ನವೀನ್ ನೆರೋಳ್ತಡಿ ನಿರ್ದೇಶನದ ತುಳು ಆಲ್ಬಮ್ ಹಾಡು “True ಲವ್ never end” ಮೊದಲ ಪೋಸ್ಟರ್ ಬಿಡುಗಡೆ 

ನವೀನ್ ನೆರೋಳ್ತಡಿ ನಿರ್ದೇಶನದ ತುಳು ಆಲ್ಬಮ್ ಹಾಡು “True ಲವ್ never end” ಮೊದಲ ಪೋಸ್ಟರ್ ಬಿಡುಗಡೆ 

ನವೀನ್ ನೆರೋಳ್ತಡಿ ನಿರ್ದೇಶನದಲ್ಲಿ ಮೂಡಿ ಬರಲಿರುವ ತುಳು ಆಲ್ಬಮ್ ಹಾಡು “True ಲವ್ never end “(True love never end) ಇದರ ಮೊದಲ ಪೋಸ್ಟರ್ ಅನ್ನು ಇಂದು ಅಧಿಕೃತವಾಗಿ ಶ್ರೀ ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಕೇಮಾರು ಇವರಿಂದ ಎಲ್ಲಾ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. 

True love never end

ಈ ಆಲ್ಬಮ್ ಹಾಡಿನಲ್ಲಿ ಮುಖ್ಯ ಪಾತ್ರದಲ್ಲಿ ಸಂತೋಷ್ ಮತ್ತು ನಯನ ಸಾಲ್ಯಾನ್ ಅಭಿನಯಿಸಿದ್ದಾರೆ.  ತುಳು ಚಿತ್ರ ರಂಗದಲ್ಲಿ ಕೆಲಸ ಮಾಡಿ ಅನುಭವವಿರುವ, ವಿಜಯ ರಾಘವೇಂದ್ರ ನಟನೆಯ ಕನ್ನಡ ಚಿತ್ರ ಚೆಲ್ಲಾಪಿಲ್ಲಿಯಲ್ಲಿ ಸಹ ಕಲಾವಿದನಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಮತ್ತು ಈಗಾಗಲೇ ಹಲವು ಕಿರುಚಿತ್ರ ಮತ್ತು ಆಲ್ಬಮ್ ಹಾಡುಗಳನ್ನು ಮಾಡಿದ ಅನುಭವವಿರುವ ನವೀನ್ ನೆರೋಳ್ತಡಿ  “True ಲವ್ never end” ಆಲ್ಬಮ್ ಹಾಡನ್ನು ನಿರ್ದೇಶನದ ಜೊತೆ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆ ಸಹ ಬರೆದಿದ್ದಾರೆ. 

Click to Join Whatsapp Group

ಈ ಆಲ್ಬಮ್ ಹಾಡಿಗೆ ಅನೀಶ್ ಕುಂಬ್ಳೆ ಮತ್ತು ಅರುಣ್ ರೈ ಪುತ್ತೂರು ಇವರ ಕ್ಯಾಮರಾ ಕೈಚಳಕವಿದ್ದು, ಎಡಿಟಿಂಗ್ ಮತ್ತು VFX ಅನ್ನು ಶಿವಂ ಕ್ರಿಯೇಷನ್ ಕುಂಬ್ಳೆ ವಹಿಸಿದೆ. ಉಳಿದಂತೆ ಆಲ್ಬಮ್ ಹಾಡಿಗೆ ಸಾಹಿತ್ಯ ಬರೆದಿರುವವರು ಸುದೇಶ್ ಪೂಜಾರಿ,  ಸಂಗೀತ ರೋಹಿತ್ ಪೂಜಾರಿ, ಮತ್ತು ಹಾಡಿರುವವರು ಶುಭಂ ಕುಲಾಲ್. 

 

True ಲವ್ never end” ಆಲ್ಬಮ್ ಹಾಡು ಅತೀ ಶೀಘ್ರದಲ್ಲಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಆಲ್ಬಮ್ ನ ನಿರ್ದೇಶಕರು ಹೇಳಿದ್ದಾರೆ. 

 

Read Also

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio