಿ ಕಟ್ಟಿದ್ದಾರೆ. ಚಿತ್ರದ background score ಆಗಲಿ ಛಾಯಾಗ್ರಹಣವಾಗಲಿ ಬಹಳ ಮನೋಜ್ಞವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಯಾವುದೇ ಲವ್ ಸಾಂಗ್ ಇಲ್ಲ. ಯಾವುದೇ ಕೆಟ್ಟ ದೃಶ್ಯಗಳಿಲ್ಲ. ಸಂಪೂರ್ಣ ಕುಟುಂಬ ಸಮೇತ ನೋಡುವ ಒಂದು ಫುಲ್ ಪ್ಯಾಕೇಜ್ ಸಿನಿಮಾವಾಗಿದೆ.

ಸದ್ಯ Garuda Gamana Vrishabha Vahana ಚಿತ್ರಕ್ಕೆ ಸಣ್ಣ ವಿವಾದ ಸೃಷ್ಟಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ಪ್ರಾರಂಭವಾಗಿದೆ.  Raj B Shettyಯವರು ಈ ಚಿತ್ರದಲ್ಲಿ ಒಂದು ಕೊಲೆ ಮಾಡಿ ಸುರಿಯುವ ಮಳೆಯಲ್ಲೇ ಮಂಗಳೂರಿನ ಸಾಂಪ್ರದಾಯಿಕ ಕುಣಿತವಾದ ಹುಲಿ ಕುಣಿತವನ್ನು ರೋಷಾವೇಶದಿಂದ ಮಾಡುತ್ತಾರೆ. ಆ ದೃಶ್ಯವನ್ನು ನೋಡುವಾಗಲೇ ಮೈ ರೋಮಾಂಚನವಾಗುತ್ತದೆ. ಈ ದೃಶ್ಯಕ್ಕೆ ಹಿಂದೆ ಮಾದೇಶ್ವರ ಸ್ವಾಮಿಯ ‘ಸೂಜುಗಾದ ಸುಜು ಮಲ್ಲಿಗೆ’ ಎಂಬ ಜಾನಪದ ಗೀತೆಯನ್ನು Raj B Shetty ಅಳವಡಿಸಿದ್ದು ಇದು ಈಗ ಬಾರಿ ಚರ್ಚೆಗೆ ಗ್ರಾಸವಾಗಿದೆ.

GGVV controversy

ಸೊಜುಗಾದ ಸೂಜು ಮಲ್ಲಿಗೆ ಜಾನಪದ ಹಾಡು ವಿವಾದ: GGVV controversy

ಸೊಜುಗಾದ ಸೂಜು ಮಲ್ಲಿಗೆ ಜಾನಪದ ಹಾಡು ಮಾದೇಶ್ವರನ ಕುರಿತಾಗಿದ್ದು, ಒಂದು ಕೊಲೆ ಮಾಡಿ ನೃತ್ಯ ಮಾಡುವ ದೃಶ್ಯಕ್ಕೆ ಈ ಜಾನಪದ ಹಾಡನ್ನು ಹಿನ್ನೆಲೆ ಹಾಡಾಗಿ ಬಳಸಿದುದರ ಉದ್ದೇಶವಾದರೂ ಏನು ಎಂಬ ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಹಾಡನ್ನು ಒಂದು ಕೊಲೆ ದೃಶ್ಯಕ್ಕೆ ಬಳಸಿದ್ದು ಎಷ್ಟು ಸರಿ ಎಂದು ತರ್ಕ ಎಬ್ಬಿಸಿದ್ದಾರೆ.

ಮಾದೇಶ್ವರ ಶಿವನ (ಈಶ್ವರ) ರೂಪ. ಈ ಚಿತ್ರದಲ್ಲಿ ಶಿವನ ಪಾತ್ರದಲ್ಲಿ Raj B Shetty ಒಂದು ಕೊಲೆ ಮಾಡಿ ರುದ್ರ ತಂಡವಾದ ರೀತಿಯಲ್ಲಿ ನರ್ತನ ಮಾಡುತ್ತಿದ್ದು ಅದು ಈಶ್ವರನು ರೋಷಾವೇಷದಲ್ಲಿ ತಾಂಡವ ನೃತ್ಯ ಮಾಡುವುದಕ್ಕೆ ಹೋಲಿಸಿ ಆ ಭಾವನೆಯಲ್ಲಿ ಶಿವನ ಈ ಜಾನಪದ ಹಾಡು ಸೊಜುಗಾದ ಸೂಜು ಮಲ್ಲಿಗೆ ಹಿನ್ನೆಲೆಯಾಗಿ ಬಳಸಲಾಗಿದೆ ಎಂಬ ನಮ್ಮ ಅನಿಸಿಕೆ. ಅಲ್ಲಿ ಕೊಲೆ ದೃಶ್ಯಕ್ಕೆ ಮತ್ತು ಈ ಹಾಡಿಗೆ ಯಾವುದೇ ಸಂಭಂದವಿದೆ ಎಂದು ಅನಿಸುವುದಿಲ್ಲ ಬದಲಾಗಿ ಕೊಲೆ ನಡೆದ ನಂತರ ಶಿವನು ಆಡುವ ತಾಂಡವ ನೃತ್ಯಕ್ಕೆ ಮತ್ತು ಈ ಹಾಡಿಗೆ ಸಂಭಂದ ಇದೆ ಎಂಬುದು ನಮ್ಮ ಕಲ್ಪನೆ. ಇದುವೇ ನಿರ್ದೇಶಕರಾದ ರಾಜ್ ಬಿ ಶೆಟ್ಟಿ ಯವರ ಕಲ್ಪನೆಯು ಆಗಿರಬಹುದು.

ಇನ್ನುಳಿದಂತೆ ಚಿತ್ರಕ್ಕೆ ಯಾವುದೇ ಒಡಕು ತೊಡಕು ಇಲ್ಲ ಮತ್ತು ಚಿತ್ರವು ಬಿಡುಗಡೆ ಗೊಂಡ ಪ್ರತಿಯೊಂದು ಥಿಯೇಟರ್ ಗಳಲ್ಲೂ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಮತ್ತು Garuda Gamana Vrishabha Vahana (GGVV) ಶತ ದಿನ ಆಚರಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಮುಂದೆಯೂ ರಾಜ್ ಬಿ ಶೆಟ್ಟಿ ಯವರ ನಿರ್ದೇಶನದಲ್ಲಿ ಇಂತಹದ್ದೇ ಅದ್ಭುತ ಚಿತ್ರಗಳು ಮೂಡಿಬರಲಿ ಎಂದು ಹಾರೈಸೋಣ.

 

Read Also: Garuda Gamana Vrishabha Vahana Review in Kannada

Read Also: Garuda Gamana Vrishabha Vahana | ಅಪ್ಪು ಅಗಲಿಕೆಯ ನೋವಿನಿಂದ ಸ್ತಬ್ಧರಾಗಿದ್ದ ಚಿತ್ರ ಪ್ರೇಕ್ಷಕರನ್ನು ಬಡಿದೆಬ್ಬಿಸಿದ ಸಿನಿಮಾ

Read Also: Puneeth Pajkumar ಇನ್ನೂ ಜೀವಂತ ಇದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ !!!

 

 

FAQ

Q: Raj B Shetty next Movie?

A: Ne yet announced

 

Q: Raj B Shetty Dob?

A: Raj B Shett born 2nd July 1988

 

Q: Raj B Shetty Girlfriend?

A: No information available

 

Q: Raj B Shetty’s first movie?

A: Raj B Shetty First movie Ondu Motteya Kathe

 

Q: Rishab Shetty’s wife’s name?

A: Rishab Shetty wife name is Pragathi Shetty

 

1 thought on “GGVV controversy | ವಿವಾದದ ಸುಳಿಯಲ್ಲಿ Garuda Gamana Vrishabha Vahana (GGVV) –”

Leave a Comment